ಆಲ್ ರೌಂಡರ್ ‘ಬಿಲ್ವಪತ್ರೆ’ಯ ಆರೋಗ್ಯಕಾರಿ ಗುಣಗಳು ಮತ್ತು ಉಪಯೋಗಗಳು

Spread the love

ಆಲ್ ರೌಂಡರ್ ‘ಬಿಲ್ವಪತ್ರೆ’ಯ ಆರೋಗ್ಯಕಾರಿ ಗುಣಗಳು ಮತ್ತು ಉಪಯೋಗಗಳು. AI Image

ಬಿಲ್ವ ವೃಕ್ಷದ ಬೇರು, ಕಾಂಡ,ಹಣ್ಣು, ಕಾಯಿ, ಎಲೆ ಎಲ್ಲವೂ ನಮ್ಮ ಅರೋಗ್ಯದ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ.ಬಿಲ್ವ ಫಲವು ತುಂಬಾ ಪೌಷ್ಠಿಕ ವಾಗಿದ್ದು, ಸುಗಂಧಯುಕ್ತ ವಾಗಿದೆ. ಮೂರು ಪಟ್ಟು ಶಕ್ತಿಯುಳ್ಳ ತ್ರಿದಳ ಸ್ವರೂಪಿ ಬಿಲ್ವ ಪತ್ರೆಯ ಬಗ್ಗೆ ಇನ್ನೂ ಅಧಿಕ ಮಾಹಿತಿಗಳನ್ನು ಕಲೆ ಹಾಕುವ ಎಂಬ ಮುನ್ನುಡಿಯೊಂದಿಗೆ ಈ ಲೇಖನವನ್ನು ಪ್ರಾರಂಭಿಸೋಣ. ಹಲವು ಪ್ರಯೋಜನಗಳನ್ನು ನೀಡುವ ಈ ಹಸಿರು ಬಿಲ್ವ ವೃಕ್ಷದ ಮರೆಯಲ್ಲಿ ಅಡಗಿರುವ ಅನೇಕ ಪರಿಹಾರಗಳ ಬಗ್ಗೆ ಈಗ ವಿಶ್ಲೇಷಿಸೋಣ.

ಅತಿಸಾರ, ರಕ್ತದ ವಾಂತಿಗೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವದ ಕಾಯಿಯನ್ನು ತೆಗೆದುಕೊಂಡು ಅದರೊಳಗಿನ ತಿರುಳನ್ನು ಶುಂಠಿ ಪುಡಿಯೊಂದಿಗೆ ಬೆರೆಸಿ, ಮಜ್ಜಿಗೆಯೊಂದಿಗೆ ಈ ಮಿಶ್ರಣವನ್ನು ಸೇರಿಸಿ ಕುಡಿದರೆ ಅತಿಸಾರ ಕಡಿಮೆಯಾಗುತ್ತದೆ.
  • ಬಿಲ್ವ ಕಾಯಿಯ ಒಳಗಿನ ತಿರುಳನ್ನು ನೀರಿನಲ್ಲಿ ಕಿವುಚಿ ಅದಕ್ಕೆ ಬಡೆಸೊಪ್ಪಿನ ಪುಡಿಯನ್ನು ಬೆರೆಸಿ, ಕೆಂಪು ಕಲ್ಲುಸಕ್ಕರೆ ಪುಡಿಯೊಂದಿಗೆ ಮಿಶ್ರಣ ಮಾಡಿ ಶೋಧಿಸಿ ಕುಡಿಯಬೇಕು. ಅಲ್ಲಿಗೆ ರಕ್ತದ ವಾಂತಿ ಕಡಿಮೆಯಾಗುತ್ತದೆ.
  • ಮಕ್ಕಳಿಗೆ ಬರುವ ವಾಂತಿಗೆ ಬಿಲ್ವದ ಬೇರನ್ನು ಚೆನ್ನಾಗಿ ತೊಳೆದು ಒಂದು ಲೋಟ ನೀರಿನಲ್ಲಿ ಕುದಿಸಿ, ಆಯಾ ನೀರಿಗೆ ಸ್ವಲ್ಪ ಅರಳು ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಕಡಿಮೆಯಾಗುತ್ತದೆ.

