ಯುಗಾದಿ ಹಬ್ಬದಲ್ಲಿ ಬೇವು ತಿನ್ನುವ ಹಿನ್ನಲೆ ಏನು? ವೈಜ್ಞಾನಿಕ, ಸಾಂಪ್ರದಾಯಿಕ ಕಾರಣಗಳು ಮತ್ತು ಉಪಯೋಗಗಳು

Spread the love

ಯುಗಾದಿ ಹಬ್ಬದಲ್ಲಿ ಬೇವು ತಿನ್ನುವ ಹಿನ್ನಲೆ ಏನು? ವೈಜ್ಞಾನಿಕ, ಸಾಂಪ್ರದಾಯಿಕ ಕಾರಣಗಳು ಮತ್ತು ಉಪಯೋಗಗಳು
ಯುಗಾದಿ ಹಬ್ಬದಲ್ಲಿ ಬೇವು ತಿನ್ನುವ ಹಿನ್ನಲೆ ಏನು? ವೈಜ್ಞಾನಿಕ, ಸಾಂಪ್ರದಾಯಿಕ ಕಾರಣಗಳು ಮತ್ತು ಉಪಯೋಗಗಳು. AI Image

ಆಂಗ್ಲ ಹೆಸರು – ನೀಮ್ (Neem)
ವೈಜ್ಞಾನಿಕ ಹೆಸರು – ಅಜಾಡಿರಾಕ್ಟಾ ಇಂಡಿಕಾ (Azadirachta indica)

ಭಾರತ ದೇಶದ ಉಷ್ಣ ಪ್ರದೇಶದಲ್ಲಿ ಅಥವಾ ಅಧಿಕ ತಾಪಮಾನವು ಇರುವ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುವ ಒಂದು ಅಗ್ರಗಣ್ಯ ವನಸ್ಪತಿ ಎಂದರೆ ಬೇವು. ದೊಡ್ಡ ಮರವಾಗಿ ಬೆಳೆಯುವ ಈ ಬೇವು ಅತ್ಯಂತ ತಂಪು ನೀಡುವ ಮರವಾಗಿದೆ. ಬೇವಿನ ಗಾಳಿಯು ಅತ್ಯಂತ ತಂಪು ಹಾಗು ಬೇವು ದೇಹಕ್ಕೂ ಕೂಡ ತಂಪು. 

ಹಿಂದೂ ಸಂಪ್ರದಾಯದ ಪ್ರಕಾರ ಬೇವಿಗೆ ದೈವಿಕ ಗುಣಗಳಿದ್ದು, ಬೇವಿನ ಮರದಲ್ಲಿ ದೇವತೆಗಳ ವಾಸವಿದೆ ಎಂಬ ಕೆಲವು ಮಾತುಗಳು ಸಹ ಇದೆ. ದೈವೀ ವೃಕ್ಷವಾದ ಇದನ್ನು “ಅಮ್ಮಾ” ಆದ ಸಂದರ್ಭಗಳಲ್ಲಿ ಆಗುವ ಗುಳ್ಳೆಗಳ ನೋವಿಗೆ ಹಾಗು ಅದನ್ನು ಕಡಿಮೆ ಮಾಡಲು ಬೇವಿನ ಸೊಪ್ಪಿನ ಮೇಲೆ ಮಲಗಿಸುತ್ತಾರೆ. ಆ ಸೊಪ್ಪಿನಲ್ಲಿನ ರೋಗ ನಿರೋಧಕ ಗುಣಗಳಿಂದ ಬೇಗ ಸಮಸ್ಯೆಗಳು ದೂರವಾಗುತ್ತದೆ.

