ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

Spread the love

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI Generated Image

ದಿನ ನಿತ್ಯ ಎದ್ದಕೂಡಲೇ ನಮ್ಮ ಕೈಯಿಂದ ಒಮ್ಮೆ ಕಣ್ಣನ್ನು ಬೆಚ್ಚ ಮಾಡಿ ನಂತರ ಕೂದಲನ್ನು ಸರಿ ಮಾಡಿಕೊಂಡು ಮುಂದಿನ ಕೆಲಸಕ್ಕೆ ನಾವು ಅಣಿಯಾಗುತ್ತೇವೆ. ಮುಖಕ್ಕೆ ಒಂದು ಸುಂದರ ಲಕ್ಷಣ ನಮ್ಮ ಮುಡಿ. ಮುಡಿಯ ಮೋಡಿಗೆ ಎಲ್ಲರೂ ಕೆಲವೊಮ್ಮೆ ಮನಸೋಲುತ್ತಾರೆ. ಅಂತಹ ಈ ಕೂದಲಿನ ಆರೈಕೆ ಇಂದು ಒಂದು ದೊಡ್ಡ ಕೆಲಸವಾಗಿದೆ. ಕೂದಲಿನ ರಕ್ಷಣೆಗಾಗಿ ನಾವು ತಲೆ ಕೆಡಿಸಿಕೊಳ್ಳುವುದು ಇಂದು ಸರ್ವೇ ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗಳಿಗೆ ಶಾಂಪೂ, ಕಂಡೀಷನರ್ ಹಾಗೂ ಬೇರೆ ಬೇರೆ ರೀತಿಯ ಎಣ್ಣೆಗಳ ಬಳಕೆ ನಾವು ಮಾಡುತ್ತೇವೆ. ಆದರೂ ಕೂದಲು ಉದುರುವಿಕೆ, ಹೊಟ್ಟಿನ ಸಮಸ್ಯೆ ಮುಖ್ಯವಾಗಿ ಸಣ್ಣ ವಯಸ್ಸಿಗೇ ಕೂದಲು ಬೆಳ್ಳಗಾಗುವುದು ಇಂದಿನ ಕಾಲದಲ್ಲಿ ಹೆಚ್ಚಾಗಿ ಕಾಣುತ್ತಿದೆ. ಇದಕ್ಕೆ ಪರಿಹಾರ ಏನು??? ಪರಿಹಾರವನ್ನು ಕಂಡುಕೊಳ್ಳುವ ಬಗೆ ಹೇಗೆ??!! ಎಂಬುದನ್ನು ನಾವೀಗ ವಿಶ್ಲೇಷಿಸೋಣ.

ನಮ್ಮ ಕೂದಲು 65%-95% ಕೆರಾಟಿನ್ ಎಂಬ ಅಂಶದಿಂದ ಕೂಡಿದ್ದು, ಲಿಪಿಡ್ ಗಳನ್ನು ಜೊತೆಗೆ ಹೊಂದಿದೆ. ಕೂದಲು ಒಂದು ದಿನಕ್ಕೆ 0.35 ಮಿಲಿ ಮೀಟರ್ ಗಳಷ್ಟು ಬೆಳೆಯುತ್ತದೆ. ಇಂತಹ ಕಪ್ಪು ಕೂದಲನ್ನು ಕಾಪಾಡಿಕೊಳ್ಳುವ, ಉದ್ದ ಕೂದಲನ್ನು ಹೊಂದುವ ಹಾಗೂ ಹೊಟ್ಟು ರಹಿತವಾಗಿರುವ ಬಗೆಯನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ.

ಉತ್ತಮ ಕೂದಲಿನ ಬೆಳವಣಿಗೆಗೆ ನಮ್ಮ ಸುತ್ತಲಿನ ಹವಾಮಾನ ಕೂಡ ಕಾರಣವಾಗುತ್ತದೆ. ಇಂದಿನ ವಾತಾವರಣದ ಮಲೀನತೆ ಕೂದಲಿನ ಬೆಳವಣಿಗೆಗೆ ಕೂಡ ಮಾರಕವಾಗಿದೆ. ಧೂಳು ತಲೆಕೂದಲನ್ನು ಸೇರಿ, ಅದರೊಂದಿಗೆ ನಮ್ಮ ಬೆವರು, ಹೊಟ್ಟು ಬೆಳವಣಿಗೆಗೆ ನಾಂದಿಯಾಗುತ್ತದೆ!! ಜಾಸ್ತಿ ಹೊಟ್ಟಿನ ಕಾರಣದಿಂದ ಕೂದಲು ಉದುರುವಿಗೆ ಹಾಗೂ ನಮ್ಮ ಪರಿಸರದ ನೀರಿನಲ್ಲಿನ ಅನೇಕ ರಾಸಾಯನಿಕ ದಿಂದ ಕೂದಲು ತನ್ನ ಮೂಲ ಬಣ್ಣವನ್ನು ಬೇಗ ಕಳೆದುಕೊಳ್ಳುತ್ತದೆ.

