ಕಿತ್ತಳೆ ಹಣ್ಣಿನ ಅದ್ಭುತ ಗುಣಗಳೊಂದಿಗೆ ಆರೋಗ್ಯದ ರಹಸ್ಯ!! ಚರ್ಮದ ರಕ್ಷಣೆ, ಕಿತ್ತಳೆ ಹಲ್ವ, ಮತ್ತು ಆರೆಂಜ್ ಜೆಲ್ಲಿ ರೆಸಿಪಿ (Benefits of eating oranges)

Spread the love

ಕಿತ್ತಳೆ ಹಣ್ಣಿನ ಅದ್ಭುತ ಗುಣಗಳೊಂದಿಗೆ ಆರೋಗ್ಯದ ರಹಸ್ಯ!

ಕಿತ್ತಳೆ ಹಣ್ಣು ದಕ್ಷಿಣ ಚೀನಾ, ಈಶಾನ್ಯ ಭಾರತ ಮತ್ತು ಮ್ಯಾನ್ಮಾರ್‌ಗಳನ್ನು(ಮಯನ್ಮಾರ್) ಒಳಗೊಂಡ ಪ್ರದೇಶದಲ್ಲಿ ಕಂಡುಬಂದಿದ್ದು ಸಿಹಿ ಕಿತ್ತಳೆಯ ಬಗ್ಗೆ ಮೊದಲ ಉಲ್ಲೇಖವು ಕ್ರಿ.ಪೂ 314 ರಲ್ಲಿ ಚೀನೀ ಸಾಹಿತ್ಯದಲ್ಲಿ ಕಂಡುಬರುತ್ತದೆ. ಕಿತ್ತಳೆ ಮರಗಳನ್ನು ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ  ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕಿತ್ತಳೆ ಮರದ ಹಣ್ಣನ್ನು ತಾಜಾವಾಗಿ ತಿನ್ನಬಹುದು ಅಥವಾ ಅದರ ರಸ ಹಾಗು ಸಿಪ್ಪೆಯನ್ನು ಸಂಸ್ಕರಿಸಬಹುದು. 

ಕಿತ್ತಳೆ ಹಣ್ಣಿನ ತಿರುಳುನಲ್ಲಿ 87% ನೀರು, 12% ಕಾರ್ಬೋಹೈಡ್ರೇಟ್‌ಗಳು, 1% ಪ್ರೋಟೀನ್ ಅನ್ನು ಹೊಂದಿದ್ದು ಅತ್ಯಲ್ಪ ಕೊಬ್ಬನ್ನು ಹೊಂದಿರುತ್ತದೆ. 100-ಗ್ರಾಂ ಕಿತ್ತಳೆ ಹಣ್ಣಿನ ತಿರುಳು 47 ಕ್ಯಾಲೊರಿಗಳನ್ನು ಒದಗಿಸುತ್ತದೆ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ.

ಇಷ್ಟೆಲ್ಲಾ ಉತ್ತಮವಾದ ಕಿತ್ತಳೆಯ ಉಪಯೋಗವನ್ನು ನಾವು ತಿಳಿದುಕೊಳ್ಳೋಣ

ವಿಟಮಿನ್ ಸಿ ಹೇರಳವಾಗಿ ಇರುವ ಕಾರಣ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಹಾಗು ಇದರಲ್ಲಿನ ಫೈಬರ್ ಸತ್ವಗಳು ನಮ್ಮ ರಕ್ತ ಚಲನೆಯನ್ನು ತಿಳಿಗೊಳಿಸಿ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ನಿಯಂತ್ರಣಕ್ಕೆ ತರುತ್ತದೆ.ಚರ್ಮದ ಆರೋಗ್ಯಕ್ಕೂ ಕೂಡ ಇದು ಉತ್ತಮವಾಗಿದ್ದು ಚರ್ಮದಲ್ಲಿನ ಸಣ್ಣ ಸಣ್ಣ ರಂಧ್ರಗಳನ್ನು ಮುಚ್ಚಿ ನಮ್ಮ ಕಾಂತಿ ಯುಕ್ತ ಚರ್ಮಕ್ಕೆ ಕಾರಣವಾಗುತ್ತದೆ. ಕಾರ್ಬೋಹೈಡ್ರೇಟ್ ಗಳ ಇರುವಿಕೆಯಿಂದ ನಿಶ್ಯಕ್ತಿ ಯಾದರೆ ಒಂದು ಕಿತ್ತಳೆ ಹಣ್ಣಿನ ರಸವು ಗ್ಲೂಕೋಸ್ ನಂತೆ ಪರಿಣಾಮ ಬೀರುತ್ತದೆ. ಹಲವು ಅನೇಕ ಉತ್ತಮ ಗುಣ ಒಳಗೊಂಡ ಸಿಹಿಯಾದ ಹಣ್ಣು ನಮ್ಮ ಕಿತ್ತಳೆ.

