ಬಾರ್ಲಿ: ಆರೋಗ್ಯ ಪ್ರಯೋಜನಗಳು ಮತ್ತು ಉಪಯೋಗಿಸುವ ಸುಲಭ ವಿಧಾನಗಳು

Spread the love

ಬಾರ್ಲಿ: ಆರೋಗ್ಯ ಪ್ರಯೋಜನಗಳು ಮತ್ತು ಉಪಯೋಗಿಸುವ ಸುಲಭ ವಿಧಾನಗಳು

ಬಾರ್ಲಿ ಒಂದು ಸಂಪೂರ್ಣ ಧಾನ್ಯವಾಗಿದ್ದು, ಸ್ಪಷ್ಟವಾದ ರುಚಿ ಇಲ್ಲದ ಧಾನ್ಯ. ಆರೋಗ್ಯಕ್ಕೆ ಅತಿ ಉತ್ತಮವಾದ ಈ ಬಾರ್ಲಿಯು ಜೋಳದ ರೀತಿಯ ಹೋಲಿಕೆಯನ್ನು ಹೊಂದಿದೆ. ಬಾರ್ಲಿಯು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಅರೋಗ್ಯವರ್ಧಕ ಧನ್ಯವಾಗಿದೆ. ಪ್ರಸ್ತುತ ಇಂದಿನ ಲೇಖನದಲ್ಲಿ ಬಾರ್ಲಿಯ ವೈಜ್ಞಾನಿಕ ವಿಚಾರಗಳು ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ವಿಶ್ಲೇಷಿಸೋಣ.

ಬಾರ್ಲಿಯ ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು – ಹಾರ್ಡಿಯಮ್ ವಲ್ಗರೆ ( Hordeum vulgare )
ಆಂಗ್ಲ ಹೆಸರು – ಬಾರ್ಲಿ ( barley )

ಬಾರ್ಲಿಯಲ್ಲಿ ಅನೇಕ ಉತ್ತಮ ಅಂಶಗಳಿದ್ದು ಫೈಬರ್, ಮ್ಯಾಂಗನೀಸ್, ಸೋಡಿಯಂ, ಕ್ರೋಮಿಯಂ, ಕಾಪ್ಪರ್, ಥಾಯಮಿನ್, ನಿಯೋಸಿನ್, ವಿಟಮಿನ್ ಬಿ1, ಬಿ12, ಸಿ ಗಳಿವೆ.

ಇದು ಉತ್ತಮ ಅರೋಗ್ಯವರ್ಧಕವಾಗಿದ್ದು, ಅನೇಕ ರೋಗ ನಿರೋಧಕ ಗುಣಗಳಿವೆ.

