ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

Spread the love

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image

ಆಂಗ್ಲ ಹೆಸರು – ಪೀಪಲ್ ಟ್ರೀ

ವೈಜ್ಞಾನಿಕ ಹೆಸರು – ಪೈಕಸ್ ರಿಲಿಜಿಯೋಸ

ಬೃಹದಾಕಾರವಾಗಿ ಬೆಳೆಯುವ, ದೀರ್ಘ ಕಾಲ ಆಯುಷ್ಯ ಹೊಂದಿರುವ, ಹೃದಯದ ಆಕಾರದ ಎಲೆಗಳು, ಅತ್ಯಂತ ಆಯುರ್ವೇದೀಯ ಗುಣಗಳನ್ನು ಹೊಂದಿರುವ ಮರ ಎಂದರೆ ಅರಳಿ ಮರ. ಅರಳಿ ಮರಕ್ಕೆ ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ.

ಅರಳಿ ಮರದ ಧಾರ್ಮಿಕ ಹಿನ್ನಲೆ

ತ್ರಿಮೂರ್ತಿಗಳ ಆವಾಸ ನಮ್ಮ ಈ ಅರಳಿ ಮರ. ಮೂಲತಃ ಬ್ರಹ್ಮ ರೂಪಾಯ ಮಧ್ಯತಃ ವಿಷ್ಣು ರೂಪಿಣೆ,ಅಗ್ರಹತಃ ಶಿವ ರೂಪಾಯ ವೃಕ್ಷ ರಾಜಯತೆ ನಮಃ ಎಂಬಂತೆ ನಾವು ನಿತ್ಯ ಪೂಜಸಲ್ಪಡುವ ಪೂಜನೀಯ ಮರ. ಹಾಗೆಯೇ ಬೌದ್ಧ ಧರ್ಮದ ಪ್ರಕಾರ ಭಗವಾನ್ ಬುದ್ಧನು ಅರಳಿ ಮರದ ಕೆಳಗೆ ಕುಳಿತು ಜ್ಞಾನೋದಯವನ್ನು ಪಡೆದನು ಎಂಬುದಾಗಿ, ಈ ಮರವು ಬೌದ್ದರಿಗೂ ಪವಿತ್ರ ಮರವಾಗಿದೆ. ಹಾಗೆಯೇ ಅನೇಕ ದೇವತೆಗಳ ಅನುಗೃಹಿತ ವೃಕ್ಷ ಎಂಬುದಾಗಿ ಕೂಡ ಹೇಳುತ್ತಾರೆ. ಅರಳಿ ಮರದ ಕಡ್ಡಿಗಳನ್ನು ಪವಿತ್ರ ಹೋಮದಲ್ಲಿಯೂ ಬಳಸುತ್ತಾರೆ. ಪ್ರಾಚೀನ ಕಾಲದಲ್ಲಿ ಪ್ರತಿ ಊರಿನಲ್ಲೂ ಒಂದು ಅರಳಿ ಕಟ್ಟೆ ಇದ್ದೇ ಇರುತಿತ್ತು. ಅದಕ್ಕೆ ನಿತ್ಯ ಪೂಜೆ ಮಾಡಿ ಪ್ರದಕ್ಷಿಣೆ ಹಾಕುವ ರೂಢಿ ಇತ್ತು. ದೇವರ ಆವಾಸ ವಾಗಿರುವ ಕಾರಣ ಪ್ರದಕ್ಷಿಣೆ ಹಾಕುವುದು ರೂಢಿ ಆಗಿದ್ದರೂ ಅದರ ಹಿಂದಿನ ವೈಜ್ಞಾನಿಕ ಕಾರಣ ಬಹಳ ಅರ್ಥಪೂರ್ಣವಾಗಿದೆ.

ಅರಳಿ ಮರದ ಕೆಲವು ಸಾಮಾಜಿಕ ಹಾಗು ವೈಜ್ಞಾನಿಕ ವಿಚಾರಗಳು

ಅನೇಕ ದೈವಿಕ ಕಾರಣಗಳ ಜೊತೆಗೆ ಹಲವು ವೈಜ್ಞಾನಿಕ ಹಿನ್ನೆಲೆಗಳು ಸಹ ಈ ಅರಳಿ ಮರಕ್ಕೆ ಇದ್ದು ದಿನ ನಿತ್ಯದ ರೋಗ ಸಮಸ್ಯೆಗಳಿಗೆ ತುಂಬಾ ಸಹಕಾರಿಯಾಗಿದೆ. ಈ ಮರದ ಬೇರು, ತೊಗಟೆ, ಪತ್ರೆ ಅಥವಾ ಎಲೆ ಹಾಗೂ ಕಾಯಿಗಳು ಎಲ್ಲವೂ ಕೂಡ ಆರೋಗ್ಯದ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.

