ನೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು (Health Benefits of Jamun Fruit)

Spread the love

ನೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು (Health Benefits of Jamun Fruit). AI Image

ನೇರಳೆ ಹಣ್ಣು ತಿನ್ನಲು ಅತಿ ರುಚಿಯಾದ ಹಣ್ಣು. ಸಿಹಿ, ಹುಳಿ ಹಾಗೂ ಒಗರು ರುಚಿಯುಳ್ಳ ಈ ಹಣ್ಣಿನ ಸೇವನೆಯು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಹೆಚ್ಚಾಗಿ ಸಿಗುವ ನೇರಳೆ ಹಣ್ಣಿನ ಸ್ವಾದವು ಅತಿ ಉತ್ತಮವಾಗಿರುತ್ತದೆ. ನೇರಳೆ ಹಣ್ಣನ್ನು ಜಾಮೂನ್ ಹಣ್ಣು ಎಂದೂ ಕರೆಯುತ್ತಾರೆ. ಇಂದಿನ ಲೇಖನದಲ್ಲಿ ನೇರಳೆ ಹಣ್ಣಿನ ಪರಿಚಯ, ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.

ನೇರಳೆ ಹಣ್ಣಿನ ಕೆಲವು ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು – ಸಿಜಿಜಿಯಮ್ ಕ್ಯುಮಿನಿ (Syzygium cumini)
ಆಂಗ್ಲ ಹೆಸರು – ಜಾಮೂನ್, ಇಂಡಿಯನ್ ಬ್ಲೆಕ್ ಬೇರಿ, ಬ್ಲೆಕ್ ಪ್ಲಮ್, ಜಾವಾ ಪ್ಲಮ್ ( jamun, indian blackberry, black plum, java plum )

ನೇರಳೆ ಹಣ್ಣು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು ಅರೋಗ್ಯವರ್ಧಕವಾಗಿದೆ. ಹಾಗೆಯೇ ಇದರ ಸೇವನೆಯು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ನೇರಳೆ ಹಣ್ಣಿನಲ್ಲಿ ಕಬ್ಬಿಣ, ಮೆಗ್ನಿಷಿಯಂ, ಕ್ಯಾಲ್ಸಿಯಂ, ರಂಜಕ, ತಾಮ್ರ, ಸೋಡಿಯಂ, ಸತು ಹಾಗೂ ಪೊಟ್ಯಾಸಿಯಂ ಹಾಗೂ ವಿಟಮಿನ್ ಸಿ, ವಿಟಮಿನ್ ಬಿ ಕೂಡ ಹೇರಳವಾಗಿದೆ. ಇನ್ನೂ ನೇರಳೆ ಹಣ್ಣಿನ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ತಿಳಿಯೋಣ.

ನೇರಳೆ ಹಣ್ಣಿನ ಆರೋಗ್ಯಕರ ಉಪಯೋಗಗಳು

ಬೇಧಿ ಹಾಗೂ ಅತಿಸಾರಕ್ಕೆ ನೇರಳೆ ಹಣ್ಣು ಉತ್ತಮ ಪರಿಹಾರಗಳನ್ನು ನೀಡುತ್ತದೆ.

