ಮಾವಿನ ಹಣ್ಣಿನಿಂದ ತಯಾರಿಸಬಹುದಾದ ಟೇಸ್ಟಿ ಖಾದ್ಯಗಳು – ನೀವು ಮಿಸ್ ಮಾಡಬಾರದು!

Spread the love

ಮಾವಿನ ಹಣ್ಣಿನಿಂದ ತಯಾರಿಸಬಹುದಾದ ಟೇಸ್ಟಿ ಖಾದ್ಯಗಳು – ನೀವು ಮಿಸ್ ಮಾಡಬಾರದು!

ಬೇಸಿಗೆಯ ರಾಜ ಇಲ್ಲವೇ ಹಣ್ಣಿನ ರಾಜ ಎಂದೇ ಪ್ರಸಿದ್ದಿಯಾಗಿರುವ ಮಾವಿನ ಹಣ್ಣು ಎಲ್ಲರಿಗೂ ಪ್ರಿಯವಾಗಿದ್ದು, ಬಲು ಸಿಹಿಯಾಗಿರುತ್ತದೆ. ಸುವಾಸನೆಯೇ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಮಾವಿನ ಹಣ್ಣಿನಲ್ಲಿ ಅನೇಕ ಜಾತಿಗಳಿದ್ದು ಒಂದೊಂದು ಬೇರೆ ಬೇರೆ ರುಚಿ, ಬಣ್ಣ, ಹಾಗೂ ಗಾತ್ರವನ್ನು ಹೊಂದಿರುತ್ತದೆ. ಅಪುಸ್, ನೀಲಂ, ಕೇಸರ್, ಮಲ್ಲಿಕಾ, ಕರಿ ಇಷಾಡ, ತೋತಾಪುರಿ, ರಸಪುರಿ ಹೀಗೆ ಇನ್ನೂ ಹಲವಾರು ವಿಧದ ತಳಿಗಳಿವೆ. ಇಂತಹ ಮಾವಿನ ಹಣ್ಣುಗಳಿಂದ ಮಾಡಬಹುದಾದ ರುಚಿಕರ ಖಾದ್ಯಗಳು ಹಾಗೂ ಅದರ ತಯಾರಿಕಾ ವಿಧಾನಗಳನ್ನು ನಾವು ಈ ಲೇಖನದಲ್ಲಿ ವಿಶ್ಲೇಷಿಸೋಣ.

ಮಾವಿನ ಹಣ್ಣಿನ ಸಾರು

ಬೇಕಾಗುವ ಪದಾರ್ಥಗಳು

  • ಮಾವಿನ ಹಣ್ಣು 15
  • ಉಪ್ಪು
  • ಎಣ್ಣೆ
  • ಕಡ್ಲೆ ಬೇಳೆ 2 ಚಮಚ
  • ಜೀರಿಗೆ 1 ಚಮಚ
  • ಮೆಂತ್ಯ ಕಾಳು ½ ಮಚ
  • ಬ್ಯಾಡಗಿ ಮೆಣಸು 6
  • ಬಿಳಿ ಎಳ್ಳು 1 ಚಮಚ
  • ಅರಿಶಿಣ ಪುಡಿ ¼ ಚಮಚ
  • ಹಿಂಗು ಸ್ವಲ್ಪ
  • ಸಾಸಿವೆ ½ ಚಮಚ
  • ಕರಿಬೇವು
  • ಬೆಲ್ಲ 2 ಚಮಚ

