ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಗಾಗಿ ಸುಲಭ ಮನೆ ಪರಿಹಾರಗಳು (Simple Home Remedies for Facial Hair, Dark Patches & Glowing Skin)

Spread the love

ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಕ್ಕಾಗಿ ಸುಲಭ ಮನೆ ಪರಿಹಾರಗಳು (Simple Home Remedies for Facial Hair, Dark Patches & Glowing Skin). AI Image

ಕೈ ಮೇಲೆ, ಕಾಲ ಮೇಲೆ ಕೂದಲು ಬೆಳೆಯುವುದು ಸಹಜ, ಹಾಗೆಯೇ ಮುಖದ ಮೇಲೂ ಕೂಡ ದೊಡ್ಡ ಕೂದಲು ಕೆಲವೊಮ್ಮೆ ಬೆಳೆಯುತ್ತದೆ. ಇದು ಎಷ್ಟೇ ಮೇಕ್ ಅಪ್ ಮಾಡಿದರೂ ಕೂಡ ಕಾಣುತ್ತದೆ. ಹಾಗೆಯೇ ಕೂದಲು ದೊಡ್ಡದಿರುವಾಗ ಮೇಕ್ಅಪ್ ಮಾಡುವುದು ಅಸ್ಟು ಸರಿಯಾಗಿ ಕಾಣುವುದಿಲ್ಲ. ಹಾಗಾಗಿ ನೈಸರ್ಗಿಕ ವಿಧಾನಗಳಲ್ಲಿ ಮುಖದ ಕೂದಲನ್ನು ನಿವಾರಿಸುವ ಬಗೆಯನ್ನು ಈಗ ಅರಿಯೋಣ.

ಮುಖದ ಅನಾವಶ್ಯಕ ಕೂದಲು ನಿವಾರಣೆಗೆ ಒಂದು ಉತ್ತಮ ಪರಿಹಾರವೆಂದರೆ ಒಂದು ಲೋಟ ತೊಗರಿಬೇಳೆಗೆ ಅರ್ಧ ಕಪ್ ನಷ್ಟು ತೆಂಗಿನ ನೀರನ್ನು ಬೆರೆಸಿ, ರಾತ್ರಿಯಿಡಿ ನೆನೆಯಲು ಬಿಡಬೇಕು. ನಂತರ ನಾಲ್ಕು ದಿನಗಳ ಕಾಲ ಬಿಸಿಲಲ್ಲಿ ಈ ನೆನೆಸಿದ ತೊಗರಿಬೇಳೆಯನ್ನು ಒಣಗಿಸಬೇಕು. ಹಾಗೆಯೇ ನಂತರ ಚೆನ್ನಾಗಿ ಒಣಗಿದ ಈ ತೊಗರಿಬೇಳೆಯನ್ನು ಪುಡಿ ಮಾಡಿಕೊಳ್ಳಬೇಕು. ಹಾಗೆಯೇ ಒಣಗಿದ ಮುಸುಂಬಿ ಹಣ್ಣಿನ ಸಿಪ್ಪೆಯನ್ನು ಕೂಡ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಎರಡು ಪುಡಿಯನ್ನು ಬೆರೆಸಿ ಒಂದು ಡಬ್ಬದಲ್ಲಿ ಮುಚ್ಚಿಡಬೇಕು. ಪ್ರತಿದಿನ ಎರಡು ಚಮಚ ಈ ತಯಾರಿಸಿದ ಪುಡಿಯನ್ನು ನೀರಿನಲ್ಲಿ ಕಲಸಿ, ಮಿಶ್ರಣವನ್ನು ತಯಾರಿಸಿ, ಮುಖಕ್ಕೆ ಹಚ್ಚಿಕೊಂಡು ಒಣಗಿಸಬೇಕು. ನಂತರ ಕೈಯಿಂದ ಉಜ್ಜಬೇಕು. ಅಲ್ಲಿಗೆ ಮುಖದಲ್ಲಿನ ಕೂದಲು ಕೂಡ ನಿವಾರಣೆಯಾಗುತ್ತದೆ. ಇಷ್ಟು ಸುಲಭ ವಿಧಾನದಲ್ಲಿ ಮನೆಯಲ್ಲೇ ನಾವು ಹೇರ್ ರಿಮೂವರ್ ಪೇಸ್ಟ್ ಅನ್ನು ಸಿದ್ದಗೊಳಿಸಬಹುದು.

ಮುಖದ ಹೊಳೆಯುವ ಚರ್ಮಕ್ಕಾಗಿ ಹಾಗೂ ಚೆಲುವನ್ನು ಹೆಚ್ಚಿಸಲು ಉಪಯುಕ್ತವಾಗುವ ಕೆಲವು ಸಲಹೆಗಳು

  • ಮುಖದ ಅಂದವನ್ನು ಹೆಚ್ಚಿಸಲು ಉಪಯುಕ್ತವಾಗುವ ಒಂದು ಮನೆಮದ್ದು ಎಂದರೆ ಎರಡು ಚಮಚ ಕೆನೆಹಾಲಿಗೆ ಒಂದು ಪೂರ್ಣ ಲಿಂಬು ರಸವನ್ನು ಹಿಂಡಿ, ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ, ಮಸಾಜ್ ಮಾಡಬೇಕು. ಆಮೇಲೆ ತೊಳೆದುಕೊಳ್ಳಬೇಕು. ಪ್ರತಿದಿನ ಒಮ್ಮೆ ಹೀಗೆ ಮಾಡುವುದರಿಂದ ಮುಖ ಹಾಗೂ ಕುತ್ತಿಗೆಯ ಭಾಗವು ಮೃದುವಾಗುತ್ತದೆ.
  • ಮುಖವನ್ನು ಬೆಳ್ಳಗೆ ಮಾಡುವ ಹೋಮ್ ಮೇಡ್ ಲೋಷನ್ ತಯಾರಿಕಾ ವಿಧಾನವನ್ನು ಈಗ ಅರಿಯೋಣ. ಒಂದು ಚಮಚ ನಿಂಬೆರಸಕ್ಕೆ, ಅರ್ಧ ಚಮಚ ಜೇನುತುಪ್ಪ ಹಾಗೂ ಅರ್ಧ ಚಮಚ ಹಾಲನ್ನು ಸೇರಿಸಿ, ಮೂರನ್ನು ಮಿಶ್ರಣ ಮಾಡಬೇಕು. ಪ್ರತಿದಿನ ಸ್ನಾನ ಮಾಡುವ ಸ್ವಲ್ಪ ಹೊತ್ತಿನ ಮುಂಚೆ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ, ಅನಂತರ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡಬೇಕು. ಇದು ಎಣ್ಣೆ ಚರ್ಮಕ್ಕೂ ಉತ್ತಮ ಲೋಷನ್ ಆಗಿದೆ. ಹೀಗೆ ನಿತ್ಯ ಮಾಡುವುದರಿಂದ ಮುಖದ ಕಾಂತಿಯು ಹೆಚ್ಚಾಗುತ್ತದೆ.
  • ಮುಖವನ್ನು ಬೆಳ್ಳಗೆ ಮಾಡಲು ಉಪಯುಕ್ತವಾಗಿರುವ ಮತ್ತೊಂದು ಲೋಷನ್!! ಸೌತೆಕಾಯಿಯನ್ನು ತುರಿದುಕೊಂಡು ಅದರ ರಸವನ್ನು ಹಿಂಡಿಕೊಳ್ಳಬೇಕು. ಒಂದು ಚಮಚ ಸೌತೆಕಾಯಿ ರಸಕ್ಕೆ, ಚಿಟಿಗೆ ಅರಿಶಿಣ ಪುಡಿ ಹಾಗೂ ನಿಂಬೆ ಹಣ್ಣಿನ ರಸವನ್ನು ಸೇರಿಸಿ, ಕಲಸಿಕೊಳ್ಳಬೇಕು. ಈ ಲೋಷನ್ ಅನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು, ಒಣಗಿಸಬೇಕು. ಅನಂತರ ತೊಳೆಯಬೇಕು. ಇದು ಎಲ್ಲಾ ತರಹದ ಚರ್ಮದ ಮೇಲೂ ಉತ್ತಮ ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಇದನ್ನು ಸತತವಾಗಿ ಪ್ರತಿನಿತ್ಯ ಮಾಡಬೇಕು, ಅಂದರೆ ಮಾತ್ರ ನಾವು ಉತ್ತಮ ಫಲಿತಾಂಶವನ್ನು ಪಡೆಯಬಹುದು.
  • ಮುಖವು ಕೋಮಲವಾಗಿ, ಕಾಂತಿಯುಕ್ತವಾಗಲು ಗಟ್ಟಿ ಮೊಸರನ್ನು ತೆಗೆದುಕೊಂಡು ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಬೇಕು. ಇದು ಮುಖದಲ್ಲಿನ ಅಶುದ್ಧ ಕೊಳೆಯನ್ನು ತೆಗೆದು, ಮುಖವನ್ನು ಶುದ್ಧಗೊಳಿಸುತ್ತದೆ.
  • ಮುಖದ ಚರ್ಮವು ಒಡೆದಿದ್ದರೆ, ಹಾಲಿನ ಕೆನೆಗೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಮುಖದ ಮೇಲೆ ಮೃದುವಾಗಿ ಹಚ್ಚಬೇಕು. ಅರ್ಧ ಗಂಟೆಯ ನಂತರ ಮುಖವನ್ನು ತೊಳೆಯಬೇಕು. ಇದು ಒಡೆದ ಚರ್ಮಕ್ಕೆ ಉತ್ತಮ ಪರಿಹಾರವನ್ನು ನೀಡುತ್ತದೆ.
  • ಮುಖದ ಚರ್ಮವನ್ನು ಮೃದುವಾಗಿಸಲು ಪ್ರತಿದಿನ ಒಂದು ಟೊಮೆಟೊ ಕತ್ತರಿಸಿ, ಮುಖಕ್ಕೆ ಉಜ್ಜಿಕೊಳ್ಳಬೇಕು. ಇದು ಮುಖದ ಚರ್ಮವನ್ನು ಮೃದುವಾಗಿಸಿ, ಚರ್ಮದಲ್ಲಿನ ಸಣ್ಣ ರಂಧ್ರಗಳನ್ನು ಶುದ್ದಿಗೊಳಿಸುತ್ತದೆ.
  • ಮುಖವನ್ನು ಬೆಳ್ಳಗೆ ಮಾಡಲು ಒಂದು ಉತ್ತಮ ಮನೆಮದ್ದು ಎಂದರೆ, ನಾಲ್ಕು ಬಾದಾಮಿಯನ್ನು ರಾತ್ರಿಯೆ ನೀರಿನಲ್ಲಿ ನೆನೆಸಿ ಇಡಬೇಕು. ಮರುದಿನ ಬೆಳಿಗ್ಗೆ ಬಾದಾಮಿಯ ಸಿಪ್ಪೆಯನ್ನು ಸುಲಿದು, ನುಣ್ಣಗೆ ಅರೆದುಕೊಳ್ಳಬೇಕು. ನಂತರ 2 ಚಮಚ ಕಡ್ಲೆಹಿಟ್ಟು, 1 ಚಮಚ ಬಿಸಿ ಮಾಡದ ಹಸಿ ಹಾಲು ಹಾಗೂ ನಾಲ್ಕು ಹನಿ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣವನ್ನು ತಯಾರಿಸಬೇಕು. ಈ ಮಿಶ್ರಣವನ್ನು ಮುಖದ ಮೇಲೆ ಲೇಪಿಸಿ ಒಣಗಳು ಬಿಡಬೇಕು. ಒಣಗಿದ ನಂತರ ಸಿಪ್ಪೆ ಉದುರಲು ಆರಂಭವಾಗುತ್ತದೆ, ಆಗ ಮುಖವನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ತೊಳೆದು, ಶುದ್ಧಗೊಳಿಸಬೇಕು. ಇದು ಉತ್ತಮ ಪರಿಹಾರವನ್ನು ನೀಡುತ್ತದೆ.