  • ಅತಿಸಾರದ ಸಮಸ್ಯೆಯನ್ನು ಹೊಂದಿದವರು ನೇರಳೆ ಮರದ ಚಕ್ಕೆಯ ಕಷಾಯವನ್ನು ತಯಾರಿಸಿ, ಕುಡಿಯಬೇಕು. ನೇರಳೆ ಮರದ ಚಕ್ಕೆಯನ್ನು ಒಣಗಿಸಿಕೊಂಡು, ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ನೀರಿನಲ್ಲಿ ಒಂದು ಚಮಚ ಪುಡಿಯನ್ನು ಬೆರೆಸಿ, ಅರ್ಧದಷ್ಟು ನೀರು ಇಂಗುವವರೆಗೂ ಕುದಿಸಬೇಕು. ನಂತರ ಸೋಸಿಕೊಂಡು ನೇರಳೆ ಮರದ ಚಕ್ಕೆಯ ಕಷಾಯವನ್ನು ಕುಡಿಯಬೇಕು. ಇದು ಅತಿಸಾರ ಸಮಸ್ಯೆಗೆ ಅತಿ ಉತ್ತಮವಾದ ಮದ್ದಾಗಿದೆ.
  • ಅತಿಸಾರ ಹಾಗೂ ಬೇಧಿಯ ಸಮಸ್ಯೆಗಳನ್ನು ದೂರಗೊಳಿಸಲು ನೇರಳೆ ಮರದ ಎಲೆಗಳು ಹಾಗೂ ಮಾವಿನ ಎಲೆಗಳು ಎರಡನ್ನು ಸೇರಿಸಿಕೊಂಡು ಕಷಾಯವನ್ನು ತಯಾರಿಸಿಕೊಳ್ಳಬೇಕು. ನೇರಳೆ ಮರದ ಎಲೆಗಳು ಹಾಗೂ ಮಾವಿನ ಎಲೆಗಳನ್ನು ಸ್ವಲ್ಪ ಜಜ್ಜಿಕೊಂಡು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಇಂಗಿದ ಮೇಲೆ ಓಲೆ ಆರಿಸಿ, ಸೋಸಿಕೊಂಡು ಕುಡಿಯಬೇಕು. ಇದು ಅತಿಸಾರ, ಬೇಧಿ ಹಾಗೂ ವಾಂತಿ ಎಲ್ಲಾ ರೀತಿಯ ಸಮಸ್ಯೆಗಳಿಗೂ ಉತ್ತಮ ಪರಿಹಾರಗಳನ್ನು ನೀಡುತ್ತದೆ.
  • ಉಷ್ಣದಿಂದ ಬರುವ ಬೇಧಿಗೆ ಕೂಡ ನೇರಳೆಹಣ್ಣು ಉತ್ತಮ ಮದ್ದಾಗುತ್ತದೆ. ನೇರಳೆ ಹಣ್ಣನ್ನು ಕುವುಚಿ, ಬೀಜಗಳನ್ನು ತೆಗೆದುಕೊಳ್ಳಬೇಕು. ಈ ಕಿವುಚಿದ ನೇರಳೆಹಣ್ಣನ್ನು ನಯವಾಗಿ ರುಬ್ಬಿಕೊಂಡು, ಸ್ವಲ್ಪ ಲಿಂಬೆ ರಸ ಹಾಗೂ ಜೇನುತುಪ್ಪ ಸೇರಿಸಿ ಕುಡಿಯಬೇಕು ಇದು ಭೇದಿಯ ಸಮಸ್ಯೆಯನ್ನು ನಿವಾರಿಸಲು ಉತ್ತಮವಾಗಿದೆ.
  • ಅತಿ ಉಷ್ಣದಿಂದ ಇಲ್ಲವೇ ಬೇರೆ ಕಾರಣಗಳಿಂದ ರಕ್ತಬೇಧಿಯಾಗುತ್ತಿದ್ದರೆ ನೇರಳೆ ಮರದ ಚಿಗುರೆಲೆಗಳನ್ನು ನುಣ್ಣಗೆ ಅರೆದುಕೊಂಡು ಆಡಿನ ಹಾಲಿನಲ್ಲಿ ಬೆರೆಸಿ ಕುಡಿಯಬೇಕು. ಇದು ರಕ್ತಬೇಧಿಗೆ ತ್ವರಿತ ಪರಿಹಾರಗಳನ್ನು ನೀಡುತ್ತದೆ.

ಕಟ್ಟು ಮೂತ್ರ ಹಾಗೂ ಮೂತ್ರ ಸಂಬಂಧಿ ಸಮಸ್ಯೆಗಳಿಗೆ ನೇರಳೆ ಹಣ್ಣು ಉತ್ತಮ ಪರಿಹಾರಗಳನ್ನು ನೀಡುತ್ತದೆ.

