ಕಾಲಿನ ಹಿಮ್ಮಡಿ ಬಿರುಕು ಬಿಟ್ಟಿದ್ದರೆ ಹಾಗೂ ತುಟಿಯ ಆರೈಕೆಗೆ ಸುಲಭ ಮನೆಮದ್ದುಗಳು

Spread the love

ಕಾಲಿನ ಹಿಮ್ಮಡಿ ಬಿರುಕು ಬಿಟ್ಟಿದ್ದರೆ ಹಾಗೂ ತುಟಿಯ ಆರೈಕೆಗೆ ಸುಲಭ ಮನೆಮದ್ದುಗಳು

ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಮನೆಮದ್ದುಗಳು

  • ಬೇವಿನ ಎಲೆಗಳನ್ನು  ನುಣ್ಣಗೆ ಪುಡಿ ಮಾಡಿ ಅದಕ್ಕೆ ಅರಿಶಿನ ಪುಡಿಯನ್ನು ಸೇರಿಸಿ. ಆ ಪೇಸ್ಟ್ ಅನ್ನು ಬಿರುಕುಗಳ ಮೇಲೆ ಹಚ್ಚಿ  ಒಣಗುವವರೆಗೆ  ಬಿಡಿ. ಪಾದಗಳನ್ನು ಬಿಸಿ ನೀರಿನಿಂದ ತೊಳೆದು ಚೆನ್ನಾಗಿ ಒರೆಸಿಕೊಳ್ಳಬೇಕು. ಇದರಿಂದ ಬಿರುಕುಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ.
  • ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿದ ನಂತರ ಪಾದಗಳ ಸುತ್ತಲಿನ ಸತ್ತ ಚರ್ಮವನ್ನು ಸ್ಕ್ರಬ್ ಮಾಡಿ, ನಂತರ ಇಡೀ ಹಿಮ್ಮದಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಬೇಕು. ಕಾಲುಚೀಲ ಧರಿಸಬೇಕು.
  • ಅಕ್ಕಿ ಹಿಟ್ಟು, ಜೇನುತುಪ್ಪ ಮತ್ತು ಆಪಲ್ ಸೈಡರ್ ವಿನೆಗರ್ ಮೂರನ್ನು ಬೆರೆಸಿ ಪೇಸ್ಟ್ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಚಮಚ  ಎಣ್ಣೆಯನ್ನು ಸೇರಿಸಬೇಕು. ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ಹತ್ತು ನಿಮಿಷಗಳ ಕಾಲ ನೆನೆಸಿ ನಂತರ ಮಾಡಿದ ಮಿಶ್ರಣವನ್ನು ಚೆನ್ನಾಗಿ  ಸ್ಕ್ರಬ್ ಮಾಡಬೇಕು. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಈ ವಿಧಾನವನ್ನು ಮಾಡಬೇಕು.
  • ಬಿಸಿ ನೀರಿನಲ್ಲಿ ನಿಂಬೆ ರಸ ಸೇರಿಸಿ ಪಾದಗಳನ್ನು ಹತ್ತು  ನಿಮಿಷಗಳ ಕಾಲ ನೆನೆಸಬೇಕು. ಬಿರುಕು ಬಿಟ್ಟ ಹಿಮ್ಮಡಿಗಳನ್ನು ಪ್ಯೂಮಿಸ್ ಕಲ್ಲು ಬಳಸಿ ಉಜ್ಜಿಕೊಂಡು. ಪಾದಗಳನ್ನು ತೊಳೆದು ಚೆನ್ನಾಗಿ ಒರೆಸಿಕೊಳ್ಳಬೇಕು. ಸಮಾನ ಪ್ರಮಾಣದಲ್ಲಿ ರೋಸ್ ವಾಟರ್ನ್ನು ಗ್ಲಿಸರಿನ್ ನೊಂದಿಗೆ ಬೆರೆಸಿ, ಮಲಗುವ ಮುನ್ನ ಪ್ರತಿದಿನ ಹಿಮ್ಮಡಿ ಮತ್ತು ಪಾದಗಳಿಗೆ ಹಚ್ಚಬೇಕು.ಇದು ಪಾದವನ್ನು ಮೃದುವಾಗಿಸಲು ಸಹಾಯಕವಾಗಿದೆ.
