Categories: Uncategorized

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಿನ್ನಿ ಗಜ್ಜರಿ: ಪ್ರತಿದಿನ ಕ್ಯಾರೆಟ್ ಸೇವನೆಯ ಆರೋಗ್ಯ ಲಾಭಗಳು

Spread the love

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಿನ್ನಿ ಗಜ್ಜರಿ: ಪ್ರತಿದಿನ ಕ್ಯಾರೆಟ್ ಸೇವನೆಯ ಆರೋಗ್ಯ ಲಾಭಗಳು

ಕೇಸರಿ ಸಿರಿ ಎಂಬಂತೆ ಇರುವ ಗಡ್ಡೆ ಎಂದರೆ ಕ್ಯಾರೆಟ್ ಅಥವಾ ಗಜ್ಜರಿ. ಬೇರೆ ಬಣ್ಣದಲ್ಲೂ ಕೂಡ ಈಗ ಲಭ್ಯವಾಗುತ್ತದೆ. ಉತ್ತಮ ಆರೋಗ್ಯಕರ ಗುಣಗಳನ್ನು ಹೊಂದಿದ್ದು, ವರ್ಷವಿಡೀ ಬೆಳೆಯಬಹುದಾದ ಬೆಳೆ ಇದಾಗಿದೆ. ಅಡುಗೆಯಲ್ಲಿ ಹಾಗೂ ಮನೆಮದ್ದುಗಳ ತಯಾರಿಕೆಯಲ್ಲಿ ತನ್ನದೇ ಆದ ವಿಶೇಷ ಗುಣಗಳಿಂದ ಅಗ್ರಗಣ್ಯವಾಗಿರುವ ಕ್ಯಾರೆಟ್ ನ ವೈಜ್ಞಾನಿಕ ಪರಿಚಯ ಹಾಗೂ ಆರೋಗ್ಯಕರ ಮನೆಮದ್ದುಗಳ ಬಗೆಗಿನ ಮಾಹಿತಿಗಳನ್ನು ನಾವು ಇಂದು ಈ ಲೇಖನದಲ್ಲಿ ವಿಶ್ಲೇಷಿಸೋಣ.

ಗಜ್ಜರಿಯ ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು – ಡಾಕಸ್ ಕ್ಯಾರೋಟಾ ( Daucus carota )
ಆಂಗ್ಲ ಹೆಸರು – ಕ್ಯಾರೆಟ್ ( carrot )

ಕ್ಯಾರೆಟ್ ನಲ್ಲಿ ಉತ್ತಮವಾದ ಪೋಷಕಾಂಶಗಳಿದ್ದು, ಮುಖ್ಯವಾಗಿ ಸಸಾರಜನಕ, ಮೇದಸ್ಸು, ಖನಿಜಾಂಶ, ನಾರು, ಕಬ್ಬಿಣ, ಫಾಸ್ಪರಸ್, ಕ್ಯಾಲ್ಸಿಯಂ, ಸೋಡಿಯಂ, ಮ್ಯಾಗ್ನಿಶಿಯಂ, ಪೊಟ್ಯಾಸಿಯಂ, ವಿಟಮಿನ್ ಬಿ1, ಎ, ಸಿ, ಕೆ ಗಳು ಹೇರಳವಾಗಿದೆ.

ಕ್ಯಾರೆಟ್ ಅನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.

ಕ್ಯಾರೆಟ್ ನ ಆರೋಗ್ಯಕರ ಮನೆಮದ್ದುಗಳು

ಬೇಸಿಗೆಯಲ್ಲಿ ಶರೀರವನ್ನು ತಂಪಾಗಿರಿಸಲು ಕ್ಯಾರೆಟ್ ಉತ್ತಮ ಆಹಾರವಾಗಿದೆ.

