
ಪ್ರತಿ ಮನೆಯಲ್ಲಿ ಹೆಚ್ಚಾಗಿ ಬಳಸುವ ತರಕಾರಿ ಎಂದರೆ ಈರುಳ್ಳಿ. ಪ್ರತಿ ಆಹಾರದ ರುಚಿಯನ್ನು ವಿಭಿನ್ನಗೊಳಿಸಲು ಈರುಳ್ಳಿ ಉಪಯುಕ್ತವಾಗಿದೆ. ಪದರ ಪಾದರವಾಗಿ ಇರುವ ಈರುಳ್ಳಿಯು ರುಚಿಯಲ್ಲಿ ಸಿಹಿ ಮತ್ತು ಖಾರ ಎರಡು ರುಚಿಯನ್ನು ಹೊಂದಿರುತ್ತದೆ. ಈರುಳ್ಳಿಯಲ್ಲಿ ಹಲವು ವಿಧಗಳಿದ್ದು ಹಳದಿ ಈರುಳ್ಳಿ, ಸಿಹಿ ಈರುಳ್ಳಿ ಹಾಗೂ ಬಿಳಿ ಈರುಳ್ಳಿ ಎಂಬುದಾಗಿ ಹೇಳಬಹುದಾಗಿದೆ. ಇಂದಿನ ಲೇಖನದಲ್ಲಿ ಈರುಳ್ಳಿಯ ಪರಿಚಯ, ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.
ಈರುಳ್ಳಿಯ ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ಅಲಿಯಮ್ ಸೆಪಾ (Allium cepa).
ಆಂಗ್ಲ ಹೆಸರು – ಆನಿಯನ್ (Onion)
ಈರುಳ್ಳಿಯಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಪೊಟ್ಯಾಸಿಯಂ, ಕ್ಯಾಲ್ಸಿಯಂ, ರಂಜಕ, ಮ್ಯಾಂಗನೀಸ್, ಸಲ್ಫರ್, ಕಬ್ಬಿಣ, ಸೋಡಿಯಂ, ಮೆಗ್ನಿಶಿಯಂಗಳು ಹೇರಳವಾಗಿದೆ. ಹಸಿ ಈರುಳ್ಳಿಯು ಅರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಬೇಯಿಸಿದ ಈರುಳ್ಳಿಗಿಂತ ಹಸಿ ಈರುಳ್ಳಿಯೇ ಉತ್ತಮವಾಗಿದೆ. ಇನ್ನೂ ಈರುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದು ಅತಿ ಉತ್ತಮವಾಗಿದೆ.
ಈರುಳ್ಳಿ – ಆರೋಗ್ಯದ ಲಾಭಗಳು ಮತ್ತು ಉಪಯೋಗಗಳು
ಎಲ್ಲಾ ರೀತಿಯ ಜ್ವರಕ್ಕೆ ಈರುಳ್ಳಿಯ ಉತ್ತಮ ಪರಿಹಾರಗಳು
- ವಿಶಮಶೀತ ಜ್ವರ, ಅಮಶಂಕೆ, ಸಿಡುಬು ಹಾಗೂ ಕಾಲರದಂತಹ ಜ್ವರಗಳಿಗೆ ಈರುಳ್ಳಿ ಉತ್ತಮ ಪರಿಹಾರಗಳನ್ನು ನೀಡುತ್ತದೆ. ಪ್ರತಿದಿನ ಊಟದ ಮುನ್ನ ಅಥವಾ ಊಟದ ನಂತರ ಹಸಿ ಈರುಳ್ಳಿಯನ್ನು ತಿನ್ನುವ ರೂಢಿ ಇದ್ದರೆ, ಈ ಜ್ವರಗಳನ್ನು ದೇಹದಲ್ಲಿ ಹರಡುವ ರೋಗಾಣುಗಳನ್ನು ನಾಶಪಡಿಸುವ ಶಕ್ತಿಯು ಈರುಳ್ಳಿಯಲ್ಲಿದೆ. ಪ್ರತಿನಿತ್ಯ ಈರುಳ್ಳಿಯನ್ನು ಬಳಸುವುದರಿಂದ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕೂಡ ನಾವು ವೃದ್ಧಿಸಿಕೊಳ್ಳಬಹುದು.
- ಈರುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಅಮಶಂಕೆ ಜ್ವರವು ಕಡಿಮೆಯಾಗುತ್ತದೆ.
- ಚಿಕ್ಕ ಮಕ್ಕಳಿಗೆ ಜ್ವರ ಬಂದರೆ ಅಥವಾ ನೆಗಡಿಯಾಗಿ ಮೈ ಬಿಸಿಯಾಗಿದ್ದರೆ, ಈರುಳ್ಳಿಯನ್ನು ಮೈಗೆ ತಿಕ್ಕಿ ಸ್ನಾನ ಮಾಡಿಸುವುದು ಉತ್ತಮವಾಗಿರುತ್ತದೆ. ಇದರಿಂದ ದೇಹದಲ್ಲಿ ಬೆವರು ಉತ್ಪತ್ತಿ ಜಾಸ್ತಿಯಾಗಿ ಜ್ವರವು ಕಡಿಮೆಯಾಗುತ್ತದೆ.
ಹೊಟ್ಟೆಯ ಭಾಗಗಳ ಉತ್ತಮ ಆರೋಗ್ಯಕ್ಕೆ ಈರುಳ್ಳಿಯ ಪ್ರಯೋಜನಗಳು
- ಹೊಟ್ಟೆಗೆ ಸಂಬಂಧಪಟ್ಟ, ಜಠರ ಹಾಗೂ ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳ ನಿವಾರಣೆಗೆ ಹಸಿ ಈರುಳ್ಳಿಯು ಉತ್ತಮ ಪರಿಹಾರಗಳನ್ನು ನೀಡುತ್ತದೆ. ಪ್ರತಿದಿನ ಹಸಿ ಈರುಳ್ಳಿ, ಕ್ಯಾರೆಟ್ ಹಾಗೂ ಸೌತೆಕಾಯಿ ಹಾಗೂ ಟೊಮೆಟೊಗಳನ್ನು ಉಪಯೋಗಿಸಿ ತಯಾರಿಸಿದ ಹಸಿರು ಸಲಾಡ್ ಅನ್ನು ತಿನ್ನುವುದು ಹೊಟ್ಟೆಯ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಇದು ಸುಲಭ ಜೀರ್ಣಕ್ರಿಯೆಗೂ ಉತ್ತಮ ಆಹಾರವಾಗಿದೆ. ಜಠರ ಹಾಗೂ ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳ ನಿವಾರಣೆಗೂ ಕೂಡ ಉತ್ತಮವಾಗಿದೆ.
- ಹೊಟ್ಟೆಯಲ್ಲಿ ಅಜೀರ್ಣ ಸಮಸ್ಯೆಯು ಹೆಚ್ಚಾಗಿದ್ದಾರೆ ಈರುಳ್ಳಿಯನ್ನು ಕೆಂಡದ ಮೇಲೆ ಇಟ್ಟು, ಸುಟ್ಟು ತಿನ್ನುವುದು ಉತ್ತಮವಾಗಿದೆ. ಇದು ಆಹಾರದ ಜೀರ್ಣಕ್ರಿಯೆಗೆ ಉತ್ತಮ ಮದ್ದಾಗಿ ಸಹಾಯ ಮಾಡುತ್ತದೆ.