ಬಾರ್ಲಿಯ ಕೆಲವು ಆರೋಗ್ಯಕರ ಮನೆಮದ್ದುಗಳು

ಹೃದಯದ ಅರೋಗ್ಯದಲ್ಲಿ ಬಾರ್ಲಿಯ ಪಾತ್ರ

  • ಕೊಲೆಸ್ಟ್ರೋಲ್ ನಿಯಂತ್ರಣದಲ್ಲಿ ಬಾರ್ಲಿಯ ಪಾತ್ರ ಬಹು ಮುಖ್ಯವಾಗಿದೆ. ಬಾರ್ಲಿಯಲ್ಲಿ ಅಧಿಕವಾಗಿರುವ ನಾರಿನಾಂಶವು ಕೊಲೆಸ್ಟ್ರೋಲ್ ಪ್ರಮಾಣ ಏರದಂತೆ ನೋಡಿಕೊಳ್ಳುತ್ತದೆ. ನಮ್ಮ ದೇಹದಲ್ಲಿನ ಪಿತ್ತಕೋಷವು ಪಿತ್ತರಸವನ್ನು ಉತ್ಪಾದಿಸಲು ಕೊಲೆಸ್ಟ್ರೋಲ್ ನ್ನು ಬಳಸಿಕೊಳ್ಳುತ್ತದೆ. ಬಾರ್ಲಿಯು ಹೊಂದಿರುವ ನಾರಿನ ಅಂಶವು, ಲಿವರ್ ಉತ್ಪಾದಿಸುವ ಕೊಲೆಸ್ಟ್ರೋಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಹಾಗೆಯೇ ಬಾರ್ಲಿಯ ನಿಯೋಸಿನ್ ಎಂಬ ಅಂಶವು ಕೊಲೆಸ್ಟ್ರೋಲ್ ಮಟ್ಟವನ್ನು ಕಡಿಮೆ ಮಾಡಿ, ದೇಹದಲ್ಲಿನ ಲಿಪೋಪ್ರೊಟೀನ್ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ನಿಯೋಸಿನ್ ಅಂಶವು ರಕ್ತ ಕಣಗಳನ್ನು ಗಡ್ಡೆ ಕಟ್ಟದಂತೆ ನೋಡಿಕೊಂಡು, ರಕ್ತದ ಚಲನೆಯನ್ನು ಸುಲಭಗೊಳಿಸುತ್ತದೆ. ಹೃದಯದ ಸುಲಭ ರಕ್ತ ಪರಿಚಲನೆಯಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ಬಾರ್ಲಿಯ ಸೇವನೆಯು ಬಹಳ ಉತ್ತಮವಾಗಿರುತ್ತದೆ.

ಅಧಿಕ ಬೊಜ್ಜಿನ ನಿವಾರಣೆಗೆ ಬಾರ್ಲಿ ಉತ್ತಮ ಆಹಾರವಾಗಿದೆ.

  • ಬಾರ್ಲಿಯಲ್ಲಿನ ಅಧಿಕ ನಾರಿನ ಅಂಶವು ನಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಬಾರ್ಲಿ ಗಂಜಿಯನ್ನು ಸೇವಿಸುವುದು ಬೊಜ್ಜನ್ನು ಕರಗಿಸಲು ಉತ್ತಮ ಆಹಾರವಾಗಿದೆ. ಒಮ್ಮೆ ಗಂಜಿಯನ್ನು ಸೇವಿಸಿದರೆ ಹೊಟ್ಟೆ ತುಂಬುತ್ತದೆ, ಪದೇ ಪದೇ ಆಹಾರ ಸೇವಿಸುವ ಅಗತ್ಯವಿರುವುದಿಲ್ಲ. ಹಾಗೆಯೇ ತೂಕ ಕಡಿಮೆ ಆಗುತ್ತದೆ.

ಋತುಚಕ್ರ ನಿಂತ ಮಹಿಳೆಯರ ಆರೋಗ್ಯಕ್ಕೆ ಬಾರ್ಲಿ ಅತಿ ಉತ್ತಮವಾಗಿದೆ.

  • ಋತುಚಕ್ರ ನಿಂತ ಮಹಿಳೆಯರು ತಮ್ಮ ಅರೋಗ್ಯವನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು. ಈ ಸಮಯದಲ್ಲಿ ಮಹಿಳೆಯರು ನಿತ್ಯ ಬಾರ್ಲಿ ಗಂಜಿ ಅಥವಾ ಸೂಪ್ ಅನ್ನು ಸೇವಿಸುವುದು ಅತಿ ಉತ್ತಮವಾಗಿದೆ. ಏಕೆಂದರೆ ಬಾರ್ಲಿಯಲ್ಲಿನ ನಾರಿನ ಅಂಶವು ಈ ಸಮಯದಲ್ಲಿ ಮಹಿಳೆಯರ ಹೃದಯ ರಕ್ಷಣೆಗೆ ಉತ್ತಮವಾಗಿರುತ್ತದೆ. ಎಲ್ಲಾ ತರಕಾರಿ, ಹಣ್ಣುಗಳಿಗೆ ಹೋಲಿಸಿದರೆ ಬಾರ್ಲಿಯಲ್ಲಿ ಅಧಿಕ ನಾರಿನ ಅಂಶ ಇದ್ದು, ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇದೆ ಕಾರಣಕ್ಕೆ ಋತುಚಕ್ರ ನಿಂತ ಮಹಿಳೆಯರು ತಮ್ಮ ಹೃದಯದ ಅರೋಗ್ಯವನ್ನು ಕಾಪಾಡಲು ಬಾರ್ಲಿಯನ್ನು ಆಹಾರದಲ್ಲಿ ಸ್ವೀಕರಿಸಬೇಕು.

