
ಬೆಳಿಗ್ಗೆ ಎದ್ದ ತಕ್ಷಣ ಮನಸ್ಸು ಬಯಸುವುದೇ ಕಾಫಿ ಅಥವಾ ಚಹಾವನ್ನು, ಒಮ್ಮೆ ಕುಡಿದರೆ ಮನಸ್ಸು ಒಮ್ಮೆ ರಿಫ್ರೆಶ್ ಆಗಿರುವ ಭಾವನೆಯನ್ನು ಮೂಡಿಸುತ್ತದೆ. ನಿತ್ಯವೂ ಚಹಾ ಪುಡಿ ಬೆರೆಸಿ ಮಾಡುವ ಚಹಾವನ್ನು ನಾವು ಕುಡಿಯುತ್ತೇವೆ, ಅದರ ಬದಲು ಆರೋಗ್ಯವರ್ಧಕವಾಗಿರುವ ಕೆಲವು ಬೇರುಗಳ ಟೀ ಮಾಡಿ ಕುಡಿದರೆ ನಮ್ಮ ಸಮಸ್ಯೆಗಳಿಗೂ ಪರಿಹಾರ ಸಿಕ್ಕು ಹೊಸ ರುಚಿಯ ಟೀ ಗಳ ಸ್ವಾದವನ್ನು ಸವಿದಂತೆ ಆಗುತ್ತದೆ. ಈ ಪ್ರಸ್ತುತ ಲೇಖನದಲ್ಲಿ ನಾವು ವಿವಿಧ ಬೇರುಗಳ ಸಹಾಯದಿಂದ ಮಾಡಬಹುದಾದ ರುಚಿಕರ, ಆರೋಗ್ಯಕರ ಟೀ ಗಳ ಬಗ್ಗೆ ವಿಶ್ಲೀಸಿಸೋಣ.
ಬಿಲ್ವ ವೃಕ್ಷದ ಬೇರಿನ ಟೀ
ಬೇಕಾಗುವ ಪದಾರ್ಥಗಳು
- ಬಿಲ್ವದ ಬೇರು- 2 ತುಂಡು
- ಸೋಂಪು ಕಾಳು- 1/2 ಚಮಚ
- ಭತ್ತದ aralu- 1 ಚಮಚ
- ಏಲಕ್ಕಿ – 2
- ಶುಂಠಿ – ಒಂದು ಸಣ್ಣ ತುಂಡು
- ಜೇನುತುಪ್ಪ 1 ಚಮಚ
- ನಿಂಬೆ ರಸ – 1 ಚಮಚ
ಮಾಡುವ ವಿಧಾನ
ಬಿಲ್ವ ಮರದ ಬೇರನ್ನು ಚೆನ್ನಾಗಿ ತೊಳೆದು ಜಜ್ಜಿಕೊಳ್ಳಬೇಕು. ಒಂದು ಪಾತ್ರೆಗೆ 2 ಲೋಟ ನೀರು ಹಾಕಿ ಮೇಲೆ ಹೇಳಿದ ಪ್ರಮಾಣದಲ್ಲಿ ಸೋಂಪು ಕಾಳು, ಭತ್ತದ ಅರಳು,ಶುಂಠಿ,ಏಲಕ್ಕಿ ಹಾಗೂ ಜಜ್ಜಿದ ಬಿಲ್ವದ ಬೇರನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಶೋಧಿಸಿ ನಿಂಬೆರಸ ಹಾಗು ಜೇನುತುಪ್ಪ ಸೇರಿಸಿ ಕುಡಿಯಬೇಕು. ಗಂಟಲಿಗೆ ಆರಾಮ ನೀಡುವ ಟೀ ಕೂಡ ಎನ್ನಬಹುದು.
ಉಪಯೋಗಗಳು
- ಬಿಲ್ವ ಬೇರಿನ ಟೀ ದೇಹದ ಯಾವುದೇ ಭಾಗದ ನೋವಿಗೆ ಉಪಶಮನ ನೀಡುತ್ತದೆ.
- ಮಕ್ಕಳಲ್ಲಿ ಕಂಡುಬರುವ ಅತಿಸಾರ, ಬೇಧಿಗೆ ಈ ಟೀ ಉತ್ತಮವಾಗಿದೆ.
- ಹೊಟ್ಟೆ ನೋವಿಗೆ ಉತ್ತಮ ಔಷಧಿ.
- ಉಬ್ಬಸ ಸಮಸ್ಯೆ, ಹೃದಯ ಬಡಿತದ ಏರಿಳಿತಗಳ ನಿಯಂತ್ರಣಕ್ಕೆ ಉಪಯುಕ್ತವಾಗಿದೆ.
- ಮೂಲವ್ಯಾಧಿಗೆ ಬಿಲ್ವ ಮರದ ಟೀ ತುಂಬಾ ಸೂಕ್ತವಾದ ಮದ್ದಾಗಿದೆ.
ಹರಳು ಗಿಡದ ಬೇರಿನ ಟೀ
ಬೇಕಾಗುವ ಪದಾರ್ಥಗಳು
- ಹರಳು ಗಿಡದ ಬೇರು – 4-5 ತುಂಡು
- ಹಸಿ ಶುಂಠಿ – 1 ತುಂಡು
- ಏಲಕ್ಕಿ ಪುಡಿ – 1/2 ಚಮಚ
- ನಿಂಬೆ ರಸ – 1 ಚಮಚ
- ಜೇನುತುಪ್ಪ – 1 ಚಮಚ
ಮಾಡುವ ವಿಧಾನ
ಹರಳು ಗಿಡದ ಬೇರು ಹಾಗು ಹಸಿ ಶುಂಠಿಯನ್ನು ಚೆನ್ನಾಗಿ ಜಜ್ಜಿಕೊಳ್ಳಬೇಕು. ಎರಡು ಲೋಟ ನೀರಿಗೆ ಈ ಜಜ್ಜಿದ ಮಿಶ್ರಣವನ್ನು ಹಾಕಿ ಕುದಿಯಲು ಇಡಬೇಕು. ನೀರು ಅರ್ಧದಷ್ಟು ಇಂಗಿದ ನಂತರ ಒಲೆ ಆರಿಸಿ ಶೋಧಿಸಿಕೊಳ್ಳಬೇಕು. ಶೋಧಿಸಿದ ಮಿಶ್ರಣದ ನೀರಿಗೆ ನಿಂಬೆ ರಸ, ಏಲಕ್ಕಿ ಪುಡಿ ಹಾಗು ಜೇನುತುಪ್ಪ ಹಾಕಿ ಬೆರೆಸಿ ಸವಿಯಬೇಕು.
ಉಪಯೋಗಗಳು
- ಹರಳು ಗಿಡದ ಬೇರಿನ ಟೀ ಅನ್ನೂ ಉತ್ತಮ ಡಿಟೋಕ್ಸಿಫಿಕೇಶನ್ ಡ್ರಿಂಕ್ ಎನ್ನಬಹುದು. ಕಾರಣ ಶರೀರವನ್ನು ಶುಚಿಗೊಳಿಸುವ ಶಕ್ತಿ ಇದಕ್ಕಿದೆ.
- ಮಲ ಭದ್ಧತೆಗೆ ಇದು ಉತ್ತಮ ಪರಿಹಾರವಾಗಿದೆ.
- ಗ್ಯಾಸ್ಟ್ರಿಕ್ ಸಮಸ್ಯೆಗೆ ಉತ್ತಮವಾಗಿದೆ. ಸೊಂಟನೋವು, ಕೀಲುನೋವು, ಸಂಧಿ ನೋವು, ಎದೆನೋವು ಇನ್ನೂ ಅನೇಕ ನೋವುಗಳಿಗೆ ಉತ್ತಮ ಪರಿಹಾರವಾಗಿದೆ.
- ಗರ್ಭಿಣಿಯರು ಪ್ರಸವ ವೇದನೆ ಪ್ರಾರಂಭವಾಗುವ ವೇಳೆಯಲ್ಲಿ ಈ ಟೀ ಸೇವಿಸಿದರೆ ಉತ್ತಮವಾಗಿದೆ.