  • ತೆಂಗಿನ ಎಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಮೇಣದ ಬತ್ತಿಯ ಮೇಣವನ್ನು ಹಾಕಿ ಕರಗುವಷ್ಟು ಬಿಸಿ ಮಾಡಿ ನಂತರ ಶೋಧಿಸಿಕೊಳ್ಳಬೇಕು. ನಂತರ ಅದಕ್ಕೆ ಅರ್ಧ ಚಮಚ ಅಲೋವೆರಾ ಜೆಲ್ ಹಾಗು ಗ್ಲಿಸರಿನ್ ಅನ್ನು ಸೇರಿಸಿ ಕಲಸಿಕೊಂಡು ನಿತ್ಯ ಮಲಗುವ ಮುನ್ನ ಬಿರುಕುಗಳನ್ನು ತುಂಬುವಂತೆ ಚೆನ್ನಾಗಿ ಹಚ್ಚಬೇಕು. ಇದು ತ್ವರಿತ ಫಲಿತಾಂಶ ಸಿಗುವಲ್ಲಿ ಸಹಾಯಕವಾಗುತ್ತದೆ.
  • ಸುಲಭವಾಗಿ ತೆಂಗಿನ ಎಣ್ಣೆಯೊಂದಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಕಲಸಿ ಚೆನ್ನಾಗಿ ಹಿಮ್ಮಡಿಗೆ ಹಚ್ಚಿ ಮಸಾಜ್ ಮಾಡಿದರೆ ಹಿಮ್ಮಡಿ ಬಿರುಕುಗಳು ಬೇಗ ಕಡಿಮೆಯಾಗುತ್ತದೆ.
  • ಒಡೆದ ಹಿಮ್ಮಡಿ ಅರಳಿ ಮರದ ಕಾಂಡವನ್ನು ಕೆತ್ತಿದಾಗ ಬರುವ ಹಾಲನ್ನು ಹಚ್ಚಿದರೆ ಕಾಲಿನ ಬಿರುಕು ಕ್ರಮೇಣ ಕಡಿಮೆಯಾಗುತ್ತದೆ.
  • ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ನಂತರ ಒರೆಸಿಕೊಂಡು ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಹುರಿಯಬೇಕು. ಅದು ಕಪ್ಪನೆಯ ಬಣ್ಣಕ್ಕೆ ತಿರುಗುತ್ತದೆ. ಈಗ ಆ ಎಲೆಯನ್ನು ಹುರಿದ ತುಪ್ಪವನ್ನು ಮಾತ್ರ ತೆಗೆದುಕೊಂಡು ಅದಕ್ಕೆ ಜೇನು ಮೇಣವನ್ನು ಕರಗಿಸಿ ಮಿಶ್ರಣ ಮಾಡಬೇಕು. ಎಲ್ಲವೂ ಆರಿದ ನಂತರ ಗಾಜಿನ ಪಾತ್ರೆಯಲ್ಲಿ ಶೇಖರಿಸಿ ಇಡಬೇಕು. ರಾತ್ರಿ ಮಲಗುವಾಗ ಹಿಮ್ಮಡಿ ಯನ್ನೂ ಚೆನ್ನಾಗಿ ತೊಳೆದು ಒರೆಸಿ ನಂತರ ನಾವು ತಯಾರಿಸಿದ ಈ ಮಿಶ್ರಣವನ್ನು ಹಚ್ಚಬೇಕು. ಬೆಳಿಗ್ಗೆ ಎದ್ದ ತಕ್ಷಣ ಕಡಲೆ ಹಿಟ್ಟಲ್ಲಿ ಕಾಲನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ಒಡೆದ ಹಿಮ್ಮಡಿ ಬೇಗ ಗುಣಮುಖವಾಗುತ್ತದೆ.

