ಬೇಸಿಗೆಯ ಬೆವರಿನ ದುರ್ಗಂಧ ಮತ್ತು ಬೆವರುಸಾಲೆ: ನಿವಾರಣೆಗಾಗಿ ಸಲಹೆಗಳು

Spread the love

ಬೇಸಿಗೆಯ ಬೆವರಿನ ದುರ್ಗಂಧ ಮತ್ತು ಬೆವರುಸಾಲೆ: ನಿವಾರಣೆಗಾಗಿ ಸಲಹೆಗಳು. AI Image

ಬೇಸಿಗೆಯಲ್ಲಿ ಮುಖ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಒಂದು ಬೆವರುವಿಕೆ. ಕುಡಿದ ನೀರೆಲ್ಲ ಬೆವರಾಗಿ ಹೊರಬರುವುದೇ ಎನ್ನುವಷ್ಟು ಬೆವರು ಬರುತ್ತದೆ. ಈ ಬಿಸಿಲಿಗೆ ಹೊರಬಂದಾಕ್ಷಣ ಶರೀರವು ಜಾಸ್ತಿ ನೀರನ್ನು ಬಯಸುತ್ತದೆ. ಬಿಸಿಲಿನ ಬೇಗೆಗೆ ಮೈಯೆಲ್ಲಾ ಬೆವರಿ ಒದ್ದೆಯಾಗುತ್ತದೆ. ಅಂತಹ ಸಮಯದಲ್ಲಿ ಹೊಸ ಚೈತನ್ಯ, ಹುರುಪು ಎಲ್ಲವೂ ಕಳೆದುಕೊಂಡಂತಾಗುತ್ತದೆ. ಇದಕ್ಕೆ ಮೂಲ ಕಾರಣ ಬೆವರಿನ ವಾಸನೆ. ಕೆಲವೊಮ್ಮೆ ಈ ವಾಸನೆ ಎಷ್ಟು ಇರುತ್ತದೆ ಎಂದರೆ ಸುಗಂಧ ದ್ರವ್ಯದ ವಾಸನೆಯನ್ನು ಮೀರಿಸುವಷ್ಟಿರುತ್ತದೆ. ಹಾಗೆಯೇ ಬೂಟನ್ನು ದರಿಸುವವರ ಕಾಲು, ಕಾಲುಚೀಲದ ( ಸಾಕ್ಸ್ ) ವಾಸನೆಯಿಂದ ನಾರುತ್ತಿರುತ್ತದೆ. ಇದಕ್ಕೆ ಪರಿಹಾರ ಏನು ಎಂಬುದು ಎಲ್ಲರ ಪ್ರಶ್ನೆ. ಅದಕ್ಕೆ ಉತ್ತರಗಳು ಈ ಲೇಖನದಲ್ಲಿ ಸಿಗುತ್ತವೆ.  ನಾವು ಈ ಲೇಖನದಲ್ಲಿ ಬೆವರಿನ ದುರ್ಗಂಧ ಹಾಗೂ ಬೆವರು ಸಾಲೆ ಸಮಸ್ಯೆಗಳಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗೆಗಿನ ವಿಶ್ಲೇಷಣೆಯನ್ನು ಅರಿಯೋಣ.