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದು ಅತಿ ಅವಶ್ಯಕ. ಇಲ್ಲವಾದರೆ ಮುಖದಲ್ಲಿ ಅಥವಾ ಮೈ ಮೇಲೆ ಗುಳ್ಳೆಗಳಾಗುವುದು, ಕಣ್ಣಿನ ಉರಿ, ಹೊಟ್ಟೆಯಲ್ಲಿ ಉರಿ ಹೀಗೆ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು, ದೇಹವನ್ನು ತಂಪಾಗಿರಿಸಲು ಆಹಾರದಲ್ಲಿ ಹಸಿಯಾಗಿ ಕ್ಯಾರೆಟ್ ಬಳಸುವುದು ಉತ್ತಮವಾಗಿದೆ. ಹೆಸರುಬೇಳೆಯನ್ನು ನೆನೆಸಿ, ಕ್ಯಾರೆಟ್ ಅನ್ನು ತುರಿದುಕೊಂಡು, ಎರಡನ್ನು ಮಿಶ್ರಣ ಮಾಡಿ ಹೆಸರುಬೇಳೆ ಕ್ಯಾರೆಟ್ ಕೋಸಂಬರಿಯನ್ನು ತಯಾರಿಸಿ ತಿನ್ನುವುದು ಬಲು ಉತ್ತಮವಾಗಿದೆ. ಇದು ಊಟಕ್ಕೂ ಕೂಡ ಬಹಳ ಉತ್ತಮ ಪಲ್ಯವಾಗುತ್ತದೆ. ದೇಹದ ಅರೋಗ್ಯಕ್ಕೂ ಬಹಳ ಒಳ್ಳೆಯದಾಗಿದೆ

ಕಣ್ಣಿನ ಉತ್ತಮ ಆರೋಗ್ಯಕ್ಕೆ ಕ್ಯಾರೆಟ್ ಬಹಳ ಉತ್ತಮವಾಗಿದೆ.

ಕಣ್ಣಿನ ಉತ್ತಮ ದೃಷ್ಠಿಗೆ ಹಾಗೂ ನರಗಳ ಉತ್ತಮ ಆರೋಗ್ಯಕ್ಕೆ ಕ್ಯಾರೆಟ್ ಬಹಳ ಉತ್ತಮವಾಗಿದೆ. ಕ್ಯಾರೆಟ್ ಅನ್ನು ಹಸಿಯಾಗಿ ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಕ್ಯಾರೆಟ್ ನರಗಳಿಗೆ ಚೈತನ್ಯ ಕೊಡುತ್ತದೆ, ಹಾಗೂ ದೃಷ್ಠಿಯ ಸಕಲ ದೋಷಗಳು ನಿವಾರಣೆಯಾಗುತ್ತದೆ.

ಆಹಾರದ ಉತ್ತಮ ಪಚನ ಕ್ರಿಯೆಗೆ ಸಹಾಯಕವಾಗುವ ಕ್ಯಾರೆಟ್.

ಪ್ರತಿದಿನ ಕ್ಯಾರೆಟ್ ನ್ನು ಆಹಾರದಲ್ಲಿ ಉಪಯೋಗಿಸಬೇಕು. ಬೆಳಗ್ಗಿನ ಉಪಹಾರದ ನಂತರ ಮಧ್ಯಾಹ್ನದ ಊಟದ ನಡುವಿನ ಸಮಯದಲ್ಲಿ ಕ್ಯಾರೆಟ್ ನ್ನು ಹಸಿಯಾಗಿ ತಿನ್ನಬೇಕು. ಇಡು ಆಹಾರವನ್ನು ಜೀರ್ಣಿಸಲು ಅತಿ ಉತ್ತಮವಾಗಿದೆ. ಇದು ದೇಹದ ಅಂಗಗಳಿಗೆ ಉತ್ತಮ ಶಕ್ತಿಯನ್ನು ನೀಡುತ್ತದೆ.

ನೆಗಡಿ, ಕೆಮ್ಮು ಹಾಗೂ ದಮ್ಮಿನ ಸಮಸ್ಯೆಗಳಿಗೆ ಕ್ಯಾರೆಟ್ ನ ಉತ್ತಮ ಉಪಯೋಗಗಳು.

