ಅಂಜೂರ ಹಣ್ಣಿನ ಆರೋಗ್ಯ ಲಾಭಗಳು | ದಿನನಿತ್ಯಕ್ಕೆ ಸೇವನೆಯಿಂದ ದೈಹಿಕ ಶಕ್ತಿ ಮತ್ತು ಜೀರ್ಣ ಕ್ರಿಯೆಗೆ ಅತ್ಯುತ್ತಮ (Health Benefits of eating Anjeer or Fig Fruits)

Spread the love

ಅಂಜೂರ ಹಣ್ಣಿನ ಆರೋಗ್ಯ ಲಾಭಗಳು | ದಿನನಿತ್ಯಕ್ಕೆ ಸೇವನೆಯಿಂದ ದೈಹಿಕ ಶಕ್ತಿ ಮತ್ತು ಜೀರ್ಣ ಕ್ರಿಯೆಗೆ ಅತ್ಯುತ್ತಮ (Health Benefits of eating Anjeer or Fig Fruits). AI Image

ಅಂಜೂರದ ಹಣ್ಣು ಬಹಳ ಸಿಹಿಯಾದ ಹಣ್ಣಾಗಿದ್ದು, ಖರ್ಜುರದ ನಂತರ ಅಂಜೂರವನ್ನೇ ಸಿಹಿಯಾದ ಹಣ್ಣು ಎನ್ನಬಹುದು. ಈ ಹಣ್ಣಿನಲ್ಲಿನ ಸಿಹಿಯ ಪ್ರಮಾಣವು ಹಸಿಯಾದ ಹಣ್ಣಿನಲ್ಲಿ 15% ನಷ್ಟು ಇದ್ದರೆ, ಒಣಗಿದ ಹಣ್ಣಿನಲ್ಲಿ 50% ನಷ್ಟು ಇರುತ್ತದೆ. ಈ ಹಣ್ಣಿನಲ್ಲಿ ಆಮ್ಲದ ಪ್ರಮಾಣ ಕಡಿಮೆ ಇರುವುದರಿಂದ ಸಿಹಿಯ ಪ್ರಮಾಣ ಜಾಸ್ತಿಯಾಗಿರುತ್ತದೆ. ಈ ಹಣ್ಣಿನ ಸೇವನೆಯು ದೇಹಕ್ಕೆ ತಂಪಾಗಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ. ಇಂದಿನ ಲೇಖನದಲ್ಲಿ ಅಂಜೂರದ ಹಣ್ಣಿನ ಪರಿಚಯ, ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.

ಅಂಜೂರದ ಕೆಲವು ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು- ಫಿಕಸ್ ಕ್ಯಾರಿಕ (Ficus carica)
ಆಂಗ್ಲ ಹೆಸರು – ಫಿಗ್ ಫ್ರೂಟ್ (Fig Fruit)

ಅಂಜೂರದ ಹಣ್ಣಿನಲ್ಲಿ ಅನೇಕ ರೀತಿಯ ಆರೋಗ್ಯವರ್ಧಕ ಪೋಷಕಾಂಶಗಳಿದ್ದು, ಮುಖ್ಯವಾಗಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ರಂಜಕ, ಕ್ಯಾಲ್ಸಿಯಂ, ನಾರು, ಕೊಬ್ಬು, ಸಸಾರಜನಕ, ತೇವ ಹಾಗೂ ಶರ್ಕರಪಿಷ್ಠಗಳಿವೆ. ಈ ಅಂಜೂರದ ಹಣ್ಣಿನ ಸೇವನೆಯು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ಅರೋಗ್ಯವರ್ಧಕವಾಗಿದೆ. ಹಾಗೆಯೇ ಅನೇಕ ರೋಗನಿರೋಧಕ ಶಕ್ತಿಗಳನ್ನು ಸಹ ನಮ್ಮ ದೇಹಕ್ಕೆ ಪೂರೈಸುತ್ತದೆ. ಈಗ ಅಂಜೂರದ ಹಣ್ಣಿನ ಆರೋಗ್ಯಕರ ವಿಚಾರಗಳ ಬಗ್ಗೆ ಅರಿಯೋಣ.