  • ಕಟ್ಟು ಮೂತ್ರ ಹಾಗೂ ಮೂತ್ರ ಸಂಬಂಧಿ ಸಮಸ್ಯೆಗಳಿಗೆ ನೇರಳೆ ಹಣ್ಣನ್ನು  ಕಿವುಚ್ಚಿಕೊಂಡು, ಬೀಜಗಳನ್ನು ತೆಗೆದುಕೊಳ್ಳಬೇಕು. ಈ ಬೀಜ ತೆಗೆದ ನೇರಳೆ ಹಣ್ಣನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಂಡು, ಅನಂತರ ಲಿಂಬು ರಸ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಇದು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಮೂತ್ರ ಸಂಬಂಧಿ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುತ್ತದೆ.

ಚೇಳು ಹಾಗೂ ಇನ್ನಿತರ ವಿಷಕಾರಿ ಜಂತುಗಳ ಕಡಿತದ ವಿಷವನ್ನು ಇಳಿಸಲು ನೇರಳೆ ಹಣ್ಣು ಉತ್ತಮವಾಗಿದೆ.

  • ಚೇಳು ಕಚ್ಚಿದ ಜಾಗಕ್ಕೆ ತ್ವರಿತವಾಗಿ, ನೇರಳೆ ಮರದ ಎಲೆಗಳನ್ನು ಜಜ್ಜಿಕೊಂಡು ಹಚ್ಚಬೇಕು. ಇದು ವಿಷವನ್ನು ತಗ್ಗಿಸಲು ಉತ್ತಮವಾಗಿದೆ.
  • ಹಾವು ಕಚ್ಚಿದ ಸಮಯದಲ್ಲಿ ನೇರಳೆ ಮರದ ಎಲೆಗಳನ್ನು ನೀರಿನಲ್ಲಿ ಅರೆದುಕೊಂಡು ಕುದಿಸಬೇಕು ಇದು ವಿಷವನ್ನು ಇಳಿಸಲು ಉತ್ತಮವಾಗಿರುತ್ತದೆ. ಆದರೆ ಹಾವು, ಚೇಳು ಕಡಿತಕ್ಕೆ ತ್ವರಿತವಾಗಿ ವೈದ್ಯರನ್ನು ಭೇಟಿ ಮಾಡುವುದು ಅತಿ ಸೂಕ್ತವಾಗಿದೆ. ವೈದ್ಯರನ್ನು ಭೇಟಿ ಮಾಡಲು ಯಾವುದೇ ಮಾರ್ಗಗಳು ಕಾಣದೆ ಇದ್ದಾಗ ಈ ಮನೆಮದ್ದುಗಳನ್ನು ಬಳಸಬಹುದು.

ಗಂಟಲಿನ ಉತ್ತಮ ಆರೋಗ್ಯಕ್ಕೆ ನೇರಳೆಯ ಉಪಯೋಗಗಳು

  • ಗಂಟಲಿನಲ್ಲಿ ನೋವು ಹಾಗೂ ಗಂಟಲಿನ ಹುಣ್ಣು ಇವೆಲ್ಲವೂ ದೂರವಾಗಲು ನಾವು ನೇರಳೆ ಮರದ ಚಕ್ಕೆಯ ಸಹಾಯವನ್ನು ಪಡೆದುಕೊಳ್ಳಬಹುದು. ನೇರಳೆ ಮರದ ಚಕ್ಕೆಯನ್ನು ಒಣಗಿಸಿ, ಪುಡಿಮಾಡಿಕೊಳ್ಳಬೇಕು. ಈ ಪುಡಿಯನ್ನು ನೀರಿನಲ್ಲಿ ಕುದಿಸಿ, ಕಷಾಯವನ್ನು ಸಿದ್ದಪಡಿಸಿ, ತಣಿದ ನಂತರ ಬಾಯಿ ಮುಕ್ಕಳಿಸಬೇಕು. ಇದನ್ನು ದಿನಕ್ಕೆ 5 ಬಾರಿಯಂತೆ ಮುಕ್ಕಳಿಸಬೇಕು. ಹೀಗೆ ಮಾಡುವುದರಿಂದ ಗಂಟಲಿನ ನೋವು ಹಾಗೂ ಹುಣ್ಣುಗಳು ತ್ವರಿತವಾಗಿ ಕಡಿಮೆಯಾಗುತ್ತದೆ.