ನೆಗಡಿ, ಕೆಮ್ಮು ಹಾಗೂ ದಮ್ಮಿನ ಸಮಸ್ಯೆಗಳಿಗೆ ಕ್ಯಾರೆಟ್ ಉತ್ತಮ ಔಷಧವಾಗುತ್ತದೆ. ಕ್ಯಾರೆಟ್ ನಲ್ಲಿನ ಅನೇಕ ಖನಿಜಗಳು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಕ್ಯಾರೆಟ್ ಅನ್ನು ಚೆನ್ನಾಗಿ ತುರಿದುಕೊಳ್ಳಬೇಕು. ಒಂದು ಕಪ್ ಕ್ಯಾರೆಟ್ ಗೆ ಒಂದು ಕಪ್ ಸಕ್ಕರೆ ಹಾಕಿ ಕಲಸಿ ಇಡಬೇಕು. ಒಂದು ಅರ್ಧ ಗಂಟೆಯ ನಂತರ ಸ್ವಲ್ಪ ನೀರು ಹಾಕಿ ಮತ್ತೆ ಕ್ಯಾರೆಟ್ ಹಾಗೂ ಸಕ್ಕರೆ ಮಿಶ್ರಣವನ್ನು ಕಲಸಬೇಕು. ನಂತರ ಮಿಶ್ರಣವನ್ನು ಕೈಯಲ್ಲಿ ಕಿವುಚಿ ರಸವನ್ನು ಹಿಂಡಿಕೊಳ್ಳಬೇಕು. ಈ ಹಿಂಡಿಕೊಂಡ ಕ್ಯಾರೆಟ್ ರಸಕ್ಕೆ ನಿಂಬೆ ರಸವನ್ನು ಸೇರಿಸಿ ಕುಡಿಯಬೇಕು. ಇದನ್ನು ಕ್ಯಾರೆಟ್ ಶರಬತ್ತು ಎಂದು ಕರಿಯಬಹುದು. ಇದನ್ನು ಪ್ರತಿದಿನ ಕುಡಿದರೆ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣುವುದಲ್ಲದೆ ನೆಗಡಿ, ಕೆಮ್ಮು ಹಾಗೂ ದಮ್ಮಿನ ಸಮಸ್ಯೆಗಳು ಕಡಿಮೆಯಾಗುತ್ತದೆ. ಈ ಕ್ಯಾರೆಟ್ ಶರಬತ್ತು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಈಗ ರೋಗ ನಿರೋಧಕ ಶಕ್ತಿಯು ನೆಗಡಿ, ಕೆಮ್ಮನ್ನು ಬರದಂತೆ ನೋಡಿಕೊಳ್ಳುತ್ತದೆ.

ಹಲ್ಲು, ವಸಡು ಹಾಗೂ ಬಾಯಿಯ ಸಂಪೂರ್ಣ ಆರೋಗ್ಯದ ರಕ್ಷಣೆಯಲ್ಲಿ ಕ್ಯಾರೆಟ್ ಉತ್ತಮ ಪಾತ್ರವನ್ನು ವಹಿಸುತ್ತದೆ.

ಬಾಯಿಯಲ್ಲಿನ ಹಲ್ಲುಗಳು ಹಾಗೂ ವಸಡುಗಳ ಆರೋಗ್ಯಕ್ಕೆ ಕ್ಯಾರೆಟ್ ಅತಿ ಉತ್ತಮವಾಗಿದೆ. ಕ್ಯಾರೆಟ್ ಅನ್ನು ಹಲ್ಲಿನಿಂದ ಕಚ್ಚಿ ತಿನ್ನುವುದರಿಂದ ಹಲ್ಲು ಗಟ್ಟಿಯಾಗುತ್ತದೆ. ಹಾಗೆಯೇ ಕ್ಯಾರೆಟ್ ಅನ್ನು ಅಗೆಯುವ ಕಾರಣದಿಂದ ಹಲ್ಲುಗಳ ನಡುವಿನ ಕ್ರಿಮಿಗಳು ನಾಶವಾಗುತ್ತದೆ. ವಸಡುಗಳ ಅರೋಗ್ಯಕ್ಕೂ ಇದು ಅತಿ ಉತ್ತಮವಾಗಿದೆ. ಕ್ಯಾರೆಟ್ ಸೇವನೆಯು ಬಾಯಿಯ ದುರ್ವಾಸನೆಯನ್ನು ತಡೆದು, ತಾಜಾತನದ ಅನುಭವವನ್ನು ನೀಡುತ್ತದೆ. ಕೆಲವೊಮ್ಮೆ ವಸಡಿನಿಂದ ರಕ್ತ ಸುರಿಯುವುದನ್ನು ಕೂಡ ಕ್ಯಾರೆಟ್ ತಡೆಯುತ್ತದೆ. ಬಾಯಿಯ ಸಂಪೂರ್ಣ ಆರೋಗ್ಯಕ್ಕೆ ಕ್ಯಾರೆಟ್ ಸೇವನೆ ಬಹು ಉತ್ತಮವಾಗಿದೆ.

