ಪ್ರತಿದಿನ ಸೇಬು ತಿನ್ನುವುದರಿಂದ ಆರೋಗ್ಯ ಲಾಭಗಳಿವೆಯೇ? ಉಪಯೋಗವನ್ನು ಓದಿ ತಿಳಿದುಕೊಳ್ಳಿ

Spread the love

ಪ್ರತಿದಿನ ಸೇಬು ತಿನ್ನುವುದರಿಂದ ಆರೋಗ್ಯ ಲಾಭಗಳಿವೆಯೇ? ಉಪಯೋಗವನ್ನು ಓದಿ ತಿಳಿದುಕೊಳ್ಳಿ

ಸೇಬು ಹಣ್ಣು ಅತ್ಯಂತ ಸ್ವಾದವುಳ್ಳ, ಸಿಹಿಯಾದ ಹಣ್ಣು. ಸೇಬುವನ್ನು ಹಸಿಯಾಗಿ ತಿನ್ನಬಹುದು, ಇಲ್ಲವೇ ಜ್ಯೂಸ್, ಮಿಲ್ಕ್ ಶೇಕ್, ಸಲಾಡ್, ಟೀ, ರಾಸಾಯನವನ್ನು ತಯಾರಿಸಿ ಕೂಡ ಸೇವಿಸಬಹುದು. ಅನೇಕ ರೀತಿಯಲ್ಲಿ ಸಮಗೆ ಸೇಬುಹಣ್ಣು ಸಹಾಯಕವಾಗಿದ್ದು, ಇದರ ಸೇವನೆಯು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಇಂದಿನ ಲೇಖನದಲ್ಲಿ ಸೇಬು ಹಣ್ಣಿನ ಪರಿಚಯ, ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.

ಸೇಬುಹಣ್ಣಿನ ಕೆಲವು ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು – ಮಾಲಸ್ ಡೊಮೆಸ್ಟಿಕಾ ( Malus ದೋಮೆಸ್ತಿಕಾ )
ಆಂಗ್ಲ ಹೆಸರು – ಆಪಲ್ (Apple)

ಸೇಬು ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಎ, ಬಿ, ಸಿ ಇದ್ದು, ನಾರು, ಕಬ್ಬಿಣ, ಕ್ಯಾಲ್ಸಿಯಂ, ಪ್ರೊಟೀನ್, ಸೋಡಿಯಂ, ಪೊಟ್ಯಾಸಿಯಂ, ರಂಜಕ, ತಾಮ್ರ, ಗಂಧಕ ಹಾಗೂ ಪಾಸ್ಫರಸ್ ಕೂಡ ಇದೆ. ಸೇಬು ದೇಹದ ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಅನೇಕ ರೀತಿಯ ರೋಗನಿರೋಧಕ ಶಕ್ತಿಯನ್ನು ಹೊಂದಿದೆ.

ಸೇಬುಹಣ್ಣಿನ ಕೆಲವು ಆರೋಗ್ಯಕರ ಉಪಯೋಗಗಳು

ತಲೆನೋವಿಗೆ ಸೇಬು ಹಣ್ಣಿನ ಪರಿಹಾರಗಳು

  • ಇಂದಿನ ದಿನಮಾನದಲ್ಲಿ ಅಧಿಕವಾಗಿ ಕಾಡುವ ಸಮಸ್ಯೆ ಎಂದರೆ ತಕ್ಷಣಕ್ಕೆ ಬರುವ ತಲೆನೋವು. ತಲೆನೋವು ಬಂತೆಂದರೆ ನಾವು ಮಾತ್ರೆಗಳ ಮೊರೆ ಹೋಗುತ್ತೇವೆ. ನಿಜವಾಗಿಯೂ ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳುವುದು ಉತ್ತಮವಲ್ಲ. ತಲೆನೋವಿಗೆ ಸೇಬುವಿನಿಂದ ನಾವು ಪರಿಹಾರವನ್ನು ಪಡೆದುಕೊಳ್ಳಬಹುದು. ತಲೆ ನೋವು ಬಂದಾಗ ಸೇಬು ಹಣ್ಣನ್ನು ಸೇವಿಸುವುದು ಉತ್ತಮವಾಗಿದೆ. ಹಾಗೆಯೇ ಸೇಬು ಹಣ್ಣಿಗೆ ಉಪ್ಪನ್ನು ಹಚ್ಚಿ, ಸಿಪ್ಪೆಯ ಸಮೇತ ಅಗೆದು ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಹಣ್ಣಿನ ಸೇವನೆಯು ಉತ್ತಮ ಪರಿಹಾರಗಳನ್ನು ನೀಡುತ್ತದೆ.

ಕಫ ಕರಗುವಿಕೆಗೆ ಸೇಬು ಹಣ್ಣು ಉತ್ತಮ ಮದ್ದಾಗಿದೆ

  • ದೀರ್ಘ ಕಾಲದ ಕಫವು ಗಟ್ಟಿಯಾಗಿದ್ದರೆ, ಕಫವನ್ನು ಕರಗಿಸಲು ಸೇಬು ಹಣ್ಣು ಉತ್ತಮ ಮದ್ದಾಗಿದೆ. ಕಫ ಕಟ್ಟುವ ಸಮಸ್ಯೆ ಹೊಂದಿರುವವರು, ಪ್ರತಿದಿನ ಊಟದ ನಂತರ ಒಂದು ಸೇಬುಹಣ್ಣನ್ನು ಸೇವಿಸಬೇಕು. ಇದನ್ನು ಸತತವಾಗಿ ಒಂದು ತಿಂಗಳ ಕಾಲ ಸೇವಿಸಬೇಕು. ಇದರಿಂದ ಕಟ್ಟಿದ ಕಫ ಕರಗುತ್ತದೆ, ಹಾಗೆಯೇ ಕಫ ಗಟ್ಟಿಯಾಗುವ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ.

ಅತಿಸಾರದ ಸಮಸ್ಯೆಗೆ ಸೇಬುವಿನ ಉತ್ತಮ ಪರಿಹಾರಗಳು

  • ಮಕ್ಕಳಲ್ಲಿ ಹೆಚ್ಚಾಗಿ ಆಜೀರ್ಣದ ಕಾರಣದಿಂದ ಭೇದಿಯ ಸಮಸ್ಯೆಗಳು ಎದುರಾಗುತ್ತದೆ. ಮಕ್ಕಳಿಗೆ ಅತಿಸಾರದ ಸಮಸ್ಯೆಗಳು ಕಂಡು ಬಂದಾಗ ಸೇಬು ಹಣ್ಣನ್ನು ತುರಿದು ಹಾಲಿನೊಡನೆ ಬೆರೆಸಿ ತಿನ್ನಿಸಬೇಕು. ಇದು ತ್ವರಿತವಾಗಿ ಸಮಸ್ಯೆಗಳನ್ನು ದೂರಪಡಿಸುತ್ತದೆ. ಇನ್ನೂ ಸಣ್ಣ ಮಕ್ಕಳಿಗೆ ತಿನ್ನಲು ಕಷ್ಟವಾಗುತ್ತದೆ. ಆಗ ಸೇಬುಹಣ್ಣಿನ ರಸವನ್ನು ಹಿಂಡಿ ಹಾಲಿನೊಡನೆ ಬೆರೆಸಿ ಕುಡಿಸಬೇಕು. ಇದು ಅತ್ಯಂತ ಪರಿಣಾಮಕಾರಿಯಾದಂತಹ ಮನೆಮದ್ದಾಗಿದೆ.
  • ಅತಿಸಾರವಾದಾಗ ಸೇಬುಹಣ್ಣನ್ನು ತುಂಡಾಗಿ ಕತ್ತರಿಸಿ, ನೀರಿನಲ್ಲಿ ಹಾಕಿ ಬೇಯಿಸಿಕೊಳ್ಳಬೇಕು. ಚೆನ್ನಾಗಿ ಬೆಂದ ಮೇಲೆ ಒಲೆಯನ್ನು ಆರಿಸಿ, ಶೋಧಿಸಿಕೊಳ್ಳಬೇಕು. ಶೋಧಿಸಿದ ನೀರನ್ನು ಕುಡಿಯುವುದರಿಂದ ಭೇದಿಯು ನಿಯಂತ್ರಣಕ್ಕೆ ಬರುತ್ತದೆ.