  • ಬೆಳ್ಳಗಿನ ಮುಖವನ್ನು ಹೊಂದಲು ಪ್ರತಿದಿನ ತೆಂಗಿನ ಕಾಯಿಯ ನೀರಿನಿಂದ ಮುಖಕ್ಕೆ 20 ನಿಮಿಷಗಳ ಕಾಲ ಮಸಾಜ್ ಮಾಡುವುದು ಉತ್ತಮವಾಗಿದೆ.
  • ಮುಖದ ಛಾಯೆಯನ್ನು ವೃದ್ಧಿಸಲು ಒಂದು ಉತ್ತಮ ಫೇಸ್ ಪ್ಯಾಕ್ ಇಲ್ಲಿದೆ. ಒಂದು ಚಮಚ ಕಡ್ಲೆಹಿಟ್ಟು, ಚಿಟಿಕೆ ಅರಿಶಿಣ, 6 ಹನಿ ನಿಂಬೆರಸ, ½ ಚಮಚ ತೆಂಗಿನ ಎಣ್ಣೆ ಎಲ್ಲವನ್ನು ಕಲಸಿಕೊಂಡು, ಮುಖಕ್ಕೆ ಹಚ್ಚಿಕೊಳ್ಳಬೇಕು. ಮುಖಕ್ಕೆ ಹಚ್ಚಿಕೊಂಡ ಅರ್ಧ ಗಂಟೆಯ ನಂತರ ಮುಖವನ್ನು ತೊಳೆಯಬೇಕು. ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.
  • ಮುಖವು ಬೆಳ್ಳಗಾಗಲು ನಿಂಬೆ ರಸ ಹಾಗೂ ಸೌತೆಕಾಯಿಯ ರಸ ಎರಡನ್ನು ಸಮ ಪ್ರಮಾಣದಲ್ಲಿ ಬೆರೆಸಿಕೊಂಡು ಮುಖದ ಚರ್ಮಕ್ಕೆ ಲೇಪಿಸಿಕೊಳ್ಳಬೇಕು. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
  • ಮಳೆಯ ನೀರಿನಿಂದ ಮುಖ ತೊಳೆದುಕೊಳ್ಳುವುದು ಕೂಡ ಉತ್ತಮವಾಗಿದ್ದು, ಇದು ಮುಖದ ಛಾಯೆಯನ್ನು ವೃದ್ಧಿಸುತ್ತದೆ.
  • ಕಮಲದ ಬೀಜಗಳು ಕೂಡ ಸೌಂದರ್ಯವರ್ಧನೆಯಲ್ಲಿ ಉತ್ತಮ ಪಾತ್ರವನ್ನು ವಹಿಸುತ್ತದೆ. ಕಮಲದ ಬೀಜಗಳನ್ನು ಶುಚಿಗೊಳಿಸಿಕೊಂಡು, ಒಣಗಿಸಿಕೊಳ್ಳಬೇಕು. ಈ ಒಣಗಿದ ಬೀಜಗಳನ್ನು ಹಾಲಿನಲ್ಲಿ ತೇಯ್ದು, ಮುಖಕ್ಕೆ ಹಚ್ಚಬೇಕು. ಇದು ಚರ್ಮದ ಕಾಂತಿಯನ್ನು ವೃದ್ಧಿಸಿ, ಮುಖದಲ್ಲಿರುವ ಸುಕ್ಕುಗಳನ್ನು ಕೂಡ ನಿವಾರಿಸುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.

