ಉಸಿರಿಗೆ ಹಸಿರು ತುಳಸಿ: ವಿಧಗಳು, ವೈಜ್ಞಾನಿಕ, ಮತ್ತು ಧಾರ್ಮಿಕ ಹಿನ್ನಲೆ

Spread the love

ಆಂಗ್ಲ ಹೆಸರು: ಹೋಲಿ ಬೆಸಿಲ್

ವೈಜ್ಞಾನಿಕ ಹೆಸರು: ಒಸಿಮಮ್ ಸ್ಯಾಕ್ಟಮ್ ಲಿನ್

ದೇವರು ಕಣ್ಣಿಗೆ ಕಾಣುವುದಿಲ್ಲ ಆದರೂ ನಮ್ಮ ಜೊತೆಗೆ ಇರುತ್ತಾನೆ ಎಂಬುದಕ್ಕೆ ಹಲವು ನಿದರ್ಶನಗಳಿವೆ, ಅದರಲ್ಲಿ ಒಂದು ನಮ್ಮ ಈ ಸುಂದರ ಸಸ್ಯ ಸಂಪತ್ತು. ಈ ಸಸ್ಯ ಸಂಪತ್ತಿನಲ್ಲಿ ಕೆಲವೊಂದಕ್ಕೆ ಪೂಜ್ಯನೀಯ ಸ್ಥಾನವನ್ನು ನಾವು ನೀಡುತ್ತೇವೆ. 

ಇಂತಹ ಪೂಜ್ಯನೀಯ ಸಸಿಗಳ ಪೈಕಿ ಮೊದಲನೆಯದಾಗಿ ನನ್ನ ಗಮನಕ್ಕೆ ಬಂದದ್ದು ತುಳಸಿ.

ದೈವೀ ಮಾತೆಯಾಗಿಯೂ, ಕೃಷ್ಣ ಪ್ರಿಯವಾಗಿಯೂ, ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಾಬಾಣವಾಗಿಯೂ, ಉತ್ತಮ ಆಮ್ಲಜನಕ ಪೂರೈಸಿ ಪರಿಸರ ಸ್ನೇಹಿಯಾಗಿ ಎಲ್ಲರ ಮನೆ ಮನದಂಗಳದಲ್ಲಿ ರಾರಾಜಿಸುವ ನಮ್ಮ ತುಳಸಿಯ ಬಗ್ಗೆ ಕೆಲವು ವಿಷಯಗಳನ್ನು ಅರಿಯೋಣ.

ತುಳಸಿಯಲ್ಲಿ ಒಟ್ಟು 5 ವಿಧಗಳಿವೆ

1. ಕೃಷ್ಣ ತುಳಸಿ (ಶ್ಯಾಮ ತುಳಸಿ)

ತುಳಸಿ ಎಲೆಗಳು ಕಡು ನೇರಳೆ ಬಣ್ಣವನ್ನು  ಅದಕ್ಕಾಗಿಯೇ ಇದನ್ನು ಶ್ಯಾಮ ತುಳಸಿ ಅಥವಾ ಕೃಷ್ಣ ತುಳಸಿ ಎಂದು ಕರೆಯಲಾಗುತ್ತದೆ. ತುಳಸಿಯ ಕಪ್ಪು ಬಣ್ಣದಿಂದಾಗಿ ಅದು ಶ್ರೀಕೃಷ್ಣನಿಗೆ ತುಂಬಾ ಪ್ರಿಯವಾದುದು ಎನ್ನುತ್ತಾರೆ ಹಾಗು ಸ್ವಲ್ಪ ತೀಕ್ಷ್ಣವಾದ ಪರಿಮಳವನ್ನು ಹೊಂದಿರುತ್ತದೆ.