ಅಂಜೂರ ಹಣ್ಣಿನ ಆರೋಗ್ಯ ಲಾಭಗಳು

ಹೃದಯದ ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿರುವ ಅಂಜೂರದ ಹಣ್ಣು

  • ಅಂಜೂರದ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಎ ಹಾಗೂ ಕಬ್ಬಿಣದ ಅಂಶಗಳು ಇರುವುದರಿಂದ ಇದರ ಸೇವನೆಯು ರಕ್ತದ ಶುದ್ಧತೆಯನ್ನು ಕಾಪಾಡುತ್ತದೆ. ಇದರಿಂದ ರಕ್ತದ ಚಲನೆಯು ಸುಲಭವಾಗುತ್ತದೆ, ಹಾಗೆಯೇ ಹೃದಯದ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸಲು ಅಂಜೂರದ ಹಣ್ಣು ಉಪಯುಕ್ತವಾಗಿದೆ.

  • ಚರ್ಮದ ಉತ್ತಮ ಕಾಂತಿಗೆ, ಸುಕ್ಕುಗಟ್ಟಿದ ಚರ್ಮದ ನಿವಾರಣೆಗೆ ಹಾಗೆಯೇ ಚರ್ಮದ ಕಪ್ಪಾಗುವಿಕೆಯನ್ನು ತಡೆಯಲು ಅಂಜೂರದ ಸೇವನೆಯು ಉತ್ತಮವಾಗಿದೆ. ಹಸಿಯಾಗಿ ಇಲ್ಲವೇ ಒಣ ಅಂಜೂರದ ಸೇವನೆಯು ಚರ್ಮದ ಆರೋಗ್ಯಕ್ಕೆ ಉಪಯುಕ್ತವಾಗಿದೆ.

ವಾಂತಿಯನ್ನು ನಿಲ್ಲಿಸಲು ಕೂಡ ಅಂಜೂರದ ಹಣ್ಣು ಉಪಯುಕ್ತವಾಗಿದೆ.

  • ಬಹಳ ಸಲ ವಾಂತಿಯಾಗುತ್ತಿದ್ದರೆ, ವಾಂತಿಯನ್ನು ತ್ವರಿತವಾಗಿ ನಿಲ್ಲಿಸಲು ಹಸಿ ಅಂಜೂರದ ಹಣ್ಣು ಉತ್ತಮವಾಗಿದೆ. ಹಸಿ ಅಂಜೂರದ ಹಣ್ಣನ್ನು ಸಣ್ಣಗೆ ಕತ್ತರಿಸಿ, ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಅರ್ಧದಷ್ಟು ನೀರು ಇಂಗಿದ ಮೇಲೆ ಒಲೆಯನ್ನು ಆರಿಸಿಕೊಂಡು, ಸೋಸಿಕೊಳ್ಳಬೇಕು. ಈ ಹಸಿ ಅಂಜೂರದ ಹಣ್ಣಿನ ಕಷಾಯವನ್ನು ಕುಡಿಯುವುದರಿಂದ ವಾಂತಿ ಹಾಗೂ ವಾಕರಿಕೆಯಂತಹ ಸಮಸ್ಯೆಗಳು ದೂರವಾಗುತ್ತದೆ.

ದೇಹಕ್ಕೆ ಶಕ್ತಿಯನ್ನು ಒದಗಿಸುವ ಉತ್ತಮ ಹಣ್ಣು ಅಂಜೂರ.

  • ಅಂಜೂರ ಹಣ್ಣಿನ ಸೇವನೆಯು ಸ್ನಾಯುಗಳಿಗೆ ಉತ್ತಮ ಬಲವನ್ನು ನೀಡುತ್ತದೆ. ಹಾಗೆಯೇ ಕೀಲುಗಳ ಆರೋಗ್ಯಕ್ಕೂ ಕೂಡ ಉತ್ತಮವಾಗಿದೆ. ಅಧಿಕ ದೈಹಿಕ ಶ್ರಮವನ್ನು ಬಳಸಿ ಕೆಲಸ ಮಾಡುವವರಿಗೆ ಅಂಜೂರ ಹಣ್ಣಿನ ಸೇವನೆಯು ಉತ್ತಮವಾಗಿದೆ. ಏಕೆಂದರೆ ಇದು ದೇಹಕ್ಕೆ ಬೇಕಾದ ಉತ್ತಮ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ಇದರಿಂದ ದೇಹದ ಬಲವರ್ಧನೆ ಕೂಡ ಆಗುತ್ತದೆ. ಅಷ್ಟೇ ಅಲ್ಲದೇ ಅಂಜೂರ ಹಣ್ಣಿನ ಸೇವನೆಯು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ, ನರಗಳಲ್ಲಿ ಹೊಸ ಚೈತನ್ಯವನ್ನು ಕೂಡ ತುಂಬುತ್ತದೆ. ದೇಹದ ಆರೋಗ್ಯವರ್ಧನೆಗೆ ಇದು ಉತ್ತಮ ಹಣ್ಣಾಗಿದೆ.

