ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

Spread the love

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು
ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image

ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ ತಯಾರಿಕೆಯಲ್ಲಿ ನೀರಿನಂತೆ ಎಲ್ಲದರ ಒಟ್ಟಿಗೆ ಬೆರೆಯುವ, ಹಾಗೂ ಔಷಧಿಯ ಗುಣ ಮಟ್ಟವನ್ನು ಏರಿಸುವ ಔಷಧಿ ಎಂದರೆ ಅದು ಜೇನುತುಪ್ಪ ಅಥವಾ ಮಧು. ಕನ್ನಡದಲ್ಲಿ ಜೇನು ಎಂದರೆ, ಇಂಗ್ಲಿಷ್ ನಲ್ಲಿ ಹನಿ ಎನ್ನುವರು. ಸಂಸ್ಕೃತದಲ್ಲಿ ಜೇನು ಎಂದೂ ಕರೆಯುತ್ತಾರೆ.

ಅನಾದಿ ಕಾಲದಿಂದಲೂ ಜೇನಿನ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇನ್ನೂ ಚಾಲ್ತಿಯಲ್ಲಿದೆ. ಪರಿಶುದ್ಧ ಜೇನುತುಪ್ಪ ಸವಿಯಲು ಯೋಗ್ಯವಾಗಿದ್ದು, ನಮ್ಮ ದೇಹಕ್ಕೆ ಅತಿ ಅಗತ್ಯವಾಗಿದೆ. ಕೇವಲ ಜೇನುತುಪ್ಪ ಬಳಸಿ ಅನೇಕ ದೈನಂದಿನ ಸಮಸ್ಯೆಗಳಿಂದ ನಾವು ಮುಕ್ತಾರಾಗಬಹುದು.

ಜೇನಿನಲ್ಲಿ ಹಲವು ಬಗೆಗಳಿದ್ದು, ಅವುಗಳಲ್ಲಿ ಹೆಜ್ಜೇನು, ಜಿಟ್ಟೆ ಜೇನು ಆರೋಗ್ಯದ ದೃಷ್ಠಿಯಲ್ಲಿ ಉತ್ತಮವಾಗಿದೆ.

ಜೇನುತುಪ್ಪದ ಪೋಷಕಾಂಶಗಳ ಬಗೆಗಿನ ಮಾಹಿತಿಗಳು

ಜೇನುತುಪ್ಪ ಅಮೃತದಂತಹ ವಸ್ತುವಾಗಿದ್ದು, ವಿಟಮಿನ್ ಗಳ ಆಕಾರವಾಗಿದೆ. ವಿಟಮಿನ್ ಬಿ1, ಬಿ2, ಬಿ3, ಬಿ4, ಬಿ12, ವಿಟಮಿನ್ ಸಿ, ವಿಟಮಿನ್ ಕೆ ಜೊತೆಯಲ್ಲೇ ಪ್ರೊಟೀನ್ ಗಳು, ಕಾಪ್ಪರ್, ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನಿಸಿಯಂ, ಅಮೈನೋ ಆಸಿಡ್ಸ್ ಗಳಿಂದ ಕೂಡಿದೆ.

ಹಿನ್ನಲೆಗಳ ಪ್ರಕಾರ ಒಂದು ಕಿಲೋ ಗ್ರಾಂ ಜೇನುತುಪ್ಪ 12 ಕಿಲೋ ಗ್ರಾಂ ಸೇಬು ಹಣ್ಣಿಗೆ ಸಮವಾಗುತ್ತದೆ. ಅಂತಹ ಜೇನುತುಪ್ಪ ಪರಿಶುದ್ಧವಾಗಿ ಇದೆಯೋ, ಇಲ್ಲವೋ?? ಎಂಬದನ್ನು ಹೇಗೇ ತಿಳಿಯುವುದು?? ಅದಕ್ಕಾಗಿ ಕೆಲವು ವಿಧಾನಗಳನ್ನು ಅನುಸರಿಸಿ ಜೇನುತುಪ್ಪದ ಪರಿಶುದ್ಧತೆಯನ್ನು ಪರಿಶೀಲಿಸಬಹುದು.