ಅಜೀರ್ಣ, ಹೊಟ್ಟೆ ನೋವು ಹಾಗು ಬೇಧಿಗೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವ ಫಲದ ತಿರುಳನ್ನು ನೀರಿನಲ್ಲಿ ಕಿವುಚಿ, ಅದಕ್ಕೆ ಸೈಂಧವ ಲವಣವನ್ನು ಸೇರಿಸಿ ಕುಡಿದರೆ ಅಜೀರ್ಣ ಸಮಸ್ಯೆ ಕಡಿಮೆಯಾಗಿ ಹೊಟ್ಟೆ ನೋವು ಕಡಿಮೆ ಆಗುತ್ತದೆ.
  • ಬಿಲ್ವದ ಫಲದ ತಿರುಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಅದು ಬೇಧಿ ಪ್ರಾರಂಭವಾದ ಸಮಯದಲ್ಲಿ ಬಿಸಿ ನೀರಿಗೆ ಒಂದು ಚಮಚ ಕದಡಿ ಕುಡಿದರೆ ಬೇಧಿ ಕಡಿಮೆಯಾಗುತ್ತದೆ.
  • ಗರ್ಭಿಣಿಯರಿಗೆ ಬೇಧಿ ಸಮಸ್ಯೆ ಉಂಟಾದರೆ ಬಿಲ್ವದ ಹಣ್ಣಿನ ತಿರುಳನ್ನು ಹಾಗು ಶುಂಠಿ ಎರಡನ್ನೂ ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಂಡು ಕುಡಿಯಬೇಕು.

ಹೆಣ್ಣು ಮಕ್ಕಳ ಮಾಸಿಕ ಹೊಟ್ಟೆ ನೋವು ಹಾಗು ವೈಟ್ ಡಿಸ್ಚಾರ್ಜ್‘ಗೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವ ಪತ್ರೆಯನ್ನು ಚೆನ್ನಾಗಿ ತೊಳೆದು ಜಜ್ಜಿ ರಸ ಹಿಂಡಿಕೊಳ್ಳಬೇಕು. ಒಂದು 5 ಚಮಚ ಬಿಲ್ವ ಪತ್ರೆ ರಸ ಹಾಗು ಕಾಯಿಸದ ಹಸಿ ಹಾಲನ್ನು  ಮಿಶ್ರಣ ಮಾಡಿ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಸೇವಿಸಬೇಕು. ಇದರಿಂದ ಮಾಸಿಕ ಹೊಟ್ಟೆನೋವು ಹಾಗು ವೈಟ್ ಡಿಸ್ಚಾರ್ಜ್ ಸಮಸ್ಯೆ ಕೂಡ ಕಡಿಮೆ ಆಗುತ್ತದೆ.

ಮಧುಮೇಹಕ್ಕೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವಪತ್ರೆಯ ರಸವನ್ನು ಪ್ರತಿದಿನ ಬೆಳಿಗ್ಗೆ ಸಂಜೆ ಒಂದು ತಿಂಗಳ ಕಾಲ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ಒಂದು ಬಿಲ್ವದ ಎಲೆಯನ್ನು ಜಗಿದು ತಿಂದರೂ ಕೂಡ ಮಧುಮೇಹಕ್ಕೆ ಉತ್ತಮವಾಗಿದೆ.
  • ಇನ್ಸುಲಿನ್ ತೆಗೆದುಕೊಳ್ಳುವಷ್ಟು ಸಕ್ಕರೆ ಖಾಯಿಲೆಗೆ ತುತ್ತಾಗಿದ್ದಾರೆ ಪ್ರತಿನಿತ್ಯ ಕನಿಷ್ಠ 12 ಬಿಲ್ವದ ಎಲೆಗಳನ್ನು ಜಗಿದು ತಿನ್ನಬೇಕು. ಬಿಲ್ವ ಪಾತ್ರೆಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುವ ಹಾಗು ಶರೀರದಲ್ಲಿ ಉತ್ಪತ್ತಿ ಆಗುವ ಸಕ್ಕರೆ ಅಂಶವನ್ನು ಕರಗಿಸುವ ಇನ್ಸುಲಿನ್ ಪ್ರಮಾಣವನ್ನು ಜಾಸ್ತಿ ಮಾಡಿಸುವ ಶಕ್ತಿ ಇದೆ.

