ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

Spread the love

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು
ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ, ಕಡಿಮೆ ನೀರನ್ನು ಕುಡಿಯುವುದು, ಇನ್ನೂ ಅನೇಕ ಕಾರಣಗಳಿಂದ ಮಲಬದ್ಧತೆ ಸಮಸ್ಯೆಗಳು ಎದುರಾಗುತ್ತದೆ. ಈ ಮಲಬದ್ಧತೆಯೇ ಮೂಲವ್ಯಾಧಿಗೆ ಮೂಲ ಕಾರಣವಾಗುತ್ತದೆ. 

ಮೂಲವ್ಯಾಧಿಯ ಪ್ರಮುಖ ಲಕ್ಷಣಗಳು ಗುದದ್ವಾರದಲ್ಲಿನ ಮೊಳಕೆಗಳು, ಮಲದ ಜೊತೆ ರಕ್ತಸ್ರಾವ, ಗುದದ್ವಾರದಲ್ಲಿನ ಸೀಳುಗಳು ಹಾಗೂ ನೋವು ಕೂಡ ಇರುತ್ತದೆ. ಇಂದಿನ ಲೇಖನದಲ್ಲಿ ಮೂಲವ್ಯಾಧಿಗೆ ಪರಿಹಾರಗಳನ್ನು ನೀಡುವ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.

ಮೂಲವ್ಯಾಧಿಗೆ ಸೂಕ್ತವಾಗಿರುವ ಮನೆಮದ್ದುಗಳು

  • ಹಾಗಲಕಾಯಿ ಬಳ್ಳಿಯ ಬೇರು ಮೂಲವ್ಯಾಧಿಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ. ಹಾಗಲಕಾಯಿ ಬಳ್ಳಿಯ ಬೇರನ್ನು ನೀರಿನಲ್ಲಿ ತೇಯ್ದು ಗುದದ್ವಾರಕ್ಕೆ ಲೀಪಿಸಬೇಕು. ಇದರಿಂದ ಗುದದ್ವಾರದ ಸೀಳುಗಳು ಹಾಗೂ ನೋವು ಕಡಿಮೆಯಾಗುತ್ತದೆ.
  • ನಾಚಿಕೆ ಮುಳ್ಳು ಕೂಡ ಮೂಲವ್ಯಾಧಿ ಸಮಸ್ಯೆಯ ನಿವಾರಣೆಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ. ನಾಚಿಕೆ ಮುಳ್ಳಿನ ಗಿಡವನ್ನು ತೆಗೆದುಕೊಳ್ಳಬೇಕು. ಗಿಡದಲ್ಲಿನ ಹೂವನ್ನು ತೆಗೆದು ಹಾಕಬೇಕು. ಉಳಿದ ಎಲೆಗಳು ಹಾಗೂ ಬೇರು ಎಲ್ಲವನ್ನು ಕತ್ತರಿಸಿ, ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿ ಬಂದ ನಂತರ, ಹಾಗೆಯೇ ನೀರು ಅರ್ಧದಷ್ಟು ಇಂಗಿದ ನಂತರ ಒಲೆಯನ್ನು ಆರಿಸಿ, ಸೋಸಿಕೊಂಡು ಕುಡಿಯಬೇಕು. ಇದನ್ನು ಒಂದು ವಾರಗಳ ತನಕ ಕುಡಿಯಬೇಕು. ಇದರಿಂದ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ಸಿಗುತ್ತದೆ.
  • ಮೂಲವ್ಯಾಧಿಯ ರಕ್ತಸ್ರಾವವನ್ನು ತ್ವರಿತವಾಗಿ ನಿಲ್ಲಿಸಲು ಉತ್ತಮ ಪರಿಹಾರವೆಂದರೆ 10 ಗ್ರಾಂ ಕರಿಎಳ್ಳು ಹಾಗೂ 5 ಗ್ರಾಂ ಕಲ್ಲುಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಅರೆದುಕೊಳ್ಳಬೇಕು. ಈ ಕರಿಎಳ್ಳು ಹಾಗೂ ಕಲ್ಲುಸಕ್ಕರೆ ಮಿಶ್ರಣವನ್ನು ಸೇವಿಸಬೇಕು. ಇದರ ಜೊತೆ ಆಡಿನ ಹಾಲನ್ನು ಕುಡಿಯುವುದು ಅತಿ ಉತ್ತಮವಾಗಿದೆ.
  • ಹಾಗಲಕಾಯಿ ಇಲ್ಲವೇ ಹಾಗಲಕಾಯಿ ಸೊಪ್ಪನ್ನು ಜಜ್ಜಿ ರಸವನ್ನು ಹಿಂಡಿಕೊಳ್ಳಬೇಕು. ಈ ರಸವನ್ನು ಕಲ್ಲುಸಕ್ಕರೆಯೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು. ಇದನ್ನು ಸತತವಾಗಿ ಒಂದು ವಾರಗಳ ಕಾಲ ಮಾಡಬೇಕು. ಇದರಿಂದ ಮೂಲವ್ಯಾಧಿ ಗುಣಮುಖವಾಗುತ್ತದೆ.

