ಶ್ರೀ ಮಹಾದೇವನ ಪ್ರಿಯವಾದ ಬಿಲ್ವಪತ್ರೆ: ಮಹಿಮೆ, ಆರೋಗ್ಯ, ಧಾರ್ಮಿಕ ಮಹತ್ವ ಮತ್ತು ಉಪಯೋಗಗಳು

Spread the love

ಬಿಲ್ವಪತ್ರೆ: ಮಹಿಮೆ, ಆರೋಗ್ಯ, ಧಾರ್ಮಿಕ ಮಹತ್ವ ಮತ್ತು ಉಪಯೋಗಗಳು

ನಮ್ಮ ಪರಿಸರದ ಇನ್ನೊಂದು ಅಮೂಲ್ಯ ಹಸಿರು ರತ್ನವೆಂದರೆ ಬಿಲ್ವ ವೃಕ್ಷ. ಅನೇಕ ಆರೋಗ್ಯವರ್ಧಕ ಗುಟ್ಟುಗಳನ್ನು ತನ್ನಲ್ಲಿ ವಿಲೀನವಾಗಿಸಿಕೊಂಡು ಸಮೃದ್ಧವಾಗಿ ಬೆಳೆಯುವ ಈ ಬಿಲ್ವ ವೃಕ್ಷಕ್ಕೆ ಇನ್ನು ಅನೇಕ ಹೆಸರುಗಳು ಸಹ ಇದೆ. ದೀರ್ಘ ಕಾಲ ಯಾವುದೇ ಅಧಿಕ ಆರೈಕೆ ಇಲ್ಲದೆ ನಮ್ಮ ಪರಿಸದಲ್ಲಿ ಸೊಂಪಾಗಿ ಬೆಳೆಯುವ ಮರ.

ಬಿಲ್ವಪತ್ರೆ ಮರವು ಮಧ್ಯಮ ಗಾತ್ರದ ವೃಕ್ಷವಾಗಿದ್ದು, ಅಂದಾಜು 15 ಮೀಟರ್ ತನಕ ಎತ್ತರಕ್ಕೆ ಬೆಳೆಯಬಹುದು.  ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಿಲ್ವ ಮರದ ಬಿಲ್ವಪತ್ರೆ ಮೂರು ಎಲೆಗಳ ಒಂದು ಸಂಗಮದಂತೆ ಕಾಣುತ್ತದೆ. ಬಿಲ್ವಪತ್ರೆಯ ಹಣ್ಣುಗಳು ಗೋಳಾಕಾರದಲ್ಲಿ ಬೆಳೆಯುತ್ತದೆ. ಕಾಯಿ ಹಸಿರು ಬಣ್ಣದಲ್ಲಿದ್ದು, ಹಣ್ಣಾದ ನಂತರ ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ಬದಲಾಗುತ್ತದೆ. ಹಣ್ಣಿನ ಒಳಭಾಗದಲ್ಲಿ ಸಿಹಿಯಾದ ತಿರುಳು ಮತ್ತು ಬೀಜಗಳಿರುತ್ತವೆ. ಕೊಂಬೆಗಳಲ್ಲಿ ಮುಳ್ಳುಗಳು ಸಹ ಇರುತ್ತವೆ.

ವೈಜ್ಞಾನಿಕ ವಿಚಾರಗಳು

ಬಿಲ್ವಪತ್ರೆಯು ರುಟೇಸೀ ಸಸ್ಯ ಕುಟುಂಬಕ್ಕೆ ಸೇರಿದ ಮರವಾಗಿದೆ. 

ವರ್ಗೀಕರಣ:

  • ಕುಟುಂಬ: ರುಟೇಸೀ (Rutaceae)
  • ಜಾತಿ: ಏಗಲ್ (Aegle)
  • ಪ್ರಭೇದ: ಮಾರ್ಮೆಲೋಸ್  (Marmelos)
  • ವೈಜ್ಞಾನಿಕ ಹೆಸರು: ಏಗಲ್ ಮಾರ್ಮೆಲೋಸ್ (Aegle marmelos)

