ತುಳಸಿ ಉಪಯೋಗಗಳು: ಸಮಗ್ರ ಆರೋಗ್ಯ ಪರಿಹಾರ – ಹೃದಯ, ಕಣ್ಣು, ಚರ್ಮ, ಜ್ವರ, ಕೆಮ್ಮು ಮತ್ತು ಇತರ ಪ್ರಯೋಜನಗಳ ವಿಶ್ಲೇಷಣೆ

Spread the love

ತುಳಸಿ ಸಸ್ಯವು ಆಯುರ್ವೇದದಲ್ಲಿ ಮಹತ್ವಪೂರ್ಣ ಸ್ಥಾನವನ್ನು ಹೊಂದಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅನೇಕ ಲಾಭಗಳನ್ನು ಒದಗಿಸುತ್ತದೆ. ಇದು ಕಿವಿ, ಕಣ್ಣು, ಚರ್ಮ, ಜ್ವರ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಸಹಜ, ಪ್ರಾಕೃತಿಕ ಪರಿಹಾರವನ್ನು ನೀಡುತ್ತದೆ. ತುಳಸಿಯ ಶುದ್ಧ ಗುಣಗಳು ದೇಹದ ರಕ್ಷಣಾ ವ್ಯವಸ್ಥೆಯನ್ನು ಬೆಳೆಸಿ, ಇಮ್ಯುನಿಟಿಯನ್ನು ಹೆಚ್ಚಿಸಲು ಸಹಕಾರಿ ಆಗಿವೆ. ಈ ಲೇಖನದಲ್ಲಿ, ತುಳಸಿಯ ವಿವಿಧ ಉಪಯೋಗಗಳು ಮತ್ತು ಅವುಗಳಿಂದ ಸಿಗುವ ಸಮಗ್ರ ಆರೋಗ್ಯ ಪ್ರಯೋಜನಗಳನ್ನು ವಿವರಿಸಲಾಗಿದೆ.

ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವಲ್ಲಿ ಒಳ್ಳೆಯ ಮದ್ದು ನಮ್ಮ ತುಳಸಿ

  • ತುಳಸಿಯು ವಿಟಮಿನ್ ಸಿ ಮತ್ತು ಯುಜೆನಾಲ್ ನಂತಹ ಉತ್ಕರ್ಷಣ ರೋಗ ನಿರೋಧಕಗಳನ್ನು ಹೊಂದಿರುತ್ತದೆ, ಇದು ಸ್ವತಂತ್ರ ರಾಡಿಕಲ್ ಹಾನಿಕಾರಕ ಪರಿಣಾಮಗಳಿಂದ ಹೃದಯವನ್ನು ರಕ್ಷಿಸುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತವನ್ನು ತಿಳಿಗೊಳಿಸುತ್ತದೆ.

ಚರ್ಮದ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ನಮ್ಮ ತುಳಸಿಯದ್ದು

  • ಚರ್ಮ  ಸುಕ್ಕುಗಟ್ಟುವಿಕೆ ಹಾಗೂ ಮೊಡವೆಗಳಿಂದ ವಿಮುಕ್ತಿಗೆ  ತುಳಸಿಯಲ್ಲಿರುವ ವಿಟಮಿನ್ ಸಿ ಮತ್ತು ಎ, ಫೈಟೊನ್ಯೂಟ್ರಿಯೆಂಟ್‌ಗಳು ಉತ್ತಮ ಉತ್ಕರ್ಷಣ ನಿರೋಧಕಗಳಾಗಿವೆ ಮತ್ತು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಎಲ್ಲಾ ಹಾನಿಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ತಲೆನೋವು ಉಪಶಮನಕ್ಕೆ ಉತ್ತಮ ಔಷಧಿ

  • ತುಳಸಿ ನೈಸರ್ಗಿಕ ಪರಿಮಳವೇ ಒಂದು ತಲೆನೋವು ನಿವಾರಕವಾಗಿದ್ದು, ಮೈಗ್ರೇನ್ ನೋವನ್ನು ಸಹ ನಿವಾರಿಸುತ್ತದೆ. ತುಳಸಿ ರಸದೊಂದಿಗೆ ಏಲಕ್ಕಿಯನ್ನು ತೇದು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ.