( ->ಹಾಗಲಕಾಯಿ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನವನ್ನು ಓದಿರಿ )

  • ಸುವರ್ಣಗಡ್ಡೆಯನ್ನು ಸಣ್ಣ ತುಂಡಾಗಿ ಕತ್ತರಿಸಿಕೊಂಡು ಚೆನ್ನಾಗಿ ಒಣಗಿಸಿಕೊಂಡು ಪುಡಿಮಾಡಿಕೊಳ್ಳಬೇಕು. ಒಂದು ಚಮಚ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ, ದಿನಕ್ಕೊಮ್ಮೆ ಸೇವಿಸುವುದರಿಂದ ಮೂಲವ್ಯಾಧಿಯು ಬೇಗನೆ ಗುಣವಾಗುತ್ತದೆ. ಇದು ಮೂಲವ್ಯಾಧಿಗೆ ಅಷ್ಟೇ ಅಲ್ಲದೇ ಕೆಮ್ಮು, ದಮ್ಮು ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೂ ಉತ್ತಮ ಪರಿಹಾರವನ್ನು ನೀಡುತ್ತದೆ.
  • ಈರುಳ್ಳಿ ಕೂಡ ಮೂಲವ್ಯಾಧಿಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ. ಹಸಿಯಾಗಿ ಈರುಳ್ಳಿಯನ್ನು ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ಪರಿಹಾರವಾಗುತ್ತದೆ. ಹಾಗೆಯೇ ಈರುಳ್ಳಿಯನ್ನು ಜಜ್ಜಿಕೊಂಡು ರಸ ಹಿಂಡಿಕೊಳ್ಳಬೇಕು. ಈ ಈರುಳ್ಳಿಯ ರಸವನ್ನು ಕಲ್ಲುಸಕ್ಕರೆಯ ಜೊತೆಗೆ ಬೆರೆಸಿ ಸೇವಿಸಬೇಕು. ಇದು ಕೂಡ ಮೂಲವ್ಯಾಧಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.

(-> ಈರುಳ್ಳಿಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನವನ್ನು ಓದಿರಿ )