ಬಾಯಿಯ ಉತ್ತಮ ಆರೋಗ್ಯಕ್ಕೆ ಈರುಳ್ಳಿಯ ಮನೆಮದ್ದುಗಳು
- ಹಲ್ಲು ಹಾಗೂ ವಸಡಿನ ಉತ್ತಮ ಆರೋಗ್ಯಕ್ಕೆ ಈರುಳ್ಳಿಯು ಸಹಾಯಕವಾಗಿದೆ. ವಸಡಿನಿಂದ ರಕ್ತ ಬರುತಿದ್ದರೆ ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಂಡು, ಈರುಳ್ಳಿ ಮಿಶ್ರಣವನ್ನು ವಸಡಿನ ಮೇಲೆ ಹಗುರವಾಗಿ ಹಚ್ಚಿ, ತಿಕ್ಕಿದರೆ ರಕ್ತಸ್ರಾವವು ಕಡಿಮೆಯಾಗುತ್ತದೆ. ಗಟ್ಟಿಯಾದ ವಸಡಿನ ಅರೋಗ್ಯಕ್ಕೂ ಕೂಡ ಇದು ಉತ್ತಮವಾಗಿದೆ.
- ಹಲ್ಲಿನ ಉತ್ತಮ ಆರೋಗ್ಯಕ್ಕೆ ಈರುಳ್ಳಿಯು ಅವಶ್ಯಕವಾಗಿದೆ. ಹಲ್ಲು ಗಟ್ಟಿಯಾಗಿರಲು, ಹಾಗೆಯೇ ದಂತ ಕ್ಷಯದ ನಿವಾರಣೆಗೆ ಹಸಿ ಈರುಳ್ಳಿಯನ್ನು ಅಗೆದು ತಿನ್ನುವುದು ಉತ್ತಮವಾಗಿದೆ. ಇದು ಹಲ್ಲುಗಳಲ್ಲಿನ ರೋಗಾಣುಗಳನ್ನು ಕೂಡ ನಾಶಪಡಿಸಿ, ಹಲ್ಲುಗಳ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಹೃದಯದ ಉತ್ತಮ ಅರೋಗ್ಯಕ್ಕೂ ಈರುಳ್ಳಿ ಉತ್ತಮವಾಗಿದೆ
- ಒಬ್ಬ ವೃಕ್ತಿಯು ಅರೋಗ್ಯವಂತನಾಗಿ ಇರಲು ಅವನ ಹೃದಯದ ಆರೋಗ್ಯ ಉತ್ತಮವಾಗಿ ಇರಬೇಕಾದದ್ದು ಅವಶ್ಯಕವಾಗಿದೆ. ಹಾಗಾಗಿ ನಮ್ಮ ಹೃದಯದ ಅರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಪ್ರತಿದಿನ ಹಸಿ ಈರುಳ್ಳಿಯನ್ನು ಆಹಾರ ರೂಪದಲ್ಲಿ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಸಮಸ್ಯೆಗಳು ಬಾಧಿಸುವುದಿಲ್ಲ. ಹಾಗೂ ಇದು ಅರೋಗ್ಯವರ್ಧಕವು ಹೌದು. ಹಾಗಾಗಿ ಪ್ರತಿದಿನ ಒಂದು ಈರುಳ್ಳಿಯನ್ನು ಹಸಿಯಾಗಿ ತಿನ್ನುವ ಅಭ್ಯಾಸವನ್ನು ರೂಢಿಯಲ್ಲಿ ಇಟ್ಟುಕೊಳ್ಳಬೇಕು.