ಬೇವು ತಿನ್ನಲು ವೈಜ್ಞಾನಿಕ ಕಾರಣಗಳು

ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ಇಟ್ಟು ಪೂಜಿಸುವ ವಾಡಿಕೆಯೂ ಇದೆ. ಇದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ಇದನ್ನು ತಿಳಿಯಬೇಕಾದರೆ ಹಿಂದಿನ ಕಾಲದಲ್ಲಿ ಹೊಸ ವರ್ಷದ ಚೈತ್ರ ಮಾಸದಲ್ಲಿ ಬರುವ ಮೊದಲ ಹಬ್ಬ ಎಂದರೆ ಯುಗಾದಿ. ಅಂದಿನ ದಿನಂದಿದ ಒಂದು ಮಾಸದ ವರೆಗೆ ಅಂದರೆ ಒಂದು ತಿಂಗಳು ಸತತವಾಗಿ ನಿತ್ಯ ಬೇವನ್ನು ಸೇವನೆ ಮಾಡುತಿದ್ದರು, ಕಾರಣ ವರ್ಷವಿಡೀ ಆರೋಗ್ಯವಾಗಿರಲು ಒಂದು ತಿಂಗಳು ನಿತ್ಯ ಬೇವನ್ನು ಸ್ವೀಕರಿಸುತ್ತಿದ್ದರು. ಅದು ಕಾಲ ಕ್ರಮೇಣ ಯುಗಾದಿ ಹಬ್ಬದ ದಿನ ಮಾತ್ರ ಸೇವಿಸುವಂತಾಗಿದೆ. ನೋಡಿ ಕೆಲವೊಂದು ಆಚರಣೆ ಹಿಂದೆ ಎಷ್ಟು ವೈಜ್ಞಾನಿಕ ಕಾರಣಗಳಿರುತ್ತವೆ.. ಅಲ್ಲವೇ??…ಹೀಗೆ ಬೇವನ್ನು ನಿತ್ಯ ಸ್ವೀಕರಿಸಲು ಆಗದೆ ಇರುವುದಕ್ಕೆ ಕಾರಣ ಬೇವಿನ ಕಹಿ. ಅದರಕ್ಕೆ ಕಹಿ, ಉದರಕ್ಕೆ ಸಿಹಿ ಅಲ್ಲವೇ? ಆದರೂ ನಮಗೆ ಸ್ವೀಕರಿಸಲು ಕಷ್ಟಕರ. ಬೇವಿನ ಮಹತ್ವ ಅತ್ಯದ್ಭುತವಾಗಿದ್ದು ಅನೇಕ ರೋಗ ರುಜಿನಗಳಿಗೆ ತುಂಬಾ ಅವಶ್ಯಕ ವಾಗಿದೆ.

ಇನ್ನು ಕೆಲವು ವೈಜ್ಞಾನಿಕ ಹಿನ್ನೆಲೆಗಳನ್ನು ತಿಳಿಯುವುದಾದರೆ ಬೇವಿನ ಹಣ್ಣು ಹಾಗು ಎಲೆಗಳಲ್ಲಿ ಹೇರಳವಾದ ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಹಾಗು ವಿಟಮಿನ್ ಎ ಗಳ ಸತ್ವಗಳು ಇದೆ. ಸೂರ್ಯನ ಕಿರಣಗಳ ಮೂಲಕ ಅಧಿಕವಾದ ವಿಟಮಿನ್ ಎ ನ್ನೂ ಬೇವಿನ ಮರ ಕಲೆಹಾಕುತ್ತದೆ. ಬೇವಿನ ಮರ ಹಾಗು ಎಲೆಗಳಲ್ಲಿ ಕ್ವಿನೈನಿನ್ ಅಂಶವು ಹೆಚ್ಚಾಗಿದೆ. ಹಾಗೆಯೇ ಇದು ಇತರ ಮರಗಳಂತೆ ಕತ್ತಲಾದ ಮೇಲೆ ನೈಟ್ರೋಜನ್ ಅನಿಲವನ್ನು ಬಿಡುಗಡೆ ಮಾಡುವುದಿಲ್ಲ ಹಾಗಾಗಿ ರಾತ್ರಿ ವೇಳೆಯಲ್ಲಿ ಬೇವಿನ ಮರದ ಕೆಳಗೆ ನೆಮ್ಮದಿಯಾಗಿ ಮಲಗಿಕೊಳ್ಳಬಹುದು. ಹಾಗೆಯೇ ಬೇವಿನಿಂದ ಮಾಡಿದ ಎಣ್ಣೆಯಲ್ಲಿ ಗಂಧಕದ ಪ್ರಮಾಣ ಅಧಿಕವಾಗಿದೆ. ಬೇವಿನ ಕಡ್ಡಿಗಳನ್ನು ಹಲ್ಲು ಉಜ್ಜಲು ಬಳಸುತ್ತಾರೆ. ಹಲ್ಲು ನೋವಿಗೂ ಈ ಬೇವಿನ ಕಡ್ಡಿಯ ಸತ್ವಗಳು ತುಂಬಾ ಪ್ರಯೋಜನಕಾರಿಯಾಗಿದೆ.

