ನಿಂಬೆ ಹಣ್ಣು: ಪರಿಚಯ, ಆರೋಗ್ಯಕರ ಉಪಯೋಗಗಳು, ಮತ್ತು ರುಚಿಕರ ಪಾನೀಯ

Spread the love

ನಿಂಬೆ ಹಣ್ಣು: ಆರೋಗ್ಯ ಲಾಭಗಳು, ಮತ್ತು ಉಪಯೋಗಗಳು. AI Image

ಪ್ರತಿ ಮನೆಯಲ್ಲಿ ನಿತ್ಯ ಉಪಯೋಗಿಸುವ ತರಕಾರಿ ಎನ್ನಬೇಕೋ ಇಲ್ಲವೇ ಹಣ್ಣು ಎನ್ನಬೇಕೋ? ಹಣ್ಣೇ ಎನ್ನಬಹುದು, ಅದೇ ನಿಂಬೆ ಹಣ್ಣು. ಎಲ್ಲಾ ಕಾಲದಲ್ಲೂ ಸಿಗುವ, ಹುಳಿ ಮತ್ತು ಸ್ವಲ್ಪ ಒಗರು ಸ್ವಾದವುಳ್ಳ ಹಣ್ಣು ನಿಂಬೆ ಹಣ್ಣು. ನಿಂಬೆ ಹಣ್ಣಿನ ಮರ ಒಂದು ಚಿಕ್ಕ ಮರವಾಗಿದ್ದು, ಬಿಳಿ ಹೂವುಗಳು ಹಾಗೂ ಮುಳ್ಳುಗಳಿಂದ ಕೂಡಿರುತ್ತದೆ. ಲಿಂಬೆ ಹಣ್ಣು ಹಳದಿ ಬಣ್ಣದಲ್ಲಿದ್ದು, ಕಾಯಿ ಹಸಿರು ಬಣ್ಣದ್ದಾಗಿರುತ್ತದೆ. 

ಇನ್ನೂ ಧಾರ್ಮಿಕ ಹಿನ್ನಲೆಯಡಿ ಮಾಹಿತಿಗಳನ್ನು ಕಲೆ ಹಾಕುವುದಾದರೆ ಲಿಂಬು ಹಣ್ಣನ್ನು ದೇವಿ ಮಾತೆಯ ಪೂಜೆಯಲ್ಲಿ ಬಳಸುತ್ತಾರೆ. ಲಿಂಬು ಹಣ್ಣಿನ ಆರತಿಗಳನ್ನು ಮಾಡುತ್ತಾರೆ. ಹಾಗೆಯೇ ವಾಹನಗಳ ಪೂಜೆಯ ನಂತರ ಲಿಂಬು ಹಣ್ಣಿನ ಮೇಲೆ ಗಾಡಿ ಹತ್ತಿಸುವ ರೂಢಿ ಸಹ ಇದೆ. ಲಿಂಬು ಹಣ್ಣನ್ನು ದೃಷ್ಠಿ ನಿವಾರಕ ಎಂದು ಕರೆಯುವುದನ್ನು ಕೇಳಿದ್ದೇವೆ.

ಇನ್ನೂ ವೈಜ್ಞಾನಿಕ ವಿಚಾರಗಳ ಬಗ್ಗೆ ತಿಳಿಯುವುದಾದರೆ,

  • ಆಂಗ್ಲ ಹೆಸರು – ಲೆಮನ್ ( lemon )
  • ವೈಜ್ಞಾನಿಕ ಹೆಸರುಸಿಟ್ರಸ್ ಆರಂಟಿಫೋಲಿಯ ( Citrus aurantifolia).

ನಿಂಬೆ ಹಣ್ಣು ವಿಟಮಿನ್ ಸಿ ಯ ಗಣಿಯಾಗಿದ್ದು, ಕ್ಯಾಲ್ಸಿಯಂ, ಕಬ್ಬಿಣ, ನಾರು, ರಂಜಕ, ವಿಟಮಿನ್ ಎ ಮತ್ತು ಸಿ, ಶರ್ಕರಪಿಷ್ಠ ಹಾಗೂ ತೇವ ಭರಿತವಾಗಿದೆ.