  • ಕಹಿ ಸೋರೆಕಾಯಿಯನ್ನು ಇಲ್ಲವೇ ಕಹಿ ಹಿರೇಕಾಯಿಯನ್ನು ಸಣ್ಣಗೆ ಕತ್ತರಿಸಿಕೊಂಡು, ವಿನೆಗರ್ ಹಾಗೂ ಬೆಲ್ಲದ ಜೊತೆಗೆ ಬೆರೆಸಿ ನುಣ್ಣಗೆ ಅರೆದುಕೊಳ್ಳಬೇಕು. ಈ ಮಿಶ್ರಣವನ್ನು ಮೂಲವ್ಯಾಧಿಯ ಮೊಳೆಗಳಿಗೆ ಲೇಪಿಸಬೇಕು. ಇದರಿಂದ ಮೂಲವ್ಯಾಧಿ ಮೊಳೆಗಳು ತ್ವರಿತವಾಗಿ ಕಡಿಮೆಯಾಗಿ, ಕ್ರಮೇಣ ನಾಶವಾಗುತ್ತದೆ. ಇದು ಅತಿ ಉತ್ತಮ ಪರಿಹಾರಗಳನ್ನು ನೀಡುತ್ತದೆ.
  • ಎಕ್ಕೆಯ ಹಾಗೂ ನುಗ್ಗೆಯ ಎಲೆಗಳನ್ನು ಶುಚಿಗೊಳಿಸಿಕೊಂಡು, ನುಣ್ಣಗೆ ಅರೆದುಕೊಳ್ಳಬೇಕು. ಈ ಎಕ್ಕೆ ಹಾಗೂ ನುಗ್ಗೆ ಎಲೆಯ ಮಿಶ್ರಣವನ್ನು ಗುದದ್ವಾರದ ಬಳಿ ಲೇಪಿಸುವುದರಿಂದ ಮೂಲವ್ಯಾಧಿಯ ಮೊಳೆಗಳು ನಿವಾರಣೆಯಾಗುತ್ತದೆ.

( ->ಎಕ್ಕೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನವನ್ನು ಓದಿರಿ )

  • ಮೂಲವ್ಯಾಧಿ ಸಮಸ್ಯೆಗೆ ಒಳಪಟ್ಟವರು ಜಾಸ್ತಿ ತಮ್ಮ ದೇಹಕ್ಕೆ ನೀರಿನ ಪೂರೈಕೆಯನ್ನು ಮಾಡುತ್ತಿರಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಮಜ್ಜಿಗೆ ಅಥವಾ ಎಳೆನೀರನ್ನು ಕುಡಿಯುವುದು ಬಲು ಉತ್ತಮವಾಗಿದೆ. ಹಾಗೆಯೇ ಇದು ಮೂಲವ್ಯಾಧಿಯ ಉರಿನೋವುಗಳನ್ನು ಕಡಿಮೆಮಾಡಿಸುತ್ತದೆ.
  • ಮೂಲವ್ಯಾಧಿ ಸಮಸ್ಯೆಗೆ ಉತ್ತಮ ಆಹಾರ ಪದ್ದತಿಯನ್ನು ಅನುಸರಿಸುವುದು ಉತ್ತಮ ಪರಿಹಾರವಾಗಿರುತ್ತದೆ. ಮೂಲವ್ಯಾಧಿ ಸಮಸ್ಯೆ ಇದ್ದವರು ಸುವರ್ಣಗಡ್ಡೆ ಅಥವಾ ಮೂಲಂಗಿಯನ್ನು ಹೆಚ್ಚಾಗಿ ಆಹಾರದಲ್ಲಿ ಉಪಯೋಗಿಸುವುದು ಅವಶ್ಯಕವಾಗಿದೆ. ಸುವರ್ಣಗಡ್ಡೆ ಅಥವಾ ಮೂಲಂಗಿಯನ್ನು ಹಸಿಯಾಗಿ ತಿನ್ನಬಹುದು, ಇದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಹಾಗೆಯೇ ಬೇಯಿಸಿ ಕೂಡ ನಾವು ಸೇವಿಸಬಹುದು. ಮೂಲವ್ಯಾಧಿ ನಿವಾರಣೆಗೆ ಸುವರ್ಣಗಡ್ಡೆ ಮತ್ತು ಮೂಲಂಗಿ ಉತ್ತಮವಾಗಿದೆ.
  • ಮೂಲಂಗಿಯು ಮೂಲವ್ಯಾಧಿ ಸಮಸ್ಯೆಗೆ ಅತಿ ಉತ್ತಮವಾಗಿದ್ದು, ಹಸಿ ಮೂಲಂಗಿಯನ್ನು ತುರಿದು ರಾತ್ರಿಯೆ ಮಜ್ಜಿಗೆಯಲ್ಲಿ ನೆನೆಸಬೇಕು. ಮರುದಿನ ಬೆಳಿಗ್ಗೆ ಬೇಗನೆ ಎದ್ದು ಖಾಲಿ ಹೊಟ್ಟೆಗೆ ಮೂಲಂಗಿ  ನೆನೆಸಿದ ಮಜ್ಜಿಗೆಯನ್ನು ಕುಡಿಯುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಿಸಬಹುದು.