ಹೊಟ್ಟೆಯ ಉತ್ತಮ ಆರೋಗ್ಯಕ್ಕೆ ಸೇಬುವಿನ ಉಪಯೋಗಗಳು

  • ಹೊಟ್ಟೆಯಲ್ಲಿನ ಹುಣ್ಣಿನ ಸಮಸ್ಯೆಗೆ ಸೇಬುವು ಉತ್ತಮ ಪರಿಹಾರಗಳನ್ನು ನೀಡುತ್ತದೆ. ಪ್ರತಿದಿನ ಒಂದು ಸೇಬುವನ್ನು ಸೇವಿಸುವುದರಿಂದ ಕ್ರಮೇಣ ಹೊಟ್ಟೆಯಲ್ಲಿನ ಹುಣ್ಣುಗಳು ಕಡಿಮೆಯಾಗುತ್ತದೆ. ಹಾಗೂ ಸೇಬು ಹಣ್ಣನ್ನು ಕಚ್ಚಿ, ತಿನ್ನುವುದರಿಂದ ಬಾಯಲ್ಲಿ ಲಾಲಾರಸದ ಉತ್ಪತ್ತಿ ಜಾಸ್ತಿಯಾಗುತ್ತದೆ. ಇದು ಆಹಾರದ ಜೀರ್ಣಕ್ರಿಯೆಗೆ ಉತ್ತಮವಾಗಿದ್ದು, ಕರುಳಿನ ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿದೆ.

ನರಗಳ ಆರೋಗ್ಯಕ್ಕೆ ಸೇಬುಹಣ್ಣು ಉತ್ತಮವಾಗಿದೆ

  • ನರಗಳ ಉತ್ತಮ ಆರೋಗ್ಯಕ್ಕೆ ಸೇಬುಹಣ್ಣು ಉಪಯುಕ್ತವಾಗಿದೆ. ಸೇಬುಹಣ್ಣನ್ನು ಸಣ್ಣ ಹೋಳುಗಳಾಗಿ ಕತ್ತರಿಸಿಕೊಂಡು ಜೇನುತುಪ್ಪದಲ್ಲಿ ಮುಳುಗಿಸಬೇಕು. ಈ ಮಿಶ್ರಣಕ್ಕೆ ಗುಲಾಬಿ ದಳಗಳನ್ನು ಸೇರಿಸಬೇಕು. ಇದನ್ನು ಎರಡು ದಿನಗಳ ಕಾಲ ಬಿಸಿಲಿನಲ್ಲಿಟ್ಟು, ಒಂದು ವಾರ ತೆಗೆಯದೆ ಹಾಗೆ ಇಡಬೇಕು. ನಂತರ ಸೇಬುಹಣ್ಣಿನ ಹೋಳುಗಳನ್ನು ಮಾತ್ರ ದಿನಕ್ಕೆ 7-8 ರಂತೆ ತಿನ್ನಬೇಕು. ಇದು ನರದೌರ್ಬಲ್ಯಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಅಲ್ಲದೆ ದೇಹಕ್ಕೆ ಹೊಸ ಹುಮ್ಮಸ್ಸನ್ನು ನೀಡಿ, ಉತ್ತಮ ಅರೋಗ್ಯವನ್ನು ಕಾಪಾಡುತ್ತದೆ.