ಜೀರ್ಣಕ್ರಿಯೆಯ ಕೆಲಸದಲ್ಲಿ ಬಾರ್ಲಿ ಅತಿ ಉತ್ತಮ ಪಾತ್ರವನ್ನು ವಹಿಸುತ್ತದೆ.

  • ಜೀರ್ಣಕ್ರಿಯೆಯಲ್ಲಿ ಬಾರ್ಲಿಯ ಸೇವನೆಯು ಅತಿ ಮುಖ್ಯವಾಗಿದೆ. ಬಾರ್ಲಿಯಲ್ಲಿನ ಅಧಿಕ ನಾರಿನಾಂಶವು ದೊಡ್ಡ ಕರುಳಿನ ಬ್ಯಾಕ್ಟೀರಿಯಾಗಳ ಆಹಾರವಾಗುತ್ತದೆ. ಈ ಸಮಯದಲ್ಲಿ ಬ್ಯಾಕ್ಟೀರಿಯಾಗಳು ಬ್ಲೂಟ್ರಿಕ್ ಆಸಿಡ್ ಎಂಬ ಆಸಿಡ್ ಅನ್ನು ಉತ್ಪತ್ತಿ ಮಾಡುತ್ತದೆ. ಇದು ದೊಡ್ಡ ಕರುಳಿನ ಜೀವಕೋಶಗಳಿಗೆ ಶಕ್ತಿಯನ್ನು ನೀಡುತ್ತದೆ, ಅಂತೆಯೇ ಕರುಳಿನ ಉತ್ತಮ ಆರೋಗ್ಯಕ್ಕೆ ಬಾರ್ಲಿಯು ಸಹಾಯಕವಾಗುತ್ತದೆ. ಲಿವರ್ ಹಾಗೂ ಮಾಂಸಖಂಡಗಳಿಗೆ ಅಗತ್ಯವಿರುವ ಶಕ್ತಿಯನ್ನು ಕೂಡ ಒದಗಿಸುತ್ತದೆ. ಕರುಳಿನ ಅರೋಗ್ಯವನ್ನು ಕಾಪಾಡಿ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಮಧುಮೇಹಕ್ಕೆ ಉತ್ತಮ ಡಯಟ್ ಫುಡ್ ಬಾರ್ಲಿ.

  • ಸಕ್ಕರೆ ಖಾಯಿಲೆಗೆ ಬಾರ್ಲಿ ಅತಿ ಉತ್ತಮ ಆಹಾರವಾಗಿದೆ. ಬಾರ್ಲಿಯು ತನ್ನಲ್ಲಿರುವ ಬೀಟಾ ಗ್ಲುಕನ್ ನಾರಿನ ಅಂಶವು ದೇಹವು ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೆಟ್ಸ್ ಗಳನ್ನು ಹೀರಿಕೊಳ್ಳುವ ವೇಗದ ಮಿತಿಯನ್ನು ಕಡಿಮೆಗೊಳಿಸಿ, ದೇಹದಲ್ಲಿನ ಗ್ಲೂಕೋಸ್ ಪ್ರಮಾಣ ಕಡಿಮೆ ಆಗುತ್ತದೆ. ಹೀಗೆ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಕಡಿಮೆಯಾಗುತ್ತದೆ ಅಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿ ಮಧುಮೇಹವು ನಿಯಂತ್ರಣದಲ್ಲಿ ಇರುತ್ತದೆ.

  • ಹಾಗೆಯೇ ಗರ್ಭಿಣಿಯರಿಗೆ ಮಧುಮೇಹದ ಸಮಸ್ಯೆ ಇದ್ದರೂ ಕೂಡ ಬಾರ್ಲಿಯನ್ನು ಆಗಾಗ ಸೇವಿಸುವುದು ಉತ್ತಮವಾಗಿದೆ. ಇದು ದೇಹದ ಉಷ್ಣತೆಯನ್ನು ಕಾಪಾಡಲು ಸಹಾಯಕವಾಗಿದೆ.