( ->ಮೂಲಂಗಿ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನವನ್ನು ಓದಿರಿ )

  • ಹುಣಸೆ ಹಣ್ಣಿನ ಬೀಜಗಳು ಕೂಡ ಮೂಲವ್ಯಾಧಿಗೆ ಉತ್ತಮ ಚಿಕೆತ್ಸೆಯನ್ನು ನೀಡುತ್ತದೆ. ಹುಣಸೆ ಬೀಜಗಳನ್ನು ಒಣಗಿಸಿ, ಪುಡಿ ಮಾಡಿಕೊಳ್ಳಬೇಕು. ಅರ್ಧ ಚಮಚದಷ್ಟು ಪುಡಿಯನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸಬೇಕು. ಇದು ಮೂಲವ್ಯಾಧಿಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ.

( ->ಹುಣಸೆ ಹಣ್ಣಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನವನ್ನು ಓದಿರಿ )

  • ಬೆಳ್ಳುಳ್ಳಿ, ಬೇವಿನ ಬೀಜದ ತಿರುಳು, ಒಣ ಶುಂಠಿ ಹಾಗೂ ಹಿಂಗು ಇವು ನಾಲ್ಕನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರಿನಲ್ಲಿ ನುಣ್ಣಗೆ ಅರೆಯಬೇಕು. ಈ ಮಿಶ್ರಣವನ್ನು ಸಣ್ಣ ಸಣ್ಣ ಮಾತ್ರೆಗಳಾಗಿ ಮಾಡಿ ಒಣಗಿಸಿಟ್ಟುಕೊಳ್ಳಬೇಕು. ಒಂದು ದಿನಕ್ಕೆ ಎರಡು ಗುಳಿಗೆಯಂತೆ ನಿತ್ಯ ನೀರಿನ ಜೊತೆಯಲ್ಲಿ ತೆಗೆದುಕೊಳ್ಳಬೇಕು. ಇದರಿಂದ ಮೂಲವ್ಯಾಧಿ ಸಮಸ್ಯೆಯು ಬೇಗನೆ ಗುಣವಾಗುತ್ತದೆ.

( ->ಬೆಳ್ಳುಳ್ಳಿಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನವನ್ನು ಓದಿರಿ )

  • ಹೆಸರುಕಾಳು ಹಾಗೂ ಬೇವಿನ ಎಲೆಯ ಪಕೋಡ ಮೂಲವ್ಯಾಧಿಗೆ ಉತ್ತಮ ಆಹಾರವಾಗಿದೆ. ಹೆಸರುಬೇಳೆಯನ್ನು ರಾತ್ರಿಯೆ ನೆನೆಸಿ ಇಡಬೇಕು. ಮರುದಿನ ಬೆಳಿಗ್ಗೆ ಹೆಸರುಬೇಳೆಯನ್ನು ಬೇವಿನ ಎಲೆಗಳೊಂದಿಗೆ ರುಬ್ಬಿಕೊಳ್ಳಬೇಕು. ಹಾಗೆಯೇ ಪಕೋಡಗಳಂತೆ ತಯಾರಿಸಿ ಹಸುವಿನ ತುಪ್ಪದಲ್ಲಿ ಕರೆಯಬೇಕು. ಇದನ್ನು ಒಂದು ತಿಂಗಳ ಕಾಲ ಸೇವಿಸುವುದರಿಂದ ಮೂಲವ್ಯಾಧಿಯ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಿಕೊಳ್ಳಬಹುದು.