ಸೇಬುವನ್ನು ಸೌಂದರ್ಯವರ್ಧಕವಾಗಿಯೂ ಕೂಡ ಬಳಸಬಹುದು

  • ಮೊಡವೆಗಳು ಹಾಗೂ ಗುಳ್ಳೆಗಳ ಸಮಸ್ಯೆಯಿಂದ ಪಾರಾಗಲು ಸೇಬುವು ಉತ್ತಮ ಪರಿಹಾರವನ್ನು ನೀಡುತ್ತದೆ. ಸೇಬುವನ್ನು ತುರಿದುಕೊಳ್ಳಬೇಕು. ಈ ಸೇಬುವಿನ ತುರಿಯಿಂದ ಮುಖದ ಮೇಲೆ ಚೆನ್ನಾಗಿ ಮಾಲೀಷು ಮಾಡಬೇಕು. ಗುಳ್ಳೆಗಳು ಹಾಗೂ ಮೊಡವೆಗಳ ಮೇಲೆ ಕೂಡ ಹಚ್ಚಬೇಕು. ಇದರಿಂದ ಗುಳ್ಳೆ ಹಾಗೂ ಮೊಡವೆಗಳು ಕಡಿಮೆಯಾಗುತ್ತದೆ. ಹಾಗೂ ಮೊಡವೆಗಳ ಕಲೆಗಳು ಕೂಡ ಮಾಯವಾಗುತ್ತದೆ. ಮುಖದ ಕಲೆಯನ್ನು ಕೂಡ ಇದು ವೃದ್ಧಿಸುತ್ತದೆ.
  • ಮುಖದ ಉತ್ತಮ ಕಾಂತಿಗೆ ಮನೆಯಲ್ಲೇ ಮಾಡಬಹುದಾದ ಫೇಸ್ ಪ್ಯಾಕ್ ವಿಧಾನವನ್ನು ಈಗ ಅರಿಯೋಣ. ಸೇಬುಹಣ್ಣಿನ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ, ಪುಡಿಮಾಡಿಕೊಳ್ಳಬೇಕು. ಈ ಪುಡಿಯನ್ನು ನೀರಿನಲ್ಲಿ ಕಲಸಿ ಮುಖಕ್ಕೆ ಫೇಸ್ ಪ್ಯಾಕ್ ನಂತೆ ಲೆಪಿಸಿಕೊಳ್ಳಬೇಕು. ಅರ್ಧ ಗಂಟೆಯ ನಂತರ ಮುಖವನ್ನು ತೊಳೆಯಬೇಕು. ಇದು ಮುಖಕ್ಕೆ ಬೇಕಾದ ವಿಟಮಿನ್ ಸಿ ಯ ಪೂರೈಕೆ ಮಾಡುವುದಲ್ಲದೆ, ಚರ್ಮಕ್ಕೆ ಹೊಸ ಕಾಂತಿಯನ್ನು ನೀಡುತ್ತದೆ. ಚರ್ಮವು ಸುಕ್ಕುಗಟ್ಟಿದ್ದರೆ, ಈ ಫೇಸ್ ಪ್ಯಾಕ್ ಉತ್ತಮ ರೀತಿಯಲ್ಲಿ ಚರ್ಮದ ಅರೋಗ್ಯವನ್ನು ವೃದ್ಧಿಸುತ್ತದೆ. ಹಾಗೆಯೇ ಮೊಡವೆಗಳು, ಅದರ ಕಲೆಗಳನ್ನು ಕೂಡ ಕಡಿಮೆಮಾಡಿಸುತ್ತದೆ. ಇದು ಮುಖದ ಮೃದುತ್ವವನ್ನು ಕಾಪಾಡುವಲ್ಲಿ ಕೂಡ ಸಹಾಯಕವಾಗಿದೆ. ಕಸದಿಂದ ರಸ ಎಂಬಂತೆ ಸಿಪ್ಪೆಗಳಿಂದ ನಾವು ಉತ್ತಮ ಫೇಸ್ ಪ್ಯಾಕ್ ಅನ್ನು ಸಿದ್ದಗೊಳಿಸಬಹುದು. ಈ ಫೇಸ್ ಪ್ಯಾಕ್ ಅನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಂಡರೆ ಉತ್ತಮ ಫಲಿತಾಂಶವನ್ನು ತ್ವರಿತವಾಗಿ ಪಡೆದುಕೊಳ್ಳಬಹುದಾಗಿದೆ.

ಕಣ್ಣಿನ ಉತ್ತಮ ಆರೋಗ್ಯಕ್ಕೆ ಸಹಾಯಕವಾಗಿರುವ ಸೇಬುಹಣ್ಣು

  • ಪ್ರಸ್ತುತ ದಿನಮಾನದಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಕಣ್ಣಿನ ನೋವು, ಕಣ್ಣು ಉರಿ, ಸಣ್ಣ ವಯಸ್ಸಿಗೆ ಕಣ್ಣು ಮಂಜಾಗುವಿಕೆ, ತಲೆನೋವು ಇತ್ಯಾದಿಗಳನ್ನು ನಾವು ನಿತ್ಯ ಅನುಭವಿಸುತ್ತಿದ್ದೇವೆ. ಇಂತಹ ಸಮಸ್ಯೆಗಳನ್ನು ದೂರಗೊಳಿಸಲು ನಾವು ಸೇಬುಹಣ್ಣಿನ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಸೇಬು ಹಣ್ಣನ್ನು ತುರಿದುಕೊಳ್ಳಬೇಕು. ಅನಂತರ ಕಣ್ಣುಗಳನ್ನು ಮುಚ್ಚಿ, ಕಣ್ಣಿನ ರೆಪ್ಪೆಯ ಮೇಲೆ ತುರಿದ ಸೇಬುವನ್ನು ಹರಡಿ, ಕಣ್ಣಿಗೆ ಸಡಿಲವಾಗಿ ಪಟ್ಟಿಯನ್ನು ಕಟ್ಟಬೇಕು. ಆಮೇಲೆ ಅರ್ಧ ಗಂಟೆ ಚೆನ್ನಾಗಿ ನಿದ್ರಿಸಬೇಕು. ಎದ್ದ ನಂತರ ಪಟ್ಟಿಯನ್ನು ತೆಗೆದು ನೀರಿನಿಂದ ಕಣ್ಣನ್ನು ಶುದ್ಧವಾಗಿ ತೊಳೆಯಬೇಕು. ಇದರಿಂದ ಕಣ್ಣು ಒಮ್ಮೆ ತಂಪನೆಯ ಅನುಭವವನ್ನು ಹೊಂದುತ್ತದೆ. ಹಾಗೂ ಕಣ್ಣಿನ ಅನೇಕ ಸಮಸ್ಯೆಗಳಾದ ಕಣ್ಣು ನೋವು, ಕಣ್ಣು ಉರಿ ಇತ್ಯಾದಿಗಳು ಕಡಿಮೆಯಾಗುತ್ತದೆ. ಕಣ್ಣಿನ ಅರೋಗ್ಯಕ್ಕೂ ಇದು ಉತ್ತಮವಾಗಿದೆ.