ಬೆವರಿನ ದುರ್ಗಂಧ ಹಾಗೂ ಬೆವರು ಸಾಲೆಗೆ ಪರಿಹಾರಗಳು

  • ನೇರಳೆ ಮರದ ಎಲೆಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಬೇಕು. ನಂತರ ಎಲೆಗಳನ್ನು ಅರೆದು ನೀರಿಗೆ ಹಾಕಬೇಕು. ಆ ನೀರಿನಿಂದ ಸ್ನಾನ ಮಾಡಿದರೆ ಬೆವರಿನ ದುರ್ಗಂಧ ಕ್ರಮೇಣ ಕಡಿಮೆಯಾಗುತ್ತದೆ. ಇದನ್ನು ಒಂದೆರಡು ದಿನ ಮಾಡುವುದರಿಂದ ಫಲಿತಾಂಶ ಸಿಗುವುದಿಲ್ಲ, ನಿತ್ಯವೂ ಮಾಡಬೇಕು.
  • ಬೇಸಿಗೆಯಲ್ಲಿ ಮಾಡಲೇ ಬೇಕಾದ ಒಂದು ಉತ್ತಮ ಅಭ್ಯಾಸದ ಬಗ್ಗೆ ಈಗ ತಿಳಿಯೋಣ. ಬೆವರಿನ ವಾಸನೆ ಹಾಗೂ ಬೆವರು ಗುಳ್ಳೆಗಳಿಂದ ಮುಕ್ತಿ ಪಡೆಯಲು ಮಾವಿನ ಎಲೆ, ಬೇವಿನ ಎಲೆ, ನೇರಳೆ ಎಲೆ, ಸೀಬೆ ಎಲೆ ಎಲ್ಲವನ್ನು ತೆಗೆದುಕೊಂಡು ಒಂದು ಪಾತ್ರೆಯ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಕುದಿಸಿದ ನೀರನ್ನು ಸ್ನಾನ ಮಾಡುವ ನೀರಿಗೆ ಸೇರಿಸಿಕೊಂಡು, ಆ ನೀರಿನಲ್ಲಿ ಸ್ನಾನ ಮಾಡಬೇಕು. ಈ ರೀತಿ ವಾರದಲ್ಲಿ ಒಂದು ದಿನ ಮಾಡುಬೇಕು. ಇದು ಎಲ್ಲಾ ರೀತಿಯ ಬೆವರಿನ ಸಮಸ್ಯೆಗಳಿಗೆ ಹಾಗೂ ಕೆಲವು ಚರ್ಮ ರೋಗಗಳಿಗೂ ಉತ್ತಮವಾಗಿದೆ.
  • ಜೀರಿಗೆಯನ್ನು ಚೆನ್ನಾಗಿ ನೆರಳಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಹೀಗೆ ತಯಾರಿಸಿದ ಜೀರಿಗೆ ಪುಡಿಯನ್ನು ತೆಂಗಿನ ಹಾಲಿನಲ್ಲಿ ಕಲಸಿ, ಬೆವರಿನ ಗುಳ್ಳೆಗಳು ಅಥವಾ ಜಾಸ್ತಿ ಬೆವರುವ ಕಡೆಯಲ್ಲಿ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ತ್ವರಿತ ಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
  • ಕಂಗುಳಿನ ಭಾಗವು ಜಾಸ್ತಿ ಬೆವರುತ್ತಿದ್ದರೆ ನವಿಲುಕೋಸನ್ನು ಅರ್ಧ ಕತ್ತರಿಸಿ ಕಂಕುಳಿನ ಭಾಗಕ್ಕೆ ಸವರಬೇಕು. ಇದು ಬೆವರಿನ ದುರ್ಗಂಧವನ್ನು ಕಡಿಮೆ ಮಾಡುತ್ತದೆ.
  • ತುಳಸಿ ರಸವನ್ನು ಅರೆದು ತೆಗೆದುಕೊಳ್ಳಬೇಕು. ಈ ತುಳಸಿ ರಸವನ್ನು ಮಜ್ಜಿಗೆಯೊಡನೆ ಬೆರೆಸಿ ಕುಡಿಯಬೇಕು. ಇದು ಕೂಡ ಬೆವರಿನ ದುರ್ಗಂಧಕ್ಕೆ ಉತ್ತಮ ಮದ್ದಾಗಿದೆ.
  • ತುಳಸಿ ಎಲೆಗಳು ಹಾಗೂ ಬೇವಿನ ಎಲೆಗಳನ್ನು ಸ್ನಾನ ಮಾಡುವ ನೀರಿಗೆ ಹಾಕಿ, ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡಬೇಕು. ಇದು ಕೂಡ ಬೆವರಿನ ದುರ್ಗಂಧವನ್ನು ನಿವಾರಿಸುತ್ತದೆ.
  • ಟೊಮೆಟೊ ರಸವನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ದೇಹದ ಬೆವರಿನ ದುರ್ವಾಸನೆ ಕಡಿಮೆಯಾಗುತ್ತದೆ.
  • ಬೇವಿನ ಸೊಪ್ಪನ್ನು ನೀರಲ್ಲಿ ಚೆನ್ನಾಗಿ ಕುದಿಸಿ ಕಷಾಯದ ರೀತಿಯಲ್ಲಿ ತಯಾರಿಸಿಕೊಳ್ಳಬೇಕು. ಈ ಕಷಾಯವನ್ನು ಸ್ನಾನ ಮಾಡುವ ನೀರಿನಲ್ಲಿ ಹಾಕಿ ಸ್ನಾನ ಮಾಡಿದರೆ ಬೆವರು ಸಾಲೆ ಕೂಡ ಕಡಿಮೆಯಾಗಿ, ಬೆವರಿನ ದುರ್ಗಂಧ ಕಡಿಮೆಯಾಗುತ್ತದೆ.
  • ಜಾಸ್ತಿ ಬೆವರುವವರಾಗಿದ್ದರೆ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಅತಿ ಉತ್ತಮ.
  • ಬಿಸಿಲಿನ ತಾಪದಿಂದ ಬೆವರು ಜಾಸ್ತಿಯಾಗಿ, ಬೆವರು ನಿಂತ ಕಡೆಯಲ್ಲಿ ಕೆಂಪಗಿನ ಸಣ್ಣ ಸಣ್ಣ ಗುಳ್ಳೆಗಳಾಗುತ್ತವೆ. ಈ ಗುಳ್ಳೆಗಳಿಂದ ವಿಪರೀತ ಕೆರೆತ, ನವೆ ಉಂಟಾಗುತ್ತದೆ. ಆ ಸಮಯದಲ್ಲಿ ಕೆರೆದುಕೊಂಡು ಗಾಯ ಮಾಡಿಕೊಳ್ಳಬಾರದು. ಬದಲಿಗೆ ಈ ಸುಲಭ ವಿಧಾನವನ್ನು ಪಾಲಿಸಿ ಸಮಸ್ಯೆಯಿಂದ ಹೊರಬರಬೇಕು. ಬೆವರು ಸಾಲೆ ಆದ ಸಮಯದಲ್ಲಿ ಕೇವಲ ಅಕ್ಕಿ ತೊಳೆದ ನೀರಿನ್ನು ಬಳಸಿ, ಬೆವರು ಸಾಲೆಯಾದ ಭಾಗವನ್ನು ತೊಳೆಯಬೇಕು. ಇದು ಅತಿ ಉತ್ತಮ ಪರಿಹಾರವಾಗಿದ್ದು ನಿತ್ಯ ಮಾಡುತ್ತಾ ಬಂದರೆ 2-3 ದಿನದಲ್ಲಿ ಫಲಿತಾಂಶವನ್ನು ಕಾಣಬಹುದು.
  • ಮುಂಗೈ ಭಾಗ ಜಾಸ್ತಿ ಬೆವರುತ್ತಿದ್ದರೆ ಒಂದು ಉತ್ತಮ ಉಪಾಯದಿಂದ ಇದನ್ನು ಕಡಿಮೆಗೊಳಿಸಬಹುದು. ಕೈ ಜಾಸ್ತಿ ಬೆವರುತ್ತಿದ್ದರೆ ಸಂಗೀತ ವಾದ್ಯಗಳನ್ನು ನುಡಿಸುವವರಿಗೆ, ಪೆನ್ನು ಹಿಡಿಯುವಾಗ, ಇನ್ನೂ ಅನೇಕ ಕಡೆಗಳಲ್ಲಿ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳನ್ನು ಹೊಂದಿರುವವರು ಅನ್ನ ಬೇಯಿಸುವಾಗ ಪಾತ್ರೆಯಿಂದ ಬರುವ ಹಬೆಯ ಮೇಲೆ ಕೈ ಹಿಡಿದು ಶಾಖವನ್ನು ತೆಗೆದುಕೊಳ್ಳಬೇಕು. ಇದನ್ನು ಸತತವಾಗಿ ಪ್ರತಿನಿತ್ಯ ಮಾಡುವುದರಿಂದ ಕೈ ಬೆವರುವ ಸಮಸ್ಯೆ ಬೇಗ ಕಡಿಮೆಯಾಗುತ್ತದೆ.

