
ಕೆಂಪಗೆ ಅಥವಾ ಹಳದಿ ಬಣ್ಣದಲ್ಲಿ ಇರುವ ಗೇರುಹಣ್ಣಿನ ಕೆಳಗೆ ಅಂಟಿಕೊಂಡಿರುವ ಒಂದು ಪುಟ್ಟ ಗೇರುಬೀಜ ತೊಗಟೆಯೊಳಗಡೆ ಬಂಧಿಯಾಗಿರುತ್ತದೆ. ತೊಗಟೆಯನ್ನು ಒಡೆದು, ಸಿಪ್ಪೆ ಸುಲಿದರೆ ಗೇರುಬೀಜ ಕೈಗೆ ಸಿಗುತ್ತದೆ. ಇದನ್ನು ನಾವು ಆಡುಭಾಷೆಯಲ್ಲಿ ಗೋಡಂಬಿ ಎಂದು ಕರೆಯುತ್ತೇವೆ. ಈ ಮಾಡದ ಬೇರು, ತೊಗಟೆ, ಹಣ್ಣು, ಕಾಯಿ, ಹೂವು, ಎಲೆ ಎಲ್ಲವೂ ಅರೋಗ್ಯಕರವಾಗಿದ್ದು ಮನೆಮದ್ದುಗಳಲ್ಲಿ ಬಳಸಲು ಬಹಳ ಉಪಯುಕ್ತ ಗುಣಗಳನ್ನು ಹೊಂದಿದೆ.
ಗೋಡಂಬಿಯ ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ಅನಾಕಾರ್ಡಿಯಂ ಆಕ್ಸಿಡೆಂಟೇಲ್
ಆಂಗ್ಲ ಹೆಸರು – ಕ್ಯಾಶೂ ಅಥವಾ ಕ್ಯಾಶೂ ನಟ್ಸ್ (Cashew or Cashew Nuts)
ಗೋಡಂಬಿಯೂ ಅತಿ ಉತ್ತಮವಾದ ಡ್ರೈ ಫ್ರೂಟ್ಸ್ ಗಳಲ್ಲಿ ಒಂದಾಗಿದ್ದು ಅಧಿಕ ಕ್ಯಾಲೋರೀಸ್ ಗಳನ್ನು ಒಳಗೊಂಡಿಗೆ. ಇದು ದೇಹಕ್ಕೆ ಬೇಕಾದ ಒಳ್ಳೆಯ ಕೊಲೆಸ್ಟ್ರೋಲ್ ( oleic ಮತ್ತು palmitolece ) ಒದಗಿಸುತ್ತದೆ. ಗೋಡಂಬಿಯಲ್ಲಿ ಮ್ಯಾಂಗನಿಸ್, ಪೊಟಾಸಿಯಂ, ಕೊಪ್ಪರ್, ಕಬ್ಬಿಣ ಹಾಗೂ ವಿಟಮಿನ್ B5, B6, ರೀಬೋಫ್ಲೇವಿನ್ B1 ಇನ್ನೂ ಅಧಿಕ ಖನಿಜಗಳು ಹೇರಳವಾಗಿದೆ.
ಗೋಡಂಬಿಯ ಪ್ರಯೋಜನಗಳು
- ಗೋಡಂಬಿಯಲ್ಲಿ ಬೇರೆ ನಟ್ಸ್ ಗಳಿಗಿಂತ ಸ್ವಲ್ಪ ಕಡಿಮೆ ಕೊಬ್ಬಿನಾಂಶ ಹೊಂದಿದ್ದು ಹೃದಯದ ಆರೋಗ್ಯಕ್ಕೆ ಹಿತಕರವಾಗಿದೆ.
- ಕ್ಯಾಲ್ಸಿಯಂ ಹಾಗೂ ಮ್ಯಾಂಗನಿಸಿಯಂ ಹೇರಳವಾಗಿರುವುದರಿಂದ ಇದು ಮೂಳೆಗಳ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಹಾಗೆಯೇ ನರಗಳ ಅರೋಗ್ಯಕ್ಕೂ ಒತ್ತು ಕೊಟ್ಟು ರಕ್ತನಾಳಗಳು ಹಾಗೂ ಮಾಂಸಖಂಡಗಳ ಅರೋಗ್ಯವನ್ನು ಕಾಪಾಡುತ್ತದೆ.
- ಗೋಡಂಬಿಯನ್ನು ಆಹಾರದಲ್ಲಿ ಸೇವಿಸುವುದರಿಂದ ಗಾಲ್ ಬ್ಲಾಡರ್ ನಲ್ಲಿ ಕಲ್ಲುಗಳು ಉತ್ಪತ್ತಿ ಆಗುವುದನ್ನು ತಡೆಯುತ್ತದೆ.
- ಒಳ್ಳೆಯ ಕೊಲೆಸ್ಟ್ರೋಲ್ ವೃದ್ಧಿಸಿ, ಕೆಟ್ಟ ಕೊಲೆಸ್ಟ್ರೋಲ್ ಅನ್ನು ಕಡಿಮೆ ಮಾಡಿ ತೂಕ ಇಳಿಸಲು ಸಹಕಾರಿಯಾಗಿದೆ. ಇದರಲ್ಲಿ ಕೊಬ್ಬಿನ ಅಂಶವು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ತೂಕ ಇಳಿಕೆಗೆ ಉತ್ತಮವಾಗಿದೆ.
- ಗೇರಿನ ಹಣ್ಣನ್ನು ತಿನ್ನುವುದರಿಂದ ಹೊಟ್ಟೆಯಲ್ಲಿನ ಜಂತು ಹುಳಗಳು ಕಡಿಮೆಯಾಗುತ್ತದೆ.
- ಗೇರು ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ವಿಟಮಿನ್ ಸಿ ನೂನ್ಯತೆಯಿಂದ ಬರುವ ಸಮಸ್ಯೆಗಳಿಗೆ ಹಣ್ಣಿನ ಸೇವನೆ ಉತ್ತಮವಾಗಿದೆ.
- ಬಾಯಿ ಹುಣ್ಣು ಅಥವಾ ವಸಡಿನಲ್ಲಿ ಆಗುವ ಹುಣ್ಣುಗಳಿಗೆ ಈ ಗೇರು ಹಣ್ಣು ಸುಲಭ ರೀತಿಯಲ್ಲಿ ಪರಿಹಾರ ನೀಡುತ್ತದೆ. ಒಂದು ಲೋಟ ನೀರಿಗೆ 3 ಚಮಚ ಸಕ್ಕರೆ ಹಾಕಿ ಪಾಕ ತಯಾರಿಸಿಕೊಂಡು ಗೇರು ಹಣ್ಣನ್ನು ಹಾಕಿ ಕುದಿಸಬೇಕು. ಸಕ್ಕರೆ ಪಾಕದಲ್ಲಿ ಅದ್ದಿದ ಗೇರು ಹಣ್ಣನ್ನು ತಿಂದರೆ ವಸಡಿನ ಹುಣ್ಣು ತ್ವರಿತವಾಗಿ ಕಡಿಮೆಯಾಗುತ್ತದೆ.
- ಅನೇಕ ಚರ್ಮ ರೋಗಗಳಿಗೂ ಗೇರು ಹಣ್ಣು ಉತ್ತಮ ಪರಿಹಾರವನ್ನು ನೀಡುತ್ತದೆ.
- ಗೋಡಂಬಿಯಲ್ಲಿ ಸೆಲೆನಿಯಂ, ಮೆಗ್ನೀಷಿಯಂ, ಕೊಪ್ಪರ್(Copper) ಅಧಿಕವಾಗಿ ಇರುವುದರಿಂದ ಆಂಟಿ ಆಕ್ಸಿಡೆಂಟ್ ಗಳಾಗಿ ಕೂಡ ಕಾರ್ಯ ನಿರ್ವಹಿಸುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸಲು ಕೂಡ ಸಹಾಯಕವಾಗಿದೆ.
- ಊಟ ಆದ ನಂತರ ಗೇರು ಹಣ್ಣನ್ನು ತಿಂದರೆ ಜೀರ್ಣ ಕ್ರಿಯೆ ಉತ್ತಮವಾಗಿ ಆಗುತ್ತದೆ.
- ಕೊಪ್ಪರ್ ಅಂಶ ಜಾಸ್ತಿ ಇರುವುದರಿಂದ ಕೂದಲಿನ ಕಪ್ಪು ಬಣ್ಣವನ್ನು ಕಾಪಾಡಿಕೊಳ್ಳಲು ಉತ್ತಮವಾಗಿದೆ.
ಇನ್ನೂ ಅನೇಕ ಉಪಯೋಗಗಳನ್ನು ಗೇರು ಹಣ್ಣು ಅಥವಾ ಗೋಡಂಬಿ ಇಂದ ನಾವು ಪಡೆದುಕೊಳ್ಳಬಹುದು. ಹೆಣ್ಣು ಮಕ್ಕಳ ಆರೋಗ್ಯಕ್ಕೆ, ಪುರುಷರ ಶಕ್ತಿ ವೃದ್ಧಿಯಾಗಲು, ರಕ್ತ ಹೀನತೆ ಸಮಸ್ಯೆಗಳಿಗೆ, ಹಲ್ಲುಗಳ ರಕ್ಷಣೆಗೆ ಇನ್ನೂ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಕೆಲವರಿಗೆ ಗೇರು ಬೀಜದ ಸೇವನೆ ಅಲರ್ಜಿಯಾಗಿರಬಹುದು, ಇಲ್ಲವೇ ದೇಹಕ್ಕೆ ಅಧಿಕ ಉಷ್ಣಕಾರಕವು ಆಗಿರುತ್ತದೆ. ಹಾಗಾಗಿ ಬಳಕೆಯು ನಮ್ಮ ಹಿತ ಮಿತದಲ್ಲಿರಬೇಕು.
ಇನ್ನೂ ಆಹಾರ ಕ್ಷೇತ್ರದಲ್ಲಿ ಗೋಡಂಬಿಯೂ ಒಳ್ಳೆಯ ಸ್ಥಾನವನ್ನು ಹೊಂದಿದೆ. ಎಲ್ಲರ ಮನೆಯ ಪಾಯಸ ಅಥವಾ ಸಿಹಿ ಖಾದ್ಯಗಳಿಗೆ ತುಪ್ಪದಲ್ಲಿ ಹುರಿದ ಗೋಡಂಬಿ ಇರಲೇ ಬೇಕು. ಅದು ಸಿಹಿಯ ಸ್ವಾದವನ್ನು ದುಪ್ಪಟ್ಟಾಗಿಸುತ್ತದೆ. ಇನ್ನೂ ಗೋಡಂಬಿ ಪಲ್ಯವಾಗಿಯೂ ಉಪಯೋಗಕ್ಕೆ ಬರುತ್ತದೆ. ಇನ್ನೂ ಗೇರು ಹಣ್ಣನ್ನು ಮದ್ಯದ ತಯಾರಿಕೆಯಲ್ಲಿ ಬಹು ಮುಖ್ಯವಾಗಿ ಬಳಸುತ್ತಾರೆ. ಇದು ಅತ್ಯಂತ ದುಬಾರಿಯೂ ಹೌದು.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.