ಅರಳಿ ಮರವು ತುಂಬಾ ದಟ್ಟವಾಗಿ ಹಬ್ಬಿ ತನ್ನ ಹಸಿರಿನ ಸಿರಿಯಿಂದ ಶುದ್ಧವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ನಾವು ಅರಳಿ ಪ್ರದಕ್ಷಿಣೆ ಹಾಕುವಾಗ ಶುದ್ಧ ಆಮ್ಲಜನಕವನ್ನು ನಾವು ಸ್ವೀಕರಿಸಿ ನಮ್ಮ ಸ್ವಾಸ್ತ್ಯವು ಶುದ್ಧವಾಗುತ್ತದೆ. ಹಾಗೆಯೇ ಮನುಷ್ಯನಿಗೆ ಅನೇಕ ರೋಗ ರುಜಿನಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಮ್ಮ ಮನಸ್ಸು ಕೂಡ ನೆಮ್ಮದಿಯ ಆಹ್ಲಾದವನ್ನ್ನು ಪಡೆಯುತ್ತದೆ. 

ಪರಿಸರದ ಸಮತೋಲನ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆಮ್ಲಜನಕದ ಪೂರೈಕೆಯಿಂದ ವಾತಾವರಣದ ಮಾಲೀನತೆಎನ್ನು ಕೂಡ ದೂರ ಮಾಡುತ್ತದೆ.

ಹಾಗೆಯೇ ದಟ್ಟವಾಗಿ ಬೆಳೆಯುವ ಈ ಅರಳಿ ಮರ ಉತ್ತಮ ನೆರಳನ್ನು ನೀಡುತ್ತದೆ. ಮರದಡಿ ನಿಂತರೆ ಬಿಸಿಲೆ ಕಾಣದಷ್ಟು ತಂಪು. ಹಾಗೆಯೇ ಪುಟ್ಟ ಹಕ್ಕಿಯ ಗೂಡು ಕಟ್ಟುವ ನೆಲೆಯು ಕೂಡ ಆಗಿರುತ್ತದೆ.  ಹೀಗೆ ಅನೇಕ ಸಾಮಾಜಿಕ ಪ್ರಯೋಜನಗಳು ಅರಳಿ ಮರದಿಂದ ನಾವು ಪಡೆಯಬಹುದು.

ಇನ್ನೂ ಸ್ತ್ರೀ ಸಂಬಂಧಿ ಗರ್ಭದಲ್ಲಿ ಅನೇಕ ಸಮಸ್ಯೆಗಳು,ಕಫ, ಪಿತ್ತ ಹಾಗೂ ರಕ್ತ ಶುದ್ಧತೆ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಉಪಯುಕ್ತ ವಾಗಿದೆ. ಅರಳಿ ಎಲೆ ಕಷಾಯ ಕೂಡ ಆರೋಗ್ಯವರ್ಧಕ ವಾಗಿದ್ದು ಹೃದಯ ಸಂಬಂಧಿ ಸಮಸ್ಯೆಗಳಿಗೆ ರಾಮ ಬಾಣವಾಗಿದೆ.

ಆಮ್ಲಜನಕದ ಆಕಾರವಾಗಿರುವ ಈ ಬೃಹತ್ ವೃಕ್ಷ ಪರಿಸರದ ಸಮತೋಲನ, ವಾಯುಮಾಲಿನ್ಯ ನಿಯಂತ್ರಣಕ್ಕೆ ಹಾಗೆಯೇ ಶುದ್ಧ ಪರಿಸರಕ್ಕೆ ಸಹಕಾರಿಯಾಗಿದೆ. ಮರದ ಬೇರುಗಳು ಭೂಮಿಯ ಆಳಕ್ಕೆ ಇಳಿದು ಮಳೆ ನೀರನ್ನು ಹಿಡಿದಿಟ್ಟುಕೊಂಡು ಮಣ್ಣಿನ ಸವಕಳಿಯನ್ನು ಕಡಿಮೆ ಮಾಡಿ ಭೂಮಿಯ ಅಂತರ್ಜಾಲ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಹೀಗೆ ಅನೇಕ ಉಪಯೋಗಗಳನ್ನು ನಾವು ಅರಳಿ ಮರದಿಂದ ಪಡೆಯಬಹುದು.