ಚರ್ಮದ ಉತ್ತಮ ಆರೋಗ್ಯಕ್ಕೆ ಈರುಳ್ಳಿಯ ಮನೆಮದ್ದುಗಳು
- ಚರ್ಮದ ಅನೇಕ ಸಮಸ್ಯೆಗಳಾದ ಕಜ್ಜಿ, ತುರಿಕೆ, ಹುಳಕಡ್ಡಿ, ಬೆವರಿನ ಗುಳ್ಳೆಗಳು ಇನ್ನೂ ಅನೇಕ ಸಮಸ್ಯೆಗಳು ಬಾಧಿಸಿದಾಗ ನಾವು ಈರುಳ್ಳಿಯ ಸಹಾಯವನ್ನು ಪಡೆದುಕೊಳ್ಳಬೇಕು. ಬಿಳಿ ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಈ ರಸಕ್ಕೆ ಅರಿಶಿಣ ಪುಡಿಯನ್ನು ಬೆರೆಸಿ ಕಜ್ಜಿ, ತುರಿಕೆಗಳು ಇರುವ ಜಾಗಕ್ಕೆ ಲೆಪಿಸಬೇಕು. ಇದನ್ನು ಸತತವಾಗಿ ನಿತ್ಯ ಹಚ್ಚಿದರೆ ಚರ್ಮದ ಸಮಸ್ಯೆಗಳು ತ್ವರಿತವಾಗಿ ಗುಣವಾಗುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
ವಿಷಜಂತುಗಳಾದ ಚೇಳು ಹಾಗೂ ಜೇನಿನ ಕಡಿತಕ್ಕೆ ಈರುಳ್ಳಿ ಉತ್ತಮವಾಗಿದೆ
- ಚೇಳು ಅಥವಾ ಜೇನುನೋಣಗಳು ಕಡಿದಾಗ ಪ್ರಥಮ ಚಿಕಿತ್ಸೆಗಾಗಿ ಈರುಳ್ಳಿಯನ್ನು ಉಪಯೋಗಿಸಬಹುದು. ಜಂತುಗಳು ಕಚ್ಚಿದ ಜಾಗಕ್ಕೆ ಈರುಳ್ಳಿಯನ್ನು ಚೆನ್ನಾಗಿ ಜಜ್ಜಿಕೊಂಡು ಅದರ ರಸವನ್ನು ಹಿಂಡಬೇಕು. ಈ ಈರುಳ್ಳಿ ರಸದ ಲೇಪನದಿಂದ ಜಂತುಗಳ ಕಡಿತದ ಉರಿ ಹಾಗೂ ನೋವು ಎರಡು ಕಡಿಮೆಯಾಗುತ್ತದೆ. ಹಾಗೂ ಗಾಯದ ನಿವಾರಣೆಗೂ ಇದು ಉತ್ತಮವಾಗಿದೆ.
ತಲೆನೋವು ಹಾಗೂ ವಾಂತಿಯಂತಹ ಸಮಸ್ಯೆಗೆ ಈರುಳ್ಳಿಯು ಉತ್ತಮವಾಗಿದೆ
- ವಾಂತಿಯು ಹಾಗೂ ತಲೆನೋವು ಎರಡು ಇದ್ದಾಗ ಈರುಳ್ಳಿಯನ್ನು ಕತ್ತರಿಸಿ ಅದರ ವಾಸನೆಯನ್ನು ಗೃಹಿಸುವುದರಿಂದ ತಲೆನೋವು ಕಡಿಮೆಯಾಗಿ, ವಾಂತಿಯು ಸಹ ನಿಲ್ಲುತ್ತದೆ. ಹಾಗೆಯೇ ಈರುಳ್ಳಿಯನ್ನು ಜಜ್ಜಿಕೊಂಡು ರಸವನ್ನು ಹಿಂಡಿ, ಒಂದು ಚಮಚ ರಸವನ್ನು ಕುಡಿಯುವುದು ಕೂಡ ವಾಂತಿಯನ್ನು ನಿಲ್ಲಿಸಲು ಉತ್ತಮವಾಗಿದೆ.
- ತಲೆನೋವು ಹೆಚ್ಚಾಗಿ ಕಂಡುಬಂದರೆ ನಮ್ಮ ಆಹಾರದಲ್ಲಿ ಪ್ರತಿದಿನ ಹಸಿ ಈರುಳ್ಳಿಯನ್ನು ಸೇವಿಸುವುದು ಉತ್ತಮವಾಗಿದೆ. ಹಸಿ ಈರುಳ್ಳಿಯ ವಾಸನೆ ಹಾಗೂ ಸೇವನೆ ಎರಡು ಕೂಡ ತಲೆನೋವು ನಿವಾರಿಸಲು ಉತ್ತಮ ಮದ್ದಾಗಿದೆ.
