ದಿನೇ ದಿನೇ ತೂಕ ಜಾಸ್ತಿ ಆಗುತ್ತಿದೆಯೇ?? ತೂಕ ಇಳಿಸಲು ಇಲ್ಲಿದೆ ಮನೆಯಲ್ಲೇ ಇರುವ ಪದಾರ್ಥಗಳಿಂದ ಮಾಡುವ ಉತ್ತಮ ಸಲಾಡ್ ಮತ್ತು ಪಾನೀಯ

Spread the love

ತೂಕ ಇಳಿಸಲು ಇಲ್ಲಿದೆ ಮನೆಯಲ್ಲೇ ಇರುವ ಪದಾರ್ಥಗಳಿಂದ ಮಾಡುವ ಉತ್ತಮ ಸಲಾಡ್ ಮತ್ತು ಪಾನಿಯ AI Image

ದಿನ ನಿತ್ಯದ ಆಹಾರ ಪದ್ಧತಿ, ಒಂದೇ ಕಡೆ ಕುಳಿತು ಮಾಡುವ ಕೆಲಸ ಹಾಗೆ ಮೈಯಿಗೆ ಕೆಲಸವಿಲ್ಲದೆ ಎಲ್ಲ ಯಂತ್ರಗಳ ಮೂಲಕ ಮಾಡುವ ಈ ಕಾಲದಲ್ಲಿ ಜಾಸ್ತಿಯಾಗಿ ಕಂಡುಬರುವ ಸಮಸ್ಯೆಯೇ ಈ ಸ್ಥೂಲಕಾಯ. ಇಂತಹ ಸಮಸ್ಯೆಗಳಿಂದ ಹೊರಬರಲು ನಾವು ನಮ್ಮ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯನ್ನು ತಂದುಕೊಳ್ಳಬೇಕು. ಹಾಗೆಯೇ ನಿತ್ಯ ಯೋಗ, ಪ್ರಾಣಾಯಾಮದಂತಹ ದೇಹವನ್ನು ಸ್ವಲ್ಪ ದಂಡಿಸುವ ಕಾರ್ಯಗಳನ್ನು ಕೈಗೊಳ್ಳಬೇಕು. ಪ್ರಸ್ತುತ ಈ ಲೇಖನದಲ್ಲಿ ನಾವು ಕೆಲವು ತೂಕ ಇಳಿಸುವ ಆಹಾರ ರೆಸಿಪಿಗಳ ಬಗ್ಗೆ ತಿಳಿಯೋಣ.

ತೂಕ ಇಳಿಸುವ ಸಲಾಡ್ (Weight Loss Salad)

ಬೇಕಾಗುವ ಪದಾರ್ಥಗಳು 

  • ಕ್ಯಾರೆಟ್ ತುರಿ 1/2ಕಪ್
  • ಈರುಳ್ಳಿ 1 ಕಪ್
  • ಹಸಿ ಮೆಣಸಿನ ಕಾಯಿ 1
  • ಟೊಮೆಟೊ 1
  • ಕಾಬೂಲ್ ಕಡಲೆ ಕಾಳು 1 ಕಪ್
  • ದಪ್ಪ ಮೆಣಸಿನ ಕಾಯಿ 1/2
  • ಕೊತ್ತಂಬರಿ ಸೊಪ್ಪು
  • ಬೇಯಿಸಿದ ಗೆಣಸು
  • ಶುಂಠಿ ತುರಿ ಸ್ವಲ್ಪ
  • ಕರಿ ಮೆಣಸಿನ ಪುಡಿ
  • ಜೀರಿಗೆ ಪುಡಿ
  • ನಿಂಬು ರಸ
  • ಅಮಚೂರ್ ಪುಡಿ
  • ಆಪಲ್ ಸೈಡರ್ ವಿನೆಗರ್
  • ಗಟ್ಟಿ ಮೊಸರು

ಮಾಡುವ ವಿಧಾನ
ಈರುಳ್ಳಿ, ಟೊಮೆಟೊ, ಬೇಯಿಸಿದ ಗೆಣಸು, ಹಸಿ ಮೆಣಸಿನ ಕಾಯಿ, ದಪ್ಪ ಮೆಣಸಿನ ಕಾಯಿ ಇವೆಲ್ಲನ್ನು ಸಣ್ಣಗೆ ಹೆಚ್ಚಿಕೊಂಡು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ಜೊತೆಗೆ ಕ್ಯಾರೆಟ್ ತುರಿ, ಕಾಬುಲ್ ಕಡ್ಲೆ, ಶುಂಠಿಯನ್ನು ಸ್ವಲ್ಪ ತುರಿದು ಸೇರಿಸಬೇಕು. ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ, ಒಂದು ಚಮಚ ಆಪಲ್ ಸೈಡರ್ ವಿನೆಗರ್, ಒಂದು ಚಮಚ ಲಿಂಬು ರಸ, ಒಂದು ಚಮಚ ಕರಿ ಮೆಣಸಿನ ಪುಡಿ, 1/2 ಚಮಚ ಅಮಚೂರು ಪುಡಿ, 1/2 ಚಮಚ ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ಕೊನೆಯಲ್ಲಿ ಗಟ್ಟಿ ಮೊಸರನ್ನು ಸೇರಿಸಿ ಚೆನ್ನಾಗಿ ಕಲಸಿದರೆ ಪೌಷ್ಠಿಕಯುಕ್ತ ತೂಕ ಇಳಿಸುವ ಸಲಾಡ್ ಸಿದ್ಧವಾಗುತ್ತದೆ.