ಬಿಲ್ವಪತ್ರೆ ಅನೇಕ ರಾಸಾಯನಿಕ ಅಂಶಗಳಿಂದ ಕೂಡಿದೆ, ಅವುಗಳಲ್ಲಿ ಕೆಲವು ಆಲ್ಕಲಾಯ್ಡ್‌ಗಳು, ಕುಮರಿನ್‌ಗಳು, ಟ್ಯಾನಿನ್‌ಗಳು, ಫ್ಲೇವನಾಯ್ಡ್‌ಗಳು, ಸಪೋನಿನ್‌ಗಳು, ವಿಟಮಿನ್ ಸಿ. ಬಿಲ್ವಪತ್ರೆಯ ಔಷಧೀಯ ಗುಣಗಳ ಬಗ್ಗೆ ಹೇಳುವುದಾದರೆ, ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್, ಆಂಟಿಫಂಗಲ್, ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ.

ಬಿಲ್ವಪತ್ರೆಯ ಔಷಧೀಯ ಗುಣಗಳ ಬಗ್ಗೆ ಸಂಶೋಧನೆಗಳು ನಡೆದಿವೆ. ಇದರ ಪ್ರಕಾರ ಬಿಲ್ವಪತ್ರೆಯು ಮಧುಮೇಹ, ಅತಿಸಾರ, ಭೇದಿ, ಹೊಟ್ಟೆನೋವು ಮತ್ತು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಬಿಲ್ವಪತ್ರೆಯು ಮನುಷ್ಯನ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು  ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಬಿಲ್ವ ಪತ್ರೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಅತೀ ಸಹಾಯಕವಾಗಿದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ಹಾಗೆಯೇ ಮನುಷ್ಯನ ದೇಹದ ಯಕೃತ್ತನ್ನು ವಿಷಕಾರಿ ವಸ್ತುಗಳಿಂದ ಕಾಪಾಡುವ ಉತ್ತಮ ಗುಣಗಳನ್ನು ಹೊಂದಿದೆ.

ಧಾರ್ಮಿಕ ವಿಚಾರಗಳು

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ|
ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||

ಮೂರು ದಳಗಳನ್ನು ಹೊಂದಿರುವ ಒಂದು ಬಿಲ್ವಪತ್ರೆ ಸತ್ತ್ವ, ರಜಸ್ ಮತ್ತು ತಮಸ್ ಎಂಬ ಮೂರು ಗುಣಗಳನ್ನು ಪ್ರತಿನಿಧಿಸುವುದಲ್ಲದೆ, ಮೂರು ಕಣ್ಣುಗಳನ್ನು ಹೊಂದಿರುವ ಮುಕ್ಕಣ್ಣ ಅಂದರೆ ಶಿವನ ರೂಪವನ್ನು ನೆನಪಿಸುತ್ತದೆ. ತ್ರಿಶೂಲ, ಡಮರು ಮತ್ತು ನಾಗ ಎಂಬ ಮೂರು ಆಯುಧಗಳನ್ನು ಸೂಚಿಸುತ್ತದೆ. ಒಂದೇ ಒಂದು ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ ಮೂರು ಜನ್ಮಗಳ ಪಾಪಗಳನ್ನು ಕಳೆದುಕೊಳ್ಳಬಹುದು. 

ಹೇಗೆ ತುಳಸಿ ವಿಷ್ಣು ಪ್ರಿಯವೋ ಹಾಗೆಯೇ ಬಿಲ್ವಪತ್ರೆ ಶಿವ ಪ್ರಿಯ. ಶಿವನ ಪೂಜೆಗೆ ಮೊದಲು ಎಂದರೂ ತಪ್ಪಾಗಲಾರದು. 

ಬಿಲ್ವಪತ್ರೆಯ ಮೂರು ದಳಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತವೆ ಎಂದು ಸಹ ಹೇಳಲಾಗುತ್ತದೆ. ಈ ಮೂರು ದಳಗಳು ಶಿವನ ಮೂರು ಕಣ್ಣುಗಳು ಎಂಬ ನಂಬಿಕೆ ಸಹ ಇದೆ. ಬಿಲ್ವಪತ್ರೆ ಮರದಲ್ಲಿರುವ ಬೇರು ಈಶ್ವರನ ಸಂಕೇತವಾಗಿದ್ದು, ಮುಳ್ಳುಗಳು ಶಕ್ತಿ ಮಾತೆಯನ್ನು, ಕೊಂಬೆಗಳು ವೇದಗಳನ್ನು ಸಂಕೇತಿಸುತ್ತದೆ.