ಅರಳಿ (ಅಶ್ವತ್ಥ) ಮರದ ಉಪಯೋಗಗಳು

ಮೂತ್ರ ಸಂಬಂಧಿ ಸಮಸ್ಯೆಗಳಿಗೆ ಪರಿಹಾರಗಳು

  • ಬಹು ಮೂತ್ರ ಸಮಸ್ಯೆ
    ಅರಳಿ ವೃಕ್ಷದ ಕಾಯಿಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಪ್ರತಿ ನಿತ್ಯ 2 ಬಾರಿ ನೀರಿನಲ್ಲಿ ಪುಡಿಯನ್ನು ಕಲಸಿ ಕುಡಿದರೆ ಪದೇ ಪದೇ ಮೂತ್ರ ವಿಸರ್ಜನೆ ಹೋಗುವ ಸಮಸ್ಯೆ ದೂರವಾಗುತ್ತದೆ.
  • ಉರಿ ಮೂತ್ರ ಸಮಸ್ಯೆ
    ಅರಳಿಮರದ ಕಂಡದ ಭಾಗದ ತೊಗಟೆಯನ್ನು ತೆಗೆದುಕೊಂಡು, ಅದರ ಒಳ ಪದರವನ್ನು ಕುಟ್ಟಿ ಪುಡಿ ಮಾಡಿಕೊಂಡು ಇಡಬೇಕು. ಒಂದು ಲೋಟ ನೀರಿಗೆ ಆಯಾ ಪುಡಿಯನ್ನು ಸೇರಿಸಿ ಅದನ್ನು ಅರ್ಧದಷ್ಟು ಆಗುವಷ್ಟು ಕುದಿಸಬೇಕು. ನಂತರ ಅದನ್ನು ಶೋದಿಸಿಕೊಂಡು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉರಿ ಮೂತ್ರ ಕಡಿಮೆ ಆಗುತ್ತದೆ. ಇದರ ಜೊತೆಗೆ ಹಳದಿ ಮೂತ್ರಕ್ಕೆ ಕೂಡ ಇದು ಸಹಕಾರಿಯಾಗಿದೆ.

ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಋತು ಚಕ್ರ ವಿಳಂಬ, ವೈಟ್ ಡಿಸ್ಚಾರ್ಜ್ ಹಾಗು ಹೆವಿ ಬ್ಲೀಡಿಂಗ್ ಗು ಅರಳಿ ಮರ ಉಪಯುಕ್ತವಾಗಿದೆ

  • ವರ್ಷವಾದರೂ ಋತುಮತಿ ಆಗದೆ ಇರುವ ಹೆಣ್ಣು ಮಕ್ಕಳು ಅರಳಿ ಮರದ ಒಣಗಿದ ತೊಗಟೆಯನ್ನು ಕುಟ್ಟಿದ ನಂತರ ಬರುವ ರಸವನ್ನು ಹಸುವಿನ ಹಾಲಿನೊಂದಿಗೆ ಸೇರಿಸಿ ಕುಡಿಯುವುದರಿಂದ ಋತು ಚಕ್ರ ಬಲು ಬೇಗ ಸಂಭವಿಸುತ್ತದೆ.

  • ಅರಳಿ ಮರದ ಎಳೆ ಕಾಯಿಗಳನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು. ಚೆನ್ನಾಗಿ ಒಣಗಿದ ಕಾಯಿಯನ್ನು ಕುಟ್ಟಿ ಚೂರ್ಣ ಮಾಡಿಕೊಳ್ಳಬೇಕು. ಪ್ರತಿನಿತ್ಯ ಬೆಳಿಗ್ಗೆ ಒಂದು ಚಮಚ ಆ ಚೂರ್ಣವನ್ನು ತಿನ್ನಬೇಕು. ಇಲ್ಲವೇ ಹಸಿ ಹಣ್ಣನ್ನು ತಿಂದರು ಕೂಡ ಅದೇ ಉತ್ತಮ ಫಲಿತಾಂಶವನ್ನು ನಾವು ಕಾಣಬಹುದು. ವೈಟ್ ಡಿಸ್ಚಾರ್ಜ್ ಹಾಗೂ ಹೆವಿ ಬ್ಲೀಡಿಂಗ್ ಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ಸಂತಾನ ಪಡೆಯಲು ವಿಳಂಬವಾಗುತ್ತಿದ್ದರೆ ಇಲ್ಲಿದೆ ಉತ್ತಮ ಪರಿಹಾರ