ನಮ್ಮ ನಿತ್ಯ ಜೀವನದಲ್ಲಿ ಕಿತ್ತಳೆಯ ಕೆಲವು ಬಳಕೆಗಳು

  • ಕಿತ್ತಳೆಯ ರಸವನ್ನು ನಿತ್ಯ ಬೆಳಗ್ಗೆ ಸೇವನೆ ಮಾಡುವುದರಿಂದ ಆರೋಗ್ಯವೂ ಚೆನ್ನಾಗಿ ವರ್ಧನೆಯಾಗಿ ನಿತ್ಯ ಕಾಡುವ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇದರಲ್ಲಿನ ಫೈಬರ್ ಮತ್ತು ಪೊಟ್ಯಾಷಿಯಂ ಅಂಶಗಳು ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಹಾಗು ಕೊಲೆಸ್ಟ್ರಾಲ್ ನಂತಹ ಹಲವು ಸಮಸ್ಯೆಗಳಿಗೆ  ಪರಿಹಾರ ನೀಡುತ್ತದೆ.

  • ಕಿತ್ತಳೆ ಹಣ್ಣು ಮಾತ್ರವಲ್ಲದೆ ಸಿಪ್ಪೆ ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ನಿತ್ಯ ನಮ್ಮ ಉತ್ತಮ ಚರ್ಮಕ್ಕೆ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಅನೇಕ ಉಪಯೋಗಗಳಿವೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಣಗಿಸಬೇಕು. ಚೆನ್ನಾಗಿ ಒಣಗಿದ ನಂತರ ಅದನ್ನು ನುಣ್ಣನೆ ಪುಡಿ ಮಾಡಿ ಶೇಖರಿಸಿ ಇಟ್ಟುಕೊಳ್ಳಬೇಕು. ಈ ಪುಡಿಯನ್ನು ಮುಖಕ್ಕೆ ರೋಸ್ ವಾಟರ್ ನೋಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು, ಅದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಕಿತ್ತಳೆ ಹಣ್ಣು ಚರ್ಮದ ಕ್ಯಾನ್ಸರ್ ಗೂ ಉತ್ತಮ ಔಷಧವಾಗಿದೆ. ಹಾಗಾಗಿ ನಿತ್ಯ ಒಂದು ಕಿತ್ತಳೆ ಹಣ್ಣು ನಮ್ಮ ಚರ್ಮ ರಕ್ಷಣೆಗೆ ಉತ್ತಮವಾಗಿದೆ.

  • ಕಿತ್ತಳೆಯಲ್ಲಿ ನೀರಿನ ಅಂಶವು ಜಾಸ್ತಿ ಇರುವುದರಿಂದ ಅದು ನಮ್ಮ ದೇಹಕ್ಕೆ ಅಗತ್ಯವಾದ ನೀರಿನ್ನು ಕೂಡ ಹಣ್ಣಿನ ರೂಪದಲ್ಲಿ ಪೂರೈಸುತ್ತದೆ. ಹೈಡ್ರೇಟ್ ಏಜೆಂಟ್ ಆಗಿ ಕೂಡ ಉಪಯೋಗಿಸಲಾಗುತ್ತದೆ. ನಿಶ್ಯಕ್ತಿ, ತಲೆ ಸುತ್ತುವಿಕೆ ಈ ಸಮಯದಲ್ಲಿ ಕಿತ್ತಳೆಯ ರಸ ತ್ವರಿತವಾಗಿ ಬಳಸಲಾಗುತ್ತದೆ.

  • ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದ್ದು, ಕಣ್ಣಿನ ಆರೈಕೆಯಲ್ಲಿ ಉತ್ತಮವಾಗಿದೆ.