ಮೃದುವಾದ ತುಟಿಯ ರಕ್ಷಣೆಯ ಬಗ್ಗೆ ಕೆಲವೊಂದು ಟಿಪ್ಸ್

ಮುಖದ ಅಂದವನ್ನು ಹೆಚ್ಚಿಸುವ ನಮ್ಮ ಕೆಂಪನೆಯ ತುಟಿಯು ಅತೀ ಸೂಕ್ಷ್ಮವಾಗಿದ್ದು ಬೇಗನೆ ವಾತಾವರಣಕ್ಕೆ ಒಗ್ಗಿ ಬಿರುಸಾಗಿ ಒಡಕು ಬಿಡುತ್ತದೆ.ಇದರ ಜೊತೆಗೆ ತುಟಿಯ ಪದರ ಏಳುವ ಸಾಧ್ಯತೆಯೂ ಇರುತ್ತದೆ. ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಹೆಚ್ಚಾಗಿ ಕಂಡುಬರುತ್ತದೆ. ಚಳಿಗಾಲವೆಂದು ನೀರು ಕುಡಿಯುವುದನ್ನು ನಾವು ಕಡಿಮೆ ಮಾಡಬಾರದು, ಹವಾಮಾನಕ್ಕೆ ತಕ್ಕಂತೆ ನಾವು ನೀರು ತೆಳೆದುಕೊಳ್ಳುವ ಪ್ರಮಾಣ ಕಡಿಮೆ ಮಾಡಬಾರದು ಏಕೆಂದರೆ ನಮ್ಮ ದೇಹವು ಒಂದೇ ರೀತಿಯ ಉಷ್ಣಕ್ಕೆ ಓಗ್ಗಿಕೊಂಡಿರುತ್ತದೆ. ತೇವದ ಕಡಿಮೆಯ ಕಾರಣ ಬೇಗ ತುಟಿಗಳು ಒಡೆಯುತ್ತವೆ. ಹಾಗೆಯೇ ಕೆಲವೊಮ್ಮೆ ಅಧಿಕ ಉಷ್ಣದಿಂದ ಕೂಡಾ ತುಟಿಗಳಲ್ಲಿ ಕೆಂಪು ಗಾಯಗಳನ್ನು ಅಥವಾ ಕೆಂಪು ಗುಳ್ಳೆಗಳನ್ನು ನೋಡುತ್ತೇವೆ. ಇದು ಸಹ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿ ಆಗುವ ಸಮಸ್ಯೆಗಳು. ಇನ್ನು ಅನೇಕ ಅಲರ್ಜಿ ಹಾಗು ಬಾವುಗಳು ಏಳುವ ಸಾಧ್ಯತೆ ಇದೆ. ಇವೆಲ್ಲ ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ನಮ್ಮ ಮನೆಯಲ್ಲೇ ಕಂಡುಕೊಳ್ಳಬಹುದು. ಕೆಲವೊಂದು ಟಿಪ್ಸ್ ಗಳ ಬಗೆಗೆ ನಾವು ಚರ್ಚಿಸೋಣ.

  • ಒಡೆದ ತುಟಿಗಳ ಮೇಲೆ ಹಾಲಿನ ಕೆನೆ ಹಚ್ಚುವುದರಿಂದ ತುಟಿಗಳು ಬೇಗನೆ ಚೇತರಿಸಿಕೊಂಡು ಮೃದುವಾಗುತ್ತದೆ.
  • ಅಲೋವೆರಾ ಜೆಲ್ಲನ್ನು ತುಟಿಗಳ ಒಡೆದ ಭಾಗದಲ್ಲಿ ನಿತ್ಯ ಹಚ್ಚುವುದರಿಂದ ತುಟಿ ಒಡೆತಗಳು ಕಡಿಮೆಯಾಗುತ್ತದೆ.
  • ರೋಸ್ ವಾಟರ್ ಅಥವಾ ಗುಲಾಬಿ ದಳಗಳನ್ನು ಚೆನ್ನಾಗಿ ತೊಳೆದು ಪೇಸ್ಟ್ ಮಾಡಿ ಜೇನುತುಪ್ಪದೊಂದಿಗೆ ಕಲಸಿ ತುಟಿಗೆ ಹಚ್ಚಿ 30 ನಿಮಿಷದ ನಂತರ ತೊಳೆಯಬೇಕು. ಇದರಿಂದ ತುಟಿಯು ಆರೋಗ್ಯಯುತ ವಾಗಿರುತ್ತದೆ.
  • ನಿತ್ಯ ತೆಂಗಿನೆಣ್ಣೆಯನ್ನು ಸ್ವಲ್ಪ ಹಚ್ಚುವುದರಿಂದ ತುಟಿಯ ತೇವವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.
  • ನಿಂಬೆ ರಸ ಹಾಗು ಜೇನುತುಪ್ಪವನ್ನು ಬೆರೆಸಿ ನಿತ್ಯ ಹಚ್ಚಿಕೊಳ್ಳುವುದರಿಂದ ತುಟಿಯ ಒಡೆತಗಳು ಕಡಿಮೆಯಾಗುತ್ತದೆ.