ಕಣ್ಣಿನ ಉತ್ತಮ ಆರೋಗ್ಯಕ್ಕೆ ಈರುಳ್ಳಿಯ ಉತ್ತಮ ಪ್ರಯೋಜನಗಳು
- ಕಣ್ಣಿನ ಸಮಸ್ಯೆಗಳಾದ ಕಣ್ಣೂರಿ, ಕಣ್ಣು ಚುಚ್ಚುವಿಕೆ, ಕಣ್ಣಿನ ದಣಿವು ಹಾಗೂ ನೋವಿಗೆ ಎಲ್ಲದಕ್ಕೂ ಈರುಳ್ಳಿಯಿಂದ ನಾವು ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ ಊಟದಲ್ಲಿ ಒಂದು ಹಸಿ ಈರುಳ್ಳಿಯನ್ನು ಸೇವಿಸುವುದು ಕಣ್ಣಿನ ಆರೋಗ್ಯಕ್ಕೆ ಕೂಡ ಉತ್ತಮವಾಗಿದೆ. ಹಸಿ ಈರುಳ್ಳಿಯ ಸೇವನೆ ಎಲ್ಲಾ ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿದೆ. ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಹಜ. ಈ ಕಣ್ಣೀರಿನ ಜೊತೆ ಕೆಲವು ಕಲ್ಮಶಗಳು, ಧೂಳು ಹಾಗೂ ಕ್ರಿಮಿಗಳು ಸಹ ಹೊರಬರುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯದ ರಕ್ಷಣೆಯಲ್ಲಿ ಈರುಳ್ಳಿ ಉತ್ತಮ ಪಾತ್ರವನ್ನು ವಹಿಸುತ್ತದೆ.
ನೆಗಡಿ ಹಾಗೂ ಕೆಮ್ಮಿನ ಸಮಸ್ಯೆಗಳನ್ನು ದೂರಗೊಳಿಸಲು ಈರುಳ್ಳಿ ಉತ್ತಮವಾಗಿದೆ
- ನೆಗಡಿ ಜಾಸ್ತಿಯಾಗಿ, ಮೂಗು ಕಟ್ಟಿದ್ದರೆ ನಾವು ಈರುಳ್ಳಿಯ ಸಹಾಯವನ್ನು ಪಡೆದುಕೊಳ್ಳಬೇಕು. ಈರುಳ್ಳಿಯನ್ನು ಜಜ್ಜಿಕೊಂಡು ಅದರ ರಸವನ್ನು ಹಿಂಡಿಕೊಳ್ಳಬೇಕು. ಎರಡು ಹನಿ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಾಕುವುದರಿಂದ ಕಟ್ಟಿದ ಮೂಗು ನಿವಾರಣೆಯಾಗಿ, ಉಸಿರಾಟಕ್ಕೆ ಸಹಾಯವಾಗುತ್ತದೆ. ಹಾಗೆಯೇ ನೆಗಡಿ ಕೂಡ ಕಡಿಮೆಯಾಗುತ್ತದೆ.
- ಹಸಿ ಈರುಳ್ಳಿಯನ್ನು ಕಚ್ಚಿ ತಿನ್ನುವುದರಿಂದ ದೇಹದಲ್ಲಿ ಉಷ್ಣವು ಜಾಸ್ತಿಯಾಗಿ ನೆಗಡಿಯು ಕಡಿಮೆಯಾಗುತ್ತದೆ. ಇದು ಮುಂದೆ ಬರಬಹುದಾದ ಜ್ವರವನ್ನು ಕೂಡ ತಡೆಯಲು ಉತ್ತಮವಾಗಿದೆ.
ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಈರುಳ್ಳಿಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು
- ಮೂಗಿನ ಉತ್ತಮ ಅರೋಗ್ಯಕ್ಕೂ ಈರುಳ್ಳಿ ಸಹಕಾರಿಯಾಗಿದೆ. ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಈರುಳ್ಳಿಯ ಒಂದು ಹಸಿ ತುಂಡನ್ನು ಮೂಗಿನ ಹತ್ತಿರ ಹಿಡಿದು, ವಾಸನೆಯನ್ನು ತೆಗೆದುಕೊಂಡರೆ ಸಾಕು, ರಕ್ತ ಸುರಿಯುವುದು ಕಡಿಮೆಯಾಗುತ್ತದೆ.
ಮೂಲವ್ಯಾಧಿಯ ಆರೈಕೆಯಲ್ಲೂ ಕೂಡ ಈರುಳ್ಳಿ ಉತ್ತಮ ಪಾತ್ರವನ್ನು ವಹಿಸುತ್ತದೆ
- ಮೂಲವ್ಯಾಧಿಯ ಆರೈಕೆಯ ಸಮಯದಲ್ಲಿ ನಮ್ಮ ಆಹಾರ ಪದ್ದತಿಯನ್ನು ಸರಿಯಾಗಿ ನೋಡಿಕೊಳ್ಳುವುದು ಉತ್ತಮವಾಗಿದೆ. ಸುಲಭ ಜೀರ್ಣಕ್ರಿಯೆಗೆ ಉತ್ತಮವಾಗಿರುವ ಆಹಾರವನ್ನು ಸ್ವೀಕರಿಸುವುದು ಅವಶ್ಯಕವಾಗಿರುತ್ತದೆ. ಈ ಮೂಲವ್ಯಾಧಿಯ ಸಮಸ್ಯೆಗೆ ಪರಿಹಾರವನ್ನು ನಾವು ಈರುಳ್ಳಿಯ ಮೂಲಕ ಕಂದುಕೊಳ್ಳಬಹುದಾಗಿದೆ. ಈರುಳ್ಳಿಯನ್ನು ತುರಿದು, ಗಟ್ಟಿ ಮೊಸರಿನ ಜೊತೆ ಕಲಸಿ, ಮುಂಜಾನೆ ಎದ್ದ ನಂತರ ಖಾಲಿ ಹೊಟ್ಟೆಗೆ ಸ್ವೀಕರಿಸಬೇಕು. ಇದರಿಂದ ಮೂಲವ್ಯಾಧಿ ಸಮಸ್ಯೆಗಳು ತ್ವರಿತವಾಗಿ ಗುಣವಾಗುತ್ತದೆ.
- ಈರುಳ್ಳಿ ಮಾತ್ರವಲ್ಲದೆ ಈರುಳ್ಳಿಯ ಸೊಪ್ಪು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಆಹಾರದಲ್ಲಿ ಈರುಳ್ಳಿಯ ಸೊಪ್ಪನ್ನು ಬಳಸುವುದರಿಂದ ಮೂಲವ್ಯಾಧಿ ಸಮಸ್ಯೆಗೆ ನಾವು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಹಾಗೆಯೇ ಮಲಬದ್ಧತೆ ಹಾಗೂ ಅರಿಶಿಣ ಕಾಮಾಲೆ ಸಮಸ್ಯೆಗೂ ಈರುಳ್ಳಿಯ ಸೊಪ್ಪು ಉತ್ತಮ ಪರಿಹಾರಗಳನ್ನು ನೀಡುತ್ತದೆ. ಈರುಳ್ಳಿ ಸೊಪ್ಪಿನ ಸೇವನೆಯು ಸಕಲ ರೀತಿಯಲ್ಲೂ ಆರೋಗ್ಯಕ್ಕೆ ಉತ್ತಮವಾಗಿದೆ.