ಮಾಡುವ ವಿಧಾನ
ಮೊದಲಿಗೆ ಮಾವಿನ ಹಣ್ಣಿನ ಸಿಪ್ಪೆಗಳನ್ನು ತೆಗೆದು, ಸಿಪ್ಪೆಯ ರಸವನ್ನು ಹಿಂಡಬೇಕು. ನಂತರ ಸಿಪ್ಪೆಯ ರಸದೊಂದಿಗೆ ಮಾವಿನ ಹಣ್ಣನ್ನು ಬೇಯಿಸಿಕೊಳ್ಳಬೇಕು. ಇನ್ನೊಂದೆಡೆ ಮಸಾಲಾ ಪುಡಿಯನ್ನು ತಯಾರಿಸಲು ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು, ಬಿಸಿಯಾದ ನಂತರ 2 ಚಮಚ ಕಡ್ಲೆಬೇಳೆ, ಜೀರಿಗೆ, ಮೆಂತ್ಯ ಕಾಳು, ಬ್ಯಾಡಗಿ ಮೆಣಸು, ಬಿಳಿ ಎಳ್ಳು ಎಲ್ಲವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದ ಪದಾರ್ಥಗಳು ತಣಿದ ನಂತರ, ಮಿಕ್ಸಿಯಲ್ಲಿ ಎಲ್ಲವನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ, ಒಂದು ಒಣ ಮೆಣಸು ಹಾಗೂ ಕರಿಬೇವನ್ನು ಹಾಕಬೇಕು. ಅದರ ಜೊತೆಗೆ ಬೇಯಿಸಿದ ಮಾವಿನ ಹಣ್ಣನ್ನು ಸೇರಿಸಿ, ತಯಾರಿಸಿದ ಪುಡಿಯನ್ನು ಅಗತ್ಯತೆಗೆ ಅನುಸಾರವಾಗಿ ಸೇರಿಸಿಕೊಳ್ಳಬೇಕು. ನಂತರ ಉಪ್ಪು, ಬೆಲ್ಲವನ್ನು ಸೇರಿಸಿ ಕುದಿಸಿದರೆ ಮಾವಿನ ಹಣ್ಣಿನ ಸಾರು ಸವಿಯಲು ಸಿದ್ದವಾಗುತ್ತದೆ. ಇದು ಅನ್ನದ ಜೊತೆಗೆ ಬಹಳ ರುಚಿಯಾಗಿರುತ್ತದೆ.

ಮ್ಯಾಂಗೋ ಮಿಲ್ಕ್ ಶೇಕ್ / ಮಾವಿನ ಹಣ್ಣಿನ ಮಿಲ್ಕ್ ಶೇಕ್

ಬೇಕಾಗುವ ಪದಾರ್ಥಗಳು

  • ಸಿಹಿ ಮಾವಿನ ಹಣ್ಣು 2
  • ಹಾಲು 2 ಕಪ್
  • ಸಕ್ಕರೆ ಸಿಹಿಗೆ ಅನುಗುಣವಾಗಿ

ಮಾಡುವ ವಿಧಾನ
ಮಾವಿನ ಹಣ್ಣನ್ನು ಕತ್ತರಿಸಿ ತಿರುಳನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ನಂತರ ಹಾಲನ್ನು ಸೇರಿಸಬೇಕು. ಸಿಹಿಯ ಅಗತ್ಯವಿದ್ದಷ್ಟು ಸಕ್ಕರೆಯನ್ನು ಬೆರೆಸಿ ರುಬ್ಬಿಕೊಳ್ಳಬೇಕು. ಒಂದು ಲೋಟಕ್ಕೆ ರುಬ್ಬಿದ ಮ್ಯಾಂಗೋ ಮಿಲ್ಕ್ ಶೇಕ್ ಅನ್ನು ವರ್ಗಯಿಸಿಕೊಂಡು ಸವಿಯಬೇಕು. ಬೇಸಿಗೆಯ ಬಿಸಿಗೆ ಸ್ವಲ್ಪ ತಂಪಾಗಿರಬೇಕು ಎನಿಸಿದರೆ ಒಂದೆರಡು ಐಸ್ ಕ್ಯೂಬ್ಸ್ ಗಳನ್ನು ಸೇರಿಸಿಕೊಳ್ಳಬಹುದು. ಅಲ್ಲಿಗೆ ಟೇಸ್ಟಿ ಮ್ಯಾಂಗೋ ಮಿಲ್ಕ್ ಶೇಕ್ ಸವಿಯಲು ಸಿದ್ದವಾಗುತ್ತದೆ.