ಒಡೆದ ಹಿಮ್ಮಡಿ ಹಾಗೂ ತುಟಿಗಳ ರಕ್ಷಣೆಯ ಬಗೆಗಿನ ಹಲವು ಮಾಹಿತಿಗಳನ್ನು ನಾವು ಇಂದಿನ ಲೇಖನದಲ್ಲಿ ವಿಶ್ಲೇಷಿಸಿದ್ದೇವೆ. ಇದು ಇಂದಿನ ದಿನಮಾನದ ಅನೇಕರನ್ನು ಕಾಡುವ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸಲು ಉಪಯುಕ್ತವಾಗಿರುವ ಮನೆಮದ್ದುಗಳ ಮಾಹಿತಿಗಳನ್ನು ಪಡೆದುಕೊಂಡು, ಸಮಸ್ಯೆಗಳಿಂದ ಹೊರಬರಲಿ ಎಂಬುದು ಈ ಲೇಖನದ ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಮೊಣಕಾಲು ನೋವಿಗೆ ಸರಳ ಶಾಶ್ವತ ಪರಿಹಾರ ಮನೆಯಲ್ಲೇ ಮಾಡಿ – ಪರಿಣಾಮಕಾರಿ ಸೇಬು ಪಾನೀಯ (Knee Pain home remedies)

ಮೊಣಕಾಲು ನೋವಿಗೆ ಸರಳ ಶಾಶ್ವತ ಪರಿಹಾರ ಮನೆಯಲ್ಲೇ ಮಾಡಿ - ಪರಿಣಾಮಕಾರಿ ಸೇಬು ಪಾನೀಯ. AI Generated Image ಮೊಣಕಾಲು…

7 hours ago

ನಿತ್ಯ ಬಾದಾಮಿ ಸೇವನೆಯ ಲಾಭಗಳು – ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು! (Almond Benefits)

ನಿತ್ಯ ಬಾದಾಮಿ ಸೇವನೆಯ ಲಾಭಗಳು – ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು!. AI Image ಬಾದಾಮಿಯು ದೇಶ ವಿದೇಶಗಲ್ಲಿ ಹೆಚ್ಚಾಗಿ ಬೆಳೆಯುವ…

1 day ago

ನಿಂಬೆ ಹಣ್ಣು(Lemon): ಪರಿಚಯ, ಆರೋಗ್ಯಕರ ಉಪಯೋಗಗಳು, ಮತ್ತು ರುಚಿಕರ ಪಾನೀಯ

ನಿಂಬೆ ಹಣ್ಣು: ಆರೋಗ್ಯ ಲಾಭಗಳು, ಮತ್ತು ಉಪಯೋಗಗಳು. AI Image ಪ್ರತಿ ಮನೆಯಲ್ಲಿ ನಿತ್ಯ ಉಪಯೋಗಿಸುವ ತರಕಾರಿ ಎನ್ನಬೇಕೋ ಇಲ್ಲವೇ…

2 days ago

ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಗಾಗಿ ಸುಲಭ ಮನೆ ಪರಿಹಾರಗಳು (Simple Home Remedies for Facial Hair, Dark Patches & Glowing Skin)

ಮುಖದ ಅನಾವಶ್ಯಕ ಕೂದಲು, ಕಪ್ಪು ಛಾಯೆ ಮತ್ತು ಹೊಳೆಯುವ ಚರ್ಮಕ್ಕಾಗಿ ಸುಲಭ ಮನೆ ಪರಿಹಾರಗಳು (Simple Home Remedies for…

3 days ago

ಮೂಲವ್ಯಾಧಿ (Piles): ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು

ಮೂಲವ್ಯಾಧಿ (Piles): ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು. AI Image ಮೂಲವ್ಯಾಧಿ (ಪೈಲ್ಸ್) ಗುದನಾಳದ ಕೆಳಭಾಗ ಮತ್ತು ಗುದದ್ವಾರದಲ್ಲಿನ ರಕ್ತನಾಳಗಳು…

4 days ago

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಕಾಳುಮೆಣಸು ಮನೆಮದ್ದು (Powerful Black Pepper Home Remedies for Common Health Issues)

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಕಾಳುಮೆಣಸು ಮನೆಮದ್ದು (Powerful Black Pepper Home Remedies for Common Health Issues).…

5 days ago

This website uses cookies.