ಚರ್ಮದ ಆರೋಗ್ಯಕ್ಕೆ ಬಾರ್ಲಿ ಅತಿ ಉತ್ತಮವಾಗಿದೆ.

  • ಬಾರ್ಲಿಯಲ್ಲಿನ ಸೆಲೆನಿಯಂ ಅಂಶವು ಇದ್ದು, ಇದು ಚರ್ಮದ ರಕ್ಷಣೆಗೆ ಉತ್ತಮವಾಗಿದೆ. ಬೇಗನೆ ಸುಕ್ಕಾಗುವುದನ್ನು ತಡೆದು, ಚರ್ಮವನ್ನು ಬಿಗಿಯಾಗಿಸುತ್ತದೆ. ಇದರಿಂದ ನಾಮ್ಮ ತ್ವಚೆಯು ತಾರುಣ್ಯಪೂರ್ಣವಾಗಿರುತ್ತದೆ.

ಕೂದಲು ಬೇಗನೆ ಬೆಳ್ಳಗಾಗುವುದನ್ನು ತಡೆಯಲು ಹಾಗೂ ಕೂದಲಿನ ಉತ್ತಮ ಆರೋಗ್ಯಕ್ಕೆ ಬಾರ್ಲಿ ಸಹಾಯಕವಾಗಿದೆ.

  • ಬಾರ್ಲಿಯಲ್ಲಿನ ವಿಟಮಿನ್ ಹಾಗೂ ಅನೇಕ ಖನಿಜಗಳ ಇರುವಿಕೆಯು ಕೂದಲಿನ ಉದುರುವಿಕೆಯನ್ನು ಕಡಿಮೆಗೊಳಿಸುತ್ತದೆ. ಹಾಗೆಯೇ ಬಾರ್ಲಿಯಲ್ಲಿನ ಥಯಾಮಿನ್ ಹಾಗೂ ನಿಯಾಸಿನ್ ಅಂಶಗಳು ಕೂದಲಿನ ಉತ್ತಮ ಬೆಳವಣಿಗೆಗೆ ಸಹಾಯಕವಾಗಿದೆ. ಇನ್ನೂ ಮುಖ್ಯವಾಗಿ ಬಾರ್ಲಿಯಲ್ಲಿ ತಾಮ್ರದ ಅಂಶವು ಹೆಚ್ಚಾಗಿದ್ದು, ಇದು ಕೂದಲಿಗೆ ಕಪ್ಪು ಬಣ್ಣವನ್ನು ನೀಡುವ ಮೆಲಾನಿನ್ ಉತ್ಪಾದನೆಗೆ ಉತ್ತಮವಾಗಿದೆ. ಆದ್ದರಿಂದ ಬಾರ್ಲಿಯ ಸೇವನೆಯು ಬೇಗನೆ ಕೂದಲು ಬೆಳ್ಳಗೆ ಆಗುವುದನ್ನು ತಡೆಯುತ್ತದೆ. ಒಟ್ಟಿನಲ್ಲಿ ಕೂದಲಿನ ಸಂಪೂರ್ಣ ರಕ್ಷಣೆಗೆ ಬಾರ್ಲಿ ಉತ್ತಮ ಆಹಾರವಾಗಿದೆ.

ರಕ್ತದ ಉತ್ಪಾದನೆಗೆ ಬಾರ್ಲಿಯು ಸಹಾಯಕವಾಗಿದೆ.

  • ಬಾರ್ಲಿಯಲ್ಲಿನ ಅಧಿಕ ತಾಮ್ರದ ಅಂಶವು ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯಕವಾಗಿದೆ. ಇದರಿಂದ ರಕ್ತದ ಕಣಗಳ ರಚನೆಯು ಸುಲಭವಾಗುತ್ತದೆ. ಇದು ದೇಹದಲ್ಲಿನ ರಕ್ತ ಹೀನತೆಯ ಸಮಸ್ಯೆಯನ್ನು ಕೂಡ ಕಡಿಮೆ ಮಾಡಿಸುತ್ತದೆ. ಬಾರ್ಲಿಯು ರಕ್ತದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮಲಬದ್ಧತೆ ನಿವಾರಣೆಗೂ ಬಾರ್ಲಿ ಉಪಯುಕ್ತವಾಗಿದೆ.