ಮಾವಿನ ಹಣ್ಣಿನ ಖೀರ್

ಬೇಕಾಗುವ ಪದಾರ್ಥಗಳು

  • ಮಾವಿನ ಹಣ್ಣಿನ ತಿರುಳು 1 ಕಪ್
  • ಸುವಾಸನೆ ಭರಿತ ಸಣ್ಣಕ್ಕಿ ಅಥವಾ ಭಾಸುಮತಿ ಸಣ್ಣಕ್ಕಿ 1 ಕಪ್
  • ಹಾಲು 2 ಕಪ್
  • ಕೇಸರಿ ದಳ ¼ ಚಮಚ
  • ಗೋಡಂಬಿ 6
  • ಒಣ ದ್ರಾಕ್ಷಿ 15
  • ಪುದಿನ ಎಲೆಗಳು 10
  • ಏಲಕ್ಕಿ ಪುಡಿ ½ ಚಮಚ
  • ಸಕ್ಕರೆ ¼ ಕಪ್
  • ತುಪ್ಪ
  • ಉಪ್ಪು ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಸುವಾಸನೆ ಭರಿತ ಭಾಸುಮತಿ ತುಂಡು ಅಕ್ಕಿಯನ್ನು ನೆನೆಯಲು ಇಡಬೇಕು. ಇನ್ನೊಂದೆಡೆ ಹಾಲನ್ನು ಕುದಿಯಲು ಇಡಬೇಕು. ಹಾಲು ಚೆನ್ನಾಗಿ ಕುದಿಯುವಾಗ ಅಕ್ಕಿಯನ್ನು ಹಾಲಿಗೆ ಹಾಕಿ ಬೇಯಿಸಬೇಕು. ಮಂದ ಉರಿಯಲ್ಲಿ ಬೇಯಿಸಬೇಕು. ನಂತರ ಮೇಲೆ ಹೇಳಿದ ಪ್ರಮಾಣದಲ್ಲಿ ಸಕ್ಕರೆ ಹಾಗೂ ಪುದಿನ ಎಲೆಗಳನ್ನು ಕುದಿಯುವ ಹಾಲಿಗೆ ಸೇರಿಸಬೇಕು. ನಂತರ ಕೇಸರಿ ದಳಗಳನ್ನು ಹಾಲಿನಲ್ಲಿ ಕಲಸಿ ಅದನ್ನು ಸಹ ಕುದಿಯುವ ಹಾಲು ಅನ್ನಕ್ಕೆ ಸೇರಿಸಬೇಕು. ನಂತರ ಮಾವಿನ ಹಣ್ಣಿನ ತಿರುಳನ್ನು ಒಂದು ಸುತ್ತು ರುಬ್ಬಿಕೊಂಡು, ಹಾಲು ಅನ್ನದ ಮಿಶ್ರಣಕ್ಕೆ ಸೇರಿಸಿ ಕೈ ಆಡಿಸಬೇಕು. ಚಿಟಿಕೆ ಉಪ್ಪನ್ನು ಸೇರಿಸಬೇಕು. ಒಂದು ಕುಡಿ ಬಂದ ನಂತರ ಏಲಕ್ಕಿ ಪುಡಿಯನ್ನು ಬೆರೆಸಿ ಕೈ ಆಡಿಸಿ ಓಲೆ ಅರಿಸಬೇಕು. ಕೊನೆಯಲ್ಲಿ ತುಪ್ಪದಲ್ಲಿ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹುರಿದು ಸೇರಿಸಿದರೆ ರುಚಿಕರವಾದ ಮಾವಿನ ಹಣ್ಣಿನ ಖೀರ್ ಸವಿಯಲು ಸಿದ್ದವಾಗುತ್ತದೆ. ಇದನ್ನು ಸ್ವಲ್ಪ ತಣಿಸಿ ಕುಡಿಯುವುದು ಇನ್ನೂ ರುಚಿಕರವಾಗಿರುತ್ತದೆ.