  • ಸಂತಾನ ಪಡೆಯುವ ಹಂಬಲ ಇದ್ದರೂ ಗರ್ಭ ನಿಲ್ಲದೆ ಪದೇ ಪದೇ ಗರ್ಭಪಾತ ವಾಗುತ್ತಿದ್ದರೆ, ಅರಳಿ ಮರದ ಮೊರೆ ಹೋಗಬೇಕು. ಮೊದಲಿಗೆ ಅರಳಿ ಮರದ ಕಾಯಿಗಳನ್ನು ನೆರಳಲ್ಲಿ ಒಣಗಿಸಿಕೊಳ್ಳಬೇಕು. ಚೆನ್ನಾಗಿ ಒಣಗಿದ ಕಾಯಿಗಳನ್ನು ಪುಡಿ ಮಾಡಿಕೊಳ್ಳಬೇಕು. ಇದರ ಒಟ್ಟಿಗೆ ಕಮಲದ ಬೀಜಗಳನ್ನು ಕೂಡ ಪುಡಿ ಮಾಡಿಕೊಳ್ಳಬೇಕು. ಇವೆರಡೂ ಪುಡಿಯನ್ನು ಸಮ ಸಮವಾಗಿ ತೆಗೆದುಕೊಳ್ಳಬೇಕು. ಅಂದರೆ ಕಪ್ ಅರಳಿ ಕಾಯಿ ಪುಡಿ, ಒಂದು ಕಪ್ ಕಮಲದ ಬೀಜದ ಪುಡಿ ಹಾಗು ವಂಶಾಲೋಚನ ವನ್ನೂ ಕಾಲು ಭಾಗ ಸೇರಿಸಿ ಮೂರನ್ನು ಸರಿಯಾಗಿ ಬೆರೆಸಿ ಒಂದು ಗಾಜಿನ ಪಾತ್ರೆಯಲ್ಲಿ ತೆಗೆದಿತ್ತುಕೊಳ್ಳಬೇಕು. ನಿತ್ಯ ಬೆಳಿಗ್ಗೆ ಸಂಜೆ ಎರಡು ಭಾರಿ ಅರ್ಧ ಚಮಚ ಪುಡಿಯನ್ನು ಹಸಿ ಹಾಲಿಗೆ ( ಹಾಲನ್ನು ಕಾಯಿಸಬಾರದು) ಬೆರೆಸಿ ಕುಡಿಯಬೇಕು. ಇದನ್ನು ಋತು ಚಕ್ರದ ೪ ನೆ ದಿನ ಪ್ರಾರಂಭಿಸಿ ಮುಂದಿನ ಋತು ಚಕ್ರ ಆರಂಭವಾಗುವವರೆಗೂ ಕುಡಿಯಬೇಕು. ಇದು ಉತ್ತಮ ಪ್ರತಿಫಲವನ್ನು ಕೊಡುತ್ತದೆ. ಅಲರ್ಜಿ ಸಮಸ್ಯೆ ಇದ್ದವರು ಸ್ವಲ್ಪ ಆಲೋಚಿಸಿ ಈ ವಿಧಾನವನ್ನು ಅನುಸರಿಸಬೇಕು.

ಚರ್ಮ ರೋಗಕ್ಕೆ ಅರಳಿ ಮರ

  • ಚರ್ಮ ರೋಗ ಹಾಗು ಅನೇಕ ರಕ್ತ ಅಶುದ್ಧತೆಯಿಂದ ಬರುವ ಸಮಸ್ಯೆಗಳಿಗೆ ಒಂದೇ ಪರಿಹಾರ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಳಿ ಮರದ 4 ರಿಂದ 5 ಚಿಗುರೆಲೆಗಳನ್ನು ಚೆನ್ನಾಗಿ ಜಗಿದು ತಿಂದರೆ ಅಥವಾ ಚೆನ್ನಾಗಿ ರುಬ್ಬಿ ಮಾತ್ರೆ ರೂಪದಲ್ಲಿ ತೆಗೆದುಕೊಂಡರು ಉತ್ತಮವಾಗಿದೆ. ಈ ವಿಧಾನದ ಪಾಲನೆಯಿಂದ ಚರ್ಮ ರೋಗಗಳು, ರಕ್ತದ ಅಶುದ್ಧತೆಯಿಂದ ಬರುವ ಅನೇಕ ಸಮಸ್ಯೆಗಳು, ಅಜೀರ್ಣ ಸಮಸ್ಯೆಗೂ ಕೂಡ ಉತ್ತಮವಾಗಿದೆ. ಹಾಗೆಯೇ ಅರಳಿ ಮರದ ಚಕ್ಕೆಯನ್ನು ತೇಯ್ದು ಅದರ ಗಂಧವನ್ನು ಮಚ್ಚೆ, ಕಲೆ, ಚಿಬ್ಬುಗಳು ಇರುವ ಕಡೆ ಹಚ್ಚಿದರೆ ಕಲೆಗಳು ಕಡಿಮೆ ಆಗುತ್ತಾ ಬರುತ್ತದೆ.

ಇಷ್ಟೆಲ್ಲಾ ಉಪಯೋಗಗಳ ಸರಮಾಲೆ ಇರುವ ನಮ್ಮ ಅರಳಿ ಮರ ಅತ್ಯಂತ ಶ್ರೇಷ್ಠ ವೃಕ್ಷ ವಾಗಿದ್ದು, ಪರಿಸರದ ನಿರ್ಮಲತೆಗೆ ಕೂಡ ಉತ್ತಮ ಕೊಡುಗೆ ನೀಡುತ್ತಾ ಬಂದಿದೆ. ಅರಳಿ ಮರದ ಗುಣಗಳನ್ನು ಅರಿತು ಅದರ ಉಪಯೋಗಗಳನ್ನು ಪಡೆದುಕೊಳ್ಳೋಣ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Share
Published by
GruhaSnehi
Tags: arali maraashwath treebest gruha sangathi for your home remediesbest kannada bloggruha sangaatigruha snehi kannada bloggruhasnehi health tipsHow to use Peepal tree leaves for health?Is Peepal tree good for oxygen?Is Peepal tree good for skin and hair?kannada blogpeepal treePeepal tree Ayurveda benefitsPeepal tree bark usesPeepal tree benefitsPeepal tree leaves benefitsPeepal tree leaves health benefitsPeepal tree medicinal propertiesPeepal tree medicinal usesPeepal tree oxygen benefitsPeepal tree worship benefitsUses of Ashwattha tree in AyurvedaWhat are the health benefits of Peepal tree?Why Peepal tree is considered sacred in Indiayour best gruha sangatiಅರಳಿ ಮರದ ಔಷಧೀಯ ಉಪಯೋಗಗಳುಅಶ್ವತ್ಥ (ಅರಳಿ) ಮರದ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ!ಅಶ್ವತ್ಥ ಮರ ಆಮ್ಲಜನಕ ಪ್ರಯೋಜನಗಳುಅಶ್ವತ್ಥ ಮರ ಆಯುರ್ವೇದ ಪ್ರಯೋಜನಗಳುಅಶ್ವತ್ಥ ಮರದ ಆರೋಗ್ಯ ಪ್ರಯೋಜನಗಳು ಏನು?ಅಶ್ವತ್ಥ ಮರದ ಎಲೆಗಳ ಪ್ರಯೋಜನಗಳುಅಶ್ವತ್ಥ ಮರದ ಎಲೆಗಳನ್ನು ಆರೋಗ್ಯಕ್ಕಾಗಿ ಹೇಗೆ ಬಳಸುವುದು?ಅಶ್ವತ್ಥ ಮರದ ಪ್ರಯೋಜನಗಳುಗೃಹಸ್ನೇಹಿಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟುನಿಮ್ಮ ಬೆಸ್ಟ್ ಗೃಹ ಸಂಗಾತಿ

Recent Posts

ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು

ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು. AI Image ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ…

12 hours ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

1 day ago

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು. AI Image ನಮ್ಮ ದೇಹದ ಒಂದು ಮುಖ್ಯ…

2 days ago

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು. AI Image ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ…

3 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

5 days ago

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

6 days ago

This website uses cookies.