( ->ಬೇವಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )

  • ಗರಿಗೆ ಹುಲ್ಲುಗಳಿಂದ ಕೂಡ ಮೂಲವ್ಯಾಧಿ ನಿವಾರಣೆಗೆ ಮನೆಮದ್ದುಗಳನ್ನು ತಯಾರಿಸಬಹುದು. ಬೇರು ಸಹಿತ ಗರಿಕೆಹುಲ್ಲನ್ನು ಸಣ್ಣಗೆ ಕತ್ತರಿಸಿಕೊಂಡು ರಾತ್ರಿಯೆ ನೀರಿನಲ್ಲಿ ನೆನೆ ಹಾಕಬೇಕು. ಮರುದಿನ ಬೆಳಿಗ್ಗೆ ಕಿವುಚಿಕೊಂಡು ನೀರಿನ ಸಮೇತ ಕುಡಿಯಬೇಕು. ಇದು ಅರೋಗ್ಯವರ್ಧಕವಾಗಿದ್ದು, ಮೂಲವ್ಯಾಧಿಗೆ ಉತ್ತಮ ಮದ್ದಾಗಿದೆ.
  • ಅಮೃತಬಳ್ಳಿಯು ಕೂಡ ಮೂಲವ್ಯಾಧಿಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ. ಅಮೃತಾಬಳ್ಳಿಯನ್ನು ಜಜ್ಜಿಕೊಂಡು ರಸವನ್ನು ಹಿಂಡಿಕೊಳ್ಳಬೇಕು. ಆ ರಸಕ್ಕೆ ಸಮಪ್ರಮಾಣದಲ್ಲಿ ಕಲ್ಲುಸಕ್ಕರೆಯನ್ನು ಬೆರೆಸಿ ತಿನ್ನುವುದರಿಂದ ಮೂಲವ್ಯಾಧಿಗೆ ಉತ್ತಮ ಪರಿಹಾರಗಳು ದೊರೆಯುತ್ತದೆ. ಉತ್ತಮ ಪರಿಹಾರಕ್ಕಾಗಿ ಇದನ್ನು ಸತತವಾಗಿ 48 ದಿನಗಳು ಮಾಡಬೇಕು.

( ->ಅಮೃತಬಳ್ಳಿಯ ಬಗೆಗಿನ ಮಾಹಿತಿಗಳನ್ನು ಅರಿಯಲು ನಮ್ಮ ಹಿಂದಿನ ಲೇಖನಗಳನ್ನು ಓದಿರಿ )

  • ಬಸಳೆ ಸೊಪ್ಪು ಕೂಡ ಮೂಲವ್ಯಾಧಿಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ. ಬಸಳೆ ಸೊಪ್ಪಿನ ಪಲ್ಯವನ್ನು ಸೇವಿಸುವುದು ಕೂಡ ಮೂಲವ್ಯಾಧಿ ನಿವಾರಣೆಗೆ ಉತ್ತಮವಾಗಿದೆ. ಬಸಳೆ ಸೊಪ್ಪಿನ ತಂಬುಳಿ ಕೂಡ ಮೂಲವ್ಯಾಧಿ ನಿವಾರಣೆಗೆ ಉತ್ತಮ ಆಹಾರವಾಗಿದೆ.

( ->ಬಸಳೆ ಸೊಪ್ಪಿನ ಬಗೆಗಿನ ಮಾಹಿತಿಗಳನ್ನು ಅರಿಯಲು ನಮ್ಮ ಹಿಂದಿನ ಲೇಖನವನ್ನು ಒಮ್ಮೆ ಓದಿರಿ )

  • ಆಣಿಲೆಕಾಯಿಯನ್ನು ಚೆನ್ನಾಗಿ ಒಣಗಿಸಿಕೊಂಡು ಕುಟ್ಟಿ ಪುಡಿಮಾಡಿಕೊಳ್ಳಬೇಕು. ಈ ಪುಡಿಯನ್ನು ಅರ್ಧ ಚಮಚ, ಬೆಲ್ಲದೊಡನೆ ಬೆರೆಸಿ, ಸ್ವಲ್ಪ ನೀರನ್ನು ಸೇರಿಸಿ ಸೇವಿಸಬೇಕು. ಇದನ್ನು ಒಂದು ತಿಂಗಳ ಕಾಲ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.
  • ಮೂಲವ್ಯಾಧಿ ಸಮಸ್ಯೆಗಳ ಪರಿಹಾರಕ್ಕೆ ಕಮಲದ ದಳಗಳನ್ನು ಕಲ್ಲುಸಕ್ಕರೆಯೊಂದಿಗೆ ಅರೆದುಕೊಂಡು ಸೇವಿಸಬೇಕು. ಇದು ಕೂಡ ಮೂಲವ್ಯಾಧಿ ನಿವಾರಣೆಗೆ ಉತ್ತಮ ಪರಿಹಾರಗಳನ್ನು ನೀಡುತ್ತದೆ.
  • ಮೂಲವ್ಯಾಧಿ ನಿವಾರಣೆಗೆ ಇನ್ನೊಂದು ಉತ್ತಮ ಪರಿಹಾರವೆಂದರೆ 4 ಚಮಚ ಇಸಬಗೋಲ್ ಬೀಜಗಳನ್ನು ಕುಟ್ಟಿ ಪುಡಿಮಾಡಿಕೊಂಡು ಒಂದು ಗಂಟೆ ನೀರಿನಲ್ಲಿ ನೆನೆಸಬೇಕು. ಊಟ ಮಾಡುವ ಒಂದು ಗಂಟೆ ಮೊದಲು ಈ ಇಸಬಗೋಲ್ ಬೀಜದ ನೀರನ್ನು ಕುಡಿಯಬೇಕು. ಇದು ಕೂಡ ಮೂಲವ್ಯಾಧಿ ನಿಯಂತ್ರಣಕ್ಕೆ ಅತಿ ಉತ್ತಮವಾಗಿದೆ.

ಮೂಲವ್ಯಾಧಿ ಸಮಸ್ಯೆಯ ಪರಿಹಾರಕ್ಕೆ ಮೊದಲು ನಾವು ಆಹಾರ ಪದ್ದತಿಯನ್ನು ಸುಧಾರಿಸಿಕೊಳ್ಳಬೇಕು. ಜಾಸ್ತಿ ಜಾಸ್ತಿಯಾಗಿ ನೀರನ್ನು ಕುಡಿಯಬೇಕು. ಅನ್ನದ ಬದಲು ಗಂಜಿಯನ್ನು ಆಹಾರವಾಗಿ ಸ್ವೀಕರಿಸಬೇಕು. ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರವನ್ನು ಸೇವಿಸಬೇಕು. ನಾರಿನ ಅಂಶವುಳ್ಳ ಆಹಾರ ಪದಾರ್ಥಗಳ ಸೇವನೆ ಉತ್ತಮವಾಗಿದ್ದು, ಇದು ಮಲಬದ್ಧತೆಯನ್ನು ನಿವಾರಿಸಿ, ಮೂಲವ್ಯಾಧಿ ಸಮಸ್ಯೆಗಳನ್ನು ಕೂಡ ದೂರವಿರಿಸಲು ಸಹಾಯ ಮಾಡುತ್ತದೆ.

ಇಂದಿನ ಲೇಖನದಲ್ಲಿ ವಿವರಿಸಲಾದ ಮನೆಮದ್ದುಗಳ ಪ್ರಯೋಜನಗಳನ್ನು ಪಡೆದುಕೊಂಡು ಸಮಸ್ಯೆಗಳಿಂದ ದೂರವಾಗಿರಿ ಎಂಬುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.

(->ಮೂಲವ್ಯಾಧಿಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಮ್ಮ ಹಿಂದಿನ ಲೇಖನವನ್ನು ಓದಿರಿ)

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

Leave a Comment

Your email address will not be published. Required fields are marked *

Scroll to Top