ಬಿಲ್ವಪತ್ರೆಯ ಉಪಯೋಗಗಳು

ಇಂತಹ ಬಿಲ್ವವೃಕ್ಷದ ಅನೇಕ ಉಪಯೋಗಗಳಿವೆ. ಅವೆಲ್ಲವೂ ನಮ್ಮ ದೇಹಕ್ಕೆ ಅಡ್ಡ ಪರಿಣಾಮಗಳಿಲ್ಲದೆ ನಮ್ಮ ಸಮಸ್ಯೆಗಳನ್ನು ಉತ್ತಮವಾಗಿ ಪರಿಹರಿಸುತ್ತದೆ. ಇಂತಹ ಆರೋಗ್ಯವರ್ಧಕ, ರೋಗನಿರೋಧಕ ಹಾಗು ಪೋಷ್ಠಿಕಾಂಶಯುಕ್ತ ಬಿಲ್ವಪತ್ರೆಯ ಉಪಯೋಗ ಪಡೆದುಕೊಂಡು ಸ್ವಾಸ್ತ್ಯ ಜೀವನವನ್ನು ನಡೆಸೋಣ ಅಲ್ಲವೇ?

ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಬಿಲ್ವ ಮರದ ಸಂಪೂರ್ಣ ಪರಿಚಯವನ್ನು ಈ ಲೇಖನದಲ್ಲಿ ನಾವು ಅರಿತ್ತಿದ್ದೇವೆ. ಬೇರಿನಿಂದ ಮರದ ಕಾಯಿಯವರೆಗಿನ ಎಲ್ಲವು ಕೂಡ ಉಪಯುಕ್ತವೇ ಆಗಿದ್ದು, ನಮ್ಮ ಪರಿಸರದ ಅಮೂಲ್ಯ ಆಸ್ತಿಯಾಗಿದೆ. ಇಂತಹ ಬಿಲ್ವ ವೃಕ್ಷದ ಪರಿಚಯವನ್ನು ಎಳೆ ಎಳೆಯಾಗಿ ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು.

ಬಿಲ್ವ ವೃಕ್ಷದ ಇನ್ನೂ ಅನೇಕ ಉಪಯೋಗಗಳನ್ನು ಮುಂದಿನ ಲೇಖನಗಳಲ್ಲಿ ನಿರೀಕ್ಷಿಸಿರಿ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

  • Bilwapathre gidada Vamsha Vruddhi 10 mts to 20mts thanaka
    Pasarisuva berugalinda chigurodedu gidagalaguthave.
    Avugalannu ache-eechege 4"
    bittu thundarisi Netware gidagalu
    bega melebaruthave.Heegene
    kombegalannu nettare gidagalu
    badukuvudilla.Beru barisi kasimadidare badukuva saadhyathe yide.Chaligaaladalli Bilwa yeligalu uduri hosachiguru
    baruvudu roodhi.Sekhegaala
    (Besige)yalli bilwakai Sharabathu
    Thampaada,Arogyakara Paaneeya.Berininda berpadisida
    gidagalanuu neduvaaga 2 badiya
    berugalannu Uthara-Dakshinabhi
    mukhavaaginedabeku.Vaasthuprakaara Bilwa gidavannu maneya Eeshanya dikkinalli nettare Uthama...Hare Raamaa..🕉 Nama Shivaayaa...😄👌👍🙏

Recent Posts

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು (Healthy traditional drinks)

ದಿನಪೂರ್ತಿ ಉತ್ಸಾಹ ಮತ್ತು ಆರೋಗ್ಯದಿಂದಿರಲು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬಹುದಾದ ಹೆಲ್ತಿ ಡ್ರಿಂಕ್ಸ್ ಮತ್ತು ಶಕ್ತಿವರ್ಧಕ ಟಾನಿಕ್ ಗಳು. AI…

8 hours ago

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

1 day ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

2 days ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

3 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

4 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

5 days ago

This website uses cookies.