
ಹಳದಿ ಅಥವಾ ಕೇಸರಿ ಬಣ್ಣದಲ್ಲಿ ಇರುವ ಸಿಹಿ ಸ್ವಾದವುಳ್ಳ ಹಣ್ಣು, ಪರಂಗಿ ಹಣ್ಣು. ಇದನ್ನು ಪಪ್ಪಾಯ ಹಣ್ಣು ಎಂದೂ ಕರೆಯುತ್ತಾರೆ. ಬ್ರಿಟಿಷರ ಮೂಲಕ ಭಾರತಕ್ಕೆ ಪರಿಚಯವಾದ ಕಾರಣ ಇದನ್ನು ಪರಂಗಿ ಹಣ್ಣು ಎಂದು ಕರೆಯುತ್ತಾರೆ.
ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು– “ಕ್ಯಾರಿಕಾ ಪಪಾಯ” (Carica papaya).
ಪರಂಗಿ ಹಣ್ಣು ಆರೋಗ್ಯಕ್ಕೆ ಅತಿ ಉತ್ತಮವಾದ ಹಣ್ಣು, ಹಾಗೆಯೇ ಉತ್ತಮ ಪೋಷಕಾಂಶಗಳಿಂದ ಕೂಡಿದ್ದು ವಿಟಮಿನ್ ಎ, ಸಿ, ಇ ಯಿಂದ ಕೂಡಿದೆ. ಅಂತೆಯೇ ನಾರಿನಾಂಶ, ರಂಜಕ, ಕಬ್ಬಿಣ, ಥಯಾಮಿನ್, ಥಯಾಮೈನ್, ನಿಯಾಸಿನ್, ಸೋಡಿಯಂ, ಮ್ಯಾಗ್ನಿಸಿಯಂ, ಕ್ಯಾಲ್ಸಿಯಂ, ಕೊಬ್ಬು, ಸಸಾರಜನಕ ಇನ್ನೂ ಹಲವು ಉಪಯುಕ್ತ ಅಂಶಗಳು ಕೂಡಿವೆ. ಪರಂಗಿ ಹಣ್ಣು ದೇಹದಲ್ಲಿನ ಅನೇಕ ಬೇಡವಾದ ಕ್ರಿಮಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕೂಡ ಹೊಂದಿದೆ.ಇದರಲ್ಲಿ ಪಪೈನ್ ಎಂಬ ಕಿಣ್ವ ಇದ್ದು, ಸುಲಭ ಜೀರ್ಣಕ್ರಿಯೆಗೆ ಉತ್ತಮವಾಗಿದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.
ಕೆಲವು ಔಷಧೀಯ ಉಪಯೋಗಗಳು
ಉತ್ತಮ ಜೀರ್ಣಕ್ರಿಯೆ, ಕಣ್ಣಿನ ಅರೋಗ್ಯ, ಯಕೃತ್ತಿನ ಅರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಚರ್ಮದ ಕಾಂತಿಯನ್ನು ಕಾಪಾಡುವ ಸೌಂದರ್ಯ ವರ್ಧಕವಾಗಿದೆ. ಮೂಲವ್ಯಾಧಿ ಮತ್ತು ಮೂಗು, ಬಾಯಿಯಿಂದ ಕೆಲವೊಮ್ಮೆ ಹೊರ ಬರುವ ರಕ್ತವನ್ನು ತಡೆಗಟ್ಟುತ್ತದೆ. ಪರಂಗಿ ಹಣ್ಣಿನ ಎಲೆ, ಕಾಯಿ, ಹಣ್ಣು ಹಾಗೂ ಬೀಜ ಎಲ್ಲವೂ ಉತ್ತಮ ಅರೋಗ್ಯಸ್ನೇಹಿಯಾಗಿದೆ.
ಈಗ ಕೆಲವೊಂದು ಸಮಸ್ಯೆಗಳಿಗೆ ಪರಂಗಿ ಹಣ್ಣಿನಿಂದ ಆಗಬಹುದಾದ ಪರಿಹಾರಗಳ ಬಗೆಗೆ ತಿಳಿಯೋಣ.