  • ಬಾರ್ಲಿಯಲ್ಲಿನ ಅಧಿಕವಾದ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಮಲಬದ್ಧತೆಯ ಸಮಸ್ಯೆಯನ್ನು ದೂರಗೊಳಿಸುತ್ತದೆ. ಬಾರ್ಲಿಯು ಮೂಲವ್ಯಾಧಿ ಸಮಸ್ಯೆಯ ನಿವಾರಣೆಗೂ ಉತ್ತಮ ಆಹಾರವಾಗಿದ್ದು, ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರವಾಗಿಸಲು ಉತ್ತಮವಾಗಿದೆ.

ಮೂಳೆಗಳ ಆರೋಗ್ಯಕ್ಕೆ ಬಾರ್ಲಿಯು ಉತ್ತಮವಾಗಿದೆ.

  • ಬಾರ್ಲಿಯು ಕ್ಯಾಲ್ಸಿಯಂ ಭರಿತ ಆಹಾರವಾಗಿದ್ದು, ಮೂಳೆಗಳ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಮೂಳೆಗಳ ಸವೆತವನ್ನು ಕಡಿಮೆ ಮಾಡಿಸುತ್ತದೆ. ಮೂಳೆಗಳ ಉತ್ತಮ ಆರೋಗ್ಯಕ್ಕೆ ನಿತ್ಯ ಬಾರ್ಲಿ ಗಂಜಿಯನ್ನು ಕುಡಿಯುವುದು ಅತಿ ಉತ್ತಮವಾಗಿದೆ.

ಪಿತ್ತದ ಹರಳುಗಳನ್ನು ತಡೆಗಟ್ಟಲು ಬಾರ್ಲಿ ಉತ್ತಮವಾಗಿದೆ.

  • ಬಾರ್ಲಿಯಲ್ಲಿ ನಾರಿನಾಂಶವು ಅಧಿಕವಾಗಿದ್ದು, ಇದು ಪಿತ್ತರಸದ ಉತ್ಪಾದನೆಯನ್ನು ಕಡಿಮೆ ಮಾಡಿಸುತ್ತದೆ. ಇದು ಪಿತ್ತದ ಹರಳುಗಳು ಉಂಟಾಗುವ ಸಂಭವವನ್ನು ಕಡಿಮೆ ಮಾಡಿಸುತ್ತದೆ.

ಮೂತ್ರಕೋಶದ ರಕ್ಷಣೆಯಲ್ಲಿ ಬಾರ್ಲಿಯ ಪಾತ್ರ ಉತ್ತಮವಾಗಿದೆ.

  • ಮೂತ್ರಕೋಶದ ಆರೋಗ್ಯದ ರಕ್ಷಣೆಯಲ್ಲಿ ಬಾರ್ಲಿಯ ಪಾತ್ರ ಉತ್ತಮವಾಗಿದೆ. ಮೂತ್ರಕೋಶದ ಸೋಂಕನ್ನು ತಡೆಗಟ್ಟಲು ಬಾರ್ಲಿ ಒಳ್ಳೆಯ ಆಹಾರವಾಗಿದೆ. ಇದರಿಂದ ಮೂತ್ರಪಿಂಡಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಸಮಸ್ಯೆಗಳು ಭಾದಿಸುವುದಿಲ್ಲ.

ಬಾರ್ಲಿಯು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

  • ಬಾರ್ಲಿಯ ಆಹಾರವನ್ನು ಸೇವಿಸುವುದರಿಂದ ನೆಗಡಿ, ಕೆಮ್ಮು, ದಮ್ಮು ಹಾಗೂ ಶೀತದಂತಹ ಸಣ್ಣ ಪುಟ್ಟ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿಯು ಹೆಚ್ಚಾಗುತ್ತದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೇ ದೇಹಕ್ಕೆ ಉತ್ತಮ ದೃಢತೆಯನ್ನು ನೀಡುತ್ತದೆ.