ಕಾಲಿನ ಹಿಮ್ಮಡಿಗಳು ಬಿರುಕು ಬಿಟ್ಟಾಗ ಈರುಳ್ಳಿಯಿಂದ ನಾವು ಪರಿಹಾರಗಳನ್ನು ಪಡೆದುಕೊಳ್ಳಬಹುದು
- ಈರುಳ್ಳಿಯನ್ನು ಜಜ್ಜಿಕೊಂಡು ಒಡೆದ ಭಾಗದಲ್ಲಿ ಹಚ್ಚುವುದು, ಇಲ್ಲವೇ ಒಡೆದ ಭಾಗದಲ್ಲಿ ಈರುಳ್ಳಿಯನ್ನು ಹಚ್ಚಿ, ಒಂದು ಬಟ್ಟೆಯಿಂದ ಕಟ್ಟುವುದರಿಂದ ಕಾಲಿನ ಹಿಮ್ಮಡಿಯ ಬಿರುಕುಗಳು ಬೇಗನೆ ಗುಣಮುಖವಾಗುತ್ತದೆ.
ದೇಹದ ತೂಕವನ್ನು ಹೆಚ್ಚಿಸಲು ಈರುಳ್ಳಿಯು ಉತ್ತಮ ಆಹಾರವಾಗಿದೆ
- ಎಷ್ಟು ತಿಂದರು ದಪ್ಪ ಆಗದೇ ಇರುವವರಿಗೆ ಈರುಳ್ಳಿಯ ಸೇವನೆ ಫಲವನ್ನು ನೀಡುತ್ತದೆ. ತೂಕವನ್ನು ವೃದ್ಧಿಸಲು ಹಸಿ ಈರುಳ್ಳಿಯನ್ನು ಬೆಲ್ಲದ ಜೊತೆಗೆ ಸೇರಿಸಿ ಸೇವಿಸುವುದರಿಂದ ದೇಹದ ತೂಕವು ಹೆಚ್ಚಾಗುತ್ತದೆ. ತೆಳ್ಳಗಿರುವವರಿಗೆ ಇದು ಉತ್ತಮ ಆಹಾರವಾಗಿದೆ.
ಕೂದಲಿನ ಆರೋಗ್ಯಕ್ಕೆ ಈರುಳ್ಳಿ ಅತಿ ಉತ್ತಮವಾಗಿದೆ.
- ಕಪ್ಪಾದ, ಸೊಂಪಾದ ಹಾಗೂ ಉದ್ದ ಕೂದಲಿನ ಬೆಳವಣಿಗೆಗೆ ಈರುಳ್ಳಿ ಉತ್ತಮವಾಗಿದೆ. ಈರುಳ್ಳಿಯನ್ನು ರುಬ್ಬಿಕೊಂಡು ತಲೆಗೆ ಹಚ್ಚಿ, ಒಣಗಿದ ನಂತರ ಸ್ನಾನ ಮಾಡುವುದರಿಂದ ಕೂದಲ ಬೆಳವಣಿಗೆ ಉತ್ತಮವಾಗುತ್ತದೆ. ಹಾಗೆಯೇ ಹೊಟ್ಟಿನ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.
(->ಕೂದಲಿನ ಉತ್ತಮ ಆರೈಕೆಗೆ ಸಂಬಂಧಪಟ್ಟ ನಮ್ಮ ಹಿಂದಿನ ಲೇಖನಗಳನ್ನು ಓದಿರಿ)
ದೇಹದ ಬಲವರ್ಧನೆಗೆ ಈರುಳ್ಳಿಯ ಉತ್ತಮ ಟಾನಿಕ್
- ದೇಹದ ಬಲವರ್ಧನೆಗೆ ಈರುಳ್ಳಿಯು ಅತಿ ಉಪಯುಕ್ತವಾಗಿದೆ. ಪ್ರತಿದಿನ ಬೆಳಿಗ್ಗೆ ಈರುಳ್ಳಿಯನ್ನು ಜಜ್ಜಿಕೊಂಡು, ರಸವನ್ನು ಹಿಂಡಿಕೊಳ್ಳಬೇಕು. ಎರಡು ಚಮಚ ಈರುಳ್ಳಿಯ ರಸಕ್ಕೆ, ಒಂದು ಚಮಚ ಹಸುವಿನ ತುಪ್ಪ ಹಾಗೂ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ನಲವತ್ತು ದಿನಗಳ ಕಾಲ ಸೇವಿಸಬೇಕು. ಇದು ದೇಹದ ಬಲವರ್ಧನೆಗೆ ಅತಿ ಉತ್ತಮವಾಗಿದೆ.