1. ಜಂತು ಹುಳಗಳ ನಾಶಕ್ಕೆ
- ಜಂತುಗಳ ನಾಶಕ್ಕೆ ಪರಂಗಿ ಹಣ್ಣಿನ ಬೀಜವು ಉತ್ತಮ ಪರಿಹಾರವನ್ನು ನೀಡುತ್ತದೆ. ಆಹಾರದ ಮುಂಚೆ ಅಥವಾ ನಂತರ ಒಂದು 30 ಪರಂಗಿ ಹಣ್ಣಿನ ಬೀಜವನ್ನು ತಿನ್ನುವುದರಿಂದ ಜಂತುಗಳ ನಾಶವಾಗುತ್ತದೆ.
- ಪರಂಗಿ ಹಣ್ಣಿನ ಕಾಯಿಯನ್ನು ತುಂಡುಗಳಾಗಿ ಕತ್ತರಿಸಿ ಸಕ್ಕರೆಯೊಂದಿಗೆ ತಿನ್ನುವುದರಿಂದ ಜಂತು ಹುಳಗಳ ನಾಶವಾಗುತ್ತದೆ.
- ಪರಂಗಿ ಹಣ್ಣಿನ ಎಲೆಗಳು ಕೂಡ ಅರೋಗ್ಯದ ಹಿತಕ್ಕಾಗಿ ಒಳ್ಳೆಯದು. ಒಂದು ಚಿಕ್ಕ ಎಲೆಯನ್ನು ಜಗಿದು ತಿನ್ನಿವುದರಿಂದ ಹೊಟ್ಟೆಯೊಳಗಿನ ಕರುಳಿನ ಕ್ರಿಮಿಗಳು ನಾಶವಾಗುತ್ತದೆ.
2. ಸ್ತ್ರೀಯರ ಋತುಚಕ್ರದ ಸಮಸ್ಯೆಗಳಿಗೆ
- ಋತುಚಕ್ರ ಸಮಯಕ್ಕೆ ಸರಿಯಾಗಿ ಆಗದಿದ್ದರೆ, ರಕ್ತ ಸ್ರಾವ ಕಡಿಮೆಯಾಗುತ್ತಿದ್ದರೆ, ಇಂತಹ ಯಾವುದೇ ಸಮಸ್ಯೆಗಳಿಗೆ ಪರಂಗಿ ಹಣ್ಣು ಉತ್ತಮವಾಗಿದೆ. ಪರಂಗಿ ಹಣ್ಣನ್ನು ತಿನ್ನುವುದರಿಂದ ಹೆಣ್ಣು ಮಕ್ಕಳ ಹಲವು ಸಮಸ್ಯೆಗಳಿಗೆ ಪರಿಹಾರವಾಗುತ್ತದೆ.
- ಋತುಸ್ರಾವ ಸರಿಯಾಗಿ ಆಗುತ್ತಿಲ್ಲವೆಂದರೆ ಪರಂಗಿ ಹಣ್ಣಿನ ಬೀಜವನ್ನು ನೆರಳಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಒಒಂದು ಚಮಚ ಜೇನುತುಪ್ಪಡೊಡನೆ ಸೇವಿಸಬೇಕು. ಇದು ದೇಹಕ್ಕೆ ತುಂಬಾ ಉತ್ತಮವು ಆಗಿದೆ.
3. ಶಕ್ತಿವರ್ಧಕ ಪರಂಗಿ ಹಣ್ಣು
- ಉತ್ತಮ ಚೈತನ್ಯ ಹಾಗೂ ಶಕ್ತಿವರ್ಧನೆಗೆ ಪರಂಗಿ ಹಣ್ಣನ್ನು ಜ್ಯೂಸ್ ನ ರೂಪದಲ್ಲಿ ಸೇವಿಸಬಹುದು. ಪರಂಗಿ ಹಣ್ಣು, ಹಾಲು ಹಾಗೂ ಜೇನುತುಪ್ಪ ಎಲ್ಲವನ್ನು ಸೇರಿಸಿ ಜ್ಯೂಸು ತಯಾರಿಸಬೇಕು. ಇದು ಹೃದಯದ ನರಗಳ ಆರೋಗ್ಯಕ್ಕೆ ಉತ್ತಮವಾಗಿದ್ದು, ಮಕ್ಕಳು ಹಾಗೂ ಬಾಣಂತಿಯರು ಸೇವಿಸಲೇ ಬೇಕು. ಇದು ಉತ್ತಮ ಶಕ್ತಿ ಟಾನಿಕ್ ಆಗಿದೆ.