ಆದರೆ ಏನು ಮಾಡುವುದು ಪರಿಸ್ಥಿತಿ, ನಮ್ಮನಿತ್ಯ ಜೀವನಕ್ಕೆ ಹೊಂದಿಕೊಂಡು ಬದುಕು ಸಾಗಿಸಬೇಕು ಅಲ್ಲವೇ? ಆದರೆ ಎಲ್ಲ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತವೆ. ನಮ್ಮ ಪರಿಸರದ ಹಲವು ನೈಸರ್ಗಿಕ ವಸ್ತುಗಳೇ ನಮ್ಮ ಕೇಶದ ಸಂಜೀವಿನಿಯಾಗಿವೆ.

ಕೂದಲಿನ ಸಂರಕ್ಷಣೆಗೆ ನೈಸರ್ಗಿಕ ಕಂಡೀಷನರ್ ನಂತೆ ಕೆಲಸ ಮಾಡುವ ಉತ್ತಮ ಕೇಶತೈಲ!!

ಯಾವುದೇ ರಾಸಾಯನಿಕ ಬಳಸದೆ ನಿತ್ಯ ತಲೆಗೆ ಹಚ್ಚಿಕೊಳ್ಳಬೇಕಾದ ಒಂದು ಎಣ್ಣೆಯನ್ನು ತಯಾರಿಸುವ ಬಗೆಯನ್ನು ಈಗ ತಿಳಿಯೋಣ. ನಾವು ಈ ತೈಲವನ್ನು ಮಾಡಲು ನೈಸರ್ಗಿಕ ವಸ್ತುಗಳಾದ ತೆಂಗಿನ ಎಣ್ಣೆ, ಮೆಂತ್ಯೆ, ಕರಿಬೇವು, ಒಂದೆಲಗ, ದಾಸವಾಳದ ಹೂವು ಮತ್ತು ಎಲೆ, ಅಲೋವೆರಾ,ಭೃಂಗರಾಜ,ಮದರಂಗಿ ಎಲೆ ಹಾಗು ನೆಲ್ಲಿಕಾಯಿಯನ್ನು ಬಳಸುತ್ತೇವೆ.

ಎಣ್ಣೆಯನ್ನು ಮಾಡುವ ವಿಧಾನ

  • 2 ಚಮಚ ಮೆಂತ್ಯೆ ಕಾಳು
  • 2 ಮುಷ್ಟಿ ಕರಿಬೇವು
  • 1 ಮುಷ್ಟಿ ಒಂದೆಲಗ
  • 3 ಬಿಳಿ ದಾಸವಾಳ ಹೂವು
  • 1 ಮುಷ್ಟಿ ದಾಸವಾಳ ಎಲೆ
  • 2 ಸಣ್ಣ ತುಂಡು ಅಲೋವೆರಾ
  • 1 ಮುಷ್ಟಿ ಮದರಂಗಿ ಎಲೆ
  • 1 ಮುಷ್ಟಿ ಭ್ರಂಗರಾಜ
  • ಸಣ್ಣಗೆ ಹೆಚ್ಚಿದ 3-4 ನೆಲ್ಲಿಕಾಯಿ

ಈ ಎಲ್ಲವನ್ನು ಹಾಕಿ ರುಬ್ಬಿಕೊಳ್ಳಬೇಕು. ಮಿಶ್ರಣವನ್ನು 200 ಎಂ.ಎಲ್. ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಂತರ 10 ನಿಮಿಷ ಕುದಿಸಬೇಕು. ಆರಿದ ನಂತರ  ಶೋಧಿಸಿ ಬಾಟಲಿಯಲ್ಲಿ ಶೋಧಿಸಬೇಕು. ಈ ತೈಲವನ್ನು ನಿತ್ಯ ತಲೆಗೆ ಲೇಪಿಸುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ, ಹೊಟ್ಟಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಕೂದಲಿನ ಕಪ್ಪು ಬಣ್ಣಕ್ಕೂ ಇದು ಉತ್ತಮವಾಗಿದೆ. ಇಷ್ಟೆಲ್ಲಾ ಉಪಯುಕ್ತವಾದ ಎಣ್ಣೆಯನ್ನು ಮಾಡಿ ಬಳಸಿ ಉಪಯೋಗ ಪಡೆದುಕೊಳ್ಳಿ.

ಈ ಎಣ್ಣೆಯ ಉಪಯೋಗದ ಬಗ್ಗೆ ಹೇಳುವುದಾದರೆ ತೆಂಗಿನ ಎಣ್ಣೆ ಕೇಶ ಮಿತ್ರ ಎಂದೇ ಹೇಳಬಹುದು. 