ಬೇವಿನ ಉಪಯೋಗಗಳು

ತಂಗಾಳಿಯನ್ನು ಬೀಸುವ, ತುಸು ಕಹಿ ಸ್ವಾದವನ್ನು ನೀಡುವ, ಆರೋಗ್ಯಕ್ಕೆ ಎಲ್ಲ ರೀತಿಯಲ್ಲಿ ಕೂಡ ಸಹಕಾರಿಯಾಗಿರುವ ಮರವೆಂದರೆ ಅದು ಬೇವಿನ ಮರ. ಬೇವಿನ ಮರದ ಬೇರು, ಕಾಂಡ, ತೊಗಟೆ, ಎಲೆ, ಹೂವು, ಕಾಯಿ ಎಲ್ಲವೂ ಆರೋಗ್ಯ ವರ್ಧಕವಾಗಿದ್ದು, ನಮ್ಮ ದಿನ ನಿತ್ಯದ ಆರೋಗ್ಯದ ಏರುಪೇರಿಗೆ ಸೂಕ್ತ ಮದ್ದಾಗಿ ಬಳಸಬಹುದಾಗಿದೆ. ಪ್ರಸ್ತುತ ಈ ಲೇಖನದಲ್ಲಿ ಬೇವಿನ ಮರದ ಉಪಯೋಗಗಳ ವಿಶ್ಲೇಷಣೆಯನ್ನು ಮಾಡೋಣ.

1. ರಕ್ತ ದೋಷ ಹಾಗು ಚರ್ಮ ವ್ಯಾಧಿಗಳ ನಿವಾರಣೆಗೆ ಬೇವಿನ ಪಾತ್ರ

ಬೇವಿನ ಎಣ್ಣೆಯಲ್ಲಿ ಗಂಧಕದ ಅಂಶವಿದೆ. ಇದು ಎಲ್ಲ ರೀತಿಯ ಚರ್ಮ ದೋಷವನ್ನು ನಿವಾರಿಸುವ ಶಕ್ತಿ ಹೊಂದಿದೆ. ಕಜ್ಜಿ, ತುರಿಕೆ, ಕುರುಗಳು, ಗುಳ್ಳೆಗಳು ಹಾಗು ಯಾವುದೇ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮತ್ತು ರಕ್ತ ದೋಷ ನಿವಾರಣೆಗೆ ಒಂದು ಮದ್ದು ಎಂದರೆ ಒಂದು ಚಮಚ ಬೇವಿನ ಎಣ್ಣೆಯನ್ನು ಹಾಲಿನಲ್ಲಿ ಹಾಕಿ ಕುದಿಸಬೇಕು. ನಂತರ ಅದನ್ನು ಕುಡಿಯಬೇಕು. ಹಾಗೆಯೇ ಸಮಸ್ಯೆ ಇದ್ದ ಕಡೆ ಚರ್ಮದ ಮೇಲೆ ಬೇವಿನ ಎಣ್ಣೆಯನ್ನು ಲೇಪಿಸಬೇಕು. ಹೀಗೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ, ಹಾಗೆಯೇ ಚರ್ಮ ವ್ಯಾಧಿಗಳ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ.

2. ಮೇಲಿಂದ ಮೇಲೆ ಬರುವ ಜ್ವರಕ್ಕೆ ಉತ್ತಮ ಮದ್ದು ಬೇವು (Neem)

ಬೇವಿನ ಮರದ ತೊಗಟೆಯನ್ನು ತಂದು ಚೆನ್ನಾಗಿ ತೊಳೆದು ಕುಟ್ಟಿ ಪುಡಿಮಾಡಿಕೊಂಡು, ಒಂದು ಲೋಟ ನೀರಿಗೆ ಈ ಬೇವಿನ ಮರದ ತೊಗಟೆ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಆದ ನಂತರ ಒಲೆಯನ್ನು ಆರಿಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಇದೇ ರೀತಿ ಒಂದು ವಾರ ಸತತವಾಗಿ ಕುಡಿಯುತ್ತಾ ಬಂದರೆ ಜ್ವರವು ಕಡಿಮೆ ಆಗಿ, ಜ್ವರದ ಸುಸ್ತು ಕೂಡ ತಗ್ಗುತ್ತದೆ.