- ನಿತ್ಯ ಪರಂಗಿ ಹಣ್ಣನ್ನು ತಿನ್ನುವುದರಿಂದ ದೈಹಿಕ ಸಾಮರ್ಥ್ಯ ಜಾಸ್ತಿಯಾಗಿ, ನಿಶ್ಯಕ್ತಿ ಕೂಡ ದೂರವಾಗುತ್ತದೆ.
( ಗರ್ಭಿಣಿ ಹೆಂಗಸರಿಗೆ ಪರಂಗಿ ಹಣ್ಣು ನಿಶಿದ್ಧವಾಗಿದೆ)
4. ಉತ್ತಮ ಜೀರ್ಣಕ್ರಿಯೆಗಾಗಿ
- ಆಹಾರದ ನಂತರ ಪರಂಗಿ ಹಣ್ಣುಗಳನ್ನು ಸೇವಿಸಿದರೆ ತಿಂದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ. ಸುಲಭ ಮಲವಿಸರ್ಜನೆಗೂ ಉತ್ತಮವಾಗಿದೆ.
- ಪರಂಗಿ ಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡು, ಸ್ವಲ್ಪ ಜೀರಿಗೆ ಪುಡಿ, ಮೆಣಸಿನ ಪುಡಿ, ನಿಂಬೆ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸಲಾಡ್ ರೂಪದಲ್ಲಿ ತಿಂದರೆ ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ.
5. ಮಧುಮೇಹ
- ಪರಂಗಿ ಹಣ್ಣನ್ನು ಹಿತ ಮಿತವಾಗಿ ಸೇವಿಸುವುದು ಸಕ್ಕರೆ ಖಾಯಿಲೆಗೆ ಉತ್ತಮವಾಗಿದೆ. ಇದು ಮಧುಮೇಹಿಗಳ ಕಣ್ಣಿನ ಅರೋಗ್ಯಕ್ಕೂ ಬಹಳ ಉತ್ತಮವಾಗಿದೆ.
6. ಸಂಧಿವಾತ ಹಾಗೂ ನೋವಿನ ಸಮಸ್ಯೆಗಳಿಗೆ
- ಬಲಿಷ್ಠ ಮೂಳೆಗಳನ್ನು ಹೊಂದಲು ಪರಂಗಿ ಹಣ್ಣನ್ನು ನಿತ್ಯ ಉಪಯೋಗಿಸಬೇಕು. ಇದು ಬಿದ್ದಾಗ ಅಥವಾ ಅಪಘಾತವಾದಗ ಮೂಳೆಗಳು ಮುರಿಯದಷ್ಟು ಬಲವನ್ನು ಮೂಲೆಗಳಿಗೆ ನೀಡುವ ಸಾಮರ್ಥ್ಯ ಹೊಂದಿದೆ. ಸಂಧಿವಾತ ಮತ್ತು ಮೂಳೆಗಳ ಸಮಸ್ಯೆಗಳಿಗೂ ಇದು ಉತ್ತಮವಾಗಿದೆ.
- ಪರಂಗಿ ಮರದ ಎಲೆಗಳಲ್ಲೂ ಉತ್ತಮ ಅಂಶಗಳಿದ್ದು ನೋವಿರುವ ಜಾಗದಲ್ಲಿ ಎಲೆಗಳನ್ನು ಬಿಸಿಮಾಡಿ ಶಾಖ ಕೊಟ್ಟರೆ, ನೋವು ತ್ವರಿತವಾಗಿ ಕಡಿಮೆಯಾಗುತ್ತದೆ.