  • ಜೇನುತುಪ್ಪ ಶುದ್ಧವಾಗಿದ್ದರೆ ಒಂದು ಲೋಟ ನೀರಿಗೆ ಸ್ವಲ್ಪ ಜೇನುತುಪ್ಪ ಹಾಕಿದರೆ, ಅದು ಲೋಟದ ತಾಳಕ್ಕೆ ಹೋಗಿ ಕುಳಿತುಕೊಳ್ಳುತ್ತದೆ. 
  • ಇನ್ನೊಂದು ವಿಧಾನವೆಂದರೆ ಕೈ ಮೇಲೆ ಒಂದು ಚಮಚ ಜೇನುತುಪ್ಪವನ್ನು ಹಾಗೂ ಸ್ವಲ್ಪ ಸುಣ್ಣವನ್ನು ಎರಡನ್ನು ಬೆರೆಸಬೇಕು. ತಕ್ಷಣವೇ ಕೈ ತುಂಬಾ ಬಿಸಿಯಾಗಿ ಸುಡಲು ಆರಂಭಿಸುತ್ತದೆ. ಅಂದರೆ ಅದು ಪರಿಶುದ್ಧ ಜೇನುತುಪ್ಪ ಇಲ್ಲದಿದ್ದರೆ ಅದು ಅಪರಿಶುದ್ಧ ಎಂದೂ ಪರಿಗಣಿಸಬಹುದು.
  • ಗಾಜಿನ ಪಾತ್ರೆಯಲ್ಲಿ ಜೇನುತುಪ್ಪವನ್ನು ಶೇಖರಿಸಿದಾಗ ಅದು ಪರದರ್ಶಕವಾಗಿದ್ದರೆ ಅದು ಶುದ್ಧ ಜೇನುತುಪ್ಪ.