ನಿತ್ಯ ಸ್ನಾನ ಮಾಡುವ ನೀರಿಗೆ ಒಂದು ಹಿಡಿ ಬೇವಿನ ಸೊಪ್ಪನ್ನು ಹಾಕಿ ಕುದಿಸಿ, ಆ ನೀರಿನಿಂದ ಸ್ನಾನ ಮಾಡಿದರೆ ಚರ್ಮದ ಯಾವುದೇ ಸಮಸ್ಯೆಗಳು ನಮ್ಮ ಹತ್ತಿರ ಸುಳಿಯುವುದಿಲ್ಲ.

3. ತಲೆ ಕೂದಲಿನಲ್ಲಿ ಬೆಳೆಯುವ ಹೇನು, ಸೀರು ನಿವಾರಣೆಗೆ ಬೇವು ಉತ್ತಮ ಪರಿಹಾರವಾಗಿದೆ

ತಲೆಯಲ್ಲಿ ಹೇನು ಬೆಳವಣಿಗೆ ಜಾಸ್ತಿ ಆಗಿದ್ದರೆ, ರಾತ್ರಿ ಮಲಗುವ ಮುಂಚೆ ತಲೆಯ ಕೂದಲಿನ ಬುಡಕ್ಕೆ ಚೆನ್ನಾಗಿ ಬೇವಿನ ಎಣ್ಣೆಯನ್ನು ಹಚ್ಚಿ ಸವರಬೇಕು. ಮಾರನೇ ದಿನ ಬೆಳಿಗ್ಗೆ ಚೆನ್ನಾಗಿ ತಲೆ ತೊಳೆಯಬೇಕು. ಹೀಗೆ ಮಾಡುವುದರಿಂದ ಹೇನು ಸಮಸ್ಯೆ ಕಡಿಮೆ ಆಗುತ್ತದೆ.

4. ಅಂಗೈ ಅಂಗಾಲುಗಳು ಜಾಸ್ತಿ ಬೆವರುತಿದ್ದರೆ ಬೇವಿನ ಈ ವಿಧಾನವನ್ನು ಪಾಲಿಸಬೇಕು.

ಒಂದು ಲೋಟ ಬಿಸಿ ಹಾಲಿಗೆ ಒಂದು ಸಣ್ಣ ಚಮಚ ಬೇವಿನ ಎಣ್ಣೆಯನ್ನು ಹಾಕಿ ಕುಡಿಯಬೇಕು. ಆಗಲೇ ಕೈ ಕಾಲುಗಳಿಗೆ ಬೇವಿನ ಎಣ್ಣೆಯನ್ನು ಹಚ್ಚುತ್ತಾ ಬರಬೇಕು. ಇದರಿಂದ ಬೆವರುವಿಕೆ ಕಡಿಮೆ ಆಗುತ್ತದೆ.

5. ಅಧಿಕ ರಕ್ತದೊತ್ತಡ, ಮಧುಮೇಹ ಹಾಗು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಬೇವು ಉಪಯುಕ್ತವಾಗಿದೆ

ಬೇವಿನ ಎಲೆಯನ್ನು ನಿತ್ಯ ಬೆಳಿಗ್ಗೆ ಜಗಿದು ತಿನ್ನುವುದರಿಂದ ಅಥವಾ ಬೇವಿನ ಎಲೆಯ ಜ್ಯೂಸ್ ಮಾಡಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಅಧಿಕವಾಗದೆ ನಿಯಂತ್ರಣದಲ್ಲಿ ಇರುತ್ತದೆ. ಇದರಿಂದ ರಕ್ತವು ಶುದ್ಧವಾಗಿರುತ್ತದೆ ಹಾಗೆಯೇ ಸಕ್ಕರೆ ಖಾಯಿಲೆ ಕೂಡ ಕಡಿಮೆ ಆಗುತ್ತದೆ.

