ಗುಲಾಬಿ ಹೂವಿನ ಔಷಧೀಯ ಗುಣಗಳು: ಜೊತೆಗೆ ಉಪಯೋಗಗಳು ಮತ್ತು ಸೌಂದರ್ಯವರ್ಧಕ ಟಿಪ್ಸ್ ಗಳು

Spread the love

ಗುಲಾಬಿ ಹೂವಿನ ಔಷಧೀಯ ಗುಣಗಳ ಜೊತೆಗೆ ಉಪಯೋಗಗಳು ಮತ್ತು ಸೌಂದರ್ಯವರ್ಧಕ ಟಿಪ್ಸ್ ಗಳು AI Image

ಹೂವಿನ ರಾಣಿ ಎಂದು ಪ್ರಚಲಿತವಾಗಿರುವ ಗುಲಾಬಿ ಹೂವು ಎಲ್ಲರಿಗೂ ಅತಿ ಪ್ರಿಯ. ಅನೇಕ ರಂಗುಗಳಲ್ಲಿ ಮಿಂಚುವ ಈ ಗುಲಾಬಿ ಹೂವು ದೇವರ ಪೂಜೆಗೆ, ಮದುವೆ ಹಾಗೂ ಇತರ ಸಮಾರಂಭಗಳ ಅಲಂಕಾರಕ್ಕೆ, ಹೆಣ್ಣು ಮಕ್ಕಳ ಮುಡಿಗೆ, ಗಂಡು ಮಕ್ಕಳ ಕೋಟಿನ ಜೇಬಿಗೆ, ಅಷ್ಟೇ ಅಲ್ಲದೆ ಪ್ರೀತಿಯ ಸಂಕೇತವಾಗಿ ಪ್ರೇಮಿಗಳು ಗುಲಾಬಿ ಹೂವನ್ನು  ವಿನಿಮಯ ಮಾಡಿಕೊಳ್ಳುತ್ತಾರೆ. ಪ್ರತಿ ಮನೆಯ ಅಂಗಳದಲ್ಲಿ ರಾರಾಜಿಸುವ ಹೂವಿನ ರಾಣಿ ಗುಲಾಬಿ ನೋಡಲು ಎಷ್ಟು ಸುಂದರವೋ ಅಷ್ಟೇ ನಮ್ಮ ದೈನಂದಿನ ಜೀವನದಲ್ಲಿ ಮಹತ್ತರ ಉಪಯೋಗಗಳನ್ನು ಹೊಂದಿದೆ.

ಕೆಲವು ವೈಜ್ಞಾನಿಕ ವಿಚಾರಗಳು

ಆಂಗ್ಲ ಹೆಸರು: ರೋಸ್ ( Rose )
ವೈಜ್ಞಾನಿಕ ಹೆಸರು: ರೋಸಾ ರೂಬಿಗಿನೋಸಾ ( Rosa rubiginosa )

ಗುಲಾಬಿ ಹೂವಿನ ಬಳಕೆಯಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಸೂರ್ಯನ ಶಾಖದಿಂದ ಚರ್ಮ ಸುಟ್ಟರೆ ಗುಲಾಬಿಯೂ ಅದಕ್ಕೆ ಉತ್ತಮ ಮದ್ದಾಗಿ ಕೆಲಸ ಮಾಡುತ್ತದೆ. ಅನೇಕ ಪಿತ್ತ ಸಂಬಂಧಿ ಸಮಸ್ಯೆಗಳಿಗೂ ಉತ್ತಮ ಪರಿಹಾರವಾಗಿದೆ. ಈಗ ಗುಲಾಬಿಯ ಉಯೋಗಗಳ ಬಗ್ಗೆ ತಿಳಿಯೋಣ.

ಗುಲಾಬಿಯಿಂದ ಚರ್ಮದ ಕಾಂತಿಗೆ ಉಪಯುಕ್ತವಾಗುವ ಕೆಲವು ಸಲಹೆಗಳು.

ಚರ್ಮದ ಕಾಂತಿ ವರ್ಧನೆಗೆ ( for glowy skin )
ಮುಖದ ಹೊಳಪಿಗಾಗಿ, ಚರ್ಮದ ಸುಕ್ಕು ನಿವಾರಣೆಗೆ ಗುಲಾಬಿ ತುಂಬಾ ಉಪಯುಕ್ತವಾಗಿದೆ.