ಮೂಲವ್ಯಾಧಿಗೆ ಕ್ಯಾರೆಟ್ ಉತ್ತಮ ಮದ್ದಾಗಿದೆ.

ಮೂಲವ್ಯಾಧಿ ಸಮಸ್ಯೆ ಇರುವವರು ಆಹಾರವನ್ನು ಸೇವಿಸುವಾಗ ಬಹಳ ಜಾಗ್ರತೆಯನ್ನು ವಹಿಸಬೇಕು. ಹೆಚ್ಚಿನ ಖಾರ, ಅಥವಾ ಜೀರ್ಣಕ್ರಿಯೆಗೆ ಕಷ್ಟವಾಗುವ ಆಹಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇಂತಹ ಸಮಯದಲ್ಲಿ ಕ್ಯಾರೆಟ್ ಅನ್ನು ಆಹಾರದಲ್ಲಿ ಬಳಸುವುದು ಉತ್ತಮವಾಗಿದೆ. ಕ್ಯಾರೆಟ್ ಅನ್ನು ತುರಿದು, ಮೊಸರಿನಲ್ಲಿ ಕಲಸಿ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆಯನ್ನು ದೂರಮಾಡಿಕೊಳ್ಳಬಹುದು. ಇದು ಸುಲಭ ಜೀರ್ಣಕ್ರಿಯೆಗೂ ಉತ್ತಮ ಆಹಾರವಾಗಿದೆ.

ಕ್ಯಾರೆಟ್ ಅನ್ನು ಹಸಿಯಾಗಿ ಸೇವಿಸುವುದು ಕೂಡ ಉತ್ತಮವಾಗಿದೆ.

ಹೊಟ್ಟೆಯ ಆರೋಗ್ಯಕ್ಕೆ ಸಂಬಂಧಪಟ್ಟ ಉತ್ತಮ ಕ್ಯಾರೆಟ್ ನ ಮನೆಮದ್ದುಗಳು

ಸುಲಭ ಜೀರ್ಣಕ್ರಿಯೆ ನಡೆಯುತ್ತಿದ್ದರೆ ಹೊಟ್ಟೆಯ ಆರೋಗ್ಯ ಉತ್ತಮವಾಗಿ ಇರುತ್ತದೆ. ಆದರೂ ಕೆಲವೊಮ್ಮೆ ಹೊಟ್ಟೆ ನೋವು, ಹೊಟ್ಟೆ ಉಬ್ಬರ ಹಾಗೆಯೇ ಅತಿಸಾರದಂತಹ ಸಮಸ್ಯೆಗಳು ಎದುರಾಗುತ್ತದೆ. ಅಂತಹ ಸಮಯದಲ್ಲಿ ನಾವು ಕ್ಯಾರೆಟ್ ಅನ್ನು ಉತ್ತಮ ಮದ್ದಾಗಿ ಬಳಸಬಹುದು. ಕ್ಯಾರೆಟ್ ಅನ್ನು ತುರಿದುಕೊಂಡು, ಕಿವುಚಿ, ಚೆನ್ನಾಗಿ ರಸವನ್ನು ಹಿಂಡಿಕೊಳ್ಳಬೇಕು. ಈ ಕ್ಯಾರೆಟ್ ರಸಕ್ಕೆ ಸೈಂದವ ಲವಣವನ್ನು ಸೇರಿಸಿ ಕುಡಿಯಬೇಕು. ಇದು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಉತ್ತಮ ಮನೆಮದ್ದಾಗಿದೆ.