ಮೊಣಕಾಲು ನೋವಿಗೆ ಸೇಬುಹಣ್ಣು ಉತ್ತಮ ಪರಿಹಾರಗಳನ್ನು ನೀಡುತ್ತದೆ.

ಶರೀರದಲ್ಲಿನ ಹೊಸ ಚೈತನ್ಯಕ್ಕಾಗಿ ಸೇಬು ಸಹಕಾರಿಯಾಗಿದೆ

  • ನಿತ್ಯ ಬೆಳಿಗ್ಗೆ ಹೊಸ ದಿನವನ್ನು ಪ್ರಾರಂಭಿಸಲು, ಹೊಸ ಚೈತನ್ಯವನ್ನು ಹೊಂದಲು ಸೇಬುವಿನ ಟೀ ಅತಿ ಉತ್ತಮವಾಗಿದೆ. ಎರಡು ಲೋಟ ನೀರನ್ನು ಚೆನ್ನಾಗಿ ಕುದಿಸಬೇಕು. ನೀರು ಚೆನ್ನಾಗಿ ಕುದಿಯುವಾಗ ಅರ್ಧ ಸೇಬುವಿನ ಹೋಳುಗಳು ಹಾಗೂ ಒಂದು ಲಿಂಬೆಯ ಹೋಳುಗಳನ್ನು ನೀರಿಗೆ ಹಾಕಿ ಮುಚ್ಚಬೇಕು. ಒಂದು ನಿಮಿಷದ ನಂತರ ಓಲೆ ಆರಿಸಬೇಕು. ಒಂದು ಗಂಟೆಯ ತನಕ ಅದನ್ನು ಹಾಗೆಯೇ ಬಿಡಬೇಕು. ನಂತರ ಸೋಸಿಕೊಂಡು ಕುಡಿಯಬೇಕು. ಇದು ದೇಹಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ. ಕೀಲು ಹಾಗೂ ಮೂಳೆಗಳಿಗೆ ಹೊಸ ಬಲವನ್ನು ತಂದುಕೊಡುತ್ತದೆ. ಹಾಗೂ ಇದು ಅರೋಗ್ಯವರ್ಧಕವಾಗಿದೆ.

ಜ್ಞಾಪಕ ಶಕ್ತಿಯನ್ನು ವೃದ್ಧಿಸಲು ಸೇಬುಹಣ್ಣು ಸಹಕಾರಿಯಾಗಿದೆ.

  • ಪ್ರತಿದಿನ ಒಂದು ಸೇಬು ಹಣ್ಣನ್ನು ತಿನ್ನುವ ರೂಢಿಯನ್ನು ನಾವು ಮಾಡಿಕೊಳ್ಳಬೇಕು. ಇದು ಅರೋಗ್ಯವರ್ಧಕವು ಹೌದು ಜೊತೆಯಲ್ಲಿ ಮೆದುಳಿನ ಅರೋಗ್ಯಕ್ಕೂ ಕೂಡ ಉತ್ತಮವಾಗಿದೆ. ಸಣ್ಣ ಮಕ್ಕಳಿಗೆ ನಿತ್ಯ ಸೇಬುವನ್ನು ನೀಡುವುದರಿಂದ, ಅವರ ಮೆದುಳಿನ ಆರೋಗ್ಯ ಉತ್ತಮವಾಗಿರುವುದಲ್ಲದೆ, ಜ್ಞಾಪಕ ಶಕ್ತಿಯ ವೃದ್ಧಿಯು ಆಗುತ್ತದೆ. ಅದೇ ರೀತಿ ದೇಹಕ್ಕೆ ಬಲವನ್ನು ಸಹ ನೀಡುತ್ತದೆ.