ಮೂಲವ್ಯಾಧಿಗೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವ ಮರದ ಕಾಯಿಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು.ಅದಕ್ಕೆ ಒಣ ಶುಂಠಿ ಪುಡಿ ಹಾಗು ಬೆಲ್ಲವನ್ನು ಸೇರಿಸಿ, ಒಂದು ಚಮಚ ತಿನ್ನಬೇಕು. ನಂತರ ಒಂದು ಲೋಟ ಮಜ್ಜಿಗೆ ಕುಡಿಯಬೇಕು. ಒಂದು ವಾರ ಎರಡು ಹೊತ್ತು ಈ ವಿಧಾನವನ್ನು ಅನುಸರಿಸಿದರೆ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ.
  • ಮೂಲವ್ಯಾಧಿ ನೋವು ಜಾಸ್ತಿಯಾದಾಗ ಬಿಲ್ವ ಮರದ ಬೇರಿನ ಕಷಾಯವನ್ನು ಅಂದರೆ ಬಿಲ್ವ ಮರದ ಬೇರನ್ನು ಚೆನ್ನಾಗಿ ನೀರಿನಲ್ಲಿ ಕುದಿಸಬೇಕು.ಒಂದು ಅಗಲವಾದ ಟಬ್ ನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಬಿಲ್ವ ಬೇರಿನ ಕಷಾಯವನ್ನು ಬೆರೆಸಿ ಆ ಟಬ್ ನಲ್ಲಿ ಒಂದು 15 ನಿಮಿಷಗಳ ಕಾಲ ಕಾಲು ಚಾಚಿ ಕುಳಿತುಕೊಳ್ಳಬೇಕು. ಇದರಿಂದ ನೋವಿಗೆ ಉಪಶಮನ ಸಿಗುತ್ತದೆ.

ಜ್ವರಕ್ಕೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವ ಮರದ ಕಾಂಡ ಅಥವಾ ತೊಗಟೆಯನ್ನು ಚೆನ್ನಾಗಿ ಕುಟ್ಟಿಕೊಳ್ಳಬೇಕು. ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿ ಬರುವವರೆಗೂ ಕುದಿಸಬೇಕು. ನಂತರ ಶೋಧಿಸಿ ಕುಡಿಯಬೇಕು. ಬಿಲ್ವ ವೃಕ್ಷ ಆರೋಗ್ಯವರ್ಧಕ ವಾಗಿರುವುದರಿಂದ ಎಲ್ಲ ಪೋಷಕಾಂಶಗಳನ್ನು ನೀಡಿ ದೇಹವನ್ನು ಸಬಲಗೊಳಿಸಿ, ಸದೃಢವಾಗಿರುಸುತ್ತದೆ. ಇದರಿಂದ ಜ್ವರದ ನಿಶ್ಯಕ್ತಿ ಕೂಡ ಬಾಧಿಸುವುದಿಲ್ಲ.
  • ಬಿಲ್ವದ ಹಣ್ಣಿನ ತಿರುಳನ್ನು ಸೇವಿಸುವುದರಿಂದ ಕೂಡ ಜ್ವರದ ತಾಪ ಕಡಿಮೆ ಆಗುತ್ತದೆ.

ಕಣ್ಣು ಉರಿ, ನೋವು ಇದ್ದರೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವಪತ್ರೆಯನ್ನು ಚೆನ್ನಾಗಿ ರುಬ್ಬಿಕೊಂಡು ಆ ಮಿಶ್ರಣವನ್ನು ಎರಡು ಕಣ್ಣನ್ನು ಮುಚ್ಚಿ ರೆಪ್ಪೆಯ ಮೇಲೆ ಮೆತ್ತಬೇಕು. ಆಮೇಲೆ ಅದರ ಮೇಲೆ ಕಣ್ಣಿನ ಸುತ್ತ ತೆಳು ಬಟ್ಟೆ ಕಟ್ಟಿಕೊಳ್ಳಬೇಕು. ಹೀಗೆ ಅರ್ಧ ಗಂಟೆ ಕಟ್ಟಿಕೊಂಡು, ನಂತರ ತೆಗೆದು ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಕಣ್ಣಿಗೆ ತಂಪು. ಕಣ್ಣಿನ ಸಮಸ್ಯೆಗಳು, ಕಣ್ಣುರಿ, ಕಣ್ಣಿನ ಬಾವು ಹಾಗು ನೋವು ಎಲ್ಲವೂ ಕಡಿಮೆ ಆಗುತ್ತದೆ.