ಕುಳಿತುಕೊಳ್ಳುವ ಆಸನದಲ್ಲಿ ಉರಿ ಕಂಡು ಬಂದರೆ ನೇರಳೆ ಹಣ್ಣು ಉತ್ತಮ ಪರಿಹಾರಗಳನ್ನು ನೀಡುತ್ತದೆ.

  • ಆಸನದಲ್ಲಿ ಉರಿ ಬಂದರೆ, ಕೂರಲು ಕಷ್ಟವಾದರೆ ಆ ಸಮಯದಲ್ಲಿ ನೇರಳೆ ಮರದ ಎಲೆಗಳು ಹಾಗೂ ಮಾವಿನ ಮರದ ಎಲೆಗಳನ್ನು ಸೇರಿಸಿ ಕಷಾಯ ಮಾಡಿ ಕುಡಿಯಬೇಕು. ನೇರಳೆ ಮರದ ಎಲೆಗಳು ಹಾಗೂ ಮಾವಿನ ಎಲೆಗಳನ್ನು ಸ್ವಲ್ಪ ಜಜ್ಜಿಕೊಂಡು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ನಂತರ ಸೋಸಿಕೊಳ್ಳಬೇಕು. ತಣಿದ ಮೇಲೆ ಈ ನೀರಿನಿಂದ ಅಸನವನ್ನು ತೊಳೆಯಬೇಕು. ಅಲ್ಲಿಗೆ ಕ್ರಮೇಣವಾಗಿ ಉರಿ ಕಡಿಮೆಯಾಗುತ್ತದೆ.

ಬೇಸಿಗೆಯ ವಿಪರೀತ ಬೆವರಿನ ದುರ್ಗಂಧಕ್ಕೆ ನೇರಳೆ ಎಲೆಗಳು ಉತ್ತಮ ಪರಿಹಾರಗಳನ್ನು ನೀಡುತ್ತದೆ.

  • ವಿಪರೀತ ಬೆವರುವವರು, ಬೆವರಿನ ದುರ್ಗಂಧದ ಸಮಸ್ಯೆಗಳಿಂದ ಬಲಳುತ್ತಿರುವವರು ತಾವು ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳನ್ನು ಅರೆದು ಸೇರಿಸಬೇಕು. ಈ ನೀರಿನಿಂದ ನಿತ್ಯ ಸ್ನಾನ ಮಾಡಿದರೆ ಬೆವರಿನ ದುರ್ಗಂಧದ ಸಮಸ್ಯೆಗಳು ಬೇಗನೆ ನಿವಾರಣೆಯಾಗುತ್ತದೆ.