ಪ್ರಯೋಜನಗಳು

  • ಹಸಿವಿಗೆ ಪೂರಕವಾಗಿದ್ದು, ತೂಕ ಇಳಿಸಲು ಉತ್ತಮವಾಗಿದೆ.
  • ವೃದ್ಧ್ಯಾಪ್ಯದ ಸೊಗಡನ್ನು ಮುಂದೂಡುತ್ತದೆ. ಮುಖದ ಯವ್ವನದ ಕಳೆಯನ್ನೂ ಕಾಪಾಡುವಲ್ಲಿ ಉತ್ತಮವಾಗಿದೆ.
  • ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
  • ಮಧುಮೇಹಕ್ಕೂ ಉತ್ತಮವಾಗಿದೆ.

ತೂಕ ಇಳಿಸಲು ಉತ್ತಮ ಪಾನೀಯ (Best drink to burn belly fat)

ಬೇಕಾಗುವ ಪದಾರ್ಥಗಳು 

  • ಕರಿಬೇವಿನ ಸೊಪ್ಪು
  • ಆಪಲ್ ಸೈಡರ್ ವಿನೆಗರ್
  • ಜೇನುತುಪ್ಪ

ಮಾಡುವ ವಿಧಾನ
ಕರಿಬೇವಿನ ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಂಡು ಶೋಧಿಸಿಕೊಳ್ಳಬೇಕು. ಇದಕ್ಕೆ ಆಪಲ್ ಸೈಡರ್ ವಿನೆಗರ್ ಹಾಗು ಒಂದು ಚಮಚ ಜೇನುತುಪ್ಪ ಹಾಕಿ ಮಿಕ್ಸ ಮಾಡಿ ಕುಡಿಯಬೇಕು.

ಪ್ರಯೋಜನಗಳು

  • ತೂಕ ಇಳಿಸಲು ಸಹಾಯಮಾಡುವುದಲ್ಲದೆ, ಹೊಟ್ಟೆಯ ಬೊಜ್ಜು ಕರಗುತ್ತದೆ.
  • ರಕ್ತದ ಸಕ್ಕರೆ ಅಂಶ ಕಡಿಮೆ ಮಾಡಿ ರಕ್ತದ ಒತ್ತಡ ಕಡಿಮೆ ಆಗುತ್ತದೆ.
  • LDL ಕೊಲೆಸ್ಟ್ರಾಲ್ ಕಡಿಮೆ ಮಾಡಿ HDL ಕೊಲೆಸ್ಟ್ರಾಲ್ ಉತ್ತಮಗೊಳಿಸುತ್ತದೆ.
  • ಆಹಾರ ಜೀರ್ಣಕ್ರಿಯೆಗೆ ಈ ಜ್ಯೂಸ್ ಉತ್ತಮವಾಗಿದೆ.
  • ಕೂದಲ ಬೆಳವಣಿಗೆಗೆ ಹಾಗು ಚರ್ಮದ ಆರೋಗ್ಯಕ್ಕೂ ಉತ್ತಮವಾಗಿದೆ.
  • ವೇರಿಕೋಸ್ ವೆನ್ಸ್  ಸಮಸ್ಯೆಗೂ ಸಹಕಾರಿ ಮದ್ದು ಇದಾಗಿದೆ.

ಆರೋಗ್ಯಕರ ಆಹಾರ ಸೇವನೆ ಅಂದರೆ ಹೆಚ್ಚಿನ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಸೇವಿಸಿಬೇಕು,ಕಡಿಮೆ ಕೊಬ್ಬಿನಾಂಶವಿರುವ ಪ್ರೋಟೀನ್ ಯುಕ್ತ ಆಹಾರ ತೆಗೆದುಕೊಳ್ಳಬೇಕು. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ಕಡಿಮೆ ಮಾಡಬೇಕು. ಹೆಚ್ಚಾಗಿ ನೀರನ್ನೂ ಕುಡಿಯಬೇಕು.

ವಾರದಲ್ಲಿ ಕನಿಷ್ಠ ಎರಡು ಬಾರಿ ವ್ಯಾಯಾಮ ಮಾಡುವುದು ಇಲ್ಲವೇ ನಡೆಯುವುದು, ಓಡುವುದು, ಈಜುವುದು ಅಥವಾ ಸೈಕ್ಲಿಂಗ್ ಮುಂತಾದ ಚಟುವಟಿಕೆಗಳನ್ನು ತೊಡಗಿಸಿಕೊಂಡರೆ ತೂಕದ ಜೊತೆ ಮನಸ್ಸಿನ ಹಲವು ವೇದನೆಗಳು ಕಡಿಮೆಯಾಗಿ ಮನಸ್ಸು ನೆಮ್ಮದಿಯಿಂದ ಇರುತ್ತದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.