ಬೇಸಿಗೆ ಬಂತೆಂದರೆ ಮನೆಯಿಂದ ಹೊರಗೆ ಹೊರಡುವ ಮುನ್ನ ಎರಡು ಬಾರಿ ಆಲೋಚಿಸುತ್ತೇವೆ. ಕಾರಣ ಬಿಸಿಲಿನ ಶಾಖಕ್ಕೆ ಮುಖದ ಮೇಲೆ ಸುಟ್ಟ ಕಲೆಗಳಾಗುವಿಕೆ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನಿಶ್ಯಕ್ತಿಯಾಗುವಿಕೆ, ಹಾಗೆಯೇ ಮತ್ತೊಂದು ಮುಖ್ಯ ಕಾರಣ ಬೆವರುವಿಕೆ. ಬೆವರುವಿಕೆಯ ವಾಸನೆಯು ಕೂಡ ನಮ್ಮ ನಿತ್ಯದ ಕೆಲಸದಲ್ಲಿನ ಹುರುಪನ್ನು ಕುಗ್ಗಿಸುತ್ತದೆ. ಇಂತಹ ಸಮಸ್ಯೆಗಳಿಗೆ ಈ ಲೇಖನದಲ್ಲಿ ಉತ್ತಮ ಪರಿಹಾರಗಳನ್ನು ನೀಡಿದ್ದು, ತ್ವರಿತವಾಗಿ ನಮ್ಮ ಸುತ್ತಲೂ ಇರುವ ವಸ್ತುಗಳಿಂದಲೇ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಬೇಸಿಗೆಯಲ್ಲಿ ಜಾಸ್ತಿ ನೀರನ್ನು ಅಥವಾ ನೀರಿನ ಅಂಶವಿರುವ ಆಹಾರಗಳನ್ನು ಸ್ವೀಕರಿಸುವುದು ಅತಿ ಉತ್ತಮವಾಗಿದೆ

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.