ಚಹಾ ಪ್ರಿಯರಿಗೆ ವಿಭಿನ್ನ ಬಗೆಯ ವಿಶೇಷ ಎಲೆಗಳ ಚಹಾ (Tea) – ದಾಳಿಂಬೆ, ಅರಳಿಮರ, ಉತ್ತರಾಣೆ, ಶಂಖಪುಷ್ಪ, ಲಕ್ಷ್ಮಣ ಫಲ ಟೀ ರೆಸಿಪಿಗಳು

Spread the love

ಚಹಾ ಪ್ರಿಯರಿಗೆ ವಿಭಿನ್ನ ಬಗೆಯ ವಿಶೇಷ ಎಲೆಗಳ ಚಹಾ (Tea) - ದಾಳಿಂಬೆ, ಅರಳಿಮರ, ಉತ್ತರಾಣೆ, ಶಂಖಪುಷ್ಪ, ಲಕ್ಷ್ಮಣ ಫಲ ಟೀ ರೆಸಿಪಿಗಳು. AI Image

ಸಸ್ಯಗಳ ಪ್ರಮುಖ ಭಾಗಗಳಲ್ಲಿ ಎಲೆಗಳು ಕೂಡ ಒಂದಾಗಿದೆ. ಅವು ಸಸ್ಯಗಳಿಗೆ ಆಹಾರವನ್ನು ಉತ್ಪಾದಿಸುತ್ತದೆ ಹಾಗು ಉಸಿರಾಟ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಎಲೆಗಳು ವಿವಿಧ ಆಕಾರಗಳು, ಗಾತ್ರಗಳು ಮತ್ತು ಬಣ್ಣಗಳಲ್ಲಿ ಕಂಡು ಬರುತ್ತವೆ. ಎಲೆಗಳು ದ್ಯುತಿಸಂಶ್ಲೇಷಣೆ ಮೂಲಕ ಸಸ್ಯಗಳಿಗೆ ಆಹಾರವನ್ನು ತಯಾರಿಸುತ್ತದೆ. ದ್ಯುತಿಸಂಶ್ಲೇಷಣೆಯ ಸಮಯದಲ್ಲಿ, ಎಲೆಗಳು ಸೂರ್ಯನ ಬೆಳಕನ್ನು, ನೀರನ್ನು ಮತ್ತು ಇಂಗಾಲದ ಡೈ ಆಕ್ಸೈಡ್ ಅನ್ನು ಬಳಸಿಕೊಂಡು ಗ್ಲೂಕೋಸ್ ಮತ್ತು ಆಮ್ಲಜನಕವನ್ನು ಉತ್ಪಾದಿಸುತ್ತವೆ. ಗ್ಲೂಕೋಸ್ ಸಸ್ಯಕ್ಕೆ ಆಹಾರವಾಗಿ ಶಕ್ತಿಯನ್ನು ನೀಡುತ್ತದೆ, ಮತ್ತು ಆಮ್ಲಜನಕ ಪರಿಸರವನ್ನು ಸೇರುತ್ತದೆ. ಇಂತಹ ಶಕ್ತಿಶಾಲಿ ಎಲೆಗಳ ಕೆಲವು ಟೀ ರಿಸಿಪಿಗಳು ಹಾಗು ಅದರ ಉಪಯೋಗಗಳ ಬಗ್ಗೆ ಈ ಲೇಖನದಲ್ಲಿ ವಿಶ್ಲೇಸಿಸೋಣ.

ದಾಳಿಂಬೆ ಹಣ್ಣಿನ ಎಲೆಗಳ ಟೀ

ಬೇಕಾಗುವ ಸಾಮಗ್ರಿಗಳು

  • ದಾಳಿಂಬೆ ಹಣ್ಣಿನ ಚಿಗುರೆಲೆ 10
  • ನಿಂಬೆ ರಸ 1 ಚಮಚ
  • ಜೇನುತುಪ್ಪ 1 ಚಮಚ
  • ಏಲಕ್ಕಿ ಪುಡಿ 1/2 ಚಮಚ

ಮಾಡುವ ವಿಧಾನ
ಎರಡು ಲೋಟ ಬಿಸಿ ನೀರಿಗೆ ದಾಳಿಂಬೆ ಚಿಗುರೆಲೆಯನ್ನು ಹಾಕಿ ನೀರು ಅರ್ಧದಷ್ಟು ಆಗುವವರೆಗೂ ಚೆನ್ನಾಗಿ ಕುದಿಸಬೇಕು. ನಂತರ ಶೋಧಿಸಿಕೊಂಡು ನಿಂಬೆರಸ, ಏಲಕ್ಕಿ ಪುಡಿ ಹಾಗು ಜೇನುತುಪ್ಪ ಬೆರೆಸಿದರೆ ದಾಳಿಂಬೆ ಎಲೆಗಳ ಟೀ ಸವಿಯಲು ಸಿದ್ಧವಾಗುತ್ತದೆ.

