Spread the love

ದಾಸವಾಳ(Hibiscus) ಒಂದು - ಉಪಯೋಗ ಹಲವಾರು. AI Image

ವಿಭಿನ್ನ ಬಣ್ಣದ ದಾಸವಾಳ ನಮ್ಮೆಲ್ಲರ ಮನೆ ಅಂಗಳದಲ್ಲಿ ಎಂದೂ ಇರುವ ಒಂದು ಹೂವಾಗಿದೆ. ಮನೆ ಅಂಗಳದಲ್ಲಿ ನಿತ್ಯವೂ ಅರಳಿ ರಾರಾಜಿಸುವ ಸುಂದರವಾದ ಹೂವು. ದೇವರ ಪೂಜೆಗೆ ನಿತ್ಯ ಅರ್ಪಿಸಲಾಗುವ ಈ ದಾಸವಾಳ ಎಲ್ಲಾ ಕಾಲದಲ್ಲೂ ಅರಳುವ ಒಂದು ಚಂದದ ಹೂವು.

ದಾಸವಾಳದ ಹಿನ್ನಲೆ ಹಾಗೂ ವೈಜ್ಞಾನಿಕ ಪರಿಚಯ

ದಾಸವಾಳ ಮಲೇಷಿಯಾ ದೇಶದ ರಾಷ್ಟೀಯ ಹೂವಾಗಿದ್ದು, ಮೂಲತಃ ಚೈನಾ ದೇಶದ್ದಾಗಿದೆ. ಕನ್ನಡದಲ್ಲಿ ದಾಸವಾಳವೆಂದು, ಸಂಸ್ಕೃತದಲ್ಲಿ ಜಪಾಪುಷ್ಪ ವೆಂದು, ಆಂಗ್ಲದಲ್ಲಿ ಚೈನಾ ರೋಸ್ ಎಂದು ಕರೆಯುತ್ತಾರೆ. ಚೈನಾದಲ್ಲಿ ಬೂಟನ್ನು ಪೊಲೀಷು ಮಾಡಲು ಜಜ್ಜಿದ ದಾಸವಾಳದ ದಳಗಳನ್ನು ಬಳಸುತ್ತಿದ್ದರು, ಆದ್ದರಿಂದ ದಾಸವಳಕ್ಕೆ ಶೂ ಫ್ಲವರ್ ( shoe flower ) ಎಂದು ಕರೆಯಲಾಗುತ್ತದೆ.

ಇನ್ನೂ ವೈಜ್ಞಾನಿಕ ವಿಚಾರಗಳ ಬಗ್ಗೆ ಹೇಳುವುದಾದರೆ 
ವೈಜ್ಞಾನಿಕ ಹೆಸರು : ಹೈಬಿಸ್ಕಸ್ ರೋಸಾ-ಸಿನೆನ್ಸಿಸ್ ( hibiscus rosa-sinensis)

ದಾಸವಾಳದಲ್ಲಿ ಕ್ಯಾಲ್ಸಿಯಂ, ಸಾರಜನಕ, ಫೋಸ್ಪೋರಸ್, ಕಬ್ಬಿಣ ಮತ್ತು ವಿಟಮಿನ್ ಬಿ ಹಾಗೂ ಸಿ ಇದೆ. ಇದು ಕೂದಲಿನ ಅನೇಕ ಸಮಸ್ಯೆಗಳಿಗೆ ಬಹಳ ಉಪಯುಕ್ತವಾಗಿದೆ. ಹೆಂಗಸರ ತಿಂಗಳ ಮುಟ್ಟಿನ ಸಮಸ್ಯೆಗಳಿಗೂ ಸಹಕಾರಿಯಾಗಿದೆ. ದನ- ಗಂಟಿಗಳ ಅರೋಗ್ಯ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ದಾಸವಾಳದ್ದಲ್ಲಿದೆ.