ಜೇನುತುಪ್ಪದ ಆರೋಗ್ಯಕರ ಮನೆಮದ್ದುಗಳು

  • ಜೇನುತುಪ್ಪವನ್ನು ಅರೋಗ್ಯವರ್ಧವಾಗಿಯೂ, ಬೆಳವಣಿಗೆಗೂ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಉಪಯೋಗಿಸುತ್ತಾರೆ. ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುವುದು ಅತಿ ಉತ್ತಮವಾಗಿದ್ದು, ಅರೋಗ್ಯವರ್ಧಕವಾಗಿದೆ. ಇದು ನಮ್ಮ ಆಯಸ್ಸನ್ನು ಹೆಚ್ಚಿಸಿ, ರೋಗ ನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ. ಮಕ್ಕಳಿಗೆ ನಿತ್ಯ ಹಾಲಿನ ಜೊತೆಗೆ ಜೇನುತುಪ್ಪವನ್ನು ಬೆರೆಸಿ ನೀಡುವುದು ಮಕ್ಕಳ ದೈನಂದಿನ ಬೆಳವಣಿಗೆಗೆ ಅತಿ ಉತ್ತಮವಾಗಿದೆ. ಇದು ಸಕ್ಕರೆಯ ಬಳಕೆಯನ್ನು ಕೂಡ ಕಡಿಮೆಗೊಳಿಸುತ್ತದೆ.
  • ರಕ್ತ ವರ್ಧಕ ಹಾಗೂ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ಜೇನುತುಪ್ಪ ಸಹಕಾರಿಯಾಗಿದೆ.
  • ಒಂದು ಚಮಚ ಜೇನುತುಪ್ಪವನ್ನು ಸೇವಿಸುವುದರಿಂದ ರಕ್ತವನ್ನು ವೃದ್ಧಿಸುತ್ತದೆ. ಇದು ಬಲವರ್ಧಕವು ಆಗಿದೆ.
  • ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಎರಡು ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯಬೇಕು. ಇದು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.
  • ಮಧುಮೇಹಿಗಳ ಆರೋಗ್ಯಕ್ಕೆ ಜೇನುತುಪ್ಪದ ಪ್ರಯೋಜನಗಳು
    – ಸಕ್ಕರೆ ಖಾಯಿಲೆ ಇದ್ದವರು ಸಕ್ಕರೆ ಅಂಶವುಳ್ಳ ಪದಾರ್ಥಗಳನ್ನು ಸ್ವೀಕರಿಸುವುದು ಒಳ್ಳೆಯದಲ್ಲ. ಅದರ ಬದಲಿಗೆ ಜೇನುತುಪ್ಪವನ್ನು ಆಹಾರದಲ್ಲಿ ಸೇವಿಸಬಹುದು. ಮಧುಮೇಹಿಗಳು ಸಿಹಿ ಸೇವಿಸಿದ ಮೇಲೆ ಒಂದು ಚಮಚ ಜೇನುತುಪ್ಪ ಸೇವಿಸಬೇಕು. ಇದು ಅರಗಿಸಲಾಗದ ಸಕ್ಕರೆಯನ್ನು ಕರಗಿಸಲು ಸಹಾಯಕವಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
  • ಹೃದಯದ ಉತ್ತಮ ಅರೋಗ್ಯಕ್ಕಾಗಿ ಜೇನುತುಪ್ಪ ಉಪಯುಕ್ತವಾಗಿದೆ.
    – ಹೃದಯದ ಉತ್ತಮ ಅರೋಗ್ಯಕ್ಕಾಗಿ ನಿತ್ಯ ಎರಡು ಚಮಚ ಜೇನುತುಪ್ಪ ಸೇವಿಸುವುದು ಉತ್ತಮವಾಗಿದೆ. ಜೇನುತುಪ್ಪದಲ್ಲಿರುವ ಅಧಿಕ ಪೊಟ್ಯಾಷಿಯಂ ಹಾಗೂ ಖನಿಜಗಳು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ.
  • ನೆಗಡಿ, ಕೆಮ್ಮು, ಜ್ವರ ಹಾಗೂ ಬೇಧಿ ಸಮಸ್ಯೆಗಳಿಗೆ ಸಂಜೀವಿನಿಯಂತೆ ಇರುವ ನಮ್ಮ ಜೇನುತುಪ್ಪ.
  • ಮಕ್ಕಳಿಗೆ ಬರುವ ಜ್ವರ, ನೆಗಡಿ, ಕೆಮ್ಮು ಹಾಗೂ ಬೇಧಿಗೆ ಭಜೆ ಅಥವಾ ಹಿಪ್ಪಲಿ ಪುದಿಯೊಂದಿಗೆ ಜೇನುತುಪ್ಪವನ್ನು ಬೆರೆಸಿ ತಿನ್ನಿಸಬೇಕು. ಇದು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುತ್ತದೆ.