ಪಿತ್ತಕೋಶದ ಅರೋಗ್ಯಕ್ಕೂ ಕೂಡ ಅಂಜೂರದ ಹಣ್ಣಿನ ಸೇವನೆ ಉತ್ತಮವಾಗಿದೆ.

  • ಪಿತ್ತಕೋಶದ ಆರೋಗ್ಯಕ್ಕೆ ಹಸಿ ಅಥವಾ ಒಣ ಅಂಜೂರದ ಹಣ್ಣಿನ ಸೇವನೆ ಉತ್ತಮವಾಗಿದೆ. ಗಾತ್ರದಲ್ಲಿ ಇದು ಸಣ್ಣ ಹಣ್ಣಾಗಿದ್ದರು, ಇದರ ಉಪಯೋಗಗಳು ಮಾತ್ರ ತುಂಬಾ ಉಪಯುಕ್ತವಾಗಿದೆ.

ಕುರಗಳ ನಿವಾರಣೆಗೂ ಕೂಡ ಅಂಜೂರದ ಹಣ್ಣು ಉಪಯುಕ್ತವಾಗಿದೆ.

  • ಅಂಜೂರದ ಹಣ್ಣಿನ ತಿರುಳನ್ನು ಕುರುಗಳ ಮೇಲೆ ಹಾಕಿ ಪಟ್ಟಿ ಕಟ್ಟಬೇಕು. ಇದರಿಂದ ಕುರುವು ಒಡೆದು, ಕೀವು ಹೊರಗೆ ಬರುತ್ತದೆ. ಹಾಗೆಯೇ ಕುರುಗಳು ಕೂಡ ಬೇಗನೆ ನಿವಾರಣೆಯಾಗುತ್ತದೆ. ರಕ್ತದ ಅಶುದ್ಧತೆಯಿಂದ ಅಥವಾ ಉಷ್ಣದಿಂದ ಈ ರೀತಿಯ ಕುರಗಳು ಆಗುತ್ತದೆ. ಅಂಜೂರದ ಹಣ್ಣಿನ ಸೇವನೆಯು ಕೂಡ ರಕ್ತದ ಶುದ್ಧತೆಗೆ ಉತ್ತಮವಾಗಿದ್ದು, ಆರೋಗ್ಯವರ್ಧಕವಾಗಿದೆ.

ಕಫ ಸಮಸ್ಯೆಗಳನ್ನು ನಿವಾರಿಸಲು ಅಂಜೂರದ ಹಣ್ಣಿನ ಸೇವನೆಯು ಉತ್ತಮವಾಗಿದೆ.

  • ಬಹಳ ಸಮಯದ ಕೆಮ್ಮು, ಹಾಗೆಯೇ ಗಟ್ಟಿಯಾದ ಕಫ ಮತ್ತು ದಮ್ಮಿನ ಸಮಸ್ಯೆಗಳನ್ನು ಹೊಂದಿರುವವರು ಅಂಜೂರದ ಹಣ್ಣನ್ನು ಪ್ರತಿದಿನ ಸೇವಿಸಬೇಕು. ಇದು ಗಟ್ಟಿಯಾದ ಕಫ ಕರಗಲು ಸಹಾಯಕವಾಗಿದೆ. ಹಾಗೆಯೇ ಕೆಮ್ಮು ಹಾಗೂ ದಮ್ಮು ನಿವಾರಣೆಗೂ ಕೂಡ ಉತ್ತಮವಾಗಿದೆ.

ಮಲಬದ್ಧತೆ ಹಾಗೂ ಮೂಲವ್ಯಾಧಿ ಸಮಸ್ಯೆಗಳಿಗೂ ಕೂಡ ಅಂಜೂರದ ಹಣ್ಣಿನ ಸೇವನೆ ಉತ್ತಮವಾಗಿದೆ.

  • ಮಲಬದ್ಧತೆ ಹಾಗೂ ಮೂಲವ್ಯಾಧಿ ಸಮಸ್ಯೆಗಳನ್ನು ನಿವಾರಿಸಲು 4 ಅಂಜೂರದ ಹಣ್ಣನ್ನು ನೀರಿನಲ್ಲಿ ನೆನೆಸಬೇಕು. ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ನೆನೆಸಿದ ಅಂಜೂರದ ಹಣ್ಣನ್ನು ತಿಂದು ಹಾಲು ಕುಡಿಯಬೇಕು. ಇದು ಮೂಲವ್ಯಾಧಿ ನಿವಾರಣೆಗೆ ಉತ್ತಮವಾಗುತ್ತದೆ. ಹಾಗೆಯೇ ನಾರಿನ ಅಂಶವು ಹೆಚ್ಚಾಗಿರುವುದರಿಂದ ಅಂಜೂರದ ಹಣ್ಣಿನ ಸೇವನೆಯು ಮಲಬದ್ಧತೆಯನ್ನು ಕೂಡ ನಿವಾರಿಸುತ್ತದೆ.