ಸೇಬುಹಣ್ಣಿನ ಸೇವನೆಯು ಸುಲಭ ಮಲಮೂತ್ರ ವಿಸರ್ಜನೆಗೂ ಉತ್ತಮವಾಗಿದೆ

  • ಪ್ರತಿದಿನ ಸೇಬುಹಣ್ಣನ್ನು ತಿನ್ನುವುದು ಉತ್ತಮವಾಗಿದೆ. ಕೆಲವರಿಗೆ ಸಮಯಕ್ಕೆ ಸರಿಯಾಗಿ ಮಲಮೂತ್ರ ವಿಸರ್ಜನೆ ಆಗುವುದಿಲ್ಲ, ಅಂತಹವರು ನಾರು ಹೆಚ್ಚಾಗಿರುವ ಪದಾರ್ಥವನ್ನು ಸೇವಿಸಬೇಕು. ನೀರನ್ನು ಹೆಚ್ಚಾಗಿ ಕುಡಿಯಬೇಕು. ಅಂತಯೇ ಸೇಬು ಹಣ್ಣನ್ನು ಸೇವಿಸಿದರೂ ಕೂಡ ಸಮಯಕ್ಕೆ ಸರಿಯಾಗಿ ಮಲಮೂತ್ರ ವಿಸರ್ಜನೆ ಆಗುತ್ತದೆ. ಆದ್ದರಿಂದ ನಿತ್ಯ ಸೇಬುಹಣ್ಣನ್ನು ಸೇವಿಸುವ ರೂಢಿಯನ್ನು ಮಾಡಿಕೊಳ್ಳಬೇಕು.

ಇಷ್ಟೆಲ್ಲ ಉತ್ತಮ ಆರೋಗ್ಯಕರ ಗುಣಗಳನ್ನು ಹೊಂದಿರುವ ಸೇಬುಹಣ್ಣು, ಇಂದಿನ ದಿನಗಳಲ್ಲಿ ಸರ್ವಕಾಲಿಕವಾಗಿ ದೊರೆಯುತ್ತದೆ. ಈ ಹಣ್ಣು ವಾತ, ಪಿತ್ತದ ಸಮಸ್ಯೆಗಳನ್ನು ದೂರಗೊಳಿಸುತ್ತದೆ. ಹೃದಯದ ಆರೋಗ್ಯಕ್ಕೆ ಅತಿ ಉತ್ತಮವಾದ ಹಣ್ಣು ಇದಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಶಕ್ತಿ ಕೂಡ ಸೇಬುಹಣ್ಣಿನಲ್ಲಿದೆ. ದೇಹಕ್ಕೆ ಬೇಕಾದ ಉತ್ತಮ ಬಲವನ್ನು ಸೇಬುಹಣ್ಣು ನೀಡುತ್ತದೆ. ಮೆದುಳಿನ ಆರೋಗ್ಯಕ್ಕೆ ಹಿತಕರವಾಗಿದ್ದು, ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ. ನರಗಳ ಆರೋಗ್ಯಕ್ಕೂ ಕೂಡ ಇದು ಉತ್ತಮವಾಗಿದೆ. ಸೇಬುಹಣ್ಣನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಅರೋಗ್ಯಕ್ಕೂ ಅತಿ ಉತ್ತಮವಾಗಿದೆ. ಹಲ್ಲುಗಳು ಹೊಳಪಿಗೂ ಸಹ ಇದು ಸಹಕಾರಿಯಾಗಿದೆ. ಪ್ರತಿ ದಿನ ಒಂದು ಸೇಬನ್ನು ತಿಂದರೆ ವೈದ್ಯರಿಂದ ನಾವು ದೂರವಿರಬಹುದು ಎಂಬ ಮಾತಿದೆ. ಇದು ನಿಜಕ್ಕೂ ಸತ್ಯ. ನಮ್ಮ ದೇಹಕ್ಕೆ ಬೇಕಾದ ಸಕಲ ಉತ್ತಮ ಅಂಶಗಳು ಸೇಬುವಿನಲ್ಲಿದ್ದು, ಅರೋಗ್ಯವರ್ಧಕವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು (Healthy traditional drinks)

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು. AI…

21 hours ago

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

2 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

3 days ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

4 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

5 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

6 days ago

This website uses cookies.