ನಿತ್ಯ ಬಳಕೆಯಲ್ಲಿ ನಿಂಬೆ ಹಣ್ಣಿನ ಉಪಯೋಗಗಳು

ನಿಂಬೆ ಹಣ್ಣು ಒಂದು ರೀತಿಯಲ್ಲಿ ಸರ್ವ ರೋಗ ಪರಿಹಾರಕ ಎನ್ನಬಹುದು. ಜೀರ್ಣಕ್ರಿಯೆಗೆ, ವಾತ, ಪಿತ್ತ, ಕಫ, ಮೆದುಳಿನ ಆರೈಕೆ, ಕಣ್ಣಿನ ಸಮಸ್ಯೆಗಳು, ಆಯಾಸ, ಬಿಕ್ಕಳಿಕೆ, ವಾಂತಿ, ತಲೆ ಸುತ್ತುವಿಕೆ, ಯಕೃತ್ತಿನ ಅರೋಗ್ಯ, ಸಂಧಿವಾತ ಹಾಗೂ ಕೀಲು ನೋವು ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ಸವಿಸ್ತಾರವಾಗಿ ಚರ್ಚಿಸೋಣ.

1. ಅಜೀರ್ಣಕ್ಕೆ ಜೀರ್ಣಕಾರಕವಾಗಿರುವ ಲಿಂಬು

  • ನಿಂಬೆ ಹಣ್ಣಿನ ರಸವನ್ನು ಒಂದು ಚಿಟಿಕೆ ಅಡಿಗೆ ಸೋಡಾ ಬೆರೆಸಿ ಕುಡಿದರೆ ಅಜೀರ್ನತೆ ತ್ವರಿತವಾಗಿ ಕಡಿಮೆಯಾಗುತ್ತದೆ.
  • ಹೊಟ್ಟೆನೋವು, ಅಜೀರ್ಣ, ಹೊಟ್ಟೆ ಹಸಿವಾಗದಿರುವಿಕೆ ಹಾಗೂ ಹುಳಿತೇಗು ಇಂತಹ ಹಲವು ಸಮಸ್ಯೆಗಳಿಗೆ ಒಂದು ಸೂಕ್ತವಾದ ಮನೆಮದ್ದು ಇಲ್ಲಿದೆ. 5 ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು, ಅದರಲ್ಲಿ ½ ಚಮಚ ಜೀರಿಗೆ ಹಾಗೂ ½ ಓಂ ಕಾಳನ್ನು ಹಾಕಬೇಕು. ಕಾಳುಗಳು ಚೆನ್ನಾಗಿ ನೆನೆದು ನಿಂಬೆ ರಸವನ್ನು ಹೀರಿಕೊಂಡ ಮೇಲೆ ಕಾಳುಗಳನ್ನು ನೆರಳಿನಲ್ಲಿ ಒಣಗಿಸಿಕೊಂಡು ಪುಡಿ ಮಾಡಿಕೊಳ್ಳಬೇಕು, ಜೊತೆಗೆ ಸ್ವಲ್ಪ ಸೈoದವ ಲವಣವನ್ನು ಸೇರಿಸಿ ಶೇಖರಿಸಿ ಇಡಬೇಕು. ಹೊಟ್ಟೆ ನೋವು ಇನ್ನಿತರ ಸಮಸ್ಯೆಗಳು ಕಂಡುಬಂದಾಗ ಈ ಪುಡಿಯನ್ನು ½ ಚಮಚ ಸೇವಿಸಿ ಬಿಸಿ ನೀರನ್ನು ಕುಡಿದರೆ ಸಮಸ್ಯೆಗಳು ಸಂಪೂರ್ಣ ಕಡಿಮೆಯಾಗುತ್ತದೆ.