ದೇಹದ ಭಾಗಗಳ ಕಪ್ಪು ಛಾಯೆಯನ್ನು ನಿವಾರಿಸಲು ಉಪಯುಕ್ತವಾಗಿರುವ ಸುಲಭ ಮನೆಮದ್ದುಗಳು

  • ಮುಖ, ಕುತ್ತಿಗೆ ಹಾಗೂ ದೇಹದ ಚರ್ಮವನ್ನು ಬೆಳ್ಳಗಾಗಿಸಲು, ಬಟಾಟೆಯಿಂದ ಉತ್ತಮ ಪರಿಹಾರಗಳನ್ನು ಪಡೆದುಕೊಳ್ಳಬಹುದು. ಬಟಾಟೆಯನ್ನು ಸಿಪ್ಪೆ ಸಮೇತ ಕತ್ತರಿಸಿಕೊಂಡು, ನೀರಿನಲ್ಲಿ ಹಾಕಬೇಕು. ನಂತರ ಈ ಬಟಾಟೆ ಹೋಳುಗಳನ್ನು ಮುಖ, ಕುತ್ತಿಗೆ ಹಾಗೂ ಕೈಗಳ ಭಾಗಗಳಲ್ಲಿ ಉಜ್ಜಬೇಕು. ಇದು ಆ ಭಾಗಗಳಲ್ಲಿನ ಕಪ್ಪು ಛಾಯೆಯನ್ನು ಕಡಿಮೆಗೊಳಿಸಿ, ಉತ್ತಮ ಕಾಂತಿಯನ್ನು ನೀಡುತ್ತದೆ.
  • ಬಾರ್ಲಿಯು ಕೂಡ ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ಉತ್ತಮವಾಗಿದೆ. ಬಾರ್ಲಿಯನ್ನು ಒಣಗಿಸಿ, ಪುಡಿ ಮಾಡಿಕೊಳ್ಳಬೇಕು. ಈ ಬಾರ್ಲಿ ಪುಡಿಗೆ ಸ್ವಲ್ಪ ನಿಂಬೆ ರಸ ಹಾಗೂ ಹಾಲನ್ನು ಬೆರೆಸಿ ಗಟ್ಟಿಯಾದ ಪೇಸ್ಟ್ ಅನ್ನು ತಯಾರಿಸಿಕೊಂಡು ಮುಖ, ಕುತ್ತಿಗೆ, ಮೊಣಕಾಲು ಹಾಗೂ ಮೊಣಕೈ ಭಾಗಗಳಲ್ಲಿ ಹಚ್ಚಬೇಕು. ಅರ್ಧ ಗಂಟೆಯ ನಂತರ ತೊಳೆಯಬೇಕು. ಇದು ಕಪ್ಪು ಛಾಯೆಯನ್ನು ಕಡಿಮೆಗೊಳಿಸಿ, ಹೊಸ ಕಾಂತಿಯನ್ನು ಚರ್ಮಕ್ಕೆ ನೀಡುತ್ತದೆ.
  • ಕಡ್ಲೆಹಿಟ್ಟು ಉತ್ತಮ ಸೌಂದರ್ಯವರ್ಧಕವಾಗಿದ್ದು, ಚರ್ಮಕ್ಕೆ ಹೊಸ ಕಾಂತಿಯನ್ನು ನೀಡುತ್ತದೆ. ಕಡ್ಲೆಹಿಟ್ಟು ಹಾಗೂ ನಿಂಬೆರಸವನ್ನು ಕಲಸಿಕೊಂಡು ಒಂದು ಗಟ್ಟಿಯಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಬೇಕು. ಇದನ್ನು ಕೂಡ ಮುಖ, ಕುತ್ತಿಗೆ, ಮೊಣಕಾಲು ಹಾಗೂ ಮೊಣಕೈ ಭಾಗಗಳಲ್ಲಿ ಹಚ್ಚಬೇಕು. ಅರ್ಧ ಗಂಟೆಯ ನಂತರ ತೊಳೆಯಬೇಕು. ಇದು ಕೂಡ ಕಪ್ಪು ಛಾಯೆಯನ್ನು ಕಡಿಮೆಗೊಳಿಸಿ, ಹೊಸ ಕಾಂತಿಯನ್ನು ಚರ್ಮಕ್ಕೆ ನೀಡುತ್ತದೆ.
  • ಮೈ ಚರ್ಮದ ಕಾಂತಿಗೆ ಹಾಗೂ ಚರ್ಮದ ಸುಕ್ಕುಗಳ ನಿವಾರಣೆಗೆ ಒಂದು ಉತ್ತಮ ಮನೆಮದ್ದು ಎಂದರೆ 4 ತಾವರೆ ದಳಗಳು, 2 ಚಮಚ ಹಾಲು, 1 ಚಮಚ ಜೇನು ಈ ಮೂರು ವಸ್ತುಗಳನ್ನು ಸೇರಿಸಿ ಅರೆದುಕೊಳ್ಳಬೇಕು. ಈ ಮಿಶ್ರಣವನ್ನು ಮುಖ, ಮೊಣಕಾಲು, ಮೊಣಕೈ, ಕತ್ತು, ಮೈಯ ಚರ್ಮಕ್ಕೆ ಲೇಪಿಸುವುದರಿಂದ, ಚರ್ಮದ ಸುಕ್ಕುಗಳು ಕಡಿಮೆಯಾಗುತ್ತದೆ. ಚರ್ಮವು ಕೋಮಲವಾಗಿರುತ್ತದೆ.(->ತಾವರೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ)