ಹಲ್ಲುಗಳ ಉತ್ತಮ ಆರೋಗ್ಯಕ್ಕೆ ನೇರಳೆಯ ಉಪಯೋಗಗಳು

  • ಹಿಂದಿನ ಕಾಲದಲ್ಲಿ ಹಲ್ಲುಗಳನ್ನು ಬೇವಿನ ಕಡ್ಡಿ, ನೇರಳೆ ಮರದ ಕಡ್ಡಿ, ಮಾವಿನ ಮರದ ಕಡ್ಡಿ ಅಥವಾ ಬಿಲ್ವ ಮರದ ಕಡ್ಡಿಗಳಿಂದ ಹಲ್ಲನ್ನು ಉಜ್ಜುತ್ತಿದ್ದರು, ಇದು ಹಲ್ಲಿನ ಆರೋಗ್ಯಕ್ಕೆ ಅತಿ ಉತ್ತಮವಾಗಿರುತಿತ್ತು. ಇಂದಿನ ಕಾಲದಲ್ಲಿ ಇದರ ಬಳಕೆ ಅತಿ ಕಡಿಮೆಯಾಗಿದೆ. ಮಾವು, ಬೇವು, ನೇರಳೆ, ಬಿಲ್ವ ಗಿಡದ ಕಡ್ಡಿಗಳನ್ನು ಸುಟ್ಟು ಭಸ್ಮ ಮಾಡಿಕೊಂಡು, ಗಾಳಿಸಿಕೊಳ್ಳಬೇಕು. ಈ ಪುಡಿಗೆ ಸ್ವಲ್ಪ ಉಪ್ಪಿನ ಪುಡಿಯನ್ನು ಬೆರೆಸಿ ಹಲ್ಲು ಉಜ್ಜಿದರೆ ಹಲ್ಲು ಹಾಗೂ ವಸಡು ಗಟ್ಟಿಯಾಗಿರುತ್ತದೆ. ಹಲ್ಲಿನ ಆರೋಗ್ಯಕ್ಕೆ ಇದು ಅತಿ ಉತ್ತಮವಾಗಿದೆ. ನೈಸರ್ಗಿಕ ಪೇಸ್ಟ್ ತಯಾರಿಸುವ ವಿಧಾನವನ್ನು ನಾವು ಈಗ ಅರಿತಿದ್ದೇವೆ.

( ->ಬಿಲ್ವಪತ್ರೆ, ಬೇವಿನ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಅರಿಯಲು ಒಮ್ಮೆ ನಮ್ಮ ಹಿಂದಿನ ಲೇಖನಗಳನ್ನು ಓದಿರಿ )

  • ಹಲ್ಲುಗಳಿಂದ ರಕ್ತಸ್ರಾವವಾಗುತ್ತಿದ್ದರೆ, ನೇರಳೆ ಮರದ ಚಿಗುರೆಲೆಗಳನ್ನು ಅಗೆದು ತಿನ್ನಬೇಕು. ಇದು ರಕ್ತಸ್ರಾವವನ್ನು ನಿಲ್ಲಿಸುತ್ತದೆ ಹಾಗೆಯೇ ಹಲ್ಲುಗಳು ದೃಢವಾಗಿರಲು ಸಹಾಯಕವಾಗಿದೆ. ಬಾಯಿಯ ದುರ್ವಾಸನೆಯನ್ನು ಕೂಡ ಇದು ದೂರ ಮಾಡುತ್ತದೆ.

ಸುಟ್ಟ ಕಲೆಗಳಿಂದ ಮುಕ್ತಿ ಪಡೆಯಲು ನೇರಳೆ ಹಣ್ಣು ಉತ್ತಮವಾಗಿದೆ.

  • ನೇರಳೆ ಮರದ ಎಲೆಗಳನ್ನು ನೀರಿನಲ್ಲಿ ಅರೆದುಕೊಂಡು ಸುಟ್ಟ ಗಾಯಗಳ ಕಲೆಯ ಮೇಲೆ ಹಚ್ಚಬೇಕು, ಇದು ಕ್ರಮೇಣವಾಗಿ ಸುಟ್ಟ ಗಾಯಗಳ ಕಲೆಗಳನ್ನು ಕಡಿಮೆಗೊಳಿಸುತ್ತದೆ.

ಮಧುಮೇಹಿಗಳಿಗೆ ನೇರಳೆ ಹಣ್ಣಿನ ಬೀಜವು ಉತ್ತಮ ಪರಿಹಾರಗಳನ್ನು ನೀಡುತ್ತದೆ.

  • ನೇರಳೆ ಮರದ ಎಲೆಗಳನ್ನು ನೀರಿನಲ್ಲಿ ಅರೆದುಕೊಂನೇರಳೆ ಹಣ್ಣಿನ ಬೀಜವು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ, ಆದ್ದರಿಂದ ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ, ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಾವು ನಿಯಂತ್ರಿಸಬಹುದು. ಹಾಗಾಗಿ ಇದು ಮಧುಮೇಹಿಗಳಿಗೆ ಉತ್ತಮವಾಗಿದೆ.ಡು ಸುಟ್ಟ ಗಾಯಗಳ ಕಲೆಯ ಮೇಲೆ ಹಚ್ಚಬೇಕು, ಇದು ಕ್ರಮೇಣವಾಗಿ ಸುಟ್ಟ ಗಾಯಗಳ ಕಲೆಗಳನ್ನು ಕಡಿಮೆಗೊಳಿಸುತ್ತದೆ.