  • ಮೆಂತ್ಯೆ ಕಾಳನ್ನು ತಲೆಯ ಹೊಟ್ಟು ನಿವಾರಣೆಗಾಗಿ ಹೆಚ್ಚಾಗಿ ಬಳಸುತ್ತಾರೆ, ಕೂದಲು ಉದುರುವಿಕೆಗೆ ಕೂಡ ಉಪಕಾರಿ ಮತ್ತು ತಲೆಯನ್ನು ತಂಪಾಗಿರಿಸಲು ಕೂಡ ಸಹಾಯ ಮಾಡುತ್ತದೆ.
  • ಒಂದೆಲಗದ ಸುವಾಸನೆಯ ಅದ್ಭುತ ಹಾಗು ಕೇಶವನ್ನು ದೃಢವಾಗಿಸುವ ಗುಣವನ್ನು ಹೊಂದಿದೆ.
  • ಬಿಳಿ ದಾಸವಾಳದ ಹೂವು ಕೂಡ ಕೇಶದ ರಂಗಿಗೂ, ಆರೋಗ್ಯಕ್ಕೆ ಕೂಡ ಒಳ್ಳೆಯದು.
  • ದಾಸವಾಳದ ಎಲೆಯು ಕೂಡ ಕೂದಲು ಉದರುವಿಕೆಗೂ ಉಪಯುಕ್ತವಾಗಿದೆ.
  • ಅಲೋವೆರಾ ತಲೆಗೆ ತಂಪು ಹಾಗೂ ತಲೆ ಗುಳ್ಳೆಗಳನ್ನು ಕಡಿಮೆ ಮಾಡಿಸುತ್ತದೆ.
  • ಭೃಂಗರಾಜ ಕೂಡ ಕೂದಲಿನ ಮಿತ್ರನೇ ಸರಿ, ಎಲ್ಲ ಸಮಸ್ಯೆಗೂ ಪರಿಹಾರ ನೀಡುವ ಉತ್ತಮ ದ್ರವ್ಯ.
  • ಮದರಂಗಿ ಎಲೆ ಬಣ್ಣಕ್ಕಾಗಿ ಹಾಗು ತಲೆ ಉಷ್ಣವನ್ನು ಕಡಿಮೆ ಮಾಡಲು ಸಹಾಯಕ ವಾಗಿದೆ.
  • ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶವಿದ್ದು ಕೊಲಾಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಇದು ಕೂದಲು ದೃಢ ಗೊಳಿಸಿ ಉತ್ತಮ ಬೆಳವಣಿಗೆಗೆ ಸಹಾಯಕವಾಗುತ್ತದೆ.

ನಮ್ಮ ಆಧುನಿಕತೆಯ ಕೆಲವು ರಾಸಾಯನಿಕಗಳ ಬಳಕೆ ನಮ್ಮ ಕೂದಲಿಗೆ ಮಾರಕವಾಗಿದ್ದು, ಎಲ್ಲವನ್ನೂ ಅರಿತು ರಾಸಾಯನಿಕಗಳನ್ನು ಬಳಸಬೇಕು. ನೈಜತೆಯನ್ನು ಹಾಳು ಮಾಡಿಕೊಂಡರೆ ಕೊನೆಯಲ್ಲಿ ಎಲ್ಲರೂ ಕೂಡ ಕೃತಕ ಹಾದಿಯನ್ನು ಬಳಸಬೇಕಾಗುತ್ತದೆ.

ಕೊನೆಯದಾಗಿ ನಮ್ಮ ಆಹಾರ ಪದ್ಧತಿ ಕೂಡ ನಮ್ಮಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದರಕ್ಕೆ ಕಹಿಯಾದದ್ದು ಎಂದಿಗೂ ಉದರಕ್ಕೆ ಸಿಹಿ ಎಂಬತ್ತೆ ಕೆಲವು ನೈಸರ್ಗಿಕ ಸಂಜೀವಿನಿಗಳು ಬಾಯಿಗೆ ಕಹಿ ಆದರೆ ಆರೋಗ್ಯಕ್ಕೆ ಹಿತಕರ. ಇದನ್ನು ಅರಿತು ನಮ್ಮ ನಿತ್ಯ ಆಹಾರದಲ್ಲಿ ಸಮತೋಲನ ಕೈಗೊಂಡು ಅರೋಗ್ಯರಾಗಿರಬೇಕು.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Share
Published by
GruhaSnehi

Recent Posts

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

13 hours ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

2 days ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

3 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

4 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

5 days ago

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು. AI Image ಹಸಿ ತರಕಾರಿಗಳು, ಕಾಳು ಬೇಳೆಗಳು ಅರೋಗ್ಯಕ್ಕೆ ತುಂಬಾ ಹಿತಕರವಾಗಿದೆ.…

6 days ago

This website uses cookies.