ಬಾಯಿಯ ಉತ್ತಮ ಅರೋಗ್ಯಕ್ಕೂ ಕೂಡ ಅಂಜೂರದ ಹಣ್ಣಿನ ಸೇವನೆ ಉತ್ತಮವಾಗಿದೆ.

  • ಬಾಯಿಯಲ್ಲಿನ ಹುಣ್ಣು ಹಾಗೂ ಇನ್ನೂ ಅನೇಕ ಸಮಸ್ಯೆಗಳಿಗೆ ಅಂಜೂರದ ಹಣ್ಣನ್ನು ಹಾಲಿನಲ್ಲಿ ನೆನೆಸಿ ಸೇವಿಸುವುದು ಉತ್ತಮವಾಗಿದೆ. ಇದರಿಂದ ಬಾಯಿಯ ಹುಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತದೆ.

ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ಅಂಜೂರದ ಹಣ್ಣಿನ ಸೇವನೆಯು ಉಪಯುಕ್ತವಾಗಿರುತ್ತದೆ.

  • ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಮೊದಲು ಕತ್ತನ್ನು ಎತ್ತಿ ಮೇಲೆ ನೋಡಬೇಕು, ಹಾಗೆಯೇ ಜೊತೆಯಲ್ಲಿ ಅಂಜೂರದ ಹಣ್ಣನ್ನು ಸೇವಿಸಬೇಕು. ಇದು ರಕ್ತಸ್ರಾವವನ್ನು ತ್ವರಿತವಾಗಿ ನಿಲ್ಲಿಸುತ್ತದೆ.

ರಕ್ತದ ಉತ್ತಮ ಆರೋಗ್ಯಕ್ಕೆ ಅಂಜೂರದ ಸೇವನೆಯು ಉತ್ತಮವಾಗಿದೆ.

  • ಪ್ರತಿ ಒಬ್ಬರು ಅಂಜೂರದ ಹಣ್ಣನ್ನು ಸೇವಿಸುವುದು ರಕ್ತದ ಆರೋಗ್ಯಕ್ಕೆ ಉತ್ತಮವಾಗಿದೆ. ರಕ್ತದ ಶುದ್ಧತೆಯನ್ನು ಕಾಪಾಡುತ್ತದೆ, ಹಾಗೆಯೇ ರಕ್ತಹೀನತೆಯನ್ನು ಕೂಡ ದೂರಗೊಳಿಸುತ್ತದೆ. ರಕ್ತವನ್ನು ವೃದ್ಧಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ಕೂಡ ಉತ್ತಮವಾಗಿದೆ.

ಶರೀರದ ಸರ್ವತೋಮುಖ ಅಭಿವೃದ್ಧಿಗೆ ಉತ್ತಮವಾಗಿರುವ ಅಂಜೂರದ ಲೇಹ್ಯ.

  • ಈ ಅಂಜೂರದ ಲೇಹ್ಯದ ಸೇವನೆಯಿಂದ ದೇಹದಲ್ಲಿ ಬಲ ವೃದ್ಧಿಸುತ್ತದೆ, ರಕ್ತದ ಆರೋಗ್ಯಕ್ಕೆ ಉತ್ತಮವಾಗಿದೆ ಹಾಗೂ ನರಬಲವನ್ನು ಕೂಡ ವೃದ್ಧಿಸುತ್ತದೆ. ಅಂಜೂರದ ಲೇಹ್ಯವನ್ನು ತಯಾರಿಸುವ ಬಗೆಯನ್ನು ಈಗ ತಿಳಿಯೋಣ.  ಅಂಜೂರ 2 ಕಪ್, ಬೀಜ ತೆಗೆದ ಒಣ ಖರ್ಜುರ 2 ಕಪ್ ಹಾಗೂ ಒಣ ದ್ರಾಕ್ಷಿ 1 ಕಪ್. ಈ ಮೂರು ಪದಾರ್ಥಗಳನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಬಾಣಲೆಗೆ ತುಪ್ಪವನ್ನು ಸೇರಿಸಿ, ಈ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಬೇಕು. ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಇರಬೇಕು. ಲೇಹ್ಯದ ಹದಕ್ಕೆ ಬಂದ ತಕ್ಷಣ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ, ಕೈ ಆಡಿಸಿ, ಒಲೆಯನ್ನು ಆರಿಸಬೇಕು. ತಣಿದ ನಂತರ ಈ ಮಿಶ್ರಣವನ್ನು ಒಂದು ಗಾಜಿನ ಪಾತ್ರೆಗೆ ವರ್ಗಾಯಿಸಿಕೊಂಡು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚ ಸೇವಿಸಬೇಕು. ಇದು ನಮ್ಮ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.