ಬೇವಿನ ಮರದ ತೊಗಟೆಯನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿಕೊಂಡು, ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ನಿತ್ಯ ಕುಡಿಯುವುದರಿಂದ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

6. ಉಗುರು ಸುತ್ತಿನ ಬೇನೆಗೂ ಬೇವು ಮದ್ದು

ಬೇವಿನ ಎಲೆಗಳು, ಉಪ್ಪು ಹಾಗು ತುಪ್ಪ ಮೂರನ್ನು ಹಾಕಿ ಕಲ್ಲಿನಲ್ಲಿ ಚೆನ್ನಾಗಿ ಅರೆಯಬೇಕು. ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ ಉಗುರಿನ ಸುತ್ತ ಹಚ್ಚಿ ಕಟ್ಟಿಕೊಂಡರೆ ಉಗುರು ಸುತ್ತಿನ ಸಮಸ್ಯೆ ಕಡಿಮೆ ಆಗುತ್ತದೆ.

7. ಕಿವಿ ನೋವಿಗೆ ಸ್ಪಂದಿಸುವ ಬೇವು

ಬೇವಿನ ಎಲೆಯ ರಸವನ್ನು ತೆಗೆದು ನೋವು ಇರುವ ಕಿವಿಗೆ 2 ಹನಿ ಹಾಕಿದರೆ ಕಿವಿ ನೋವು ಕ್ರಮೇಣ ಕಡಿಮೆ ಆಗುತ್ತದೆ. ಇಲ್ಲವೇ ಬೇವಿನ ಎಣ್ಣೆಯನ್ನು ಕೂಡ ಕಿವಿ ನೋವಿರುವಾಗ 2 ಹನಿ ಕಿವಿಗೆ ಹಾಕಿಕೊಂಡರೆ ಕಿವಿ ನೋವು ಕಡಿಮೆ ಆಗುತ್ತದೆ.

ಇನ್ನು ಹಲವು ಉಪಯೋಗಗಳನ್ನು ಹೊಂದಿರುವ ಈ ಬೇವು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ನಿತ್ಯ ಬೆಳಿಗ್ಗೆ ಬೇವನ್ನು ಸ್ವೀಕರಿಸುವುದು ಉತ್ತಮ ಆರೋಗ್ಯವರ್ಧಕವಾಗಿದೆ. ಇಂತಹ ನಮ್ಮ ಪರಿಸರದಲ್ಲಿ ಸಹಜವಾಗಿ ಸಿಗುವ ಬೇವನ್ನು ನಮ್ಮ ನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಅಲ್ಲವೇ..?!

ಬೇವಿನ ಗುಣಲಕ್ಷಣಗಳು ಕಹಿಯಾದರೂ ಅದರ ಪ್ರತಿಫಲ ನಮ್ಮ ಮೇಲೆ ಬಹಳ ಸಿಹಿಯಾಗಿದೆ. ಬೇವು ಬೇರೆ ಬೇರೆ ರೀತಿಯ ರೋಗಗಳಿಗೆ ಅಮೃತವಾಗಿದೆ. ಯುಗದ ಆರಂಭದ ಹಬ್ಬಕ್ಕೂ ಬಾಗಿಲಿಗೆ ಮಾವಿನ ಹಾಗು ಬೇವಿನ ತೋರಣ ಕಟ್ಟಿ ಯಾವುದೇ ಸಮಸ್ಯೆ ಮನೆಗೆ ಬರದಂತೆ ನೋಡಿಕೊಳ್ಳುವ ನಾವು ನಿತ್ಯ ಒಂದು ಎಸಳು ಬೇವನ್ನು ದೇಹಕ್ಕೆ ನೀಡಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಲ್ಲವೇ.? ಆರೋಗ್ಯದ ಮಿತ್ರ ಬೇವಿನ ಎಲ್ಲ ಸಹಾಯಗಳನ್ನು ಪಡೆದುಕೊಂಡು ಸ್ವಾಸ್ತ್ಯ ವನ್ನು ಕಾಪಾಡಿಕೊಳ್ಳಬೇಕು.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top