2. ದಣಿವು, ಆಯಾಸ ಮತ್ತು ಬಾಯಾರಿಕೆ ನಿಗಿಸಲು ಲಿಂಬು ಶರಬತ್ತು
ದಣಿವಾದಾಗ ಲಿಂಬು ಶರಬತ್ತು ಕುಡಿಯುವುದು ಬಲು ಉತ್ತಮ. ಲಿಂಬು ಹಣ್ಣಿನ ರಸ, ಸಕ್ಕರೆ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ ಬೆರೆಸಿ ಶರಬತ್ತನ್ನು ತಯಾರಿಸಬೇಕು. ಸಕ್ಕರೆ ಖಾಯಿಲೆ ಸಮಸ್ಯೆ ಇದ್ದವರು ಸಕ್ಕರೆ ಬಳಸದೆ ತುಸು ಉಪ್ಪು ಹಾಕಿ ತಯಾರಿಸಿಕೊಳ್ಳಬೇಕು. ಇದು ದಣಿವು, ಆಯಾಸ, ಬಾಯಾರಿಕೆ ಅಷ್ಟೇ ಅಲ್ಲದೆ ಜೀರ್ಣಕ್ರಿಯೆಗೂ ಉತ್ತಮವಾಗಿದೆ.

3. ಮಲೇರಿಯಾ ಜ್ವರಕ್ಕೆ ಸುಲಭ ಪರಿಹಾರ
ಮಲೇರಿಯಾ ಜ್ವರವು ಬಂದಾಗ ನಾಲಿಗೆಗೆ ರುಚಿಯೇ ಇರುವುದಿಲ್ಲ ಅಂತಹ ಸಮಯದಲ್ಲಿ ಯಾವುದೇ ಆಹಾರವು ಸೇರುವುದಿಲ್ಲ. ಇದಕ್ಕೆ ಲಿಂಬು ಹಣ್ಣಿನ ಒಂದು ಮನೆಮದ್ದನ್ನು ಹೇಳುವುದಾದರೆ, ಎರಡು ನಿಂಬೆ ಹಣ್ಣಿನ ರಸವನ್ನು ಒಂದು ಲೀಟರ್ ನೀರಿಗೆ ಹಾಕಿ ಅದು ಅರ್ಧದಷ್ಟು ಆಗುವವರೆಗೂ ಕುದಿಸಬೇಕು. ಇದನ್ನು ಬೆಳಿಗ್ಗೆ ಬರಿ ಹೊಟ್ಟೆಗೆ ಸೇವಿಸಬೇಕು. ಇದು ದೇಹಕ್ಕೆ ಶಕ್ತಿಯನ್ನು ಸಹ ನೀಡುತ್ತದೆ.

ಇನ್ನೊಂದು ಮನೆಮದ್ದು ಎಂದರೆ ಒಂದು ಚಮಚ ನಿಂಬೆ ರಸಕ್ಕೆ ಒಂದು ಚಮಚ ಈರುಳ್ಳಿ ರಸ ಬೆರೆಸಿ ಕುಡಿಯಬೇಕು. ಇದು ಕೂಡ ಬಹಳ ಉತ್ತಮವಾಗಿದೆ.

4. ಕಣ್ಣು ಮಂಜಾಗಿ, ತಲೆ ತಿರುಗಿದಂತೆ ಆದಾಗ ( ಪಿತ್ತದ ಸಮಸ್ಯೆಗಳು ) ಲಿಂಬು ಪರಮೌಷಧ.
ಒಂದು ಲೋಟ ಬಿಸಿ ನೀರಿಗೆ ಲಿಂಬು ರಸವನ್ನು ಹಿಂಡಿ, ಗುಟುಕು ಗುಟುಕಾಗಿ ಕುಡಿಯಬೇಕು. ಇದು ದೇಹದ ಸುಸ್ತು, ತಲೆ ಸುತ್ತುವಿಕೆ ಇವೆಲ್ಲವನ್ನೂ ಕಡಿಮೆ ಮಾಡಿಸುತ್ತದೆ.

5. ಮಲಮೂತ್ರ ವಿಸರ್ಜನೆಗೆ ತೊಂದರೆ ಆಗುತ್ತಿದ್ದರೆ ಲಿಂಬುವಿನ ಸಹಾಯ ಅತಿ ಮುಖ್ಯ.

  • ಮೂತ್ರ ವಿಸರ್ಜನೆ ಸಮಯದಲ್ಲಿ ಕಷ್ಟವಾಗುತ್ತಿದ್ದರೆ, ಮೂತ್ರ ಸ್ವಲ್ಪ ಸ್ವಲ್ಪವಾಗಿ ಹೊರಬರುತ್ತಿದ್ದರೆ ಒಂದು ಎಳೆನೀರಿಗೆ ಲಿಂಬು ರಸವನ್ನು ಹಿಂಡಿ ಕುಡಿಯಬೇಕು. ಸಮಸ್ಯೆ ತ್ವರಿತವಾಗಿ ಕಡಿಮೆಯಾಗುತ್ತದೆ.
  • ಮಲಮೂತ್ರದ ಸಮಯದಲ್ಲಿ ರಕ್ತ ಬರುತ್ತಿದ್ದರೆ ಲಿಂಬೆ ಗಿಡದ ಬೇರು ಹಾಗೂ ಹೂವನ್ನು ಚೆನ್ನಾಗಿ ಅರೆದುಕೊಂಡು ಅಕ್ಕಿ ತೊಳೆದ ನೀರಿನಲ್ಲಿ ಬೆರೆಸಿ ಸೇವಿಸಬೇಕು. ಇದನ್ನು ನಿತ್ಯ ಮಾಡುವುದರಿಂದ ರಕ್ತ ಬರುವುದು ಕಡಿಮೆಯಾಗುತ್ತದೆ.

6. ರಾತ್ರಿ ವೇಳೆಯಲ್ಲಿ ಕಣ್ಣು ಮಂಜಾಗುತ್ತಿದ್ದರೆ ಲಿಂಬುವಿನ ಸಹಾಯವನ್ನು ಪಡೆಯಲೇ ಬೇಕು.
ಇರುಳುಗಣ್ಣು ಅಥವಾ ರಾತ್ರಿ ವೇಳೆಯಲ್ಲಿ ಕಣ್ಣು ಕಾಣಿಸದೆ ಇರುವ ಸಮಸ್ಯೆಗಳು ಇದ್ದರೆ ಒಂದು ಚಮಚ ನಿಂಬೆ ಹಣ್ಣಿನ ರಸಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ, ಅದಕ್ಕೆ ಪಚ್ಚ ಕರ್ಪೂರ ಬೆರೆಸಿ ಕಣ್ಣ ಕಪ್ಪು ಅಥವಾ ಕಾಡಿಗೆ ಹಚ್ಚುವ ತರಹ ಹಚ್ಚಬೇಕು. ಇದರಿಂದ ದೃಷ್ಠಿ ಚೂರುಕಾಗುವುದಲ್ಲದೆ, ಕಣ್ಣಿನ ಅರೋಗ್ಯಕ್ಕೂ ಒಳ್ಳೆಯದು.

7. ಕಿವಿ ನೋವಿನ ಸಮಸ್ಯೆಗಳಿಗೆ
ನಿಂಬೆ ರಸ, ತುಳಸಿ ರಸ ಒಂದು ಚಮಚ ಹಾಗೂ ಎಳ್ಳೆಣ್ಣೆಯನ್ನು ಮೂರನ್ನು ಸೇರಿಸಿ ಬಿಸಿಮಾಡಿ 2 ಹನಿ ಕಿವಿಗೆ ಹಾಕಬೇಕು. ಇದರಿಂದ ಕಿವಿ ನೋವು ಕಡಿಮೆಯಾಗುತ್ತದೆ.

8. ತಲೆನೋವು ಹಾಗೂ ಎದೆನೋವು
ತಲೆ ನೋವು, ಎದೆ ನೋವು ಹಾಗೂ ಎದೆ ಉರಿಯಂತ ಸಮಸ್ಯೆಗಳಿಗೆ ನಿಂಬೆರಸ ಹಾಗೂ ಜೇನುತುಪ್ಪ ಎರಡನ್ನು ಒಂದೇ ಪ್ರಮಾಣದಲ್ಲಿ ತೆಗೆದುಕೊಂಡು ಬೆರೆಸಿ ಕುಡಿಯಬೇಕು.

9. ನೆಗಡಿ ಹಾಗೂ ಗಂಟಲ ಬೇನೆಗೆ
ನೆಗಡಿ ಹಾಗೂ ಗಂಟಲಿನ ಬೇನೆಗೆ ಒಂದು ಲೋಟ ತುಸು ಬಿಸಿ ನೀರಿಗೆ ಲಿಂಬು ರಸ, ಜೇನುತುಪ್ಪ ಹಾಗೂ ಉಪ್ಪನ್ನು ಸೇರಿಸಿ ಕುಡಿಯಬೇಕು. ಇದು ಗಂಟಲಿನ ಹುಣ್ಣಿಗೂ ಚಿಟಿಕೆ ಅರಿಶಿಣದ ಜೊತೆ ಸೇವಿಸಿದರೆ ಇದು ಉತ್ತಮವಾಗಿದೆ.

10. ವಾಂತಿ
ಹೊಟ್ಟೆಯಲ್ಲಿ ತೊಂದರೆಯಾಗಿ ಪದೇ ಪದೇ ವಾಂತಿಯಾಗುತ್ತಿದ್ದರೆ ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಹಿಂಡಿ, ಜೊತೆಗೆ ಜೀರಿಗೆ ಪುಡಿ ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯಬೇಕು.

ಸೌಂದರ್ಯ ಹಾಗೂ ಚರ್ಮದ ಕಾಂತಿಗೆ ಲಿಂಬುವಿನ ಹಲವು ಕೊಡುಗೆಗಳ ಬಗ್ಗೆ ತಿಳಿಯೋಣ

  • ಪ್ರತಿದಿನ ಬೆಳಿಗ್ಗೆ ಮಜ್ಜಿಗೆಗೆ ಒಂದು ಚಮಚ ನಿಂಬು ರಸ ಹಿಂಡಿ ಕುಡಿದರೆ ಅರೋಗ್ಯಕ್ಕೂ ಉತ್ತಮ ಹಾಗೂ ಚರ್ಮದ ಕಾಂತಿಯನ್ನು ವೃದ್ಧಿಸುವಲ್ಲಿ ಕೂಡ ಸಹಾಯಕವಾಗಿದೆ.
  • ಚಳಿಗಾಲದಲ್ಲಿ ಅಥವಾ ಶೀತದ ಹವಾಮಾನದಲ್ಲಿ ಚರ್ಮ ಒಡೆಯುವ ಸಮಸ್ಯೆ ಇರುತ್ತದೆ. ಅದಕ್ಕಾಗಿ ಒಂದು ಸುಲಭ ಮನೆಮದ್ದು ಎಂದರೆ ಹಾಲಿನ ಕೆನೆಗೆ ಲಿಂಬು ರಸವನ್ನು ಸೇರಿಸಿ, ಚರ್ಮ ಒಡೆದಿರುವ ಕಡೆ ಹಚ್ಚಿಕೊಳ್ಳಬೇಕು.
  • ತೆಂಗಿನ ಎಣ್ಣೆಯೊಂದಿಗೆ ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಹಚ್ಚುವುದರಿಂದ ಚರ್ಮವು ಮೃದುವಾಗಿ ಉತ್ತಮವಾಗಿರುತ್ತದೆ.
  • ಮುಖದ ಮೇಲಿನ ಮೊಡವೆಗಳಿಗೆ ಸೂಕ್ತ ಮದ್ದನ್ನು ತಯಾರಿಸುವ ಬಗೆಯನ್ನು ತಿಳಿಯೋಣ. ಮೊದಲಿಗೆ ಹಾಲನ್ನು ಚೆನ್ನಾಗಿ ಕಾಯಿಸಿ, ಒಂದು ಅರ್ಧ ಲೋಟ ಹಾಲಿಗೆ ನಿಂಬೆ ರಸ ಹಾಗೂ 2 ಹನಿ ಗ್ಲಿಸರಿನ್ ಹಾಕಿ ಬೆರೆಸಿ ಮುಖಕ್ಕೆ ಹಚ್ಚಿ ಮಲಗಬೇಕು. ಬೆಳಿಗ್ಗೆ ಕಡಲೆಹಿಟ್ಟನ್ನು ಬಳಸಿ ಮುಖ ಶುಚಿಗೊಳಿಸಿದರೆ ಮೊಡವೆಗಳು ಮಾಯವಾಗಿ ಚರ್ಮವು ಮೃದುವಾಗುತ್ತದೆ.

