ಮೂಲವ್ಯಾಧಿ (Piles): ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು

Spread the love

ಮೂಲವ್ಯಾಧಿ (Piles): ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು. AI Image

ಮೂಲವ್ಯಾಧಿ (ಪೈಲ್ಸ್) ಗುದನಾಳದ ಕೆಳಭಾಗ ಮತ್ತು ಗುದದ್ವಾರದಲ್ಲಿನ ರಕ್ತನಾಳಗಳು ಹಿಗ್ಗಿದಾಗ ಉಂಟಾಗುವ ಒಂದು ಸಮಸ್ಯೆ. ಈ ಹಿಗ್ಗಿದ ರಕ್ತನಾಳಗಳು ದಪ್ಪವಾಗಿ, ಅಸ್ವಸ್ಥತೆ, ನೋವು ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

ಮೂಲವ್ಯಾಧಿಗೆ ಕೆಲವು ಕಾರಣಗಳು

ಮಲವಿಸರ್ಜನೆಯ ಸಮಯದಲ್ಲಿ ಅತಿಯಾದ ಒತ್ತಡ ಹಾಕುವುದು, ಬಹಳ ಸಮಯದಿಂದ ಮಲಬದ್ಧತೆಗೆ ಒಳಗಾಗಿರುವುದು, ಗರ್ಭಿಣಿಯರಿಗೆ, ಅನುವಂಶಿಕವಾಗಿ ಬಂದಿರಬಹುದು, ವಯಸ್ಸಾದ ಮೇಲೆ ಕೂಡ ಆಗಿರಬಹುದು.

ಮುಖ್ಯವಾಗಿ ಮೂಲವ್ಯಾಧಿಯಲ್ಲಿ ಎರಡು ಪ್ರಕಾರಗಳಿದ್ದು

  1. ಆಂತರಿಕ ಮೂಲವ್ಯಾಧಿ: ಇವು ಗುದನಾಳದ ಒಳಗೆ ಉಂಟಾಗಿ ಸ್ವಲ್ಪ ಕಡಿಮೆ ನೋವಿನಿಂದ ಕೂಡಿರುತ್ತದೆ. ಮಲ ವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವವನ್ನು ನಾವು ಗಮನಿಸಬಹುದು.
  2. ಬಾಹ್ಯ ಮೂಲವ್ಯಾಧಿ: ಇವು ಗುದದ್ವಾರದ ಹೊರಭಾಗದಲ್ಲಿ, ಚರ್ಮದ ಕೆಳಗೆ ಉಂಟಾಗಿ, ನೋವು, ತುರಿಕೆ ಮತ್ತು ಊತ ಕಾಣಿಸಿಕೊಳ್ಳಬಹುದು.

ಮೂಲವ್ಯಾಧಿಯ ಲಕ್ಷಣಗಳು

  • ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವ ಹಾಗು ಗುದದ್ವಾರದ ಸುತ್ತ ತುರಿಕೆ ಅಥವಾ ಊತ ಹಾಗು ನೋವು ಕಂಡು ಬರುತ್ತದೆ.
  • ಪದೇ ಪದೇ ಮಲ ವಿಸರ್ಜನೆ ಆಗುವಂತೆ ಭಾಸವಾಗುತ್ತದೆ.
  • ದೇಹದಲ್ಲಿ ವಿಪರೀತ ಸುಸ್ತು ಎನಿಸುವ ಭಾವನೆ ಉಂಟಾಗುತ್ತದೆ.

ಮೂಲವ್ಯಾಧಿಗೆ ನಿವಾರಣೆಗೆ ಒಂದೊಳ್ಳೆ ರುಚಿಕರ ಸೂಪ್

1. ಒಂದೆಲಗದೊಡನೆ ಅಮೃತಬಳ್ಳಿ ಸೂಪ್

ಬೇಕಾದ ಪದಾರ್ಥಗಳು 

  • ಒಂದೆಲಗ – 1 ಕಪ್
  • ಅಮೃತಬಳ್ಳಿ – 8 ಎಲೆಗಳು
  • ಜೀರಿಗೆ – 1 ಚಮಚ
  • ಕೊತ್ತಂಬರಿ ಬೀಜ – 1/2 ಚಮಚ
  • ಕರಿ ಮೆಣಸು – 1/2 ಚಮಚ
  • ಕಾಯಿ ತುರಿ – 1/4 ಕಪ್
  • ಬೆಣ್ಣೆ – 3 ಚಮಚ
  • ಎಣ್ಣೆ – 2 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ

ಮೊದಲಿಗೆ ಮೇಲೆ ಹೇಳಿದಷ್ಟು ಪ್ರಮಾಣದ ಜೀರಿಗೆ, ಕಾಳುಮೆಣಸು ಹಾಗು ಕೊತ್ತಂಬರಿ ಬೀಜವನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು. ಸ್ವಲ್ಪ ಎಣ್ಣೆಯೊಂದಿಗೆ ಅಮೃತಬಳ್ಳಿ ಎಲೆಗಳು ಹಾಗು ಒಂದೆಲಗವನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ತಣಿದ ನಂತರ ಬಾಡಿಸಿದ ಸೊಪ್ಪು, ಹುರಿದ ಜೀರಿಗೆ, ಕಾಳುಮೆಣಸು, ಕೊತ್ತಂಬರಿ ಬೀಜ ಮತ್ತು ಕಾಯಿ ತುರಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ 2 ಬಟ್ಟಲು ನೀರು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಕೊನೆಯಲ್ಲಿ ಬೆಣ್ಣೆ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿದರೆ ಸೂಪ್ ಸವಿಯಲು ಸಿದ್ದ.