  • ಗುಲಾಬಿ ಎಸಳನ್ನು ಚೆನ್ನಾಗಿ ತೊಳೆದು ರುಬ್ಬಿಕೊಂಡು ಮುಖಕ್ಕೆ ಫೇಸ್ ಪ್ಯಾಕ್ ರೀತಿಯಲ್ಲಿ ಹಚ್ಚಿಕೊಂಡು ಪೂರ್ಣ ಒಣಗಿದ ನಂತರ ಮುಖ ತೊಳೆದುಕೊಳ್ಳಬೇಕು. ಚರ್ಮಕ್ಕೆ ಮೃದುತ್ವ ಬರುವುದರ ಜೊತೆಗೆ ಹೊಸ  ಕಾಂತಿ ಹೆಚ್ಚಾಗಿ ಕಾಣಿಸುತ್ತದೆ. ಇದನ್ನು ಪ್ರತಿನಿತ್ಯ ಮಾಡುವುದರಿಂದ ಕಲೆಗಳೆಲ್ಲವೂ ಕಡಿಮೆಯಾಗುತ್ತದೆ.
  • ಗುಲಾಬಿ ಎಸಳುಗಳನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿಕೊಳ್ಳಬೇಕು. ಈ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಬೇಕು. ಇಲ್ಲವೇ ಹಾಲಿನೊಂದಿಗೆ ಬೆರೆಸಿ ಕುಡಿದರು ಒಳ್ಳೆಯದು. ಇವೆಲ್ಲವೂ ಚರ್ಮದ ಕಾಂತಿ ಹಾಗೂ ರಕ್ಷಣೆಗೆ ಉತ್ತಮವಾಗಿದೆ.
  • ರೋಸ್ ವಾಟರ್ ( rose water ) ಇದು ಕೂಡ ಚರ್ಮಕ್ಕೆ ಉತ್ತಮವಾಗಿದ್ದು ಅಧಿಕವಾಗಿ ಮೇಕ್ಅಪ್ ಬಳಸಿದಾಗ, ಮೆಕ್ಅಪ್ ತೆಗೆದ ಮೇಲೆ ರೋಸ್ ವಾಟರ್ ಹತ್ತಿಯಿಂದ ಮುಖದ ಚರ್ಮಕ್ಕೆ ಹಚ್ಚಿಕೊಂಡರೆ ಮುಖದ ಮೃದುತ್ವವನ್ನು ಕಾಪಾಡಿ, ಗುಳ್ಳೆಗಳು ಅಥವಾ ಮೊಡವೆಗಳ ಬೆಳೆವಣಿಗೆಯನ್ನು ಕಡಿಮೆ ಮಾಡಿಸುತ್ತದೆ. ಚರ್ಮದ ಕಾಂತಿ ಕೂಡ ಉತ್ತಮವಾಗಿರುತ್ತದೆ.

ಕಣ್ಣು ಉರಿ ಹಾಗೂ ಕಣ್ಣಿನ ಆರೋಗ್ಯಕ್ಕೆ

ಬಿಸಿಲಿನ ಬೇಗೆಗೆ ಬರುವ ಕಣ್ಣು ಉರಿಯನ್ನು ಹಾಗೆಯೇ ತುಂಬಾ ಹೊತ್ತು ಕಂಪ್ಯೂಟರ್, ಮೊಬೈಲ್ ಬಳಕೆಯ ನಂತರ ಕಣ್ಣಿಗೆ ಆಗುವ ಆಯಾಸವನ್ನು ಕಡಿಮೆ ಮಾಡಲು, ಹತ್ತಿಯನ್ನು ರೋಸ್ ವಾಟರ್ ನಲ್ಲಿ ನೆನೆಸಿ ಕಣ್ಣುಗಳ ಮೇಲೆ ಒಂದು ಕಾಲು ಗಂಟೆಗಳ ಕಾಲ ಇಟ್ಟುಕೊಂಡರೆ ಕಣ್ಣಿನ ಉರಿ ಹಾಗೂ ಆಯಾಸ ಕಡಿಮೆ ಆಗುತ್ತದೆ.

ಬಾಯಿ ಹುಣ್ಣು ಹಾಗೂ ಹಲ್ಲುಗಳ ಆರೋಗ್ಯಕ್ಕೆ

ಗುಲಾಬಿ ದಳಗಳನ್ನು ನೆರಳಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಬಾಯಿ ಹುಣ್ಣಿನ ಸಮಯದಲ್ಲಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಮತ್ತು ಸ್ವಲ್ಪ  ಸಕ್ಕರೆ ಹಾಕಿ ಕುಡಿದರೆ ಬಾಯಿ ಹುಣ್ಣು ಕ್ರಮೇಣ ಕಡಿಮೆಯಾಗುತ್ತದೆ. ಹಾಗೆಯೇ ಇದೆ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುದಿಸಬೇಕು. ಇಟ್ಟ ನೀರು ಅರ್ಧದಷ್ಟು ಆದ ನಂತರ, ಸ್ವಲ್ಪ ನೀರು ತಣಿದ ಮೇಲೆ ಆ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಇದು ಹಲ್ಲುಗಳ ಆರೋಗ್ಯಕ್ಕೆ ಉತ್ತಮವಾಗಿದೆ.

ಬೇಸಿಗೆಯ ಬಳಲಿಕೆ, ಆಯಾಸ, ಗಂಟಲು ಒಣಗುವಿಕೆ ಹಾಗೂ ದೇಹವನ್ನು ತಂಪಾಗಿರಿಸಲು

ಗುಲಾಬಿ ದಳಗಳನ್ನು ಚೆನ್ನಾಗಿ ತೊಳೆದು ನುಣ್ಣಗೆ ಜಜ್ಜಬೇಕು. ಒಂದು ಚಮಚ ಜಜ್ಜಿದ ಗುಲಾಬಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸಬೇಕು. ಇದು ದೇಹವನ್ನು ತಂಪಾಗಿರಿಸಿ, ಆಯಾಸ ಹಾಗೂ ಬಾಯಿರಿಕೆ ಎಲ್ಲವನ್ನು ದೂರಗೊಳಿಸುತ್ತದೆ.

ಪಿತ್ತದ ಸಮಸ್ಯೆಗಳಿಗೆ ರುಚಿಯಾದ ಗುಲ್ಕನ್ ತಿನ್ನುವುದೇ ಪರಿಹಾರ.

ಪಿತ್ತದ ಸಮಸ್ಯೆಯಿಂದ ಬರುವ ವಾಂತಿ, ತಲೆ ಸುತ್ತುವಿಕೆ ಹಾಗೂ ಕರಳುಹುಣ್ಣು, ಕಣ್ಣಿನ ಉರಿ ಎಲ್ಲದಕ್ಕೂ ಗುಲ್ಕನ್ ಉತ್ತಮ ಮದ್ದಾಗಿದೆ. ಎರಡು ಚಮಚ ಗುಲ್ಕನ್ ಜೊತೆ ಒಂದು ಚಮಚ ತುಪ್ಪ ಸೇರಿಸಿ ಸವಿದರೆ ಪಿತ್ತದ ಸರ್ವ ಸಮಸ್ಯೆ ದೂರವಾಗುತ್ತದೆ.

ಗುಲ್ಕನ್ ಮಾಡಲು ಬೇಕಾಗುವ ಪದಾರ್ಥಗಳು:

  • ಗುಲಾಬಿ ಎಸಳುಗಳು
  • ಕಲ್ಲು ಸಕ್ಕರೆ ಪುಡಿ
  • ಜೇನುತುಪ್ಪ
  • ಏಲಕ್ಕಿ ಪುಡಿ

ಗುಲ್ಕನ್ ಮಾಡುವ ವಿಧಾನ:

ಮೊದಲು ಗುಲಾಬಿ ದಳಗಳನ್ನು ತೊಳೆದು ಒಣಗಿಸಿಕೊಳ್ಳಬೇಕು. ನಂತರ ಒಂದು ಗಾಜಿನ ಪಾತ್ರೆಯಲ್ಲಿ ಮೊದಲು ಒಂದು ಪದರ ಗುಲಾಬಿ ದಳಗಳು ಮತ್ತೊಂದು ಪದರ ಕಲ್ಲು ಸಕ್ಕರೆ ಪುಡಿ, ಹಾಗೆಯೇ ಮತ್ತೆ ಗುಲಾಬಿ ದಳಗಳು ಅದರ ಮೇಲೆ ಕಲ್ಲು ಸಕ್ಕರೆ ಪುಡಿ ಹೀಗೆ ಹಾಕಿ ಕೊನೆಯಲ್ಲಿ ಜೇನುತುಪ್ಪ ಹಾಗೂ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಬೇಕು. ನಂತರ ಪಾತ್ರೆಯ ಬಾಯಿ ಕಟ್ಟಿ ಒಂದು 10 ದಿನ ಬಿಸಿಲಿಗೆ ಇಡಬೇಕು. 10 ದಿನಗಳ ಬಿಸಿಲಿನ ನಂತರ ಗುಲ್ಕನ್ ಸಿದ್ದವಾಗಿರುತ್ತದೆ.

ಬಿಸಿಲಿನ ಬೇಗೆಯನ್ನು ತಣಿಸಲು ಗುಲಾಬಿಯ ತಂಪು ಪಾನೀಯ.

ಬೇಕಾಗುವ ಪದಾರ್ಥಗಳು:

  • ಸಕ್ಕರೆ 5 ಚಮಚ
  • ಗುಲಾಬಿ ಎಸಳುಗಳು
  • ಲಿಂಬೆ ಹಣ್ಣು
  • ಏಲಕ್ಕಿ ಪುಡಿ
  • ಚಿಟಿಕೆ ಉಪ್ಪು

ಮಾಡುವ ವಿಧಾನ:

ಒಂದು ಲೋಟ ನೀರಿಗೆ 5 ಚಮಚ ಸಕ್ಕರೆ ಸೇರಿಸಿ ಪಾಕ ತಯಾರಿಸಿಕೊಂಡು ಅದಕ್ಕೆ ಗುಲಾಬಿ ಎಸಳುಗಳನ್ನು ಹಾಕಿ ಒಂದು ರಾತ್ರಿ ಮುಚ್ಚಿಡಬೇಕು. ಮರುದಿನ ಸಕ್ಕರೆ ಪಾಕದಲ್ಲಿನ ಗುಲಾಬಿಗಳನ್ನು ಕಿವುಚಿ ಸ್ವಲ್ಪ ನೀರು ಸೇರಿಸಿ, ಲಿಂಬೆಹಣ್ಣು, ಸ್ವಲ್ಪ ಏಲಕ್ಕಿ ಪುಡಿ, ಚಿಟಿಕೆ ಉಪ್ಪನ್ನು ಸೇರಿಸಿದರೆ ಗುಲಾಬಿಯ ತಂಪು ಪಾನೀಯ ಸಿದ್ದವಾಗುತ್ತದೆ.

ನೋಡಿದಿರಾ ಇಷ್ಟೆಲ್ಲ ಉಪಯೋಗಗಳು ಗುಲಾಬಿ ಹೂವಿನಿಂದ, ಅಲಂಕಾರಕ್ಕೂ, ಆಹಾರಕ್ಕೂ ಎಲ್ಲದರಲ್ಲಿಯೂ ಮುಂಚೂಣಿಯಲ್ಲಿರುವ ಗುಲಾಬಿಯು ಸುಗಂಧ ದ್ರವ್ಯದ ತಯಾರಿಕೆಯಲ್ಲೂ ಅತಿ ಬೇಡಿಕೆಯದ್ದಾಗಿದೆ. ಗುಲಾಬಿಯಿಂದ ಗುಲಾಬ್ ಅತ್ತರ್, ಗುಲಾಬ್ ವಿನೆಗರ್, ಗುಲಾಬ್ ಹನಿ ಹಾಗೂ ಇನ್ನೂ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಇನ್ನೂ ಹಲವು ಉಪಯೋಗಗಳನ್ನು ಹೊಂದಿರುವ ಗುಲಾಬಿ ಹೂವಿನ ಅನೇಕ ಮಾಹಿತಿಗಳು ಈ ಲೇಖನದ ಮೂಲಕ ನಿಮ್ಮ ಮುಂದೆ ಪ್ರಸ್ತುತವಾಗಿದೆ. ಲೇಖನವನ್ನು ಓದಿ ಗುಲಾಬಿಯ ಪ್ರಯೋಜನಗಳನ್ನು ಪಡೆಯಿರಿ ಎಂಬುದೊಂದು ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Recent Posts

ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು

ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು. AI Image ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ…

22 hours ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

2 days ago

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು. AI Image ನಮ್ಮ ದೇಹದ ಒಂದು ಮುಖ್ಯ…

3 days ago

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು. AI Image ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ…

4 days ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

5 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

6 days ago

This website uses cookies.