ಶತಾವರಿ ಬೇರಿನ ಟೀ
ಬೇಕಾಗುವ ಪದಾರ್ಥಗಳು
- ಶತಾವರಿ ಬೇರು – 1 ತುಂಡು
- ಜೇನುತುಪ್ಪ – 1 ಚಮಚ
- ಹಾಲು – ಒಂದು ಲೋಟ
- ಏಲಕ್ಕಿ ಪುಡಿ – 1/2 ಚಮಚ
ಮಾಡುವ ವಿಧಾನ
ಶತಾವರಿ ಬೇರನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಎರಡು ಲೋಟ ನೀರಿಗೆ ಹಾಕಿ ಕುದಿಯಲು ಇಡಬೇಕು. ಚೆನ್ನಾಗಿ ಕುದ್ದು ಅರ್ಧದಷ್ಟು ಆದ ನಂತರ ಒಲೆ ಆರಿಸಿ, ಶೋಧಿಸಬೇಕು. ಸ್ವಲ್ಪ ಬಿಸಿ ಆರಿದ ನಂತರ ಹಾಲು, ಏಲಕ್ಕಿ ಪುಡಿ, ಜೇನುತುಪ್ಪ ಬೆರೆಸಿ ಕುಡಿದರೆ ಶತಾವರಿ ಬೇರಿನ ಟೀ ಸವಿಯಲು ಸಿದ್ಧವಾಗುತ್ತದೆ.
ಉಪಯೋಗಗಳು
- ಹೆಂಗಸರು ದಿನ ನಿತ್ಯ ಕುಡಿಯಲೇ ಬೇಕಾದ ಟೀ. ಹೆಂಗಸರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಕಾಣಿಸುವ ಸಮಸ್ಯೆಗಳಿಗೆ, ವಿಪರೀತ ರಕ್ತಸ್ರಾವ ಆದಾಗ, ಮೈ ಕೈ ನೋವು ಉಂಟಾದಾಗ ಇದು ಉತ್ತಮ ಪ್ರತಿಫಲವನ್ನು ನೀಡುತ್ತದೆ.
- ಹೆಂಗಸರ ವೈಟ್ ಡಿಸ್ಚಾರ್ಜ್ ಸಮಸ್ಯೆಗೂ ಸೂಕ್ತ ಮದ್ದು.
- ಹೆಂಗಸರಿಗೆ ಅಥವಾ ಗಂಡಸರಿಗೆ ಉಂಟಾಗುವ ಸಂತಾನದ ಸಮಸ್ಯೆಗಳ ಔಷಧಿಗಳಲ್ಲಿ ಇದು ಒಂದಾಗಿದೆ.
- ಬಾಣಂತಿಯರು ಕೂಡ ಈ ಟೀ ಸೇವಿಸುವುದು ಅತೀ ಉತ್ತಮ.
- ಸಂತಾನೋತ್ಪತ್ತಿ ಕ್ರಿಯೆಯ ಯಾವುದೇ ಸಮಸ್ಯೆಗಳಿಗೂ ಈ ಟೀ ಸತ್ವಗಳು ಉಪಯುಕ್ತವಾಗಿದೆ.
- ಸರ್ಪಸುತ್ತು, ಕ್ಯಾನ್ಸರ್ ದುಷ್ಪರಿಣಾಮಗಳು, ಆಸಿಡಿಟಿ, ಶ್ವಾಸಕೋಶ ಹಾಗು ಮೂತ್ರಕೋಶ ಗಳ ಸಂಬಂಧಿ ಸಮಸ್ಯೆಗಳಿಗೂ ಉತ್ತಮ ಪರಿಹಾರ ನೀಡುತ್ತದೆ.
ಬೆಳಗ್ಗಿನ ಒಂದು ಟೀ ನಮ್ಮ ಆರೋಗ್ಯವನ್ನು ಎಷ್ಟು ಅಭಿವೃದ್ಧಿ ಪಡಿಸಬಲ್ಲದು ಎಂಬುದನ್ನು ಈಗ ಮನವರಿಕೆ ಮಾಡಿಕೊಂಡಿದ್ದೇವೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ, ಅದರ ಜವಾಬ್ದಾರಿ ನಮ್ಮ ಹೆಗಲ ಮೇಲೆ ಇರುತ್ತದೆ. ಹಾಗಾಗಿ ದಿನ ನಿತ್ಯ ಇಂತಹ ಸುಲಭ ಬೇರಿನ ಟೀ ಗಳನ್ನು ತಯಾರಿಸಿ ಅದರ ಆರೋಗ್ಯಯುತ ಉಪಯೋಗಗಳನ್ನು ನಮ್ಮದಾಗಿಸಿಕೊಳ್ಳಬೇಕು.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟು