Categories: Uncategorized

ಹಲಸಿನ ಹಣ್ಣಿನ (Jackfruit) ಸಿಹಿಯಾದ ಖಾದ್ಯಗಳು

Spread the love

ಹಲಸಿನ ಹಣ್ಣಿನ (Jackfruit) ಸಿಹಿಯಾದ ಖಾದ್ಯಗಳು. AI Image

ಹಲಸಿನ ಹಣ್ಣು ನಮ್ಮೆಲ್ಲರ ಪ್ರಿಯವಾದ ರುಚಿಕರ ಹಣ್ಣು. ಹಲಸಿನ ಹಣ್ಣನ್ನು ಕತ್ತರಿಸಿ ತೊಳೆಗಳನ್ನು ತೆಗೆದು ತಿನ್ನುವ ಬಗೆಯೇ ವಿಭಿನ್ನ ಅನುಭವವನ್ನು ನೀಡುತ್ತದೆ. ಖಾಲಿ ಸಿಹಿಯಾದ ತೊಳೆಗಳನ್ನು ತಿನ್ನುವುದಲ್ಲದೆ, ತೊಳೆಗಳ ಅನೇಕ ಖಾದ್ಯಗಳನ್ನು ಸಹ ನಾವು ತಯಾರಿಸಬಹುದು. ಹಾಗೆಯೇ ಹಲಸಿನ ಹಣ್ಣಿನ ಬೀಜಗಳಿಂದ ಕೂಡ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಅಂತಹ ರುಚಿಕರ ಖಾದ್ಯಗಳ ಬಗೆಗಿನ ತಯಾರಿಕಾ ವಿಧಾನಗಳನ್ನು ನಾವು ಇಂದು ಈ ಲೇಖನದಲ್ಲಿ ವಿಶ್ಲೇಷಿಸೋಣ.

ಹಲಸಿನ ಹಣ್ಣಿನ ಪಾನಕ

ಬೇಕಾಗುವ ಪದಾರ್ಥಗಳು

  • ಹಲಸಿನ ಹಣ್ಣಿನ ತೊಳೆಗಳು 1 ಕಪ್
  • ಸಕ್ಕರೆ – ಸಿಹಿಗೆ ಅನುಗುಣವಾಗಿ
  • ಲಿಂಬು 1
  • ಉಪ್ಪು

ಮಾಡುವ ವಿಧಾನ
ಹಲಸಿನ ಹಣ್ಣಿನ ತೊಳೆಗಳನ್ನು ಚಿಕ್ಕದಾಗಿ ಕತ್ತರಿಸಿಕೊಂಡು, ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೇಯಿಸಿದ ಹಲಸಿನ ಹಣ್ಣನ್ನು ಕಿವುಚಿ, ಹಲಸಿನ ಮಿಶ್ರಣವನ್ನು ತಯಾರಿಸಬೇಕು. ಇನ್ನೊಂದು ಕಡೆಯಲ್ಲಿ ಓಲೆಯ ಮೇಲೆ ಎರಡು ಲೋಟ ನೀರನ್ನು ಕುದಿಯಲು ಇಡಬೇಕು. ಕುಡಿಯುತ್ತಿರುವ ನೀರಿಗೆ ಸಕ್ಕರೆಯನ್ನು ಹಾಗೂ ಲಿಂಬು ರಸವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಈಗ ಮೊದಲೇ ಮಾಡಿಕೊಂಡ ಹಲಸಿನ ಹಣ್ಣಿನ ಮಿಶ್ರಣಕ್ಕೆ ಸಕ್ಕರೆ ಹಾಗೂ ಹುಳಿಯ ಸಿರಪ್ ಅನ್ನು ಬೆರೆಸಬೇಕು. ಅನಂತರ ಪಾನೀಯದ ಹದಕ್ಕೆ ಬರುವವರೆಗೂ ನೀರನ್ನು ಬೆರೆಸಬೇಕು. ನಂತರ ಬೇಕಾದರೆ ಮತ್ತೆ ಸಕ್ಕರೆ, ಹಾಗೂ ತಣ್ಣಿರನ್ನು ಬೆರೆಸಿ ಪಾನೀಯವನ್ನು ತಯಾರಿಸಬೇಕು. ಇದು ಬೇಗನೆ ಹಸುವನ್ನು ನಿಗಿಸುತ್ತದೆ.

ಹಲಸಿನ ಹಣ್ಣಿನ ಇಡ್ಲಿ

ಬೇಕಾಗುವ ಪದಾರ್ಥಗಳು

  • ಹಲಸಿನ ತೊಳೆಗಳು 2 ಕಪ್
  • ಇಡ್ಲಿ ಅಕ್ಕಿ 2 ಕಪ್
  • ಕಾಯಿ ತುರಿ 1 ಕಪ್
  • ಬೆಲ್ಲ ½ ಕಪ್
  • ಉಪ್ಪು

ಮಾಡುವ ವಿಧಾನ
ಅಕ್ಕಿಯನ್ನು ಐದರಿಂದ ಆರು ಗಂಟೆ ನೆನೆಯಲು ಬಿಡಬೇಕು. ನೆನೆಸಿದ ಅಕ್ಕಿಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಮತ್ತೊಂದು ಕಡೆ ಮಿಕ್ಸಿ ಜಾರಿಗೆ ಕಾಯಿ ತುರಿ ಹಾಗೂ ಬೆಲ್ಲವನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಅಲ್ಲಿ ಹಲಸಿನ ಹಣ್ಣಿನ ತೊಳೆಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ ರುಬ್ಬಿದ ಅಕ್ಕಿಯನ್ನು ಸೇರಿಸಿ ಒಂದು ರಾತ್ರಿ ಬಿಡಬೇಕು. ಬೆಳಿಗ್ಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಇಡ್ಲಿಯನ್ನು ಬೇಯಿಸಬೇಕು. ಇಡ್ಲಿಯನ್ನು ಬೇಯಿಸುವಾಗ ಇಡ್ಲಿ ತಟ್ಟೆಗೆ ತುಪ್ಪವನ್ನು ಹಚ್ಚಿ, ಇಡ್ಲಿ ಬೇಯಿಸಿದರೆ ಒಳ್ಳೆಯ ಸ್ವಾದವನ್ನು ನೀಡುತ್ತದೆ. ಹಲಸಿನ ಸಿಹಿ ಇಡ್ಲಿಯನ್ನು ತುಪ್ಪದ ಜೊತೆಗೆ ತಿನ್ನುವುದು ಅತಿ ರುಚಿಕರ.

ಹಲಸಿನ ಹಣ್ಣಿನ ದೋಸೆ

ಬೇಕಾಗುವ ಪದಾರ್ಥಗಳು

  • ಹಲಸಿನ ತೊಳೆಗಳು 2 ಕಪ್
  • ನೆನೆಸಿದ ಅಕ್ಕಿ 1 ಕಪ್
  • ಕಾಯಿ ತುರಿ ½ ಕಪ್
  • ಬೆಲ್ಲ – ( ಹಲಸಿನ ಸಿಹಿಯ ಅನುಸಾರವಾಗಿ )
  • ಉಪ್ಪು
  • ಎಣ್ಣೆ – ದೋಸೆಯನ್ನು ಹುರಿಯಲು

ಮಾಡುವ ವಿಧಾನ
ದೋಸೆಗೆ ಅಕ್ಕಿಯನ್ನು ಐದರಿಂದ ಆರು ತಾಸುಗಳು ನೆನೆಸಿಕೊಳ್ಳಬೇಕು. ಹಲಸಿನ ತೊಳೆಗಳನ್ನು ಸಣ್ಣಗೆ ಹೆಚ್ಚಿಕೊಂಡು, ಅಕ್ಕಿ, ಬೆಲ್ಲ ಹಾಗೂ ಕಾಯಿ ತುರಿಯೊಂದಿಗೆ ರುಬ್ಬಿಕೊಳ್ಳಬೇಕು. ಉದ್ದಿನ ದೋಸೆಯ ಹದಕ್ಕೆ ರುಬ್ಬಿಕೊಳ್ಳಬೇಕು. ಒಂದು ರಾತ್ರಿ ಹಾಗೆ ಬಿಟ್ಟು, ಮರುದಿನ ಬೆಳಿಗ್ಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಬೇಕು. ಬಿಸಿ ಕಾವಲಿಗೆ ಎಣ್ಣೆಯನ್ನು ಸವರಿ, ದೋಸೆಯನ್ನು ಹುಯ್ಯಬೇಕು. ಅಲ್ಲಿಗೆ ಬಿಸಿ ಬಿಸಿಯಾದ ಸಿಹಿ ಹಲಸಿನ ಹಣ್ಣಿನ ದೋಸೆ ಸವಿಯಲು ಸಿದ್ದವಾಗುತ್ತದೆ.

ಹಲಸಿನ ಹಣ್ಣಿನ ಪಾಯಸ

ಬೇಕಾಗುವ ಪದಾರ್ಥಗಳು

  • ಹಲಸಿನ ಹಣ್ಣಿನ ತೊಳೆಗಳು 2 ಕಪ್
  • ತೆಂಗಿನ ಕಾಯಿ ತುರಿ 2 ಕಪ್
  • ಬೆಲ್ಲ ½ ಕಪ್
  • ನೆನೆಸಿದ ಅಕ್ಕಿ ¼ ಕಪ್
  • ಏಲಕ್ಕಿ 4
  • ತುಪ್ಪ 2 ಚಮಚ

ಮಾಡುವ ವಿಧಾನ
ಮೊದಲಿಗೆ ಕಾಯಿ ಹಾಲನ್ನು ಸಿದ್ದಪಡಿಸಿಕೊಳ್ಳಬೇಕು. ಕಾಯಿ ತುರಿಗೆ 4 ಏಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿದ ಕಾಯಿತುರಿಯನ್ನು ಹಿಂಡಿ ಹಾಲನ್ನು ತೆಗೆಯಬೇಕು. ಹಾಗೆಯೇ ನೆನೆಸಿದ ಅಕ್ಕಿಯನ್ನು ರುಬ್ಬಿಕೊಂಡಿರಬೇಕು. ಇನ್ನೊಂದು ಕಡೆಯಲ್ಲಿ ಒಂದು ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಹಲಸಿನ ಹಣ್ಣಿನ ತುಂಡುಗಳನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಹುರಿದ ಹಲಸಿನ ಹಣ್ಣಿಗೆ ಬೆಲ್ಲ, ತೆಂಗಿನ ಹಾಲನ್ನು ಸೇರಿಸಿ, ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಹಲಸಿನ ಹಣ್ಣನ್ನು ಬೇಯಿಸಬೇಕು. ನಂತರ ರುಬ್ಬಿದ ಅಕ್ಕಿಯ ಮಿಶ್ರಣವನ್ನು ಹಾಕಿ ಕೈ ಆಡಿಸುತ್ತಾ ಇರಬೇಕು. ಚೆನ್ನಾಗಿ ಕುಡಿ ಬಂದ ನಂತರ ಏಲಕ್ಕಿ ಪುಡಿಯನ್ನು ಬೆರೆಸಿ, ರುಚಿಯಾದ ಹಲಸಿನ ಹಣ್ಣಿನ ಪಾಯಸವನ್ನು ಸವಿಯಬೇಕು.

ಹಲಸಿನ ಹಣ್ಣಿನ ಮೂಳ್ಕು

ಬೇಕಾಗುವ ಪದಾರ್ಥಗಳು

  • ನೆನೆಸಿದ ಅಕ್ಕಿ 2 ಕಪ್
  • ಹಲಸಿನ ಹಣ್ಣು 2 ಕಪ್
  • ಬೆಲ್ಲ ½ ಕಪ್
  • ಕಾಯಿ ತುರಿ ½ ಕಪ್
  • ಉಪ್ಪು
  • ಎಣ್ಣೆ
  • ಏಲಕ್ಕಿ 3

ಮಾಡುವ ವಿಧಾನ
ಒಂದು ಮಿಕ್ಸಿ ಜಾರಿಗೆ ಹೆಚ್ಚಿಕೊಂಡ ಹಲಸಿನ ಹಣ್ಣನ್ನು ಸೇರಿಸಿ, ಜೊತೆಗೆ ಬೆಲ್ಲವನ್ನು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಮೇಲೆ ಹೇಳಿದ ಪ್ರಮಾಣದಲ್ಲಿ ನೆನೆಸಿದ ಅಕ್ಕಿ, ಕಾಯಿ ತುರಿ, ಹಾಗೂ ಏಲಕ್ಕಿಯನ್ನು ಹಾಕಿ ರುಬ್ಬಿಕೊಳ್ಳಬೇಕು. ನೀರನ್ನು ಬಳಸದೆ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಹಿಟ್ಟನ್ನು ಪಾತ್ರೆಗೆ ವರ್ಗಾಯಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಕಲಸಿಕೊಳ್ಳಬೇಕು. ಕಾದ ಬಿಸಿ ಎಣ್ಣೆಗೆ ಸ್ವಲ್ಪ ಹಿಟ್ಟನ್ನು ಉಂಡೆ ಆಕಾರದಲ್ಲಿ ಬಿಡಬೇಕು. ಬಂಗಾರದ ಕಂದು ಬಣ್ಣಕ್ಕೆ ತಿರುಗಿದ ತಕ್ಷಣ ಎಣ್ಣೆಯಿಂದ ಮೂಳ್ಕನ್ನು ತೆಗೆದು ಒಂದು ತಟ್ಟೆಗೆ ವರ್ಗಾಯಿಸಿಕೊಂಡು, ಸವಿಯಬೇಕು. ಇದು ಸಂಜೆಯ ಹೊತ್ತಿಗೆ ತಿನ್ನಲು ಉತ್ತಮ ತಿಂಡಿಯಾಗಿದೆ.

ಹಲಸಿನ ಹಣ್ಣಿನ ಬೀಜದ ಪಲ್ಯ

ಬೇಕಾಗುವ ಪದಾರ್ಥಗಳು

  • ಹಲಸಿನ ಬೀಜ 1 ಕಪ್
  • ಈರುಳ್ಳಿ 1
  • ಟೊಮೆಟೊ 1
  • ಬ್ಯಾಡಗಿ ಮೆಣಸು 4
  • ತೆಂಗಿನ ಕಾಯಿ ತುರಿ ½ ಕಪ್
  • ಕೊತ್ತಂಬರಿ ಬೀಜ 1 ಚಮಚ
  • ಎಣ್ಣೆ
  • ಸಾಸಿವೆ ½ ಚಮಚ
  • ಉದ್ದಿನಬೇಳೆ ½ ಚಮಚ
  • ಕರಿಬೇವು
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಹಲಸಿನ ಬೀಜವನ್ನು ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿಕೊಳ್ಳಬೇಕು. ಬೆಂದ ನಂತರ ಅದನ್ನು ಎರಡು ತುಂಡಾಗಿ ಕತ್ತರಿಸಿಕೊಳ್ಳಬೇಕು. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಒಂದು ಈರುಳ್ಳಿಯನ್ನು ಸೇರಿಸಿ ಹುರಿದುಕೊಳ್ಳಬೇಕು. ನಂತರ ಒಂದು ಟೊಮೆಟೊವನ್ನು ಸೇರಿಸಿ ಮೆತ್ತಗೆ ಆಗುವ ತನಕ ಹುರಿಯಬೇಕು. ನಂತರ ಮೇಲೆ ಹೇಳಿದ ಪ್ರಮಾಣದಲ್ಲಿ ಬ್ಯಾಡಗಿ ಮೆಣಸು, ಕೊತ್ತಂಬರಿ ಕಾಳು, ತೆಂಗಿನ ತುರಿ, ಹಾಗೂ ಬೇಯಿಸಿದ ಹಲಸಿನ ಬೀಜಗಳಲ್ಲಿ ಒಂದೆರಡನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಹುರಿದ ಪದಾರ್ಥಗಳು ತಣಿದ ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನಬೇಳೆ ಹಾಗೂ ಕರಿಬೇವಿನ ಒಗ್ಗರಣೆ ಕೊಟ್ಟು, ಬೇಯಿಸಿದ ಹಲಸಿನ ಬೀಜಗಳ ತುಂಡುಗಳನ್ನು ಸೇರಿಸಿ ಹುರಿಯಬೇಕು. ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ, ಸ್ವಲ್ಪ ನೀರನ್ನು ಸೇರಿಸಿ ಕುದಿಸಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕುದಿಸಿದರೆ, ಹಲಸಿನ ಹಣ್ಣಿನ ಬೀಜದ ಪಲ್ಯ ಸವಿಯಲು ಸಿದ್ದವಾಗುತ್ತದೆ.

ಹಲಸಿನ ಹಣ್ಣಿನ ಬೀಜದ ದೋಸೆ

ಬೇಕಾಗುವ ಪದಾರ್ಥಗಳು

  • ಹಲಸಿನ ಬೀಜ 16
  • ದೋಸೆ ಅಕ್ಕಿ 1 ಕಪ್
  • ಉದ್ದಿನ ಬೇಳೆ ¼ ಕಪ್
  • ತೆಂಗಿನ ಕಾಯಿ ತುರಿ ½ ಕಪ್
  • ಬೆಲ್ಲ ¼ ಕಪ್
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೇಲೆ ಹೇಳಿದ ಪ್ರಮಾಣದಲ್ಲಿ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ಐದರಿಂದ ಆರು ತಾಸುಗಳು ನೆನೆಯಲು ಬಿಡಬೇಕು. ಈಗ ಹಲಸಿನ ಹಣ್ಣಿನ ಬೀಜಗಳನ್ನು ಬೇಯಿಸಿಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿ ಹಾಗೂ ಉದ್ದಿನಬೇಳೆಯನ್ನು ಸೇರಿಸಿ, ಜೊತೆಗೆ ಬೆಲ್ಲ, ಬೇಯಿಸಿ ಸಿಪ್ಪೆ ತೆಗೆದುಕೊಂಡ ಹಲಸಿನ ಹಣ್ಣಿನ ಬೀಜಗಳು, ಕಾಯಿತುರಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಒಂದು ರಾತ್ರಿ ಹಾಗೆಯೇ ಇಟ್ಟು ಮರುದಿನ ಬೆಳಿಗ್ಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಕಲಸಬೇಕು. ನಂತರ ಕಾದ ತವಾಗೆ ಎಣ್ಣೆ ಸವರಿ ದೋಸೆಯನ್ನು ಹುಯ್ಯಬೇಕು. ಅಲ್ಲಿಗೆ ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಬೀಜದ ದೋಸೆ ಸವಿಯಲು ಸಿದ್ದವಾಗುತ್ತದೆ.

ಹಲಸಿನ ಹಣ್ಣಿನ ಬೀಜದ ಚಟ್ನಿಪುಡಿ

ಬೇಕಾಗುವ ಪದಾರ್ಥಗಳು

  • ಒಣಗಿದ ಹಲಸಿನ ಹಣ್ಣಿನ ಬೀಜ 15
  • ಹುರಿಗಡಲೆ 3 ಚಮಚ
  • ಬ್ಯಾಡಗಿ ಮೆಣಸಿನಕಾಯಿ 6
  • ಬೆಳ್ಳುಳ್ಳಿ ಎಸಳುಗಳು 4
  • ಜೀರಿಗೆ 1 ಚಮಚ
  • ಹುಣಸೆಹಣ್ಣು ಸ್ವಲ್ಪ
  • ಉಪ್ಪು