ಕಿವಿ ಮಂದವಾಗಿ ಕೇಳುತ್ತಿದ್ದಾಗ ಬಿಲ್ವಪತ್ರೆಯ ಮನೆಮದ್ದು

  • ಎಳೆಯ ಬಿಲ್ವ ಮರದ ಕಾಯಿಗಳನ್ನು ತೆಗೆದುಕೊಂಡು ಅದರ ತಿರುಳನ್ನು ಗೋವಿನ ಗಂಜಲದಲ್ಲಿ ಚೆನ್ನಾಗಿ ಅರೆಯಬೇಕು. ಅದರ ಜೊತೆಗೆ ಸ್ವಲ್ಪ ಶುದ್ಧ ಎಳ್ಳೆಣ್ಣೆಯನ್ನು ಹಾಕಿ ಕುದಿಸಬೇಕು. ನಂತರ ಆರಿಸಿ ಶೋಧಿಸಬೇಕು. ಇದನ್ನು ಕಿವಿಗೆ ಎರಡು ಹನಿ ಹಾಕುತ್ತಾಬಂದರೆ ಶುರುವಿನಲ್ಲಿರುವ ಕಿವುಡುತನ ಸಮಸ್ಯೆ ಕಡಿಮೆಯಾಗುತ್ತದೆ.

ಹಲ್ಲು, ವಸಡಿನ ಬಾವು ಹಾಗು ನೋವು ಇದ್ದರೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವದ ಹಣ್ಣಿನ ತಿರುಳನ್ನು 3 ಲೋಟ ನೀರಿಗೆ ಹಾಕಿ ಚೆನ್ನಾಗಿ ಕಿವುಚಿಕೊಳ್ಳಬೇಕು. ಸ್ಪಟಿಕದ ಹರಳನ್ನು ಕುಟ್ಟಿ ಪುಡಿ ಮಾಡಿ ಬಿಲ್ವದ ತಿರುಳಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಶೋಧಿಸಿಕೊಂಡು ಆ ನೀರಿನಿಂದ ಬಾಯಿ ಮುಕ್ಕಳಿಸಿ ಉಗಳಬೇಕು. ಈ ರೀತಿ ಒಂದು 5 ಬಾರಿ ಮಾಡಿ ನಂತರ ಹಲ್ಲುಗಳ ನೋವು ಎಲ್ಲವನ್ನು ಕಡಿಮೆ ಮಾಡಿಕೊಳ್ಳಿ. ಮುಖ್ಯವಾದ ಸೂಚನೆ ಎಂದರೆ ಆ ಮಿಶ್ರಣದ ನೀರನ್ನು ಮುಕ್ಕಳಿಸುದಕ್ಕೆ ಮಾತ್ರ ಬಳಸಬೇಕು ಅದು ಕುಡಿಯಲು ಯೋಗ್ಯವಲ್ಲ.

ಉಬ್ಬಸ ಅಥವಾ ದಮ್ಮು ಇದ್ದರೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವದ ಬೇರನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಕುದಿಸಿ ಶೋಧಿಸಿ ಕುಡಿಯುವುದರಿಂದ ಹೃದಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ಸರಿಪಡಿಸಿ ಉಸಿರಾಟವು ಕೂಡ ಸರಳವಾಗುತ್ತದೆ.
  • ಬಿಲ್ವ ಮರದ ಬೇರನ್ನು ಚೆನ್ನಾಗಿ ತೊಳೆದು ಸಾಣೆಕಲ್ಲಿನಲ್ಲಿ ತೇಯ್ದು, ಅದನ್ನು ಬೆಣ್ಣೆಯಲ್ಲಿ ಬೆರೆಸಿ ಸೇವಿಸಬೇಕು. ಇದು ಉಬ್ಬಸಕ್ಕೆ ಉತ್ತಮವಾಗಿದೆ. ಚಳಿಗಾಲದಲ್ಲಿ ಉಬ್ಬಸದ ಸಮಸ್ಯೆ ಜಾಸ್ತಿ. ಅಂತಹ ಸಂದರ್ಭದಲ್ಲಿ ಈ ಮನೆಮದ್ದು ಮಾಡಿ ಉಪಯೋಗಗಳನ್ನು ಪಡೆದುಕೊಳ್ಳಬೇಕು.

ಕುರು ಹಾಗು ರಶಿ ಗುಳ್ಳೆಗಳಿಗೆ ಬಿಲ್ವಪತ್ರೆಯ ಮನೆಮದ್ದು

  • ಬಿಲ್ವ ಮರದ ಬೇರನ್ನು ಲಿಂಬು ರಸದಲ್ಲಿ ಅರೆದು ಗುಳ್ಳೆ ಅಥವಾ ಕುರು ಇರುವ ಜಾಗದಲ್ಲಿ ಹಚ್ಚಿದರೆ, ಕುರ ಬೇಗನೆ ಒಡೆದು ಕೀವು ಹೊರ ಬರುತ್ತದೆ. ಹಾಗೆಯೇ ಹಚ್ಚುತ್ತಿದ್ದಾರೆ ಕಲೆ ಸಮೇತ ಕುರು ಮಾಯವಾಗುತ್ತದೆ