ಉಪಯೋಗಗಳು

  • ದಾಳಿಂಬೆಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ನಾರು, ಫಾಸ್ಪರಸ್, ಕಬ್ಬಿಣ ಹಾಗು ವಿಟಮಿನ್ ಬಿ ಮತ್ತು ಸಿ ಇರುವುದರಿಂದ ದಾಳಿಂಬೆ ಟೀ ಇವೆಲ್ಲದರ ಮಿಶ್ರಣವಾಗಿದೆ.
  • ಈ ಟೀ ದೇಹಕ್ಕೆ ತುಂಬಾ ತಂಪಾಗಿದ್ದು, ಕಣ್ಣುಗಳ ಉರಿ, ಮೂತ್ರದಲ್ಲಿನ ಉರಿ ಎಲ್ಲವೂ ಕಡಿಮೆಯಾಗುತ್ತದೆ.
  • ಜಠರದಲ್ಲಿ ವಾಯು ಸಮಸ್ಯೆ ಇದ್ದರೆ ಈ ಟೀ ಉತ್ತಮವಾಗಿದೆ.
  • ಬೇಧಿ ಹಾಗು ಆಮಶಂಕೆ ಈ ಟೀ ಉತ್ತಮವಾಗಿದೆ.
  • ಗಂಟಲು ಕೆರೆತಕ್ಕೆ ಇದು ಉತ್ತಮವಾಗಿದೆ.

ಅರಳಿಮರದ ಎಲೆ ಟೀ

ಬೇಕಾಗುವ ಸಾಮಗ್ರಿಗಳು

  • ಅರಳಿ ಮರದ ಎಲೆ 4
  • ತುಳಸಿ 4 ದಳಗಳು
  • ಅಮೃತ ಬಳ್ಳಿಯ ಕಾಂಡ
  • ನಿಂಬೆ ರಸ 1 ಚಮಚ
  • ಜೇನುತುಪ್ಪ 1 ಚಮಚ
  • ಏಲಕ್ಕಿ ಪುಡಿ

ಮಾಡುವ ವಿಧಾನ
ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ 5 ಅರಳಿ ಎಲೆಗಳು, 4 ತುಳಸಿ ದಳಗಳು, ಅಮೃತಬಳ್ಳಿ ಒಂದು ತುಂಡನ್ನು ಹಾಕಿ ಕುದಿಸಿ ಶೋಧಿಸಿಬೇಕು. ಅದಕ್ಕೆ ನಿಂಬೆ ರಸ, ಜೇನುತುಪ್ಪ, ಏಲಕ್ಕಿ ಪುಡಿ ಹಾಕಿ ಕುಡಿಯಬೇಕು.

ಉಪಯೋಗಗಳು

  • ಆಮ್ಲಜನಕದ ಪೂರೈಕೆ ಮಾಡುವ ಈ ವೃಕ್ಷ ಶ್ವಾಸ ಸಂಬಂಧಿ ಖಾಯಿಲೆಗಳಿಗೆ ಉತ್ತಮವಾಗಿದೆ.
  • ರಕ್ತದ ಅಶುದ್ಧತೆಯನ್ನು ನಿವಾರಿಸಲು ಈ ಟೀ ಉತ್ತಮವಾಗಿದೆ.

ಉತ್ತರಾಣೆ ಎಲೆಗಳ ಟೀ

ಬೇಕಾಗುವ ಸಾಮಗ್ರಿಗಳು

  • ಉತ್ತರಾಣೆ ಗಿಡದ ಎಲೆಗಳು 4
  • ಚಹಾ ಪುಡಿ 1 ಚಮಚ
  • ಹಾಲು 1/2 ಲೋಟ
  • ಸಕ್ಕರೆ 1 ಚಮಚ

ಮಾಡುವ ವಿಧಾನ
ಒಂದು ಲೋಟ ನೀರಿಗೆ ಉತ್ತರಾಣೆ ಎಲೆ ಮತ್ತು ಚಹಾ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು, ನಂತರ ಸಕ್ಕರೆ ಹಾಲು ಹಾಕಿ ಶೋಧಿಸಿ ಕುಡಿಯಬೇಕು.