ಮಾಡುವ ವಿಧಾನ
ಹಲಸಿನ ಹಣ್ಣಿನ ಬೀಜವನ್ನು ಚೆನ್ನಾಗಿ ಹುರಿದು, ಸಿಪ್ಪೆಯನ್ನು ತೆಗೆಯಬೇಕು. ಕಾವಲಿಗೆ ಸ್ವಲ್ಪ ಎಣ್ಣೆ ಹಾಕಿ ಒಣಮೆಣಸಿನಕಾಯಿ, ಜೀರಿಗೆ, ಕಡಲೆಬೇಳೆ, ಬೆಳ್ಳುಳ್ಳಿ ಎಲ್ಲವನ್ನು ಕ್ರಮವಾಗಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಮಿಕ್ಸಿ ಜಾರಿಗೆ ಹುರಿದ ಪದಾರ್ಥಗಳನ್ನು, ಜೊತೆಗೆ ಹುರಿದ ಹಲಸಿನ ಬೀಜವನ್ನು, ಸ್ವಲ್ಪ ಹುಳಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಬೇರೆ ಪಾತ್ರೆಗೆ ವರ್ಗಯಿಸಿಕೊಂಡರೆ ರುಚಿಕರವಾದ ಹಲಸಿನ ಬೀಜದ ಚಟ್ನಿಪುಡಿ ಸವಿಯಲು ಸಿದ್ದವಾಗುತ್ತದೆ.

ಹಲಸಿನ ಬೀಜವನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದು ಕೂಡ ತುಂಬಾ ರುಚಿಕರವಾಗಿರುತ್ತದೆ. ಹಾಗೆಯೇ ಉಪ್ಪಿನ ಜೊತೆಗೆ ಹಲಸಿನ ಕಾಯಿ ಬೀಜವನ್ನು ಬೇಯಿಸಿ ತಿನ್ನುವುದು ಕೂಡ ಬಹಳ ಸ್ವಾದ ಭರಿತವಾಗಿರುತ್ತದೆ. ಅಲ್ಲದೇ ಹಲಸಿನ ಬೀಜಗಳನ್ನು ನಿತ್ಯ ಮಾಡುವ ಸಾಂಭಾರುಗಳಲ್ಲಿ ಬಳಸಬಹುದು. ಅದು ಕೂಡ ಒಳ್ಳೆಯ ರುಚಿಯನ್ನು ನೀಡುತ್ತದೆ. ಹೀಗೆ ಇನ್ನೂ ಅನೇಕ ಹಲಸಿನ ಹಣ್ಣಿನ ಹಾಗೂ ಬೀಜದ ರುಚಿಕರ ಖಾದ್ಯಗಳನ್ನು ತಯಾರಿಸುತ್ತಾರೆ. ಇಂದಿನ ಲೇಖನದಲ್ಲಿ ಮುಖ್ಯವಾದ ಕೆಲವನ್ನು ತಯಾರಿಕಾ ವಿಧಾನದೊಂಡಿಗೆ ವಿಶ್ಲೇಷಿಸಿದ್ದೇವೆ. ಬೇಸಿಗೆಯಲ್ಲಿ ಈ ರುಚಿಕರ ಖಾದ್ಯಗಳನ್ನು ತಯಾರಿಸಿ, ಸವಿಯಿರಿ ಎಂಬುದು ನಮ್ಮ ಆಶಯ.

ಹಲಸಿನ ಕಾಯಿಯ ರುಚಿಕರ ಖಾದ್ಯಗಳ ಬಗೆಗಿನ ಲೇಖನವನ್ನು ಒಮ್ಮೆ ಓದಿರಿ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Recent Posts

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು (Healthy traditional drinks)

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು. AI…

21 hours ago

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

2 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

3 days ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

4 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

5 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

6 days ago

This website uses cookies.