ರಕ್ತಹೀನತೆಯ ಸಮಸ್ಯೆಗಳನ್ನು ನೇರಳೆಹಣ್ಣು ದೂರವಾಗಿಸುತ್ತದೆ.

  • ನೇರಳೆ ಹಣ್ಣಿನ ಸೇವನೆಯು ರಕ್ತದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ವೃದ್ಧಿಸುತ್ತದೆ, ಹಾಗೆಯೇ ರಕ್ತದ ಚಲನೆಯನ್ನು ಸುಲಭಗೊಳಿಸಿ, ರಕ್ತವನ್ನು ಶುದ್ದಿಯಾಗಿರಿಸುತ್ತದೆ. ನೇರಳೆ ಹಣ್ಣಿನ ಸೇವನೆಯು ಅರೋಗ್ಯವರ್ಧಕವಾಗಿದೆ. ಸುಲಭ ರಕ್ತಚಲನೆಯ ಕಾರಣ ಇದು ಹೃದಯದ ಅರೋಗ್ಯಕ್ಕೂ ಕೂಡ ಅತಿ ಉತ್ತಮವಾಗಿದೆ.

ಶೀತ ಮತ್ತು ಜ್ವರದ ವಿರುದ್ಧ ಹೋರಾಡುವ ಶಕ್ತಿಯನ್ನು ನೇರಳೆ ಹಣ್ಣು ನೀಡುತ್ತದೆ.

  • ನೇರಳೆ ಹಣ್ಣಿನ ಸೇವನೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ವಿಟಮಿನ್ ಸಿ ಯು ಹೇರಳವಾಗಿರುವ ಕಾರಣ ಶೀತ ಹಾಗೂ ಜ್ವರದ ವಿರುದ್ಧ ಹೋರಾಡುವ ಶಕ್ತಿಯನ್ನು ನೇರಳೆ ಹಣ್ಣು ನೀಡುತ್ತದೆ. ಹಾಗಾಗಿ ನೇರಳೆ ಹಣ್ಣಿನ ಸೇವನೆಯು ಉತ್ತಮವಾಗಿದೆ.

ಚರ್ಮದ ಅರೋಗ್ಯಕ್ಕೂ ಕೂಡ ನೇರಳೆ ಹಣ್ಣಿನ ಸೇವನೆ ಉತ್ತಮವಾಗಿದೆ.

  • ಹೇರಳವಾದ ವಿಟಮಿನ್ ಸಿ ಇರುವ ಕಾರಣ ಇದು ಚರ್ಮದ ಅರೋಗ್ಯಕ್ಕೂ ಅತಿ ಉತ್ತಮವಾಗಿದೆ. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಮೊಡವೆ ಹಾಗೂ ಕಲೆಗಳನ್ನು ನಿವಾರಿಸಲು ಕೂಡ ಇದು ಉತ್ತಮವಾಗಿದೆ.

ಇಷ್ಟೆಲ್ಲ ಪ್ರಯೋಜನಗಳ ನಡುವೆ ನೇರಳೆ ಹಣ್ಣಿನ ಸೇವನೆಯು ದೇಹದ ಉಷ್ಣವನ್ನು ತಗ್ಗಿಸುತ್ತದೆ, ಹಾಗೆಯೇ ದೇಹವನ್ನು ತೇವಾಂಶ ಭರಿತವಾಗಿರಿಸಲು ಸಹಾಯ ಮಾಡುತ್ತದೆ. ನೇರಳೆ ಹಣ್ಣಿನ ರಸವನ್ನು ಅತಿ ಮಧುರ ಚೂರ್ಣದ ಜೊತೆ ಸೇರಿಸಿ, ಸೇವಿಸುವುದರಿಂದ ವಾಂತಿಯು ನಿಲ್ಲುತ್ತದೆ. ಮೂಲವ್ಯಾಧಿ ಸಮಸ್ಯೆಗಳು ಇರುವವರು ಕೂಡ ಊಟದ ಮುನ್ನ ನೇರಳೆ ಹಣ್ಣನ್ನು ಜೇನುತುಪ್ಪದ ಜೊತೆ ಸೇರಿಸಿ ತಿನ್ನಬಹುದು. ಇನ್ನೂ ನೇರಳೆ ಹಣ್ಣಿನಲ್ಲಿ ಅಧಿಕ ಫೈಬರ್ ಅಂಶವಿದ್ದು, ಕಡಿಮೆ ಕ್ಯಾಲೋರಿಯನ್ನು ಹೊಂದಿದೆ, ಇದು ತೂಕ ಇಳಿಸಲು ಕೂಡ ಸಹಾಯಕವಾಗಿದೆ. ಉರಿಯುತವನ್ನು ಕಡಿಮೆಗೊಳಿಸಲು ಇದು ಅತ್ಯಂತ ಸಹಕಾರಿಯಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಆಸಿಡಿಟಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳ ನಿವಾರಣೆಗೂ ಕೂಡ ಈ ಹಣ್ಣಿನ ಸೇವನೆಯು ಉತ್ತಮವಾಗಿದೆ. ರಂಜಕದ ಪ್ರಮಾಣವು ಇರುವುದರಿಂದ ಇದು ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಒಟ್ಟಿನಲ್ಲಿ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. 

ನೇರಳೆ ಹಣ್ಣು ಮನೆಮದ್ದುಗಳಿಗೆ ಮಾತ್ರವಲ್ಲದೆ ಅಡುಗೆಯಲ್ಲೂ ಕೂಡ ಉಪಯೋಗಿಸುತ್ತಾರೆ. ನೇರಳೆ ಹಣ್ಣಿನ ಜ್ಯೂಸ್, ಜಾಮ್, ಐಸ್ ಕ್ರೀಮ್ ಗಳನ್ನು ತಯಾರಿಸುತ್ತಾರೆ. ಇನ್ನೂ ಹಣ್ಣನ್ನು ಹಾಗೆಯೇ ತಿನ್ನಲು ಬಲು ರುಚಿಯಾಗಿರುತ್ತದೆ. ಕೆಲವರಿಗೆ ನೇರಳೆ ಹಣ್ಣನ್ನು ಸೇವಿಸಿದಾಗ ಗಂಟಲಲ್ಲಿ ನೋವು ಅಥವಾ ಕೆರೆತ ಬರಬಹುದು, ಅಂತವರು ನೇರಳೆ ಹಣ್ಣಿಗೆ ಸ್ವಲ್ಪ ಉಪ್ಪು ಹಾಗೂ ಖಾರದ ಪುಡಿಯನ್ನು ಸೇರಿಸಿ ಸೇವಿಸಬೇಕು. ನೇರಳೆ ಹಣ್ಣು ತಿಂದಾಕ್ಷಣ ಬಾಯಿಯ ಬಣ್ಣ ಕೂಡ ನೇರಳೆಯಾಗುತ್ತದೆ. ನೈಸರ್ಗಿಕವಾಗಿ ಸಿಗುವ ಈ ಉತ್ತಮ ಹಣ್ಣಿನ ಸೇವನೆಯನ್ನು ಮಾಡಿ, ಆರೋಗ್ಯಕರ ಲಾಭಗಳನ್ನು ಪಡೆಯಿರಿ ಎಂಬುದು ಈ ಲೇಖನದ ಉದ್ದೇಶವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Recent Posts

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು (Healthy traditional drinks)

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು. AI…

15 hours ago

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

2 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

3 days ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

4 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

5 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

6 days ago

This website uses cookies.