ಮಾವಿನ ಹಣ್ಣಿನ ಮಸಾಲೆ

ಬೇಕಾಗುವ ಪದಾರ್ಥಗಳು

  • ಸಣ್ಣ ಮಾವಿನ ಹಣ್ಣುಗಳು 5
  • ತೆಂಗಿನ ತುರಿ 1 ಕಪ್
  • ಬ್ಯಾಡಗಿ ಮೆಣಸು 5
  • ಕಡಲೆ ಬೇಳೆ  1 ಚಮಚ
  • ಬಿಳಿ ಎಳ್ಳು ½ ಚಮಚ
  • ಅರಿಶಿಣ ಪುಡಿ ½ ಚಮಚ
  • ಬೆಲ್ಲ  (ಮಾವಿನ ಹಣ್ಣಿನ ಸಿಹಿಯ ಅನುಗುಣವಾಗಿ)
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮಾವಿನ ಹಣ್ಣನ್ನು ಶುದ್ಧಗೊಳಿಸಿ, ಕತ್ತರಿಸಿಕೊಂಡು ಸ್ವಲ್ಪ ನೀರು, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಬೇಯಿಸಬೇಕು. ಇನ್ನೊಂದೆಡೆ ಬಾಣಲೆಯಲ್ಲಿ ಎಣ್ಣೆ ಹಾಕಿ ಒಣಮೆಣಸು, ತೆಂಗಿನ ತುರಿ, ಬಿಳಿ ಎಳ್ಳು ಹಾಗೂ ಕಡ್ಲೆ ಬೇಳೆಯನ್ನು ಕ್ರಮವಾಗಿ ಒಂದೊಂದಾಗಿ ಹುರಿದುಕೊಳ್ಳಬೇಕು. ಹುರಿದ ಪದಾರ್ಥಗಳು ಆರಿದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈಗ ಈ ರುಬ್ಬಿದ ಮಿಶ್ರಣವನ್ನು ಬೇಯುತ್ತಿರುವ ಮಾವಿನ ಹಣ್ಣಿಗೆ ಸೇರಿಸಿ, ಮತ್ತೆ ಬೇಯಿಸಬೇಕು. ಮತ್ತೆ ಸಿಹಿ, ಮತ್ತು ಉಪ್ಪು ಬೇಕೇನಿಸಿದರೆ ಸೇರಿಸಿ, ಒಮ್ಮೆ ಕುದಿಸಿ ಓಲೆ ಅರಿಸಬೇಕು. ಅಲ್ಲಿಗೆ ಮಾವಿನ ಹಣ್ಣಿನ ಮಸಾಲೆ ಸವಿಯಲು ಸಿದ್ದವಾಗುತ್ತದೆ. ಇದು ಅನ್ನದ ಜೊತೆಗೆ ಉತ್ತಮವಾಗಿರುತ್ತದೆ.