ಹೃದಯದ ಉತ್ತಮ ಆರೋಗ್ಯದಲ್ಲಿ ಕ್ಯಾರೆಟ್ ನ ಪಾತ್ರ

ಹೃದಯದ ಉತ್ತಮ ಆರೋಗ್ಯಕ್ಕೆ ಎಲ್ಲಾ ಹಸಿರು ಸೊಪ್ಪುಗಳು ಹಾಗೂ ಹಸಿ ತರಕಾರಿಗಳು ಉತ್ತಮವಾಗಿದೆ. ಕ್ಯಾರೆಟ್ ಕೂಡ ಹಸಿಯಾಗಿ ತಿನ್ನಬಲ್ಲ ಉತ್ತಮ ತರಕಾರಿಯಾಗಿದ್ದು, ಹೃದಯದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಕ್ಯಾರೆಟ್ ಅನ್ನು ಕೋಸಂಬರಿ, ಜ್ಯೂಸ್ ಇಲ್ಲವೇ ಹಲ್ವಾಗಳಂತೆ ತಯಾರಿಸಿ ತಿನ್ನುವುದು ಹೃದಯದ ಆರೋಗ್ಯಕ್ಕೆ ಬಹು ಉತ್ತಮವಾಗಿದೆ. ಇದು ಹೃದಯಕ್ಕೆ ಹೆಚ್ಚು ಬಲವನ್ನು ತಂದುಕೊಡುವ ಕಾರ್ಯವನ್ನು ಮಾಡುತ್ತದೆ. ಹಾಗೆಯೇ ಹೃದಯ ದೌರ್ಬಲ್ಯವಾಗಿ ಇದ್ದರೆ, ಹೃದಯವನ್ನು ದೃಢಗೊಳಿಸಲು ಕ್ಯಾರೆಟ್ ಅನ್ನು ತುರಿದುಕೊಂಡು ಜೇನುತುಪ್ಪದೊಡನೆ ಸೇವಿಸಬೇಕು. ಇದು ಹೃದಯಕ್ಕೆ ಹೆಚ್ಚಿನ ಬಲವನ್ನು ನೀಡುತ್ತದೆ. 

ಜೇನುತುಪ್ಪದ ಬಗೆಗಿನ ಮಾಹಿತಿಗಳನ್ನು ಅರಿಯಲು ನಮ್ಮ ಲೇಖನವನ್ನು ಓದಿರಿ.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ, ನರದೌರ್ಬಲ್ಯವನ್ನು ನಿವಾರಿಸಲು ಕ್ಯಾರೆಟ್ ಉತ್ತಮ ಆಹಾರವಾಗಿದೆ.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಕ್ಯಾರೆಟ್ ಬಹಳ ಉತ್ತಮವಾಗಿದೆ. ಒಂದು ಲೋಟ ಕ್ಯಾರೆಟ್ ರಸಕ್ಕೆ, ಒಂದು ಚಮಚ ಬೆಟ್ಟದ ನೆಲ್ಲಿಕಾಯಿಯ ರಸ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನರದೌರ್ಬಲ್ಯದ ಸಮಸ್ಯೆಗಳು ಕಡಿಮೆಯಾಗಿ, ದೇಹದಲ್ಲಿನ ರೋಗ ನಿರೋಧಕ ಶಕ್ತಿಗಳು ವೃದ್ಧಿಯಾಗುತ್ತದೆ.

ಕ್ಯಾರೆಟ್ ಸೇವನೆಯು ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದೆ.

ವಯಸ್ಸಾದ ನಂತರ ಕ್ರಮೇಣ ಚರ್ಮ ಸುಕ್ಕುಗಟ್ಟುತ್ತದೆ. ಅಂತಹ ಚರ್ಮವನ್ನು ಅರೋಗ್ಯಕರವಾಗಿರಿಸಲು ಪ್ರತಿದಿನ ಒಂದು ಕ್ಯಾರೆಟ್ ಅನ್ನು ತಪ್ಪದೆ ತಿನ್ನಬೇಕು. ಇದು ಚರ್ಮದ ಅರೋಗ್ಯವನ್ನು ವೃದ್ಧಿಸಿ, ಸುಕ್ಕುಗಟ್ಟುವುದನ್ನು ಕಡಿಮೆಗೊಳಿಸುತ್ತದೆ. ಹಾಗೆಯೇ ಚರ್ಮದ ಕಾಂತಿಯನ್ನು ಕೂಡ ವೃದ್ಧಿಸುತ್ತದೆ.

ಮಲಬದ್ಧತೆ ಸಮಸ್ಯೆಗೂ ಕ್ಯಾರೆಟ್ ನಿಂದ ಉತ್ತಮ ಪರಿಹಾರವಿದೆ.

ಆಹಾರದ ಸಮತೋಲನವು ಏರುಪೇರಾದಾಗ ಮಲಬದ್ಧತೆಯಂತಹ ಸಮಸ್ಯೆಗಳು ಎದುರಾಗುವುದು ಸಹಜ. ಅಂತಹ ಸಮಯದಲ್ಲಿ ಪ್ರತಿದಿನ ರಾತ್ರಿ ಊಟ ಮಾಡಿದ ಮೇಲೆ ಒಂದು ಲೋಟ ಕ್ಯಾರೆಟ್ ಜ್ಯೂಸು ಮಾಡಿ ಕುಡಿಯುವುದು ಉತ್ತಮವಾಗಿದೆ. ಇದು ಮಲಬದ್ಧತೆಯನ್ನು ಕಡಿಮೆಗೊಳಿಸಿ, ಜೀರ್ಣಕ್ರಿಯೆಯನ್ನು ಸುಲಭಗೋಳಿಸುತ್ತದೆ.

ಪಿತ್ತಕೋಶದ ಆರೋಗ್ಯಕ್ಕೆ ಉತ್ತಮವಾಗಿರುವ ಕ್ಯಾರೆಟ್.

ಹಸಿಯಾಗಿ ಕ್ಯಾರೆಟ್ ತಿನ್ನುವುದು ಪಿತ್ತಕೋಶದ ಆರೋಗ್ಯಕ್ಕೆ ಉತ್ತಮವಾಗಿದೆ. ಪಿತ್ತಕೋಶದ ಉತ್ತಮ ಅರೋಗ್ಯಕ್ಕಾಗಿ ಕ್ಯಾರೆಟ್ ಅನ್ನು ಚೆನ್ನಾಗಿ ತುರಿದುಕೊಂಡು, ತುರಿದ ಕ್ಯಾರೆಟ್ ಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಸವಿಯಬೇಕು. ಇದು ಪಿತ್ತಕೋಶದ ಅರೋಗ್ಯವನ್ನು ಕಾಪಾಡಲು ಬಹಳ ಸಹಾಯಕವಾಗಿದೆ.

ಮೆದುಳಿನ ಉತ್ತಮ ಅರೋಗ್ಯಕ್ಕೂ ಕ್ಯಾರೆಟ್ ಸೇವನೆ ಉತ್ತಮವಾಗಿದೆ

ಹಸಿಯಾಗಿ ಕ್ಯಾರೆಟ್ ಸೇವಿಸುವುದರಿಂದ ಪಿತ್ತರಸವು ವೃದ್ಧಿಯಾಗುತ್ತದೆ. ಹಾಗೆಯೇ ಮೆದುಳಿನ ಉತ್ತಮ ಅರೋಗ್ಯಕ್ಕೂ ಕೂಡ ಸಹಾಯ ಮಾಡುತ್ತದೆ.

ಕ್ಯಾರೆಟ್ ಸೊಪ್ಪಿನ ವಿವಿಧ ಪ್ರಯೋಜನಗಳು

ಕ್ಯಾರೆಟ್ ನಲ್ಲಿ ಇರುವಷ್ಟೇ ಆರೋಗ್ಯಕರ ಅಂಶಗಳು ಕ್ಯಾರೆಟ್ ನ ಸೊಪ್ಪಿನಲ್ಲಿ ಕೂಡ ಇದೆ. ಅನೇಕ ಔಷಧೀಯ ಗುಣಗಳು ಕ್ಯಾರೆಟ್ ಸೊಪ್ಪಿನಲ್ಲಿವೆ. ವಿಟಮಿನ್ ಎ, ಬಿ, ಸಿ ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣದಂತಹ ಖನಿಜಗಳು ಸಹ ಇದೆ.

ಕ್ಯಾರೆಟ್ ಸೊಪ್ಪನ್ನು ಅರೋಗ್ಯವರ್ಧಕ ಟಾನಿಕ್ ಆಗಿ ಬಳಸಬಹುದು. ಕ್ಯಾರೆಟ್ ಸೊಪ್ಪನ್ನು ಶುದ್ಧಿ ಮಾಡಿಕೊಂಡು, ಅರೆದು ರಸವನ್ನು ಹಿಂಡಿಕೊಳ್ಳಬೇಕು. ಕ್ಯಾರೆಟ್ ಸೊಪ್ಪಿನ ರಸಕ್ಕೆ ಲಿಂಬೆ ಹಣ್ಣು ಹಿಂಡಿ, ಸ್ವಲ್ಪ ಉಪ್ಪನ್ನು ಬೆರೆಸಿ ಕುಡಿಯಬೇಕು. ಇದು ದೇಹಕ್ಕೆ ಬೇಕಾಗುವ ಅನೇಕ ಪೋಷಕಂಶಗಳನ್ನು ಪೂರೈಸುತ್ತದೆ.

ಕ್ಯಾರೆಟ್ ಜೊತೆಗೆ ಕ್ಯಾರೆಟ್ ಸೊಪ್ಪಿನ ಸೇವನೆಯು ಉತ್ತಮವಾಗಿದೆ.

ಕ್ಯಾರೆಟ್ ಸೇವನೆಯು ಹಲವು ಲಾಭಕರ ಅಂಶಗಳನ್ನು ಹೊಂದಿದ್ದು, ನಮ್ಮ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಎಲ್ಲರೂ ಕ್ಯಾರೆಟ್ ಅನ್ನು ಸ್ವೀಕರಿಸಬಹುದು. ಸಕ್ಕರೆ ಖಾಯಿಲೆಯಿಂದ ಬಳಳುತ್ತಿರುವವರು ಕೂಡ ಹಸಿಯಾಗಿ ಕ್ಯಾರೆಟ್ ಅನ್ನು ತಿನ್ನಬಹುದು. ಇನ್ನೂ ಅಸ್ತಮ, ದಮ್ಮು, ಹೃದಯದ ಸಮಸ್ಯೆ, ಮೂತ್ರಕೋಶದ ತೊಂದರೆಗಳು, ಇವೆಲ್ಲದಕ್ಕೂ ಕ್ಯಾರೆಟ್ ಉತ್ತಮ ಪರಿಹಾರವನ್ನು ನೀಡುತ್ತದೆ. ಕ್ಯಾರೆಟ್ ನಲ್ಲಿ ಅನೇಕ ಆರೋಗ್ಯಕರ ಅಂಶಗಳಿದ್ದು ಮನೆಮದ್ದಿಗೆ ಉತ್ತಮವಾಗಿದೆ. ಕಡಿಮೆ ಕ್ಯಾಲೋರಿ ಹಾಗೂ ಉತ್ತಮ ನಾರಿನಾಂಶ ಇರುವ ಕಾರಣ ತೂಕ ಇಳಿಸುವವರಿಗೂ ಕೂಡ ಇದು ಉತ್ತಮ ಆಹಾರವಾಗಿದೆ. ಹಾಗೆಯೇ ಅಡುಗೆಯಲ್ಲಿ ಕೂಡ ಹಲ್ವಾ, ಪಾಯಸ, ಹಲ್ವಾ, ಕೋಸಂಬರಿ ಇಂತಹ ಅನೇಕ ಅಡುಗೆಗಳಲ್ಲಿ ಉಪಯೋಗಿಸಲಾಗುತ್ತದೆ. ಪ್ರತಿದಿನ ಹಸಿರು ಸಲಾಡ್ ಮಾಡಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಹಸಿರು ಸೊಪ್ಪುಗಳನ್ನೆಲ್ಲ ಸೇರಿಸಿ ಹಸಿರು ಸಲಾಡ್ ತಯಾರಿಸಿ ತಿನ್ನುವುದು ಅರೋಗ್ಯಕರವಾಗಿದೆ. ಇಷ್ಟೆಲ್ಲ ಉಪಯುಕ್ತವಾಗಿರುವ ಕ್ಯಾರೆಟ್ ಅನ್ನು ಸೇವಿಸಿ ಉತ್ತಮ ಅರೋಗ್ಯವನ್ನು ನಮ್ಮದಾಗಿಸಿಕೊಳ್ಳುವ ಎಂಬುದು ನಮ್ಮ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.