ಸನ್ ಬರ್ನ್ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳು

  • ಸನ್ ಬರ್ನ್ ಸಮಸ್ಯೆಗಳನ್ನು ನಿವಾರಿಸಲು ನಿಂಬೆರಸವನ್ನು ಹಾಲಿನಲ್ಲಿ ಬೆರೆಸಿ, ಸನ್ ಬರ್ನ್ ಆದ ಚರ್ಮದ ಮೇಲೆ ಲೇಪಿಸಬೇಕು. ಸ್ವಲ್ಪ ಹೊತ್ತಿನ ನಂತರ ಶುದ್ಧವಾಗಿ ತೊಳೆದುಕೊಳ್ಳಬೇಕು. ಇದು ಸನ್ ಬರ್ನ್ ಗಳ ನಿವಾರಣೆಯಲ್ಲಿ ಉತ್ತಮ ಪರಿಹಾರಗಳನ್ನು ನೀಡುತ್ತದೆ.
  • ಚರ್ಮದ ಮೇಲೆ ಬಿಸಲಿನ ತಾಪದಿಂದ ಉಂಟಾಗುವ ಕಲೆಗಳನ್ನು ಹೋಗಲಾಡಿಸಲು, ಪ್ರತಿದಿನ ರಾತ್ರಿ ರೋಸ್ ವಾಟರ್ ನಲ್ಲಿ ಸ್ವಲ್ಪ ನಿಂಬೆ ರಸವನ್ನು ಸೇರಿಸಿ, ಮುಖಕ್ಕೆ ಲೇಪಿಸಿಕೊಳ್ಳಬೇಕು. ಮರುದಿನ ಬೆಳಿಗ್ಗೆ ಮುಖವನ್ನು ತೊಳೆದುಕೊಳ್ಳಬೇಕು. ಇದು ಕಲೆಗಳನ್ನು ನಿವಾರಿಸಲು ಉತ್ತಮವಾಗಿದ್ದು, ಚರ್ಮವನ್ನು ಕೂಡ ಮೃದುವಾಗಿರಿಸುತ್ತದೆ.

ಈ ಮೇಲಿನ ಯಾವುದೇ ಮನೆಮದ್ದುಗಳು ಒಂದೆರಡು ಬಾರಿ ಮಾಡಿದರೆ ಫಲಿತಾಂಶ ಕಾಣುವುದಿಲ್ಲ, ನಿತ್ಯ ಅತಿ ಕಾಳಜಿಯಿಂದ ಚರ್ಮದ ರಕ್ಷಣೆ ಮಾಡಿದರೆ ಮಾತ್ರ ಫಲವನ್ನು ಪಡೆಯಬಹುದು. ಮುಖದ ಕೂದಲು ನಿವಾರಣೆ, ಮುಖದ ಬಿಳುಪಿಗೆ ಹಾಗೂ ಹೊಸ ಕಾಂತಿಯನ್ನು ಹೊಂದಲು, ಹಾಗೆಯೇ ಸನ್ ಬರ್ನ್ ಗಳ ನಿವಾರಣೆಯ ಬಗೆಗಿನ ಹಲವು ಮನೆಮದ್ದುಗಳನ್ನು ನಾವು ಇಂದು ಅರಿತಿದ್ದೇವೆ. ನಾವು ಸೌಂದರ್ಯವರ್ಧನೆಯ ಬಗ್ಗೆ ಹಿಂದಿನ ಲೇಖನದಲ್ಲಿ ಕೂಡ ವಿವರಿಸಿದ್ದೆವು. ಇಂದಿನ ಲೇಖನವು ಅದರ ಮುಂದುವರಿದ ಭಾಗವಾಗಿದ್ದು, ಹೆಚ್ಚಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ತಿಳಿದಿದ್ದೇವೆ. ಈ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ಅರಿತು, ಸೌಂದರ್ಯಯುತ ಮುಖದ ಕಾಂತಿಯನ್ನು ಹೊಂದಿರಿ, ಎಂಬುದು ಲೇಖನದ ಉದ್ದೇಶ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Recent Posts

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

9 hours ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

1 day ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

2 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

3 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

4 days ago

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು. AI Image ಹಸಿ ತರಕಾರಿಗಳು, ಕಾಳು ಬೇಳೆಗಳು ಅರೋಗ್ಯಕ್ಕೆ ತುಂಬಾ ಹಿತಕರವಾಗಿದೆ.…

5 days ago

This website uses cookies.