ಮಾವಿನ ಹಣ್ಣಿನ ಉಮ್ಮಣ್ಣಿ

ಬೇಕಾಗುವ ಪದಾರ್ಥಗಳು

  • ಸಣ್ಣ ಮಾವಿನ ಹಣ್ಣು 5
  • ಸಾಸಿವೆ ½ ಚಮಚ
  • ಉದ್ದಿನ ಬೇಳೆ ½ ಚಮಚ
  • ಹಸಿ ಮೆಣಸು 2
  • ಕರಿಬೇವು
  • ಉಪ್ಪು
  • ಬೆಲ್ಲ
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಮಾವಿನ ಹಣ್ಣನ್ನು ಸಿಪ್ಪೆ ಸುಲಿದು, ಸಿಪ್ಪೆಯನ್ನು ಕೂಡ ಹಿಂಡಿ ರಸ ತೆಗೆಯಬೇಕು. ಹಾಗೆಯೇ ಮಾವಿನ ಹಣ್ಣನ್ನು ಸ್ವಲ್ಪ ಕಿವುಚಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಿ, ಅದು ಬಿಸಿಯಾದ ಮೇಲೆ ಸಾಸಿವೆ, ಮತ್ತು ಉದ್ದಿನ ಬೇಳೆಯನ್ನು ಸೇರಿಸಬೇಕು. ಉದ್ದಿನ ಬೇಳೆಯ ಬಣ್ಣ ಬದಲಾದ ನಂತರ ಕತ್ತರಿಸಿಕೊಂಡ ಹಸಿ ಮೆಣಸು ಹಾಗೂ ಕರಿಬೇವನ್ನು ಸೇರಿಸಬೇಕು. ಈಗ ಮಾವಿನ ಹಣ್ಣನ್ನು, ಕಿವುಚಿದ ರಸದ ಜೊತೆಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಬೇಯಲು ಬಿಡಬೇಕು. ಬೇಕೇನಿಸಿದರೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬಹುದು. ಒಂದು ಕುದಿ ಬಂದ ನಂತರ ಬೆಲ್ಲವನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು. ಅಲ್ಲಿಗೆ ಮಾವಿನ ಹಣ್ಣಿನ ಉಮ್ಮಣ್ಣಿ ಸವಿಯಲು ಸಿದ್ದವಾಗುತ್ತದೆ.

ಮಾವಿನ ಹಣ್ಣಿನ ಕೇಸರಿಬಾತ್

ಬೇಕಾಗುವ ಪದಾರ್ಥಗಳು

  • ರವೆ 1 ಕಪ್
  • ತುಪ್ಪ ½ ಕಪ್
  • ಸಕ್ಕರೆ ½ ಕಪ್
  • ಉಪ್ಪು ಸ್ವಲ್ಪ
  • ಮಾವಿನ ಹಣ್ಣಿನ ತಿರುಳು ½ ಕಪ್
  • ಬಾದಾಮಿ, ಗೋಡಂಬಿ ದ್ರಾಕ್ಷಿ
  • ಕೇಸರಿ ದಳಗಳು
  • ಏಲಕ್ಕಿ ಪುಡಿ 1 ಚಮಚ

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ತುಪ್ಪ ಹಾಕಿ, ಬಿಸಿಯಾದ ನಂತರ ರವೆಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ರವೆಯೂ ಚೆನ್ನಾಗಿ ಹುರಿದ ಮೇಲೆ ತೆಗೆದಿಟ್ಟುಕೊಳ್ಳಬೇಕು. ಅದೇ ಬಾಣಲೆಗೆ 2 ಕಪ್ ನೀರು ಹಾಕಿ ಕುದಿ ಬಂದ ನಂತರ ಚಿಟಿಕೆ ಉಪ್ಪು ಹಾಕಬೇಕು. ನಂತರ ಸಕ್ಕರೆಯನ್ನು ಸೇರಿಸಿ ಮತ್ತೆ ಕುದಿಸಬೇಕು. ನಂತರ ಮಾವಿನ ಹಣ್ಣಿನ ತಿರುಳನ್ನು ಸೇರಿಸಿ, ಮತ್ತೆ ಕುದಿಸಬೇಕು.  ನೀರು ಚೆನ್ನಾಗಿ ಕುದಿ ಬಂದ ನಂತರ ರವೆಯನ್ನು ಸೇರಿಸಿ, ತಳ ಹಿಡಿಯದಂತೆ ಕೈ ಆಡಿಸಬೇಕು. ರವೆಯೂ ಚೆನ್ನಾಗಿ ಬೆಂದ ನಂತರ ಕೇಸರಿ ದಳಗಳನ್ನು ಸೇರಿಸಿ ಮತ್ತೆ ಕೈ ಆಡಿಸಬೇಕು. ಇನ್ನೊಂದೆಡೆ ತುಪ್ಪದಲ್ಲಿ ಬಾದಾಮಿ, ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹುರಿದು ರವೆಯ ಮಿಶ್ರಣಕ್ಕೆ ಸೇರಿಸಿ ತಿರುವಬೇಕು. ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಬೆರೆಸಿ ಮಿಕ್ಸ್ ಮಾಡಿದರೆ ರುಚಿಯಾದ ಮಾವಿನ ಹಣ್ಣಿನ ಕೇಸರಿಬಾತ್ ಸವಿಯಲು ಸಿದ್ದವಾಗುತ್ತದೆ.