ಇಷ್ಟೆಲ್ಲ ಉತ್ತಮ ಉಪಯೋಗಗಳನ್ನು ಹೊಂದಿರುವ ಬಾರ್ಲಿಯ ಉಪಯೋಗವನ್ನು ಮಾಡುವ ಬಗೆಯ ಬಗ್ಗೆ ತಿಳಿಸಬೇಕಾದರೆ, ಮೊದಲನೆಯದಾಗಿ ಬಾರ್ಲಿಯನ್ನು ಚೆನ್ನಾಗಿ ತೊಳೆದು ಒಣಗಿಸಬೇಕು. ಒಣಗಿದ ಬಾರ್ಲಿಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ನೀರನ್ನು ಕುದಿಸಿ, ಒಂದು ಚಮಚ ಬಾರ್ಲಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಈ ಕುದಿಸಿದ ನೀರನ್ನು ಕುಡಿಯಬೇಕು. ಇದು ಆರೋಗ್ಯಕ್ಕೆ ಅತಿ ಉತ್ತಮವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಹಾಗೆಯೇ ಇದು ಹಸಿವನ್ನು ಕೂಡ ಹೋಗಲಾಡಿಸುತ್ತದೆ. ಇನ್ನೊಂದು ವಿಧಾನದಲ್ಲಿ ಬಾರ್ಲಿಯನ್ನು ಗಂಜಿಯಾಗಿ ತಯಾರಿಸಿ ಉಪಯೋಗಿಸಬಹುದು. ಬಾರ್ಲಿಯನ್ನು ಚೆನ್ನಾಗಿ ತೊಳೆದು, ಒಂದು ಲೋಟ ಬಾರ್ಲಿಗೆ ನಾಲ್ಕು ಲೋಟ ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ, ಗಂಜಿಯನ್ನು ತಯಾರಿಸಿಕೊಳ್ಳಬಹುದು. ಎಲ್ಲವೂ ಕೂಡ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.

ಇನ್ನೂ ಕೆಲವರಿಗೆ ಬಾರ್ಲಿಯ ಸೇವನೆ ಇಷ್ಟವಿಲ್ಲದಿದ್ದರೆ, ಬಾರ್ಲಿಯ ಪುಡಿಯನ್ನು ಬೆರೆಸಿ ಕುದಿಸಿದ ನೀರನ್ನು ಚಪಾತಿ, ದೋಸೆ, ರೊಟ್ಟಿ ಇತ್ಯಾದಿಗಳನ್ನು ಸಿದ್ದಪಡಿಸುವ ವೇಳೆಗೆ ಸೇರಿಸಿ ಖಾದ್ಯಗಳನ್ನು ತಯಾರಿಸಬೇಕು. ಇದು ಅರಿವಿಲ್ಲದೆ ನಮ್ಮ ದೇಹವನ್ನು ಸೇರಿ ನಮ್ಮ ಅರೋಗ್ಯವನ್ನು ಉತ್ತಮವಾಗಿ ಕಾಪಾಡುತ್ತದೆ. ಹಿಂದಿನ ಕಾಲದಲ್ಲಿ ಏನೇ ಸಮಸ್ಯೆ ಬಂದರೂ, ಆರೋಗ್ಯದಲ್ಲಿ ಏರಿಳಿತಗಳು ಉಂಟಾದಾಗ ಮೊದಲು ಬಾರ್ಲಿ ಗಂಜಿಯನ್ನು ಕುದಿಸಿ, ಕುಡಿಯುತ್ತಿದ್ದರು. ಇದು ಎಲ್ಲಾ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.

ಬಾರ್ಲಿಯ ಉತ್ತಮ ಪ್ರಯೋಜನಗಳನ್ನು ಪಡೆದು ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಲಿ ಎಂಬುದು ನಮ್ಮ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.