ನಿಂಬೆ ಹಣ್ಣಿನ ಬಗ್ಗೆ ಎಷ್ಟು ವಿವರಿಸಿದರೂ ಅದು ಕಡಿಮೆಯೇ….

ನಿಂಬೆ ಹಣ್ಣನ್ನು ಗಾಯ ವಾಸಿ ಮಾಡಲು ಸಹ ಬಳಸುತ್ತಾರೆ. ನಿಂಬೆ ರಸವನ್ನು ಗಾಯಕ್ಕೆ ಹಚ್ಚಿದರೆ ರೋಗಾಣುಗಳನ್ನು ಕೊಂದು ಬೇಗ ಗಾಯ ವಾಸಿಯಾಗುವಂತೆ ಮಾಡುತ್ತದೆ. ವಿಟಮಿನ್ ಸಿ ಇರುವುದರಿಂದ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ, ಇದನ್ನು ಆಹಾರದಲ್ಲಿ ನಿತ್ಯ ಬಳಸುವುದರಿಂದ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಬಹುದು. ಗರ್ಭಿಣಿಯರು ಲಿಂಬು ರಸವನ್ನು ಸ್ವೀಕರಿಸುವುದರಿಂದ ಮಗುವಿನ ಮೆದುಳು ಹಾಗೂ ಮೂಳೆಗಳ ಬೆಳವಣಿಗೆ ಉತ್ತಮವಾಗಿ ಆಗುತ್ತದೆ ಹಾಗೂ ಸುಲಭವಾದ ರೀತಿಯಲ್ಲಿ ಹೆರಿಗೆ ಕೂಡ ಆಗುತ್ತದೆ.

ಹಲ್ಲು ನೋವಿದ್ದಾಗಲೂ ನಿಂಬೆ ರಸವನ್ನು ವಸಡಿಗೆ ಹಚ್ಚಿಕೊಳ್ಳಬೇಕು. ಮಾಂಸಾಹಾರಿಗಳು ಮೀನನ್ನು ತಿಂದ ಮೇಲೆ ಮೂಳೆಗಳು ಹೊಟ್ಟೆಗೆ ಸೇರಿದ್ದರೆ, ಆ ಮೂಳೆಗಳನ್ನು ಸುಲಭವಾಗಿ ವಿಸರ್ಜಿಸಲು ಲಿಂಬು ರಸ ಅಗತ್ಯವಾಗಿದೆ. ಮೂಳೆ ಹಾಗೂ ಕೀಲು ನೋವಿಗೂ ನಿಂಬು ಹಣ್ಣು ಉತ್ತಮವಾಗಿದೆ. ಇನ್ನೂ ಅಪ್ಪೆಹುಳಿ, ಲಿಂಬು ಉಪ್ಪಿನಕಾಯಿ, ಲಿಂಬು ಪಾನೀಯ, ಲಿಂಬು ಚಾಟ್ ಇನ್ನೂ ಹಲವು ಖಾದ್ಯಗಳಲ್ಲೂ ಉಪಯುಕ್ತವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Recent Posts

ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು

ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು. AI Image ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ…

12 hours ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

1 day ago

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು. AI Image ನಮ್ಮ ದೇಹದ ಒಂದು ಮುಖ್ಯ…

2 days ago

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು. AI Image ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ…

3 days ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

4 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

5 days ago

This website uses cookies.