ದಾಸವಾಳದ ಉಪಯೋಗಗಳು

1. ಕೂದಲ ಆರೈಕೆಯಲ್ಲಿ ದಾಸವಾಳದ ಪಾತ್ರ

  • ದಾಸವಾಳದ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ತಲೆಯ ಬುಡಕ್ಕೆ ಚೆನ್ನಾಗಿ ಹಚ್ಚಿಕೊಂಡು ಒಣಗಿದ ನಂತರ ತೊಳೆಯುವುದರಿಂದ ಹೊಟ್ಟು ಸಮಸ್ಯೆ ದೂರವಾಗಿ, ಕೂದಲ ಬೆಳೆವಣಿಗೆ ಉತ್ತಮವಾಗುತ್ತದೆ. ಬೇಗ ಕೂದಲು ಬೆಳ್ಳಗಾಗುವುದನ್ನು ತಡೆಯಲು ಕೂಡ ಇದು ಒಳ್ಳೆಯ ಮದ್ದು.
  • ಕೆಲವರಿಗೆ ಕೂದಲು ಗುಂಪಾಗಿ ಉದುರಿ ಹೋಗುತ್ತದೆ. ಅದನ್ನು ಗುಂಜಾ ರೋಗ ಎಂದು ಕರೆಯುತ್ತಾರೆ. ಕೂದಲು ಉದುರಿದ ಕಡೆಯಲ್ಲಿ ನೀರು ಹಾಕದೆ ರುಬ್ಬಿದ ದಾಸವಾಳದ ಎಲೆ ಹಾಗೂ ಹೂವಿನ ಮಿಶ್ರಣವನ್ನು ಹಚ್ಚಬೇಕು. ಕ್ರಮೇಣ ಕೂದಲ ಬೆಳವಣಿಗೆ ಆರಂಭವಾಗುತ್ತದೆ.
  • ದಾಸವಾಳದ ಎಲೆಗಳು, ಮದರಂಗಿ ಎಲೆಗಳು ಹಾಗೂ ಕರಿಬೇವಿನ ಎಲೆಗಳು ಇವು ಮೂರನ್ನು ಚೆನ್ನಾಗಿ ತೊಳೆದು ನುಣ್ಣಗೆ ರುಬ್ಬಿಕೊಂಡು ತಲೆ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚುವುದರಿಂದ ನೈಸರ್ಗಿಕವಾಗಿ ಕೂದಲಿಗೆ ಬಣ್ಣ ಹಾಕಿದಂತಾಗುತ್ತದೆ. ಇದು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕೂದಲಿಗೆ ಉತ್ತಮ ಬಣ್ಣವನ್ನು ನೀಡುತ್ತದೆ. ಬಿಳಿ ಕೂದಲಿನ ಬೆಳೆವಣಿಗೆಯನ್ನು ಕೂಡಾ ನಿಯಂತ್ರಿಸುತ್ತದೆ.

2. ಚರ್ಮದ ಆರೋಗ್ಯಕ್ಕೆ ದಾಸವಾಳದ ಮನೆಮದ್ದುಗಳು

  • ಮುಖದ ಮೇಲಿನ ಮೊಡವೆಗಳು ಹಾಗೂ ಗುಳ್ಳೆಗಳಿಗೆ ದಾಸವಾಳದ ಎಣ್ಣೆಯೂ ಬಹಳ ಉಪಯುಕ್ತವಾಗಿದೆ. ದಾಸವಾಳದ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಲೆಗಳು ಕಡಿಮೆಯಾಗುವುದಲ್ಲದೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
  • ಬಿಳಿಯ ಅಥವಾ ಕೆಂಪು ದಾಸವಾಳವನ್ನು ರುಬ್ಬಿಕೊಂಡು, ಆ ಮಿಶ್ರಣಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ, ಒಣಗಿದ ನಂತರ ತೊಳೆಯಬೇಕು, ಇದರಿಂದ ಮುಖದ ಕಾಂತಿ ಜಾಸ್ತಿಯಾಗುತ್ತದೆ.

3. ಹೆಣ್ಣು ಮಕ್ಕಳ ಆರೋಗ್ಯಕ್ಕೆ ದಾಸವಾಳದ ಮಮೆಮದ್ದುಗಳು

  • ಸರಿಯಾದ ಸಮಯಕ್ಕೆ ಮುಟ್ಟಾಗದಿದ್ದರೆ ಹೆಣ್ಣುಮಕ್ಕಳು ದಾಸವಾಳದ ಹೂವನ್ನು ನುಣ್ಣಗೆ ಅರೆದು ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ವಾರಗಳ ಸೇವಿಸಬೇಕು. ಹೀಗೆ ಮಾಡುವುದರಿಂದ ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತದೆ.
  • ಬಿಳಿ ದಾಸವಾಳದ ಹೂವುಗಳನ್ನು ನೆರಳಲ್ಲಿ ಒಣಗಿಸಿಕೊಂಡು ಪುಡಿ ಮಾಡಿಕೊಳ್ಳಬೇಕು. ಆ ಪುಡಿಯನ್ನು ದಿನಕ್ಕೆ ಎರಡು ಬಾರಿ ಒಂದು ಚಮಚ ಸೇವಿಸಿದರೂ ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತದೆ.
  • ಹೆಣ್ಣು ಮಕ್ಕಳಲ್ಲಿನ ಬಿಳಿ ಮುಟ್ಟು ಸಮಸ್ಯೆ ನಿವಾರಣೆಗಾಗಿ ಬಿಳಿ ದಾಸವಾಳ ಹೂವಿನ ದಳಗಳನ್ನು ಜೀರಿಗೆ ಹಾಗೂ ಕಲ್ಲುಸಕ್ಕರೆಯಲ್ಲಿ ಅರೆದುಕೊಂಡು, ಒಂದು ಲೋಟ ಮೊಸರಿನಲ್ಲಿ ಬೆರೆಸಿ ಕುಡಿಯಬೇಕು.