ಮಾವಿನ ಹಣ್ಣಿನ ಸೀಕರಣೆ

ಬೇಕಾಗುವ ಪದಾರ್ಥಗಳು

  • ಮಾವಿನ ಹಣ್ಣು 2
  • ಏಲಕ್ಕಿ ಪುಡಿ 1 ಚಮಚ
  • ಬೆಲ್ಲ (ಮಾವಿನ ಹಣ್ಣಿನ ಸಿಹಿಗೆ ಅನುಸಾರವಾಗಿ)

ಮಾಡುವ ವಿಧಾನ
ಮಾವಿನ ಹಣ್ಣಿನ ಸೀಕರಣೆ ಮಾಡುವುದು ಬಲು ಸುಲಭ. ಇದು ಚಪಾತಿ, ರೊಟ್ಟಿ ಜೊತೆ ತಿನ್ನಲು ಬಲು ರುಚಿಯಾಗಿರುತ್ತದೆ. ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಮಾವಿನ ಹಣ್ಣಿನ ತಿರುಳು, ಏಲಕ್ಕಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಬೆಲ್ಲ ( ಬೆಲ್ಲ ಇಷ್ಟವಿಲ್ಲದಿದ್ದರೆ ಸಕ್ಕರೆಯನ್ನು ಬಳಸಬಹುದು ) ಎಲ್ಲವನ್ನು ಬೆರೆಸಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿದರೆ ಮಾವಿನ ಹಣ್ಣಿನ ಸೀಕರಣೆ ಸವಿಯಲು ಸಿದ್ದವಾಗುತ್ತದೆ.

ಮಾವಿನ ಹಣ್ಣಿನ ಲಸ್ಸಿ

ಬೇಕಾಗುವ ಪದಾರ್ಥಗಳು

  • ಮಾವಿನ ಹಣ್ಣುಗಳು 2
  • ಸಕ್ಕರೆ – ಮಾವಿನ ಹಣ್ಣಿನ ಸಿಹಿಯ ಅನುಸಾರಕ್ಕೆ
  • ಏಲಕ್ಕಿ ಪುಡಿ – 1 ಚಮಚ
  • ಗಟ್ಟಿ ಮೊಸರು 1 ಕಪ್
  • ಕೇಸರಿ ದಳಗಳು

ಮಾಡುವ ವಿಧಾನ
ಮಾವಿನ ಹಣ್ಣನ್ನು ಸಿಪ್ಪೆ ಸುಲಿದು ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಜೊತೆಗೆ ಸಕ್ಕರೆ, ಏಲಕ್ಕಿ ಪುಡಿ, ಗಟ್ಟಿ ಮೊಸರು ಹಾಗೂ ಕೇಸರಿ ದಳಗಳನ್ನು ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಲೋಟಕ್ಕೆ ಹಾಕಿ ಮೇಲೆ ಬಾದಾಮಿ ಚೂರುಗಳು ಹಾಗೂ ಕೇಸರಿ ದಳಗಳನ್ನು ಹಾಕಿ ಅಲಂಕರಿಸಬೇಕು. ಅಲ್ಲಿಗೆ ಮಾವಿನ ಹಣ್ಣಿನ ಲಸ್ಸಿ ಕುಡಿಯಲು ಸಿದ್ದವಾಗುತ್ತದೆ.