ಕಿತ್ತಳೆ ಹಣ್ಣಿನ ಕೆಲವು ಖಾದ್ಯಗಳು

  • ಕಿತ್ತಳೆಯ ಹಲ್ವ –

    ಕಿತ್ತಳೆ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು ಅಂದಾಜು ದೊಡ್ಡ 3 ಕಿತ್ತಳೆ ಹಣ್ಣಿನ ರಸ ,ಅದಕ್ಕೆ ಒಂದು ಕಪ್ ಕಾರ್ನ್ ಫ್ಲೋರನ್ನು ಬೆರೆಸಿ ಗಂಟಾಗದಂತೆ ಚೆನ್ನಾಗಿ ಕಲಸಬೇಕು. ನಂತರ ಒಂದು ಪಾತ್ರೆಗೆ ಒಂದು ಕಪ್ ಸಕ್ಕರೆ ಮತ್ತು ಅರ್ಧ ಕಪ್ ನೀರು ಹಾಕಿ ಸಕ್ಕರೆ ಪಾಕಕ್ಕೆ ಸಿದ್ಧಗೊಳಿಸಬೇಕು. ಕುದಿಯುತ್ತಿರುವ ಸಕ್ಕರೆ ಪಾಕಕ್ಕೆ ಮೊದಲೇ ತಯಾರಿಸದ ಮಿಶ್ರಣ ಹಾಕಿ ತಳ ಹಿಡಿಯದಂತೆ ಕಲಸಬೇಕು. ಕಲಸುವಾಗ ಒಂದೊದು ಚಮಚ ತುಪ್ಪ ಸೇರಿಸುತ್ತಾ ಕಲಸಬೇಕು. ಹಾಗೆಯೇ ತುಪ್ಪದಲ್ಲಿ ಹುರಿದ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಗು ಪಿಸ್ತಗಳನ್ನು ಸೇರಿಸಬೇಕು. ಹೀಗೆ ಒಂದು 5 ದೊಡ್ಡ ಚಮಚ ತುಪ್ಪ ಸೇರಿಸಿ ಮಿಶ್ರಣ ಹಲ್ವದ ಹದಕ್ಕೆ ಬಂದ ತಕ್ಷಣ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಚೌಕ ಆಕರವಾಗಿ ಕತ್ತರಿಸಿ ಆರಿದ ನಂತರ ತಿನ್ನಲು ಸಿದ್ಧವಾಗುತ್ತದೆ ಕಿತ್ತಳೆ ಹಲ್ವ.

  • ಮಕ್ಕಳಿಗೆ ಇಷ್ಟವಾಗುವ ಆರೆಂಜ್ ಜೆಲ್ಲಿ-

    ಕಿತ್ತಳೆ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು. ಒಂದು ದೊಡ್ಡ ಹಣ್ಣಿನ ರಸಕ್ಕೆ ಒಂದೆರೆಡು ಚಮಚ ಸಕ್ಕರೆ ಅಥವಾ ಮಕ್ಕಳಿಗಾಗಿ ಕೆಂಪು ಕಲ್ಲುಸಕ್ಕರೆ ಉಪಯೋಗಿಸಬಹುದು. ಹಣ್ಣು ತುಂಬಾ ಸಿಹಿಯಾಗಿದ್ದಾರೆ ಸಕ್ಕರೆಯ ಅವಶ್ಯಕತೆ ಕಡಿಮೆ. ನಮ್ಮ ರುಚಿಗೆ ಅನುಸಾರ ಸಿಹಿಯನ್ನು ಬಳಸಬೇಕು. ಈ ಸಿಹಿ ಕಿತ್ತಳೆ ರಸದ ಮಿಶ್ರಣಕ್ಕೆ ಚೈನಾ ಗ್ರಾಸ್ ಒಂದು ಸ್ವಲ್ಪ ಹಾಕಿ ಚೆನ್ನಾಗಿ ಕುದಿ ಬರುವವರೆಗೂ ಕಲಸಬೇಕು ನಂತರ 2 ನಿಮಿಷ ಕುದಿಯುತ್ತಾ ಜೆಲ್ಲಿ ಯ ರೂಪಕ್ಕೆ ಬಂದ ತಕ್ಷಣ ಒಂದು ಚಾಕೊಲೇಟ್ ಮೌಲ್ಡ್ ನಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟರೆ ಆರೆಂಜ್ ಜೆಲ್ಲಿ ತಿನ್ನಲು ಸಿದ್ಧವಾಗುತ್ತದೆ.

ಕಿತ್ತಳೆ ಹಣ್ಣು ಪೌಷ್ಟಿಕತೆಯಿಂದ ತುಂಬಿದ ಒಂದು ಅದ್ಭುತ ಫಲ. ಇದು ಕೇವಲ ಆರೋಗ್ಯಕ್ಕೆ ಲಾಭಕಾರಿ ಮಾತ್ರವಲ್ಲ, ದೈನಂದಿನ ಆಹಾರದಲ್ಲಿ ಹಲವು ರುಚಿಕರವಾದ ರೀತಿಯಲ್ಲಿ ಬಳಸಬಹುದಾಗಿದೆ. ಇದು ಪ್ರತ್ಯೇಕವಾಗಿ ತಿನ್ನುವಾಗ,ಜ್ಯೂಸ್ ಆಗಿ ಕುಡಿಯುವಾಗ ಅಥವಾ ವಿಶೇಷ ಅಡುಗೆಗಳಲ್ಲಿ ಸೇರಿಸಿದಾಗ, ನಮ್ಮ ಆರೋಗ್ಯದ ಉತ್ತಮ ಗೆಳೆಯ!

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.