ಕೃಷ್ಣ ತುಳಸಿ (ಶ್ಯಾಮ ತುಳಸಿ)

2. ರಾಮ ತುಳಸಿ

ಇದರ ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ. ಅಲ್ಲದೆ, ಈ ತುಳಸಿ ಶ್ರೀ ರಾಮನಿಗೆ ತುಂಬಾ ಪ್ರಿಯವಾದದ್ದು ಆದ್ದರಿಂದ ಇದನ್ನು ರಾಮ ತುಳಸಿ ಎಂದು ಕರೆಯಲಾಗುತ್ತದೆ. ರಾಮ ತುಳಸಿ ಎಲೆಗಳು ಸಿಹಿಯಾದ ಅನುಭವವನ್ನು ನೀಡುತ್ತದೆ, ಸೌಮ್ಯ ಸುವಾಸನೆಯನ್ನು ಹೊರಹೊಮ್ಮಿಸುತ್ತದೆ. ಈ ತುಳಸಿಯನ್ನು ಮನೆಯಲ್ಲಿ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಆ ಮನೆಯಲ್ಲಿ ಪ್ರಗತಿಯಾಗುತ್ತದೆ ಎನ್ನುವ ನಂಬಿಕೆಯಿದೆ.

ರಾಮ ತುಳಸಿ

3. ಕರ್ಪೂರ ತುಳಸಿ

ಕರ್ಪೂರ ತುಳಸಿಯು ತನ್ನ ಸುವಾಸನೆಯಿಂದ ಈ ಹೆಸರು ಪಡೆದುಕೊಂಡಿದೆ. ಕರ್ಪೂರದ ಪರಿಮಳ ಹೊಂದಿರುವ ಈ ತುಳಸಿ ಅನೇಕ ರೋಗ ನಿರೋಧಕ ಗುಣಗಳನ್ನು ಸಹ ಹೊಂದಿದೆ.

ಕರ್ಪೂರ ತುಳಸಿ

4. ವನ ತುಳಸಿ (ಅರಣ್ಯ ತುಳಸಿ)

ವನ ತುಳಸಿಯನ್ನು ಅರಣ್ಯ ತುಳಸಿ ಎಂದೂ ಕರೆಯುತ್ತಾರೆ. ಇದರ ಎಲೆಗಳು ದಟ್ಟವಾಗಿದ್ದು, ಹೇರಳವಾಗಿರುತ್ತದೆ. ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ ನಮಗೆ ನಿತ್ಯ ಪರಿಸರದಲ್ಲಿ ವಿರಳವಾಗಿ ಕಾಣಸಿಗುತ್ತದೆ.

ವನ ತುಳಸಿ (ಅರಣ್ಯ ತುಳಸಿ)

5. ನಿಂಬೆ ತುಳಸಿ (ಪ್ರಹ್ಲಾದ ತುಳಸಿ)

ನಿಂಬೆ ತುಳಸಿ ಗಿಡದ ಎಲೆಗಳು ನೋಡಲು ನಿಂಬೆ ಗಿಡದ ಎಲೆಗಳಂತೇ ಕಾಣುತ್ತದೆ. ಈ ತುಳಸಿಯನ್ನು ಪ್ರಹ್ಲಾದ ತುಳಸಿ ಎಂದೂ ಕರೆಯುತ್ತಾರೆ. ಈ ತುಳಸಿಯು ನಿಂಬೆ ಮತ್ತು ತುಳಸಿಯ ಮಿಶ್ರಿತ ಘಮವನ್ನು ಹೊಂದಿದ್ದು ವ್ಯಾಪಕವಾಗಿ ಅಡುಗೆಗೆ ಹಾಗು ಔಷಧಕ್ಕೆ ಬಳಸಲಾಗುತ್ತದೆ.

ನಿಂಬೆ ತುಳಸಿ ( ಪ್ರಹ್ಲಾದ ತುಳಸಿ)

ತುಳಸಿಯ ವೈಜ್ಞಾನಿಕ ವಿಚಾರಗಳು

ತುಳಸಿಯ ಯುಜೆನಾಲ್ ಅನ್ನು ಪ್ರಮುಖ ಘಟಕವಾಗಿ ಹೊಂದಿರುವ ಸಾರಭೂತ ತೈಲವನ್ನು ನೀಡುತ್ತದೆ. ಇದರೊಂದಿಗೆ ಇರುವ ಇತರ ಸಂಯುಕ್ತಗಳೆಂದರೆ ನೆರೋಲ್, ಯುಜೆನಾಲ್, ಟೆರ್ಪಿನೆನ್ ಪಿನೆನ್ ಮತ್ತು ಕಾರ್ವಾಕ್ರೋಲ್. ಎಲೆಗಳು ಉರ್ಸೋಲಿಕ್ ಆಸಿಡ್, ಎಪಿಜೆನಿನ್, ಲುಟಿಯೋಲಿನ್ ಮತ್ತು ಓರಿಯೆಂಟಿನ್ ಇಂದ ಸಂಯೋಜಿತವಾಗಿದೆ.

ದೇಶದ ಬೆಳೆಸಲಾಗುವ ಸರ್ವ ಋತು ಸೂಕ್ಷ್ಮ ಮೂಲಿಕೆ. ಹೆಚ್ಚಿನ ಆರೈಕೆ ಇಲ್ಲದೆ ಬೀಜ ಬಿದ್ದಡೆ ಸುಂದರವಾಗಿ ಬೆಳೆಯುವ ತುಳಸಿಯ ಆರೋಗ್ಯಯುತ ಗುಣಗಳ ಬಗ್ಗೆ ತಿಳಿಯೋಣ.

 ಒಂದು ತುಳಸಿ ಎಲೆಯ ಪ್ರಾಮುಖ್ಯತೆ ಉಸಿರಾಟ, ಜೀರ್ಣಕ್ರಿಯೆ ಮತ್ತು ಚರ್ಮದ ಖಾಯಿಲೆಗಳ ಚಿಕಿತ್ಸೆಯಲ್ಲಿ ಎದ್ದು ಕಾಣುತ್ತದೆ. ಈ ಸಾಮಾನ್ಯ ಕಾಯಿಲೆಗಳ ಹೊರತಾಗಿ,  ಗೆಡ್ಡೆಯ ಬೆಳವಣಿಗೆಯವರೆಗಿನ ರೋಗಗಳಿಗೆ ಇದರ ಬಳಕೆಯನ್ನು ಗುರುತಿಸುತ್ತದೆ. ಪ್ರಾಯೋಗಿಕ ಅಧ್ಯಯನಗಳು ಇದನ್ನು ಹೆಚ್ಚು ಭರವಸೆಯ ಇಮ್ಯುನೊಮಾಡ್ಯುಲೇಟರ್, ಸೈಟೊಪ್ರೊಟೆಕ್ಟಿವ್ ಮತ್ತು ಆಂಟಿಕಾನ್ಸರ್ ಏಜೆಂಟ್ ಎಂದು ಗುರುತಿಸುತ್ತವೆ.

ತುಳಸಿಯ ದೈವಿಕ ಹಿನ್ನಲೆ

ಪುರಾಣಗಳಲ್ಲಿ ತುಳಸಿಯು ಪವಿತ್ರ ಸ್ಥಾನ ಹೊಂದಿದ್ದು, ನಿತ್ಯ ಪೂಜಿಸಲ್ಪಡುವ ಸಸಿಯಾಗಿದೆ.ತುಳಸಿಯನ್ನು ಶ್ರೀ ತುಳಸಿ ಎಂದೇ ಕರಿಯುತ್ತಾರೆ. ಶ್ರೀ ಎಂದರೆ ಸಿರಿ ಅಂದರೆ ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗುತ್ತದೆ. ಮನೆಯ ಅಂಗಳದಲ್ಲಿ ತುಳಸಿಯನ್ನು ಪೂಜಿಸುವುದು ಅತ್ಯಂತ ಶುಭಕರವೆಂದು ಹೇಳಲಾಗುತ್ತದೆ. ತುಳಸಿ ಪೂಜಿಸಲ್ಪಡುವ ಮನೆಯು ಸದಾಕಾಲ ಸುಖ – ಸಮೃದ್ಧಿ ಶಾಂತಿ  ನೆಮ್ಮದಿ ನೆಲೆಸಿರುತ್ತದೆ ಎನ್ನುವ ನಂಬಿಕೆಯಿದೆ ಹಾಗೂ ಹಿಂದೂ ಧರ್ಮದ ಹೆಚ್ಚಿನ ಪೂಜೆ ಪುನಸ್ಕಾರಗಳಲ್ಲಿ ತುಳಸಿ ದಳಗಳನ್ನು ಬಳಸಲಾಗುತ್ತದೆ. ಅದರಲ್ಲೂ ವಿಷ್ಣುವಿನ ಪೂಜೆಯಲ್ಲಿ ತುಳಸಿ ಅಗ್ರಗಣ್ಯ.

ಶ್ರೀ ತುಳಸಿ ಸ್ತೋತ್ರ
“ಮಹಾಪ್ರಸಾದ್ ಜನನಿ ಸರ್ವ ಸೌಭಾಗ್ಯವರ್ಧಿನಿ,
ಆದಿ ವ್ಯಾಧಿ ಹರ ನಿತ್ಯಂ ತುಳಸಿ ತ್ವಂ ನಮೋಸ್ತುತೇ”

ಶ್ಲೋಕಾರ್ಥ
“ಮಹಾಪ್ರಸಾದ ಜನನಿ” – ಮಹಾಪ್ರಸಾದ (ಶುದ್ಧ ಭಕ್ತಿಯಿಂದ ಅರ್ಪಿಸಲಾದ ದೇವರ ಪ್ರಸಾದ) ನೀಡುವ ತಾಯಿ.
“ಸರ್ವ ಸೌಭಾಗ್ಯವರ್ಧಿನಿ” – ಎಲ್ಲಾ ಶುಭ ಮತ್ತು ಸೌಭಾಗ್ಯವನ್ನು ಹೆಚ್ಚಿಸುವವಳು.
“ಆದಿ ವ್ಯಾಧಿ ಹರ” – ಪ್ರಾರಂಭಿಕ ಮತ್ತು ದೀರ್ಘಕಾಲದ ಎಲ್ಲಾ ರೋಗಗಳನ್ನು ದೂರ ಮಾಡುವವಳು.
“ನಿತ್ಯಂ ತುಳಸಿ ತ್ವಂ ನಮೋಸ್ತುತೇ” – ಸದಾ ಪೂಜ್ಯವಾದ ತುಳಸಿಗೆ ನಾನು ನಮಸ್ಕಾರ ಮಾಡುತ್ತೇವೆ .

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಲಿಂಕ್‌ಗಳು ಅಫಿಲಿಯೇಟ್ ಆಗಿರಬಹುದು, ಇದರಿಂದ ನಮಗೆ ಒಂದು ಸಮೀಕ್ಷಾ ಲಭ್ಯವಾಗಬಹುದು. ಮಾಹಿತಿ ಬಳಕೆ ನಿಮ್ಮ ಜವಾಬ್ದಾರಿಯಲ್ಲಿದೆ.


Spread the love
GruhaSnehi

View Comments

Share
Published by
GruhaSnehi

Recent Posts

ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು

ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು. AI Image ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ…

22 hours ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

2 days ago

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು. AI Image ನಮ್ಮ ದೇಹದ ಒಂದು ಮುಖ್ಯ…

3 days ago

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು. AI Image ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ…

4 days ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

5 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

6 days ago

This website uses cookies.