ಆರೋಗ್ಯಕರ ಆಹಾರದಲ್ಲಿ ದಾಸವಾಳದ ಪಾತ್ರ

1. ದಾಸವಾಳದ ಪಾನೀಯ

ಬಿಸಿಲಿನ ಬೇಗೆಯ ಆಯಾಸಕ್ಕೆ ಪರಿಹಾರ ಮನೆಯಲ್ಲಿ ಫ್ಯಾನ್ ನ ಕೆಳಗೆ ಕೂತರೂ ದೇಹಕ್ಕೆ ತಣಿಯುವುದಿಲ್ಲ, ಅದೇ ಕಾರಣಕ್ಕೆ ಹೊಟ್ಟೆಗೆ ಒಂದು ತಂಪಾದ ಪಾನೀಯ ಕುಡಿದರೆ ದೇಹವು ತ್ವರಿತವಾಗಿ ಉತ್ತಮ ತಂಪನೆಯ ಅನುಭವ ಪಡೆಯುತ್ತದೆ. ಹೊಟ್ಟೆಯನ್ನು ತಂಪು ಮಾಡಲು ದಾಸವಾಳದ ಪಾನೀಯ ಸೊಗಸಾಗಿರುತ್ತದೆ. ದಾಸವಾಳದ ದಳಗಳನ್ನು ಚೆನ್ನಾಗಿ ತೊಳೆದುಕೊಂಡು ರುಬ್ಬಿಕೊಳ್ಳಬೇಕು. ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ತಿಳಿ ಮಾಡಿಕೊಂಡು ಸಕ್ಕರೆ,ಜೇನುತುಪ್ಪ, ಸ್ವಲ್ಪ ಉಪ್ಪು, ಸ್ವಲ್ಪ ಏಲಕ್ಕಿ ಪುಡಿ ಹಾಗೆಯೇ ಲಿಂಬೆ ಹಣ್ಣನ್ನು ಹಿಂಡಿ ಪಾನೀಯ ತಯಾರಿಸಬೇಕು. ಬೇಕಿದ್ದರೆ ತಂಪಿನ ಬೀಜವನ್ನು ನೆನೆಸಿ ಸೇರಿಸಿಕೊಳ್ಳಬಹುದು. ಅದು ಇನ್ನೂ ಉತ್ತಮಕಾರಿಯಾಗುತ್ತದೆ. ಎಷ್ಟೋ ಹಣ ವೆಚ್ಚ ಮಾಡಿ ಕೋಲ್ಡ್ ಡ್ರಿಂಕ್ಸ್ ಅನ್ನು ಖರೀದಿಸುವ ಬದಲು ಇಂತಹ ಆರೋಗ್ಯಕರ ಪಾನೀಯಗಳನ್ನು ಮಾಡಿ ಕುಡಿದರೆ ದೇಹಕ್ಕೂ ಉತ್ತಮ.

2. ದಾಸವಾಳದ ದೋಸೆ

ದಾಸವಾಳದ ಪ್ರಯೋಜನಗಳನ್ನು ಪಡೆಯಲು ನಿತ್ಯ ಆಹಾರದ ರೂಪದಲ್ಲಿ ನಾವು ಸೇವಿಸಬಹುದು, ಅದರಲ್ಲಿ ಒಂದು ದಾಸವಾಳದ ದೋಸೆ.

ಬೇಕಾಗುವ ಪದಾರ್ಥಗಳು

  • ಅಕ್ಕಿ 1 ಕಪ್
  • ದಾಸವಾಳದ ದಳಗಳು 15
  • ಕಾಯಿ ತುರಿ ಸ್ವಲ್ಪ
  • ಉಪ್ಪು

ಮಾಡುವ ವಿಧಾನ
ನಿತ್ಯ ತಯಾರಿಸುವ ದೋಸೆಯ ತರಹವೇ… ಮೊದಲಿಗೆ ಅಕ್ಕಿ, ದಾಸವಾಳದ ದಳಗಳು ಮತ್ತು ಕಾಯಿ ತುರಿ ಎಲ್ಲವನ್ನು ಹಾಕಿ ನೀರು ದೋಸೆಯ ಹದಕ್ಕೆ ರುಬ್ಬಿಕೊಳ್ಳಬೇಕು. ಮತ್ತೆ ಸ್ವಲ್ಪ ನೀರನ್ನು ಸೇರಿಸಿ ಕಾದ ದೋಸೆ ಹೆಂಚಿನ ಮೇಲೆ ಹುಯ್ಯಬೇಕು. ಅಲ್ಲಿಗೆ ದಾಸವಾಳದ ದೋಸೆ ಸವಿಯಲು ಸಿದ್ದವಾಗುತ್ತದೆ.