ಇಷ್ಟೆಲ್ಲ ಆರೋಗ್ಯಕ್ಕೆ ಉತ್ತಮವಾಗಿರುವ ಈ ಅಂಜೂರದ ಹಣ್ಣನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗೆಯೇ ಕ್ಯಾಲ್ಸಿಯಂ ಅಂಶವು ಹೆಚ್ಚಾಗಿ ಇರುವುದರಿಂದ ಇದು ಮೂಳೆಗಳ ಆರೋಗ್ಯಕ್ಕೂ ಕೂಡ ಉತ್ತಮವಾಗಿದೆ. ಚರ್ಮದ ಕಾಂತಿಗೂ ಕೂಡ ಈ ಅಂಜೂರದ ಹಣ್ಣಿನ ಸೇವನೆಯು ಉತ್ತಮವಾಗಿದೆ. ಅನೇಕ ಉತ್ತಮ ಉಪಯೋಗಗಳನ್ನು ನೀಡುವ ಈ ಅಂಜೂರದ ಹಣ್ಣಿನ ಸೇವನೆಯನ್ನು ಮಾಡಿ, ಉತ್ತಮ ಅರೋಗ್ಯವನ್ನು ಕಾಪಾಡಿಕೊಳ್ಳಿ ಎಂಬುದು ಈ ಲೇಖನದ ಉದ್ದೇಶವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi
Tags: AnjeerAnjeer dry fruit for healthAnjeer for digestion and energyAnjeer fruit health benefitsAnjeer fruit health benefits KannadaBenefits of eating figs dailybest dry fruit for health in kannada by gruhasnehibest fruit fro digestionbest health benefits of Fig fruitbest kannada blogDried fig fruit nutrition for energy and digestiongruha sangaatigruha snehi kannada bloggruhasnehi health tipsgruhasnehi kannada health and wellness blogHealth Benefits of eating Anjeer or Fig FruitsHow does anjeer help in hormone balance?Is anjeer good for daily consumption?kannada blogsuper fruit for immunity booster naturally anjeertraditional kannada bloguses of Eating anjeer dailyಅಂಜೂರ ಹಣ್ಣಿನ ಆರೋಗ್ಯ ಲಾಭಗಳುಅಂಜೂರ ಹಣ್ಣಿನ ದುಬಾರಿ ಬೆಲೆ – ಏಕೆ?ಅಂಜೂರ ಹಣ್ಣಿನ ಪರಿಚಯಅಂಜೂರ ಹಣ್ಣಿನ ಪ್ರಮುಖ ಆರೋಗ್ಯ ಲಾಭಗಳುಅಂಜೂರ ಹಣ್ಣಿನ ಪ್ರಯೋಜನಗಳುಅಂಜೂರ ಹಣ್ಣು ಎಷ್ಟು ದಿನ ಸೇವಿಸಬಹುದುಅಂಜೂರ ಹಣ್ಣು ಸೇವನೆ ಮಾಡುವ ಸರಿಯಾದ ವಿಧಾನಅಂಜೂರ ಹಣ್ಣು ಹೃದಯ ಆರೋಗ್ಯಕ್ಕೆ ಉಪಯುಕ್ತವೆ?ಅಂಜೂರ ಹಣ್ಣು ಹೊಟ್ಟೆ ಜೀರ್ಣಕ್ರಿಯೆಗೆ ಹೇಗೆ ಸಹಾಯ ಮಾಡುತ್ತದೆಗೃಹಸ್ನೇಹಿಫಿಗ್ ಹಣ್ಣು ಉಪಯೋಗಗಳು

Recent Posts

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

18 hours ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

2 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

3 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

4 days ago

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು. AI Image ಹಸಿ ತರಕಾರಿಗಳು, ಕಾಳು ಬೇಳೆಗಳು ಅರೋಗ್ಯಕ್ಕೆ ತುಂಬಾ ಹಿತಕರವಾಗಿದೆ.…

5 days ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

6 days ago

This website uses cookies.