  • ಮಕ್ಕಳಲ್ಲಿ ಕಾಣಿಸುವ ಶೀತ, ಕೆಮ್ಮಿಗೆ 5-6 ತುಳಸಿ ಎಲೆಗಳು, ಒಂದೆರಡು ದೊಡ್ಡಪತ್ರೆ ಎಲೆಗಳು ಎರಡನ್ನು ಅರೆದು ರಸ ಹಿಂಡಿಕೊಳ್ಳಬೇಕು. ಈ ರಸದ ಜೊತೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೀವಿಸಿದರೆ ತ್ವರಿತವಾಗಿ ಶೀತ, ಕೆಮ್ಮು ಗುಣವಾಗುತ್ತದೆ.
  • ಎರಡು ತಾಸಿಗೊಮ್ಮೆ ಒಂದು ಚಮಚ ಜೇನುತುಪ್ಪವನ್ನು ನೆಕ್ಕಿ ತಿನ್ನಬೇಕು. ಈ ರೀತಿ ದಿನಕ್ಕೆ ಮೂರು ಬಾರಿ ಮಾಡಿದರೆ ಗಂಟಲು ನೋವು, ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ. 
  • ಬಾಯಿ ಹುಣ್ಣನ್ನು ಕಡಿಮೆಗೊಳಿಸಲು ಜೇನುತುಪ್ಪ ಸಹಕಾರಿಯಾಗಿದೆ.
    -ಜೇನುತುಪ್ಪವನ್ನು ಬಾಯಿಗೆ ಹುಣ್ಣಾದ ಕಡೆಯಲ್ಲಿ ಹಚ್ಚಿಕೊಳ್ಳುವುದರಿಂದ ಬಾಯಿ ಹುಣ್ಣು ಕಡಿಮೆಯಾಗಿ, ನೋವು ಕೂಡ ನಿವಾರಣೆಯಾಗುತ್ತದೆ.
  • ಹಲ್ಲು ಹಾಗೂ ವಸಡಿನ ಅರೋಗ್ಯಕ್ಕೂ ಜೇನುತುಪ್ಪ ಉಪಯುಕ್ತವಾಗಿದೆ.
    -ಹಲ್ಲು ನೋವು ಹಾಗೂ ವಸಡಿನ ಬಾವು ಇದ್ದಲ್ಲಿ ಜೇತುಪ್ಪವನ್ನು ಹತ್ತಿಯಲ್ಲಿ ಅದ್ದು ಇಡಬೇಕು. ಇದು ನೋವನ್ನು ಕಡಿಮೆ ಮಾಡಿ, ತ್ವರಿತವಾಗಿ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.
  • ಮೂಳೆಗಳ ಉಳುಕಿಗೆ ಹಾಗೂ ಕೀಲು ನೋವಿಗೆ ಜೇನುತುಪ್ಪದ ಪರಿಹಾರಗಳು.
    -ಕೆನೆ ಸುಣ್ಣ ಹಾಗೂ ಜೇನುತುಪ್ಪವನ್ನು ಬೆರೆಸಿ ರಂಗಳಿಸಿ ನೋವಿದ್ದಲ್ಲಿ ಹಚ್ಚಬೇಕು. ಹಾಗೆಯೇ ಉಳುಕಿದ್ದಲ್ಲಿ ಹಚ್ಚಿದರೆ ಉಳುಕು ನಿವಾರಣೆಯಗುತ್ತದೆ.
  • ತೂಕ ಇಳಿಸಲು ಉತ್ತಮ ಆಯುಧ ಎಂದರೆ ಜೇನುತುಪ್ಪ.
    -ಜಾಸ್ತಿ ತೂಕ ಉಳ್ಳವರು ಜೇನುತುಪ್ಪದ ಪ್ರಯೋಜನವನ್ನು ಪಡೆಯಲೇ ಬೇಕು. ನಿತ್ಯ ಬೆಳಿಗ್ಗೆ ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ಅರ್ಧ ಲಿಂಬು ಹಣ್ಣಿನ ರಸವನ್ನು ಹಿಂಡಿ, ಮೂರನ್ನು ಸರಿಯಾಗಿ ಬೆರೆಸಿ ಖಾಲಿ ಹೊಟ್ಟೆಗೆ ಕುಡಿಯಬೇಕು. ಇದನ್ನು ನಿತ್ಯ ಕುದಿಯುವ ಹವ್ಯಾಸ ಮಾಡಿಕೊಳ್ಳಬೇಕು. ಕ್ರಮೇಣ ತೂಕ ಇಳಿಯುವುದಲ್ಲದೆ, ದೇಹದಲ್ಲಿ ಹೊಸ ಚೈತನ್ಯ ಬರುತ್ತದೆ. ಇದರಿಂದ ರಕ್ತವು ಶುದ್ಧವಾಗಿ, ಅರೋಗ್ಯವು ಉತ್ತಮವಾಗಿರುತ್ತದೆ. ನಿದ್ರಾಹೀನತೆಗೂ ಇದು ಉತ್ತಮ ಮದ್ದಾಗಿದೆ.
  • ಚರ್ಮ ರೋಗಗಳಿಗೂ ಜೇನುತುಪ್ಪ ಸೂಕ್ತ ಮದ್ದಾಗಿದೆ.
  • ಬಿಳಿ ಕಲೆ, ಇಸುಬು, ಹುಳುಕಡ್ಡಿಗೆ ಜೇನುತುಪ್ಪವನ್ನು ಬಾಹ್ಯವಾಗಿ ಹಚ್ಚುವುದರಿಂದ ಉತ್ತಮ ಪರಿಹಾರ ಸಿಗುತ್ತದೆ.
  • ಗಡಿಬಿಡಿಯಲ್ಲಿ ಅಡುಗೆ ಮನೆಯಲ್ಲಿ ಬಿಸಿ ತಾಗಿ ಸುಟ್ಟ ಗಾಯಗಳಿಗೆ ಸ್ವಲ್ಪ ಜೇನುತುಪ್ಪ ಹಚ್ಚಿದರೆ ಗಾಯದ ಉರಿ ಹಾಗೂ ಕಲೆ ಕೂಡ ಮಾಯವಾಗುತ್ತದೆ.
  • ಚರ್ಮ ರೋಗಗಳಿಗೆ ಜೇನುತುಪ್ಪದ ಜೊತೆ ಹಿಪ್ಪಲಿ ಚೂರ್ಣವನ್ನು ಬೆರೆಸಿ ಸೇವಿಸುವುದರಿಂದ ಬೇಗನೆ ಕಡಿಮೆಯಾಗುತ್ತದೆ.