ಉಪಯೋಗಗಳು

  • ಈ ಟೀ ವಾತ, ಪಿತ್ತ, ಕಫ ಈ ಮೂರನ್ನು ಸಮ ಸ್ಥಿತಿಯಲ್ಲಿ ಇರುವಂತೆ ಕಾಪಾಡುತ್ತದೆ.
  • ಹೊಟ್ಟೆ ಉಬ್ಬರ, ಹೊಟ್ಟೆ ಉರಿ ಎಲ್ಲವನ್ನು ಕಡಿಮೆಗೊಳಿಸಿ ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ.

ಶಂಖ ಪುಷ್ಪ ಎಲೆಗಳ ಟೀ

ಬೇಕಾಗುವ ಸಾಮಗ್ರಿಗಳು

  • ಶಂಖ ಪುಷ್ಪ ಎಲೆಗಳು 6
  • ನಿಂಬೆ ರಸ 1 ಚಮಚ
  • ಏಲಕ್ಕಿ ಪುಡಿ 1/2 ಚಮಚ
  • ಒಣ ಶುಂಠಿ ಪುಡಿ 1 ಚಮಚ
  • ಭಜೆ ಪುಡಿ 1 ಚಮಚ

ಮಾಡುವ ವಿಧಾನ
ಶಂಖ ಪುಷ್ಪ ಎಲೆಗಳು, ಶುಂಠಿ ಪುಡಿ ಹಾಗು ಭಜೆ ಪುಡಿ ಎಲ್ಲವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆಯಾ ನಂತರ ಶೋಧಿಸಿ ಜೇನುತುಪ್ಪ, ಏಲಕ್ಕಿ ಪುಡಿ ಹಾಗು ನಿಂಬೆ ರಸ ಹಾಕಿ ಕುಡಿಯಬೇಕು.

ಉಪಯೋಗಗಳು

  • ಮಾನಸಿಕ ಒತ್ತಡ, ಖಿನ್ನತೆ, ಬೇಜಾರು ಇವೆಲ್ಲವನ್ನೂ ದೂರ ಮಾಡಿ ಮೆದುಳಿಗೆ ನೆಮ್ಮದಿ ನೀಡುತ್ತದೆ.
  • ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ.
  • ಮೆದುಳಿನ ಆರೋಗ್ಯಕ್ಕೆ ತುಂಬಾ ಉತ್ತಮ ಈ ಟೀ.
  • ತಲೆ ನೋವು ನಿವಾರಣೆಗೆ, ಒಳ್ಳೆ ನಿದ್ದೆ ಬರಲು ಈ ಟೀ ಸಹಾಯಕವಾಗಿದೆ.
  • ಚರ್ಮದ ರಕ್ಷಣೆ ಹಾಗು ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ.

ಲಕ್ಷ್ಮಣ ಫಲ ಎಲೆಗಳ ಟೀ

ಬೇಕಾಗುವ ಸಾಮಗ್ರಿಗಳು

  • ಲಕ್ಷ್ಮಣ ಫಲದ ಎಲೆಗಳು 5
  • ನಿಂಬೆ ರಸ 1 ಚಮಚ
  • ಜೇನುತುಪ್ಪ 1 ಚಮಚ
  • ಏಲಕ್ಕಿ ಪುಡಿ

ಮಾಡುವ ವಿಧಾನ
ಲಕ್ಷ್ಮಣ ಫಲದ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ನಂತರ ಶೋಧಿಸಿ ಜೇನುತುಪ್ಪ, ಏಲಕ್ಕಿ ಪುಡಿಯನ್ನು ಬೆರೆಸಿ ಕೊನೆಯಲ್ಲಿ ಲಿಂಬು ರಸವನ್ನು ಸೇರಿಸಬೇಕು. ಅಲ್ಲಿಗೆ ಟೀ ಸಿದ್ಧವಾಗುತ್ತದೆ.