ಈರುಳ್ಳಿಯ ಅನೇಕ ಉಪಯೋಗಗಳನ್ನು ನಾವು ಇಂದು ಅರಿತಿದ್ದೇವೆ. ಈರುಳ್ಳಿಯು ಮಧುಮೇಹಿಗಳ ಅರೋಗ್ಯಕ್ಕೂ ಉತ್ತಮವಾಗಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಉತ್ತಮವಾಗಿದೆ. ಹಾಗೆಯೇ ಈರುಳ್ಳಿಯ ಸೇವನೆ ಹೃದಯದ ಆರೋಗ್ಯಕ್ಕೆ ಕೂಡ ಅತಿ ಉತ್ತಮವಾಗಿದೆ. ಮೂಳೆಗಳ ಉತ್ತಮ ಬೆಳವಣಿಗೆ ಹಾಗೂ ಅರೋಗ್ಯಕ್ಕೂ ಈರುಳ್ಳಿ ಸೇವನೆ ಉತ್ತಮವಾಗಿದೆ. ಪ್ರತಿದಿನ ಈರುಳ್ಳಿಯ ಸೇವನೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯಕವಾಗಿದ್ದು, ಶೀತ ಹಾಗೂ ಜ್ವರದಂತಹ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಒದಗಿಸುತ್ತದೆ. ಈರುಳ್ಳಿಯು ಆರೋಗ್ಯದ ಸುಧಾರಣೆಯಲ್ಲಿ ಮಾತ್ರವಲ್ಲದೆ, ಅಡುಗೆಯಲ್ಲೂ ನಿತ್ಯ ಉಪಯೋಗಿಸುವ ತರಕಾರಿಯಾಗಿದೆ. ಪಲ್ಯ, ಬಜೆ, ಸಾಂಬಾರುಗಳಲ್ಲಿ ಈರುಳ್ಳಿಯ ಬಳಕೆ ಇದ್ದೇ ಇರುತ್ತದೆ. ಇನ್ನೂ ನಾವು ಈರುಳ್ಳಿಯನ್ನು ಕತ್ತರಿಸಿ ಹಾಗೆಯೇ ಇಡಬಾರದು, ಬೇಕಾದಾಗ ಕತ್ತರಿಸಿ ಉಪಯೋಗಿಸಬೇಕು. ಜಾಸ್ತಿ ಹೊತ್ತು ಕತ್ತರಿಸಿ ಇರುವುದು, ಹಾಗೆಯೇ ಫ್ರಿಡ್ಜ್ ನಲ್ಲಿ ಇಟ್ಟು ಬಳಸುವುದು ನಿಶಿದ್ಧವಾಗಿದೆ. ಇಷ್ಟೆಲ್ಲ ಉತ್ತಮ ಹಾಗೂ ಸಹಾಯಕವಾಗಿರುವ ಈರುಳ್ಳಿಯ ಉಪಯೋಗಗಳನ್ನು ಪಡೆದುಕೊಂಡು ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಇದೆ ಈ ಲೇಖನದ ಮುಖ್ಯ ಉದ್ದೇಶವಾಗಿದೆ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
Pingback: ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟು
Pingback: ತಲೆನೋವು ಇದೆಯಾ? ಸುಲಭ ಹಾಗೂ ಪರಿಣಾಮಕಾರಿ ಮನೆಮದ್ದುಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗು