ಎಕ್ಕದ ಗಿಡದಲ್ಲಿದೆ ಲೆಕ್ಕಿಸದಷ್ಟು ಆರೋಗ್ಯ ಲಾಭಗಳು (Calotropis Plant Benefits)

Spread the love

ಎಕ್ಕದ ಗಿಡದಲ್ಲಿದೆ ಲೆಕ್ಕಿಸದಷ್ಟು ಆರೋಗ್ಯ ಲಾಭಗಳು (Castor Plant Benefits)
ಎಕ್ಕದ ಗಿಡದಲ್ಲಿದೆ ಲೆಕ್ಕಿಸದಷ್ಟು ಆರೋಗ್ಯ ಲಾಭಗಳು (Castor Plant Benefits). AI Image

ಎಕ್ಕದ ಗಿಡವು ತುಂಬಾ ಅರೋಗ್ಯವರ್ಧಕವಾಗಿದ್ದು, ಎಲ್ಲಾ ರೀತಿಯ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರ ನೀಡುತ್ತದೆ. ಎಕ್ಕೆ ಗಿಡಕ್ಕೆ ಜಾಸ್ತಿ ಆರೈಕೆಯ ಅವಶ್ಯಕತೆ ಇಲ್ಲ, ತನ್ನಷ್ಟಕ್ಕೆ ತಾನೇ ಚಂದವಾಗಿ ಬೆಳೆಯುತ್ತದೆ. ಎಕ್ಕೆ ಗಿಡದಲ್ಲಿ ಶ್ವೇತಾರ್ಕ ಮತ್ತು ರಕ್ತಾರ್ಕ ಎಂಬ ಎರಡು ಪ್ರಕಾರಗಳಿವೆ. ಶ್ವೇತಾರ್ಕ ಬಿಳಿ ಬಣ್ಣದ ಹೂವುಗಳನ್ನು ಹೊಂದಿದ್ದು, ರಕ್ತಾರ್ಕ ಕೆಂಪು ಬಣ್ಣದ ಹೂವನ್ನು ಬಿಡುತ್ತದೆ. ಎಕ್ಕ ಗಿಡದ ಬೇರಿನಿಂದ ಹೂವಿನ ತನಕ ಎಲ್ಲವು ಔಷಧಿಯ ಗುಣಗಳನ್ನು ಹೊಂದಿದ್ದು, ನಮ್ಮ ದಿನನಿತ್ಯದ ಬಳಕೆಗೆ ಅತ್ಯುತ್ತಮವಾಗಿದೆ.

ಧಾರ್ಮಿಕ ವಿಚಾರಗಳು

ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಅಂದರೆ ಅದು ಸೂರ್ಯ. ಎಲ್ಲಾ ರೀತಿಯ ರೋಗ-ರುಜಿನಗಳ ಪರಿಹಾರಕ್ಕೆ ಸೂರ್ಯನು ಮುಖ್ಯ ಕಾರಣ. ಅಂತಹ ಸೂರ್ಯನ ರಶ್ಮಿಯ ಶಕ್ತಿ ಇರುವುದು ಎಕ್ಕ ಗಿಡದಲ್ಲಿ ಮಾತ್ರ. ಅದಕ್ಕೆ ಎಕ್ಕೆ ಗಿಡಕ್ಕೆ ಪೂಜೆ ಮಾಡಿದರೆ ಅದು ಸೂರ್ಯನ ಆರಾಧನೆ ಮಾಡಿದಂತೆ ಎಂಬ ಪ್ರತೀತಿ ಇದೆ. ಹಾಗೂ ಶಿವಸುತ ಗಣಪತಿಯ ಪ್ರಿಯ ಹೂವು ಎಂದು ಸಹ ಹೇಳಲಾಗುತ್ತದೆ. ಪ್ರತಿ ಮನೆಯ ಮುಂದೆ ಹೇಗೆ ತುಳಸಿ ಗಿಡ ಇರುತ್ತದೆಯೋ ಹಾಗೆ ಎಕ್ಕ ಗಿಡ ಸಹ ಇರುಬೇಕು ಎಂಬ ಮಾತು ಇದೆ. ಇಂತಹ ದೈವಿಕ ಹಿನ್ನಲೆಯುಳ್ಳ ಎಕ್ಕ ಗಿಡವನ್ನು ಮನೆಯ ಮುಂದೆ ಬೆಳೆಸಿ ಅಭಿವೃದ್ಧಿ ಹೊಂದುವುದು ಉತ್ತಮ.

ಎಕ್ಕದ ಗಿಡದ ವೈಜ್ಞಾನಿಕ ಪರಿಚಯ

ವೈಜ್ಞಾನಿಕ ಹೆಸರು: ಕ್ಯಾಲೋಟ್ರೋಪಿಸ್ (Calotropis)
ಕುಟುಂಬ: ಅಪೋಸೈನೇಸಿ (Apocynaceae)
ಪ್ರಭೇದಗಳು: ಕ್ಯಾಲೋಟ್ರೋಪಿಸ್ ಜೈಗಾಂಟಿಯಾ (Calotropis gigantea) ಮತ್ತು ಕ್ಯಾಲೋಟ್ರೋಪಿಸ್ ಪ್ರೊಸೆರಾ (Calotropis procera)

ಎಕ್ಕದ ಗಿಡದಲ್ಲಿ ಕಾರ್ಡೆನೊಲೈಡ್ಸ್, ಫ್ಲೇವನಾಯ್ಡ್ಸ್, ಸ್ಟೆರಾಯ್ಡ್ಸ್ ಮತ್ತು ಟೆರ್ಪೆನಾಯ್ಡ್ಸ್ ನಂತಹ ವಿವಿಧ ರಾಸಾಯನಿಕ ಸಂಯುಕ್ತಗಳಿವೆ. ಇವೆಲ್ಲವೂ ಔಷಧೀಯ ಗುಣಗಳಿಗೆ ಸಹಾಯಕವಾಗಿದೆ.

ಎಕ್ಕದ ಗಿಡದ ಉಪಯೋಗಗಳು

1. ಮೊಣಕಾಲು ನೋವಿಗೆ

  • ಮೊಣಕಾಲು ನೋವಿದ್ದಲ್ಲಿ ಅಲೋವೆರಾ ಜೆಲ್ ಮತ್ತು ಅರಿಶಿನವನ್ನು ಚೆನ್ನಾಗಿ ಬೆರೆಸಿ ಹಚ್ಚಿಕೊಳ್ಳಬೇಕು. ಒಂದು ತವಾದ ಮೇಲೆ ಎಕ್ಕದ ಎಲೆಗಳನ್ನು ಎಳ್ಳೆಣ್ಣೆಯನ್ನು ಸವರಿ ಚೆನ್ನಾಗಿ ಬಿಸಿ ಮಾಡಬೇಕು. ನೋವಿದ್ದಲ್ಲಿ ಅಲೋವೆರಾ ಹಾಗೂ ಅರಿಶಿನದ ಮಿಶ್ರಣವನ್ನು ಹಚ್ಚಿದರ ಮೇಲೆ ಬಿಸಿ ಶಾಖವನ್ನು ಕೊಡಬೇಕು. ಕೊನೆಯಲ್ಲಿ ಎಕ್ಕದ ಎಲೆಯನ್ನು ಇಟ್ಟು ಒಂದು ಬಟ್ಟೆಯ ಸಹಾಯದಿಂದ ಪಟ್ಟಿ ಕಟ್ಟಬೇಕು. ಇದು ಮಂಡಿ ನೋವಿಗೆ ಅತೀ ಉತ್ತಮ ಪರಿಹಾರವಾಗಿದೆ. ಇದನ್ನು ನೋವು ಕಡಿಮೆಯಾಗುವವರೆಗೂ ದಿನಕ್ಕೆ ಎರಡು ಬಾರಿ ಮಾಡಬೇಕು.
  • ಎಕ್ಕದ ಎಣ್ಣೆಯನ್ನು ನೋವಿದ್ದಲ್ಲಿ ಹಚ್ಚುವುದರಿಂದ ನೋವಿಗೆ ಉಪಶಮನ ಸಿಗುತ್ತದೆ.

2. ಜ್ವರಕ್ಕೆ

  • ಚಳಿ ಜ್ವರ ಬಂದಾಗ ಎಕ್ಕದ ಮಾತ್ರೆಯನ್ನು ದಿನಕ್ಕೆ ಎರಡು ಮಾತ್ರೆಯನ್ನು ಮೂರು ಬಾರಿಯಂತೆ ತೆಗೆದುಕೊಳ್ಳಬೇಕು. ಮಾತ್ರೆಯನ್ನು ತಯಾರಿಸುವ ವಿಧಾನ, ಎಕ್ಕದ ಹೂವು, ಬೆಳ್ಳುಳ್ಳಿ ಹಾಗೂ ಮೆಣಸನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅರೆದು ಶೇಂಗಾ ಗಾತ್ರದ ಸಣ್ಣ ಮಾತ್ರೆಗಳಾಗಿ ತಯಾರಿಸಬೇಕು.
  • ಮಲೇರಿಯಾ ಜ್ವರ ಬಂದಾಗ ಎಕ್ಕ ಗಿಡದ ಬೇರಿನ ತೊಗಟೆ ಹಾಗೂ ಬೋಳು ಮೆಣಸಿನ ಕಾಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅರೆದು ಮಾತ್ರೆ ರೂಪದಲ್ಲಿ ದಿನಕ್ಕೆ ಎರಡು ಮಾತ್ರೆಗಳನ್ನು ಮೂರು ಹೊತ್ತು ಸೇವಿಸಬೇಕು.

3. ಮೂಲವ್ಯಾಧಿ

  • ಮೂಲವ್ಯಾಧಿಯ ಮೊಳಕೆಗಳಿಂದ ತೊಂದರೆ ಉಂಟಾಗುತ್ತಿದ್ದರೆ ಎಕ್ಕದ ಹಾಲಿನಲ್ಲಿ ಶುದ್ಧ ಅರಿಶಿಣ ಪುಡಿಯನ್ನು ಬೆರೆಸಿ ಕಲಸಿ, ಹಚ್ಚಬೇಕು. ಕ್ರಮೇಣ ಮೂಲವ್ಯಾಧಿಯ ಮೊಳಕೆಗಳು ನಿವಾರಣೆಯಗುತ್ತದೆ.
  • ಎಕ್ಕದ ಎಲೆ ಹಾಗೂ ನುಗ್ಗೆ ಸೊಪ್ಪನ್ನು ಎರಡು ಒಟ್ಟಿಗೆ ಅರೆಯಬೇಕು. ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚುವುದರಿಂದ ಕ್ರಮೇಣ ಕಡಿಮೆಯಾಗುತ್ತದೆ.

4. ದಮ್ಮು, ಉಬ್ಬಸಕ್ಕೆ

  • ದಮ್ಮು ರೋಗಕ್ಕೆ ಎಕ್ಕದ ಗಿಡದ ಬಲಿತ ಬೇರನ್ನು ಸುಟ್ಟು ಭಸ್ಮ ಮಾಡಬೇಕು. ಆ ಭಸ್ಮವನ್ನು ಒಮ್ಮೆ ಜರಡಿ ಹಿಡಿದು ಅಥವಾ ಬಟ್ಟೆ ಸಹಾಯದಿಂದ ಶೋಧಿಸಬೇಕು. ನಂತರ ಆ ಪುಡಿಯನ್ನು ಜೇನುತುಪ್ಪಡೊಡನೆ ಸೇರಿಸಿ ಸೇವಿಸಬೇಕು.
  • ಉಬ್ಬಸಕ್ಕೂ ಎಕ್ಕ ಉತ್ತಮ ಪರಿಹಾರವನ್ನು ನೀಡುತ್ತದೆ. ಹಣ್ಣಾದ ಎಕ್ಕದ ಎಲೆಯನ್ನು ಸುಟ್ಟು ಭಸ್ಮ ಮಾಡಿ ಅದನ್ನು ಚೆನ್ನಾಗಿ ಶೋಧಿಸಿಕೊಂಡು ಜೇನುತುದೊಡನೆ ಸೇವಿಸಬೇಕು. ಈ ಮದ್ದು ಹಲ್ಲು ನೋವಿಗೂ ಉತ್ತಮ ಪರಿಹಾರವಾಗಿದೆ.

5. ಕೆಮ್ಮಿಗೆ

ಎಕ್ಕದ ಬೇರಿನ ತೊಗಟೆಯನ್ನು ಚೆನ್ನಾಗಿ ಒಣಗಿಸಬೇಕು. ಚೆನ್ನಾಗಿ ಒಣಗಿದ ನಂತರ ನುಣ್ಣನೆ ಪುಡಿಮಾಡಿಕೊಳ್ಳಬೇಕು. ಈ ಪುಡಿಯನ್ನು ಜೇನುತುಪ್ಪಡೊಡನೆ ಒಂದು ಚಮಚ ಸೇವಿಸಬೇಕು. 10 ದಿನಗಳ ಒಳಗೆ ಕೆಮ್ಮು ಕಡಿಮೆಯಾಗುತ್ತದೆ. ಇದನ್ನು ಎಲ್ಲಾ ರೀತಿಯ ಕೆಮ್ಮುಗಳಿಗೆ ಬಳಸಬಹುದು.

ಇಷ್ಟೆಲ್ಲ ಶಕ್ತಿ ಇರುವ ಎಕ್ಕದ ಗಿಡದ ಬಗ್ಗೆ ಇನ್ನೂ ಹೇಳುವುದಾದರೆ ಎಕ್ಕದ ಬೇರು ಅನೇಕ ಸಮಸ್ಯೆಗಳಿಗೆ ಸಂಜೀವಿನಿಯಾಗಿದೆ. ಎದೆಯಲ್ಲಿ ಗಟ್ಟಿಯಾದ ಕಫ, ವಾಂತಿ, ಹೊಟ್ಟೆ ತೊಳೆಸಿ ಆಗುವ ಬೇಧಿ, ಪಿತ್ತದ ಸಮಸ್ಯೆ, ನೋವು ಎಲ್ಲದಕ್ಕೂ ಎಕ್ಕದ ಬೇರು ಅತೀ ಉಪಯುಕ್ತವಾಗಿದೆ. ಇಂತಹ ಎಕ್ಕ ಗಿಡದ ಸಹಾಯವನ್ನು ಪಡೆದುಕೊಂಡು ಅನೇಕ ಸಮಸ್ಯೆಗಳಿಂದ ಸುಲಭವಾಗಿ ದೂರವಾಗಬಹುದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಎಕ್ಕದ ಗಿಡ ನೋಡಲು ಬಾಳು ಸಣ್ಣ ಆದರೆ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

1 thought on “ಎಕ್ಕದ ಗಿಡದಲ್ಲಿದೆ ಲೆಕ್ಕಿಸದಷ್ಟು ಆರೋಗ್ಯ ಲಾಭಗಳು (Calotropis Plant Benefits)”

  1. Pingback: ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟು

Leave a Comment

Your email address will not be published. Required fields are marked *

Scroll to Top