ಜ್ವರ, ಶೀತಕ್ಕೆ ಟಾನಿಕ್ ನಮ್ಮ ತುಳಸಿ

  • ತುಳಸಿ ರೋಗ ನಿರೋಧಕ ಶಕ್ತಿ ಹೊಂದಿದ್ದು, ದೇಹಕ್ಕೆ ಉತ್ತಮ ಸ್ಥಿರತೆಯನ್ನು ನೀಡುತ್ತದೆ. ಜ್ವರ ಅಥವಾ ಶೀತದ ಸಮಯದಲ್ಲಿ ತುಳಸಿ ಕಷಾಯ ಸೇವನೆ ಒಂದು ಉತ್ತಮ ಟ್ರಾನಿಕ್ ಆಗುವುದರಲ್ಲಿ ಸಂಶಯವೇ ಇಲ್ಲ. ತುಳಸಿ ರಸದೊಡನೆ ಜೇನನ್ನು ಸೇರಿಸಿ ಕುಡಿದರೆ ಜ್ವರವು ಬೇಗ ಕಡಿಮೆ ಆಗುವುದು.

ಮೂತ್ರಪಿಂಡದ ಕಲ್ಲು ಸಮಸ್ಯೆಗೂ ತುಳಸಿ ಪರಿಹಾರ

  • ತುಳಸಿಯು ಮೂತ್ರವರ್ಧಕ ಮತ್ತು ನಿರ್ವಿಶೀಕರಣ ಧಾತುವಾಗಿ ಕಾರ್ಯನಿರ್ವಹಿಸುತ್ತದೆ, ಅಲ್ಲದೇ ಇದು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಳಸಿಯಲ್ಲಿರುವ ಅಸಿಟಿಕ್ ಆಮ್ಲವು ಕಲ್ಲುಗಳ ವಿಭಜನೆಗೆ ಸಹಾಯ ಮಾಡುತ್ತದೆ.

ಕಣ್ಣಿನ ಕಣ್ಮಣಿ ನಮ್ಮ ತುಳಸಿ

  • ತುಳಸಿ ನೀರು ಕಣ್ಣನ್ನು ಶುದ್ಧಗೊಳಿಸುವುದರ ಜೊತೆಗೆ ಉರಿಯೂತದ ಗುಣಲಕ್ಷಣಗಳು ವೈರಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟುವ ಮೂಲಕ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಇರುಳು ಕಣ್ಣಿನ ಸಮಸ್ಯೆ ಇದ್ದರೆ ಕೃಷ್ಣತುಳಸಿಯ ಎಲೆ ಜಜ್ಜಿದ ರಸವನ್ನು ಕಣ್ಣಿಗೆ ಎರಡು ಹನಿ ಹಾಕುತ್ತಾ ಬಂದರೆ ಕ್ರಮೇಣ ಕಡಿಮೆ ಆಗುತ್ತದೆ.