ಸೂಪ್ ನ ಪ್ರಯೋಜನಗಳು

  • ದಪ್ಪ ಇರುವವರಿಗೆ ತೆಳ್ಳಗಾಗಲು ಒಂದು ಒಳ್ಳೆಯ ಟಾನಿಕ್ ಈ ಸೂಪ್.
  • ಮೂಲವ್ಯಾಧಿಗೆ ಒಂದೊಳ್ಳೆ ರುಚಿಕರ ಆಹಾರ. ಜೀರ್ಣಕ್ರಿಯೆಯನ್ನು ಚೆನ್ನಾಗಿರಿಸಿ ಮಲಬದ್ಧತೆಯು ಕಡಿಮೆಯಾಗುತ್ತದೆ.
  • ಅಮೃತಬಳ್ಳಿ ಇರುವುದರಿಂದ ಕೆಮ್ಮು, ನೆಗಡಿ ಜ್ವರಕ್ಕೆ ರಾಮಬಾಣವಾಗಿದೆ.
  • ಮೂತ್ರವನ್ನು ಕೂಡ ಶುದ್ಧವಾಗಿರಿಸಿ, ಉರಿ ಮೂತ್ರವನ್ನು ಕಡಿಮೆಯಾಗಿಸುತ್ತದೆ.
  • ರಕ್ತ ಶುದ್ಧತೆ ಹಾಗು ಮಧುಮೇಹಕ್ಕೂ ಉತ್ತಮ ಸೂಪ್ ಇದಾಗಿದೆ.

2. ಮೂಲವ್ಯಾಧಿಗೆ ಬೇವಿನ ಪಕೋಡ

ಬೇಕಾದ ಪದಾರ್ಥಗಳು 

  • ಹೆಸರು ಕಾಳು 1 ಕಪ್

  • ಬೇವಿನ ಎಲೆಗಳು ಎರಡು ಮುಷ್ಟಿ

  • ತುಪ್ಪ

ತಯಾರಿಸುವ ವಿಧಾನ

ಹೆಸರುಕಾಳನ್ನು ರಾತ್ರಿಯೇ ನೆನೆ ಹಾಕಬೇಕು. ಬೆಳಿಗ್ಗೆ ನೆನೆಹಾಕಿದ ಹೆಸರುಕಾಳಿನ ಒಟ್ಟಿಗೆ ಬೇವಿನ ಎಲೆಗಳನ್ನು ಹಾಕಿ ರುಬ್ಬಿಕೊಂಡು ಪಕೋಡ ರೀತಿಯಲ್ಲಿ ತುಪ್ಪದಲ್ಲಿ ಕರಿಯಬೇಕು. ಯಾವುದೇ ಉಪ್ಪು ಖಾರವನ್ನು ಸೇರಿಸುವಂತಿಲ್ಲ. ಒಂದು ತಿಂಗಳ ಸೇವನೆಯ ನಂತರ ಎಂಥ ಮೂಲವ್ಯಾಧಿ ಸಮಸ್ಯೆಯಾದರೂ ಪರಿಹಾರವಾಗುತ್ತದೆ. ಈ ವಿಧಾನದ ಸಮಯದಲ್ಲಿ ಅನ್ನ ಹಾಗು ತಿಳಿ ಮಜ್ಜಿಗೆಯ ಆಹಾರ ಪದ್ಧತಿಯನ್ನು ಸೇವಿಸಬೇಕು. ಈ ರೀತಿಯ ಕಟ್ಟು ನಿಟ್ಟಾಗಿ ಪಥ್ಯದ ಜೊತೆ ಬೇವಿನ ಪಕೋಡ ಸ್ವೀಕರಿಸಿದರೆ ಮೂಲವ್ಯಾಧಿ ಮಾಯವಾಗಿ ಹೋಗುತ್ತದೆ.

ಇವೆರಡರ ಹೊರತು ದೇಹವನ್ನು ಅತಿಯಾಗಿ ತಂಪು ಮಾಡುವುದು, ಜಾಸ್ತಿ ಬಾಳೆಹಣ್ಣು, ಮಜ್ಜಿಗೆ ಹಾಗು ಕಾಮಕಸ್ತೂರಿ ಬೀಜಗಳ ಸೇವನೆ ಮಾಡುವುದು, ನಿತ್ಯ ಬಿಸಿ ನೀರಿನಲ್ಲಿ ಒಂದು ತಾಸು ಕುಳಿತುಕೊಂಡು ಬೆಚ್ಚಗೊಳಿಸುವುದು, ಮುಖ್ಯವಾಗಿ ಜಾಸ್ತಿ ಜಾಸ್ತಿ ನೀರಿನ ಸೇವನೆ ಮಾಡುವುದು ಇದೆಲ್ಲದರಿಂದ ಮೂಲವ್ಯಾಧಿ ಹತೋಟಿಗೆ ಬರುತ್ತದೆ. ಇದರೊಂದಿಗೆ ವೈದ್ಯರ ಸಲಹೆ ಕೂಡ ಮುಖ್ಯ. ವೈದ್ಯರ ಸಲಹೆ ಜೊತೆಗೆ ನಮ್ಮ ಆಹಾರದ ಸಮತೋಲವನ್ನು ಕಂಡುಕೊಂಡರೆ ಬೇಗ ಸಮಸ್ಯೆಯನ್ನು ದೂರಗೊಳಿಸಬಹುದು.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು (Healthy traditional drinks)

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು. AI…

5 hours ago

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

1 day ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

2 days ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

3 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

4 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

5 days ago

This website uses cookies.