7. ಕಣ್ಣಿನ ಉತ್ತಮ ಆರೋಗ್ಯಕ್ಕೆ
- ವಿಟಮಿನ್ ಎ ಅಂಶವು ಹೇರಳವಾಗಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಯಾವುದೇ ರೀತಿಯ ದೃಷ್ಟಿ ದೋಷಕ್ಕೆ ಪರಂಗಿ ಹಣ್ಣು ಉತ್ತಮ ಪರಿಹಾರವನ್ನು ನೀಡುತ್ತದೆ.
8. ಚರ್ಮದ ಆರೋಗ್ಯಕ್ಕೆ
- ಚರ್ಮದ ಮೇಲೆ ಉಂಟಾಗುವ ಕಲೆ ಹಾಗೂ ಮೊಡವೆಗಳಿಗೆ ಪರಂಗಿ ಹಣ್ಣನ್ನು ಹೋಳುಗಳಾಗಿ ಕತ್ತರಿಸಿ ಕಲೆ ಹಾಗೂ ಮೊಡವೆಗಳು ಇರುವ ಜಾಗದಲ್ಲಿ ಚೆನ್ನಾಗಿ ಉಜ್ಜಿಕೊಳ್ಳಬೇಕು. ಹೀಗೆ ದಿನ ನಿತ್ಯ ರೂಢಿಯಲ್ಲಿಟ್ಟರೆ ಕ್ರಮೇಣ ಕಲೆ, ಮೊಡವೆಗಳು ಕಡಿಮೆಯಾಗುತ್ತದೆ.
- ಪರಂಗಿ ಹಣ್ಣನ್ನು ನುಣ್ಣಗೆ ರುಬ್ಬಿ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ಸೂರ್ಯನ ಶಾಖದಿಂದ ಚರ್ಮ ಸುಟ್ಟಿದ್ದರೆ ಕಡಿಮೆಯಾಗುತ್ತದೆ, ಹಾಗೆಯೇ ಮುಖಕ್ಕೆ ಹೊಸ ಹೊಳಪು ಬರುತ್ತದೆ.
- ಪರಂಗಿ ಹಣ್ಣನ್ನು ಸೇವನೆ ಮಾಡುವುದರಿಂದ ಚರ್ಮವು ಬೇಗನೆ ಸುಕ್ಕಾಗುವುದಿಲ್ಲ, ಚರ್ಮವು ಬಿರುಕು ಬಿಡುವುದು ಕೂಡ ಕಡಿಮೆಯಾಗುತ್ತದೆ.
- ಪರಂಗಿ ಹಣ್ಣು ಮಾನಸಿಕ ಒತ್ತಡ ಹಾಗೂ ತಳಮಳವನ್ನು ಕಡಿಮೆಗೊಳಿಸಲು ಸಹಾಯಕವಾಗಿದ್ದು, ಹೊಸ ಹುರುಪನ್ನು ಮೂಡಿಸುತ್ತದೆ.
9. ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ
- ಪರಂಗಿ ಕಾಯಿಗಳು ನಮ್ಮನ್ನು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪಾರು ಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಪರಂಗಿ ಕಾಯಿಗಳನ್ನು ತುಂಡಾಗಿ ಕತ್ತರಿಸಿ, ನೆರಳಿನಲ್ಲಿ ಒಣಗಿಸಿಕೊಳ್ಳಬೇಕು. ಚೆನ್ನಾಗಿ ಒಣಗಿದ ನಂತರ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಈ ಪುಡಿಯನ್ನು ಬಿಸಿ ನೀರಿಗೆ ಬೆರೆಸಿ ಕುಡಿಯುವುದರಿಂದ ಗ್ರಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉರಿ ಎಲ್ಲವೂ ಕಡಿಮೆಯಾಗುತ್ತದೆ.