ಬಾಯಿಯ ಹುಣ್ಣಿಗೆ ಸೂಕ್ತ ಮದ್ದು

  • ತುಳಸಿ ನೈಸರ್ಗಿಕ ಮೌತ್ ಫ್ರೆಶ್ನರ್ ಎಂಬಂತೆ ಹಲವು ಸೋಂಕುಗಳ ನಾಶಕ್ಕೆ ಉತ್ತಮವಾಗಿದೆ. ಒಸಿಮಮ್ ಸ್ಯಾಂಕ್ಟಮ್ ಬಾಯಿ ಹುಣ್ಣುಗಳನ್ನು ಸಹ ಗುಣಪಡಿಸುತ್ತದೆ. ತುಳಸಿ ಹಲ್ಲಿನ ಕುಳಿಗಳು, ಪ್ಲೇಕ್, ಟಾರ್ಟರ್ ಮತ್ತು ಕ್ಲಿಷ್ಟ ಉಸಿರಾಟಕ್ಕೆ ಕಾರಣವಾದ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಮತ್ತು ಹಲ್ಲುಗಳನ್ನು ಸುರಕ್ಷಿತವಾಗಿರಿಸುತ್ತದೆ. ತುಳಸಿ ಎಲೆಯನ್ನು ಅಗೆದು ತಿಂದರೆ ಬಾಯಿಯ ಹುಣ್ಣೆಲ್ಲ ನಿವಾರಣೆಯಾಗುತ್ತದೆ.

ಕೆಮ್ಮಿಗೆ ಕಷಾಯ ಎಂದ ಕೂಡಲೇ ಮೊದಲು ನೆನಪಾಗುವುದು ತುಳಸಿ ಎಲೆಯೇ!

  • ತುಳಸಿಯಲ್ಲಿ ಇರುವ ವಿಟಮಿನ್ ಕೆ ಕೊಬ್ಬನ್ನು ಕರಗಿಸುವ ಶಕ್ತಿ ಹೊಂದಿದ್ದು ಎಲುಬು ಹಾಗೂ ಶ್ವಾಸಕೋಶ, ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಒಂದು ತುಳಸಿ ಎಲೆಯನ್ನು ಜಗಿದು ತಿನ್ನುವುದರಿಂದ ಕಫ ಕರಗಿ ಕೆಮ್ಮು ಕಡಿಮೆಯಾಗುತ್ತದೆ.
  • ಒಂದು ಮುಷ್ಟಿ ತುಳಸಿ ಎಲೆ ಜೊತೆಗೆ ಮೂರು ಲವಂಗ ಜಜ್ಜಿ ಬಂದ ರಸದೊಂದಿಗೆ ಜೇನುತುಪ್ಪ ಸೇರಿಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ.

ವಾತ ಪಿತ್ತ ಕಫಕ್ಕೆ ತುಳಸಿ ರಾಮಬಾಣ

ಮನುಷ್ಯನ ದೇಹದ ಮೂರು ಮುಖ್ಯ ಅಂಶ ಎಂದರೆ ವಾತ,ಪಿತ್ತ ಹಾಗೂ ಕಫ. ಇವು ಮೂರು ಸ್ಥಿಮಿತದಲ್ಲಿದ್ದರೆ ಮನುಷ್ಯನ ಆರೋಗ್ಯ ಉತ್ತಮವಾಗಿರುತ್ತದೆ. ಈ ಮೂರರ ಸಮಸ್ಯೆಗಳಿಗೂ ತುಳಸಿ ರಾಮಬಾಣವಾಗಿದೆ.

  • ವಾತ – ತುಳಸಿ ರಸ ಮೆಣಸನ್ನು ನಯವಾಗಿ ರುಬ್ಬಿ ಜೇನುತುಪ್ಪದೊಡನೆ ಪ್ರತಿದಿನ ಸೇವಿಸಿದರೆ ವಾತ ಸಂಬಂಧಿತ ಖಾಯಿಲೆಗಳು ಕಡಿಮೆಯಾಗುತ್ತದೆ.
  • ಪಿತ್ತ – ಕೃಷ್ಣ ತುಳಸಿ ನಿತ್ಯ ಅಗೆದು ತಿನ್ನುವುದರಿಂದ ಪಿತ್ತ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ.
  • ಕಫ- ಕೊನೆಯದಾಗಿ ತುಳಸಿಯನ್ನು ದಿನ ನಿತ್ಯ ಸೇವಿಸುತ್ತಿದ್ದರೆ ಕಫ ಗಟ್ಟಿಯಾಗುವುದು,ಜೊಲ್ಲು ಸುರಿಯುವುದು ಕಡಿಮೆ ಆಗುತ್ತದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.