ಕೈ ಕಾಲು ಸೆಳೆತ, ಊತ ಹಾಗು ನೋವಿಗೆ ಬಿಲ್ವಪತ್ರೆಯ ಮನೆಮದ್ದು

  • ನಿತ್ಯ ಬಿಲ್ವಪತ್ರೆಯ ಸೇವನೆ ಅಥವಾ ಬಿಲ್ವಪತ್ರೆಯ ರಸದ ಸೇವನೆಯಿಂದ ಕೈ ಕಾಲು ಸೆಳೆತ ಕ್ರಮೇಣ ಕಡಿಮೆ ಆಗುತ್ತದೆ. ಒಂದೆರಡು ದಿನ ಸೇವಿಸಿದರೆ ಸಾಲದು ನಿತ್ಯ ನಮ್ಮ ದಿನಚರಿಯಲ್ಲಿ ಇದು ಒಂದಾಗಬೇಕು. ಆಗ ಪ್ರತಿಫಲ ಸಿಕ್ಕೆ ಸಿಗುತ್ತದೆ.
  • ಬಿಲ್ವದ ಎಲೆ, ಹರಳು ಸಸಿ ಎಲೆ, ಕರಿ ಎಳ್ಳು ಮೂರನ್ನು ಮಜ್ಜಿಗೆಯಲ್ಲಿ ಅರೆದು ಬಿಸಿ ಮಾಡಬೇಕು. ನಂತರ ಒಂದು ಬಟ್ಟೆಯಲ್ಲಿ ಕಟ್ಟಿ ಬಾವು ಅಥವಾ ನೋವು ಇದ್ದಡೆ ಶಾಖ ಕೊಡಬೇಕು. ಹೀಗೆ ಮಾಡುವುದರಿಂದ ನೋವು ಕಡಿಮೆ ಆಗುತ್ತದೆ. ಬಾವು ಕೂಡ ಕಡಿಮೆ ಆಗುತ್ತದೆ. ನೋವು ಇನ್ನು ಜಾಸ್ತಿ ಇದ್ದರೆ ಬಿಲ್ವಪತ್ರೆ ರಸವನ್ನು ಬೆಳಿಗ್ಗೆ ರಾತ್ರಿ ಎರಡು ಸಲ ಒಂದು ನಾಲ್ಕು ಚಮಚ ಸೇವಿಸುತ್ತಾ ಬರಬೇಕು.

ಇಷ್ಟೆಲ್ಲಾ ಉಪಯೋಗಗಳ ಬಗ್ಗೆ ತಿಳಿದುಕೊಂಡೆವು ಅಲ್ಲವೇ?! ಇನ್ನು ಹೇಳಬೇಕಾದರೆ ನಾವು ದೇವರಿಗೆ ಸಮರ್ಪಿಸಿದ ಬಿಲ್ವಪತ್ರೆಯನ್ನು ಹಾಗೆ ಬಿಸಾಡುವುದಕಿಂತ ಅದನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಅದನ್ನು ನಿತ್ಯ ಸ್ನಾನ ಮಾಡುವ ನೀರಿಗೆ ಒಂದು ಚಮಚ ಹಾಕಿ ಮಿಂದರೆ ದೇಹದ ದುರ್ವಾಸನೆ ನಿವಾರಣೆಯಾಗುತ್ತದೆ. ಹಾಗೆಯೇ ಮನೆಯಲ್ಲಿ ಸೊಳ್ಳೆ, ಕ್ರಿಮಿ ಕೀಟಗಳ ಕಾಟವಿದ್ದರೆ ಬಿಲ್ವದ ಕಾಯಿಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ಕೆಂಡದ ಮೇಲೆ ಹಾಕಿ ಹೊಗೆ ಹಾಕಬೇಕು. ಶಿವ ಪ್ರಿಯ ಬಿಲ್ವದ ಅನೇಕ ಮಾಹಿತಿಗಳನ್ನು ತಿಳಿದು ಅರಿತಿದ್ದೇವೆ. ಸಮಸ್ಯೆಗಳಿಗೆ ಬಿಲ್ವ ವಕ್ಷದಿಂದ ಪರಿಹಾರ ಪಡೆದು ಆರೋಗ್ಯದಿಂದ ಇರುವ ಎಂಬುದೊಂದು ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು

ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು. AI Image ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ…

7 hours ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

1 day ago

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು. AI Image ನಮ್ಮ ದೇಹದ ಒಂದು ಮುಖ್ಯ…

2 days ago

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು. AI Image ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ…

3 days ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

4 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

5 days ago

This website uses cookies.