  • ಹುಣ್ಣು ಹಾಗೂ ಗಾಯಗಳಿಗೂ ಜೇನುತುಪ್ಪ ಉತ್ತಮ ಮದ್ದಾಗಿದೆ. ಹತ್ತಿಯನ್ನು ಜೇನುತುಪ್ಪದಲ್ಲಿ ಅದ್ದಿ, ಗಾಯ ಅಥವಾ ಹುಣ್ಣಿನ ಮೇಲೆ ಇಟ್ಟು ಪಟ್ಟಿ ಕಟ್ಟಬೇಕು. ಇದರಿಂದ ಯಾವುದೇ ರೀತಿಯ ಸೋಂಕು ಬರದೇ, ಬೇಗನೆ ಗಾಯ ವಾಸಿಯಾಗುತ್ತದೆ. ಕೊನೆಯಲ್ಲಿ ಗಾಯದ ಕಲೆಯೂ ಕೂಡ ಮಾಯವಾಗುತ್ತದೆ.
  • ಕಿವಿಯ ಆರೋಗ್ಯಕ್ಕೆ ಜೇನುತುಪ್ಪ ಸಹಕಾರಿಯಾಗಿದೆ.
    ಕಿವಿಯ ನೋವು ಅಥವಾ ಕಿವಿಯಿಂದ ರಸ ಸೋರುತ್ತಿದ್ದರೆ ಶುಂಠಿಯನ್ನು ಜಜ್ಜಿ ರಸ ತೆಗೆದು, ಆ ಕಾಳು ಚಮಚ ರಸಕ್ಕೆ ಸೈಂದವ ಲವಣ ಹಾಗೂ ಒಂದು ಚಮಚ ಜೇನುತುಪ್ಪ ಬೆರೆಸಿ ಬಿಸಿ ಮಾಡಬೇಕು. ಸ್ವಲ್ಪ ತಣಿದ ನಂತರ ಕಿವಿಗೆ ಎರಡು ಹನಿ ಹಾಕುವುದರಿಂದ ಎಂತಹದೆ ರೀತಿಯ ಕಿವಿ ನೋವು ಮಾಯವಾಗುತ್ತದೆ.
  • ಮಲಬದ್ಧತೆ ಹಾಗೂ ಬೇಧಿಗೂ ಜೇನುತುಪ್ಪ ಉಪಯುಕ್ತವಾಗಿದೆ.
  • ಎರಡು ಚಮಚ ಜೇನುತುಪ್ಪ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಗುತ್ತದೆ.
  • ತುಂಬಾ ನೀರು ನೀರಾಗಿ ಬೇಧಿಯಾಗುತ್ತಿದ್ದರೆ ದಾಳಿಂಬೆ ರಸದೊಡನೆ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು. ಇದು ತ್ವರಿತ ಪರಿಣಾಮವನ್ನು ನೀಡುತ್ತದೆ.
  • ರಾತ್ರಿಯ ಸಮಯದಲ್ಲಿ ಪದೇ ಪದೇ ಮೂತ್ರ ವಿಸರ್ಜನೆಯಾಗುತಿದ್ದರೆ ಇಲ್ಲಿದೆ ಜೇನುತುಪ್ಪದ ಉತ್ತಮ ಪರಿಹಾರ.
    -ರಾತ್ರಿ ವೇಳೆಯಲ್ಲಿ ಬರುವ ಈ ಸಮಸ್ಯೆಗೆ ಒಂದು ಚಮಚ ಜೇನುತುಪ್ಪ ಸೇವಿಸಿ ಮಲಗುವ ಅಭ್ಯಾಸವನ್ನು ಮಾಡಿಕೊಂಡರೆ ಬಹು ಮೂತ್ರ ಸಮಸ್ಯೆ ಬೇಗ ಕಡಿಮೆಯಾಗುತ್ತದೆ.
  • ಪ್ರಾಣಿಗಳ ಕಡಿತದ ಪರಿಣಾಮವನ್ನು ತುರ್ತಾಗಿ ಕಡಿಮೆ ಮಾಡಲು ಜೇನುತುಪ್ಪವನ್ನು ಬಳಸುತ್ತಾರೆ.
    -ಯಾವುದೇ ರೀತಿಯ ಪ್ರಾಣಿಗಳು ಕಡಿದಾಗ, ತಕ್ಷಣವೇ ಜೇನುತುಪ್ಪವನ್ನು ಪ್ರಾಣಿಗಳು ಕಡಿದ ಜಾಗಕ್ಕೆ ಹಚ್ಚಬೇಕು. ಜೊತೆಗೆ ಬೆಚ್ಚಗಿನ ನೀರಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಕುದಿಸಬೇಕು. ಇದು ವಿಷವನ್ನು ದೇಹದೊಳಗೆ ಏರಲು ಬಿಡುವುದಿಲ್ಲ.
  • ಹೆಣ್ಣು ಮಕ್ಕಳ ಬಿಳಿ ಮುಟ್ಟಿನ ಸಮಸ್ಯೆಗಳಿಗೂ ಜೇನುತುಪ್ಪ ಸಹಕಾರಿಯಾಗಿದೆ.
    -ಹೆಣ್ಣು ಮಕ್ಕಳ ಈ ಸಮಸ್ಯೆಗೆ ಒಂದು ಉತ್ತಮ ಪರಿಹಾರ ಇಲ್ಲಿದೆ. ಒಂದು ರಸಬಾಳೆಹಣ್ಣನ್ನು ಕತ್ತರಿಸಿ, ಅರ್ಧ ಚಮಚ ಜೇನುತುಪ್ಪ ಹಾಗೂ ಕಾಲು ಚಮಚ ದನದ ತುಪ್ಪವನ್ನು ಬೆರೆಸಿ ತಿನ್ನಬೇಕು. ಇದು ಸಮಸ್ಯೆಗಳನ್ನು ತ್ವರಿತವಾಗಿ ಕಡಿಮೆಗೊಳಿಸುತ್ತದೆ. ಜೊತೆಗೆ ಮಹಿಳೆಯರು ಆದಷ್ಟು ದೇಹವನ್ನು ತಂಪಾಗಿರುವಂತೆ ನೋಡಿಕೊಳ್ಳಬೇಕು. ಇದು ಕೂಡ ಮಹಿಳೆಯರ ಆರೋಗ್ಯಕ್ಕೆ ಉತ್ತಮವಾಗಿದೆ.

ಇನ್ನೂ ಅನೇಕ ಉಪಯೋಗಗಳನ್ನು ನಾವು ಜೇನುತುಪ್ಪದಿಂದ ಪಡೆಯಬಹುದು. ವಾಂತಿಯಲ್ಲಿ ರಕ್ತ ಕಂಡು ಬಂದರೆ ಜೇನುತುಪ್ಪದ ಜೊತೆ ಭತ್ತದ ಅರಳಿನ ಪುಡಿ ಹಾಗೂ ಸ್ವಲ್ಪ ತುಪ್ಪ ಬೆರೆಸಿ ಸೇವಿಸಬೇಕು. ಇದು ರಕ್ತವಾಂತಿಯನ್ನು ಕಡಿಮೆಗೊಳಿಸುತ್ತದೆ. ದೇಹದ ಆರೋಗ್ಯಕ್ಕೆ ಜೇನುತುಪ್ಪ ಉತ್ತಮವಾಗಿದೆ.

ಅಮೃತವು ಅತಿಯಾದರೆ ವಿಷ ಎಂಬಂತೆ ಸಿಹಿ ಮತ್ತು ಒಳ್ಳೆಯದು ಎಂಬ ಕಾರಣಕ್ಕೆ ಅಳತೆ ಮೀರಿ ಸೇವಿಸಬಾರದು. ಬಿಸಿ ಮಾಡಿದ ಜೇನುತುಪ್ಪವನ್ನು ಎಂದಿಗೂ ಸೇವಿಸಬಾರದು. ಹಾಗೆಯೇ ದನದ ತುಪ್ಪ ಹಾಗೂ ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು. ಇನ್ನೂ ಅನೇಕ ಕಾರಣಗಳಿಗೆ ಓಗೊಟ್ಟು ಹಿತ ಮಿತವಾಗಿ ಜೇನುತುಪ್ಪವನ್ನು ಬಳಸಬೇಕು.

ಜೇನುತುಪ್ಪ ಆಹಾರ ಹಾಗೂ ಔಷಧಿಗಳಲ್ಲಿ ಮಾತ್ರವಲ್ಲದೆ, ಸೌಂದರ್ಯವರ್ಧಕವು ಆಗಿದೆ. ಅನೇಕ ಫೇಸ್ ಪ್ಯಾಕ್ ಗಳಲ್ಲಿ ಜೇನುತುಪ್ಪವನ್ನು ಬಳಸುತ್ತಾರೆ. ಅದು ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ಉತ್ತಮವಾಗಿದೆ.

ಹೀಗೆ ಎಲ್ಲ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉತ್ತಮವಾಗಿರುವ ಜೇನುತುಪ್ಪದ ಅನೇಕ ಮಾಹಿತಿಗಳನ್ನು ಈ ಲೇಖನದ ಮೂಲಕ ಅರಿತಿದ್ದೇವೆ. ಸಮಸ್ಯೆಗಳನ್ನು ದೂರ ಮಾಡಲು ಮನೆಮದ್ದುಗಳನ್ನು ಮಾಡಿ ಪ್ರಯತ್ನಿಸಿ, ಉತ್ತಮ ಪರಿಹಾರಗಳನ್ನು ಪಡೆಯಿರಿ ಎಂಬುದು ನಮ್ಮ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

3 thoughts on “ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು”

  1. Pingback: ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟು

Leave a Comment

Your email address will not be published. Required fields are marked *

Scroll to Top