ಇಷ್ಟೆಲ್ಲ ರುಚಿ ರುಚಿಯಾದ ಮಾವಿನ ಹಣ್ಣಿನ ಖಾದ್ಯಗಳನ್ನು ಒಮ್ಮೆ ಮಾಡಿ, ಸವಿದು, ಆನಂದಿಸಿರಿ. ಮಾವಿನ ಹಣ್ಣಿನ ಸ್ವಾದವನ್ನು ಪಡೆಯಿರಿ ಎಂಬುದು ಈ ಲೇಖನದ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Share
Published by
GruhaSnehi

Recent Posts

ಮೊಣಕಾಲು ನೋವಿಗೆ ಸರಳ ಶಾಶ್ವತ ಪರಿಹಾರ ಮನೆಯಲ್ಲೇ ಮಾಡಿ – ಪರಿಣಾಮಕಾರಿ ಸೇಬು ಪಾನೀಯ (Knee Pain home remedies)

ಮೊಣಕಾಲು ನೋವಿಗೆ ಸರಳ ಶಾಶ್ವತ ಪರಿಹಾರ ಮನೆಯಲ್ಲೇ ಮಾಡಿ - ಪರಿಣಾಮಕಾರಿ ಸೇಬು ಪಾನೀಯ. AI Generated Image ಮೊಣಕಾಲು…

12 hours ago

ನಿತ್ಯ ಬಾದಾಮಿ ಸೇವನೆಯ ಲಾಭಗಳು – ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು! (Almond Benefits)

ನಿತ್ಯ ಬಾದಾಮಿ ಸೇವನೆಯ ಲಾಭಗಳು – ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು!. AI Image ಬಾದಾಮಿಯು ದೇಶ ವಿದೇಶಗಲ್ಲಿ ಹೆಚ್ಚಾಗಿ ಬೆಳೆಯುವ…

2 days ago

ನಿಂಬೆ ಹಣ್ಣು(Lemon): ಪರಿಚಯ, ಆರೋಗ್ಯಕರ ಉಪಯೋಗಗಳು, ಮತ್ತು ರುಚಿಕರ ಪಾನೀಯ

ನಿಂಬೆ ಹಣ್ಣು: ಆರೋಗ್ಯ ಲಾಭಗಳು, ಮತ್ತು ಉಪಯೋಗಗಳು. AI Image ಪ್ರತಿ ಮನೆಯಲ್ಲಿ ನಿತ್ಯ ಉಪಯೋಗಿಸುವ ತರಕಾರಿ ಎನ್ನಬೇಕೋ ಇಲ್ಲವೇ…

2 days ago

ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಗಾಗಿ ಸುಲಭ ಮನೆ ಪರಿಹಾರಗಳು (Simple Home Remedies for Facial Hair, Dark Patches & Glowing Skin)

ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಕ್ಕಾಗಿ ಸುಲಭ ಮನೆ ಪರಿಹಾರಗಳು (Simple Home Remedies for…

4 days ago

ಮೂಲವ್ಯಾಧಿ (Piles): ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು

ಮೂಲವ್ಯಾಧಿ (Piles): ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು. AI Image ಮೂಲವ್ಯಾಧಿ (ಪೈಲ್ಸ್) ಗುದನಾಳದ ಕೆಳಭಾಗ ಮತ್ತು ಗುದದ್ವಾರದಲ್ಲಿನ ರಕ್ತನಾಳಗಳು…

5 days ago

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಕಾಳುಮೆಣಸು ಮನೆಮದ್ದು (Powerful Black Pepper Home Remedies for Common Health Issues)

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಕಾಳುಮೆಣಸು ಮನೆಮದ್ದು (Powerful Black Pepper Home Remedies for Common Health Issues).…

6 days ago

This website uses cookies.