10. ರಕ್ತ ಹೆಪ್ಪುಗಟ್ಟಲು
- ಪರಂಗಿ ಹಣ್ಣಿನಲ್ಲಿ ಫೈಬ್ರಿನ್ ಅಂಶವಿದ್ದು, ಅದು ರಕ್ತದ ಹೆಪ್ಪುಗಟ್ಟುವಿಕೆಗೆ ಉತ್ತಮವಾಗಿದೆ. ಕೆಲವರಲ್ಲಿ ಗಾಯವಾದಾಗ ರಕ್ತವು ಸುರಿಯುತ್ತಲೇ ಇರುತ್ತದೆ, ಅಂತವರು ಪ್ರತಿನಿತ್ಯ ಪರಂಗಿ ಹಣ್ಣನ್ನು ಸೇವಿಸಬೇಕು. ಇದು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯಕವಾಗಿದೆ.
11. ಗಾಯವಾದಾಗ ಮತ್ತು ಹುಳಗಳ ಕಡಿತಕ್ಕೆ
- ಪರಂಗಿ ಹಣ್ಣಿನ ಸಿಪ್ಪೆಯನ್ನು ಗಾಯದ ಮೇಲೆ ಇಟ್ಟು ಪಟ್ಟಿ ಕಟ್ಟಬೇಕು. ಇದರಿಂದ ಗಾಯವು ಬೇಗ ಒಣಗುತ್ತದೆ.
- ಇರುವೆಯಂತಹ ಹುಳಗಳು ಕಡಿದಾಗ ಪರಂಗಿ ಹಣ್ಣಿನ ಹೂವುಗಳನ್ನು ಸ್ವಲ್ಪ ಜಜ್ಜಿ ಹುಳು ಕಡಿತದ ಜಾಗದಲ್ಲಿ ಹಚ್ಚಬೇಕು. ಇದರಿಂದ ನೋವು, ಉರಿ ಎಲ್ಲವೂ ಕಡಿಮೆಯಾಗುತ್ತದೆ.
11. ಗಾಯವಾದಾಗ ಮತ್ತು ಹುಳಗಳ ಕಡಿತಕ್ಕೆ
ಇನ್ನೂ ಅನೇಕ ಉಪಯೋಗಗಳನ್ನು ಪರಂಗಿ ಹಣ್ಣು ಹೊಂದಿದ್ದು, ಅತ್ಯಂತ ಸಹಾಯಕಾರಿಯಾಗಿದೆ. ಕಡಿಮೆ ಕ್ಯಾಲೋರಿ ಇರುವ ಹಣ್ಣು ಇದಾಗಿದೆ, ಹಾಗಾಗಿ ತೂಕ ಇಳಿಸಲು ಉತ್ತಮ ಆಹಾರವಾಗಿದೆ. ಪರಂಗಿ ಕಾಯಿಗಳನ್ನು ಅಡುಗೆಯಲ್ಲಿ ಬಳಸುತ್ತಾರೆ, ಇದು ಹೊಟ್ಟೆಯಲ್ಲಿ ಬೆಳೆಯಲು ಪ್ರಾರಂಭವಾಗುವ ಸಣ್ಣ ಪ್ರಮಾಣದ ಗಡ್ಡೆಗಳನ್ನು ಕರಗಿಸಲು ಸಹಾಯಕವಾಗಿದೆ.
ಪರಂಗಿ ಹಣ್ಣಿನ ಜ್ಯೂಸ್, ಸಲಾಡ್ ಎಲ್ಲವೂ ಕೂಡ ದೇಹಕ್ಕೆ ಅತಿ ಉತ್ತಮವಾಗಿದೆ. ಇದು ದೇಹಕ್ಕೆ ಸ್ವಲ್ಪ ಪ್ರಮಾಣದ ಉಷ್ಣತೆಯನ್ನು ನೀಡುತ್ತದೆ. ಆದ್ದರಿಂದ ಇದು ಗರ್ಭಿಣಿಯರಿಗೆ ಉತ್ತಮವಾಗಿರುವುದಿಲ್ಲ. ಇಷ್ಟೆಲ್ಲ ಉಪಯೋಗಗಲಿರುವ ಪರಂಗಿ ಹಣ್ಣನ್ನು ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.