ಉಪಯೋಗಗಳು

  • ಈ ಟೀ ಯಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಎ, ಬಿ, ಸಿ ಇದೆ.
  • ಕ್ಯಾನ್ಸರ್ ಖಾಲೆಯ ವಿರುದ್ಧ ಹೋರಾಡಲು ಇದು ರಾಮಬಾಣವಾಗಿದೆ. ಇದು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ.
  • ಕಿಮೋಥೆರಪಿ ಇಂದ ಬರುವ ಅಡ್ಡ ಪರಿಣಾಮಗಳನ್ನೂ ಬಗೆಹರಿಸುತ್ತದೆ.
  • ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.
  • ಮೈಗ್ರೇನ್ ತಲೆನೋವಿಗೆ ಉತ್ತಮವಾಗಿದೆ.
  • ಮೂತ್ರನಾಳದ ಸೋಂಕುಗಳನ್ನು ಕಡಿಮೆ ಮಾಡಿಸುತ್ತದೆ.
  • ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಸೂಕ್ತವಾದ ಟೀ ಇದಾಗಿದೆ.

ಮರದ ಚಿಕ್ಕ ಭಾಗ ಎಲೆಗಳು, ಹಣ್ಣೆಲೆ ಆಗಿ ಉದುರುವ ಮುನ್ನ ಇಷ್ಟೆಲ್ಲಾ ಅಂಶಗಳನ್ನು ಒಳಗೂಡಿ ಅರೋಗ್ಯವರ್ಧಕವಾಗಿದೆ. ಮರದ ಅಡುಗೆ ಮನೆ ಎಂದರೆ ಅದು ಎಲೆಗಳು. ಅಂತಹ ಎಲೆಗಳಿಂದ ಉತ್ತಮವಾದ ಟೀ ಗಳನ್ನು ತಯಾರಿಸಿ, ಕುಡಿದು, ಆರೋಗ್ಯಯುತ ಅಂಶಗಳನ್ನು ನಮ್ಮ ದೇಹದಲ್ಲಿ ಅಳವಡಿಸಿಕೊಳ್ಳೋಣ ಎಂಬುದು ಈ ಲೇಖನದ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi
Tags: best chaha recipes in kannadabest gruha sangathi for your home remediesbest Herbal leaf tea recipesbest kannada bloggruha sangaatigruha snehi health tips for summergruha snehi kannada bloghealthy chaha recipe in kannadahealthy different type of healthy leaf tea recipesHealthy Leaf Teashome remedies from gruhasnehihomemade different types of healthy chai in kannadaHomemade medicinal teaskannada health tips from gruhasnehiLakshman Phal leaf tea usesPeepal leaf tea health benefitsPomegranate leaf tea benefitsShankhpushpi leaf tea preparationspecial chaha in kannadaspecial tea recipes in kannadaUttaraane leaf tea home remedyyour best gruha sangatiಅರಳಿಮರದ ಎಲೆಗಳ ಟೀ ಆರೋಗ್ಯ ಪ್ರಯೋಜನಗಳುಆಯುರ್ವೇದ ಟೀ ಆರೋಗ್ಯ ಪ್ರಯೋಜನಗಳುಉತ್ತರಾಣೆ ಎಲೆಗಳ ಟೀ ಮನೆಮದ್ದುಗೃಹಸ್ನೇಹಿಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟುದಾಳಿಂಬೆ ಎಲೆಗಳ ಟೀ ಲಾಭಗಳುನಿಮ್ಮ ಬೆಸ್ಟ್ ಗೃಹ ಸಂಗಾತಿಮನೆದಲ್ಲಿ ತಯಾರಿಸಬಹುದಾದ ಔಷಧೀಯ ಚಹಾಲಕ್ಷ್ಮಣ ಫಲ ಎಲೆ ಟೀ ಉಪಯೋಗಗಳುವಿಭಿನ್ನ ಬಗೆಯ ವಿಶೇಷ ಎಲೆಗಳ ಚಹಾವಿಭಿನ್ನ ಬಗೆಯ ವಿಶೇಷ ಚಹಾ ರೆಸಿಪಿಗಳುಶಂಖಪುಷ್ಪ ಎಲೆಗಳ ಟೀ ತಯಾರಿಸುವ ವಿಧಾನ

Recent Posts

ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು

ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು. AI Image ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ…

6 hours ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

1 day ago

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು. AI Image ನಮ್ಮ ದೇಹದ ಒಂದು ಮುಖ್ಯ…

2 days ago

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು. AI Image ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ…

3 days ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

4 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

5 days ago

This website uses cookies.