ಇನ್ನೂ ಅನೇಕ ಖಾದ್ಯಗಳನ್ನು ನಾವು ದಾಸವಾಳದ ಎಲೆ ಹಾಗೂ ಹೂವುಗಳಿಂದ ತಯಾರಿಸಬಹುದು. ಒಂದು ರೆಂಬೆಯನ್ನು ನೆಟ್ಟರೆ ಸಾಕು ಸಮೃದ್ಧವಾಗಿ ಬೆಳೆಯುವ ದಾಸವಾಳ ಮಲೇಷಿಯಾ ದೇಶಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸಮಯದಲ್ಲಿ ದಾಸವಾಳದ ಹೂವಿನ ರಸವನ್ನು ಸೇರಿಸಿ ಮಾಡಿದ ಔಷಧಿಯನ್ನು ಕೊಡುತ್ತಾರೆ. ಇದರಿಂದ ಹೆರಿಗೆಯು ಸುಲಭವಾಗಿ ಆಗುತ್ತದೆ ಎಂಬುದು ಇದರ ಉದ್ದೇಶ. ಇಂತಹ ದಾಸವಾಳದ ಅನೇಕ ಆರೋಗ್ಯಕರ ಉಯೋಗಗಳು ಹಾಗೂ ಪರಿಚಯವನ್ನು ನಾವು ಈ ಲೇಖನದಲ್ಲಿ ಅರಿತಿದ್ದೇವೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಮೊಣಕಾಲು ನೋವಿಗೆ ಸರಳ ಶಾಶ್ವತ ಪರಿಹಾರ ಮನೆಯಲ್ಲೇ ಮಾಡಿ – ಪರಿಣಾಮಕಾರಿ ಸೇಬು ಪಾನೀಯ (Knee Pain home remedies)

ಮೊಣಕಾಲು ನೋವಿಗೆ ಸರಳ ಶಾಶ್ವತ ಪರಿಹಾರ ಮನೆಯಲ್ಲೇ ಮಾಡಿ - ಪರಿಣಾಮಕಾರಿ ಸೇಬು ಪಾನೀಯ. AI Generated Image ಮೊಣಕಾಲು…

6 hours ago

ನಿತ್ಯ ಬಾದಾಮಿ ಸೇವನೆಯ ಲಾಭಗಳು – ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು! (Almond Benefits)

ನಿತ್ಯ ಬಾದಾಮಿ ಸೇವನೆಯ ಲಾಭಗಳು – ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು!. AI Image ಬಾದಾಮಿಯು ದೇಶ ವಿದೇಶಗಲ್ಲಿ ಹೆಚ್ಚಾಗಿ ಬೆಳೆಯುವ…

1 day ago

ನಿಂಬೆ ಹಣ್ಣು(Lemon): ಪರಿಚಯ, ಆರೋಗ್ಯಕರ ಉಪಯೋಗಗಳು, ಮತ್ತು ರುಚಿಕರ ಪಾನೀಯ

ನಿಂಬೆ ಹಣ್ಣು: ಆರೋಗ್ಯ ಲಾಭಗಳು, ಮತ್ತು ಉಪಯೋಗಗಳು. AI Image ಪ್ರತಿ ಮನೆಯಲ್ಲಿ ನಿತ್ಯ ಉಪಯೋಗಿಸುವ ತರಕಾರಿ ಎನ್ನಬೇಕೋ ಇಲ್ಲವೇ…

2 days ago

ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಗಾಗಿ ಸುಲಭ ಮನೆ ಪರಿಹಾರಗಳು (Simple Home Remedies for Facial Hair, Dark Patches & Glowing Skin)

ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಕ್ಕಾಗಿ ಸುಲಭ ಮನೆ ಪರಿಹಾರಗಳು (Simple Home Remedies for…

3 days ago

ಮೂಲವ್ಯಾಧಿ (Piles): ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು

ಮೂಲವ್ಯಾಧಿ (Piles): ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು. AI Image ಮೂಲವ್ಯಾಧಿ (ಪೈಲ್ಸ್) ಗುದನಾಳದ ಕೆಳಭಾಗ ಮತ್ತು ಗುದದ್ವಾರದಲ್ಲಿನ ರಕ್ತನಾಳಗಳು…

4 days ago

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಕಾಳುಮೆಣಸು ಮನೆಮದ್ದು (Powerful Black Pepper Home Remedies for Common Health Issues)

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಕಾಳುಮೆಣಸು ಮನೆಮದ್ದು (Powerful Black Pepper Home Remedies for Common Health Issues).…

5 days ago

This website uses cookies.