
ನಮ್ಮ ಹೃದಯ ನಮ್ಮ ಉಸಿರು. ಒಂದೊಂದು ಹೃದಯದ ಬಡಿತದೊಂದಿಗೆ ನಾವು ನಮ್ಮ ಪ್ರತಿ ಜೀವನದ ಕ್ಷಣಗಳನ್ನು ಕಳೆಯುತ್ತಿದ್ದೇವೆ. ಹೃದಯದ ಆರೋಗ್ಯ ಈಗಿನ ದಿನಮಾನಗಳಲ್ಲಿ ಅತಿ ಮುಖ್ಯವಾದದ್ದು, ಇಂದು ಅರೋಗ್ಯದಿಂದ ಇದ್ದವರು ಮರುದಿನ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ನಾವು ಕೇಳಿದ್ದೇವೆ. ಅಂತಹ ಪರಿಸ್ಥಿತಿಯನ್ನು ದೂರಗೊಳಿಸಲು ನಾವು ನಮ್ಮ ಹೃದಯದ ಅರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಇಂದಿನ ಲೇಖನದಲ್ಲಿ ಹೃದಯದ ಆರೋಗ್ಯ, ಕೊಬ್ಬಿನ ಅಂಶದ ನಿಯಂತ್ರಣ ಹಾಗೂ ಅದಕ್ಕೆ ಸಂಬಂಧಪಟ್ಟ ಅನೇಕ ಮಾಹಿತಿಗಳ ಬಗ್ಗೆ ಅರಿತುಕೊಳ್ಳೋಣ.
ಹೃದಯದ ಆರೋಗ್ಯ - ಕೆಲವು ಉತ್ತಮ ಆರೋಗ್ಯಕರ ಮನೆಮದ್ದುಗಳು
- ದಾಳಿಂಬೆಯ ಬಿಳಿ ಬೀಜಗಳನ್ನು ಚೆನ್ನಾಗಿ ನೆರಳಲ್ಲಿ ಒಣಗಿಸಿಕೊಂಡು ಪುಡಿ ಮಾಡಿಕೊಂಡು, 2 ಚಮಚ ದಾಳಿಂಬೆ ಬೀಜದ ಪುಡಿಗೆ, ಒಂದು ಚಮಚ ಕೆಂಪು ಕಲ್ಲುಸಕ್ಕರೆ ಪುಡಿ, ಅರ್ಧ ಚಮಚ ಚಕ್ಕೆ ಪುಡಿ, ಅರ್ಧ ಚಮಚ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಬೇಕು. ಈ ಪುಡಿಯನ್ನು ಒಂದು ಗಾಜಿನ ಪಾತ್ರೆಯಲ್ಲಿ ಶೇಖರಿಸಿ ಇಡಬೇಕು. ಈ ಪುಡಿಯನ್ನು ಪ್ರತಿನಿತ್ಯ ರಾತ್ರಿ ಒಂದು ಚಮಚ ಸೇವಿಸಿ ಅರ್ಧ ಲೋಟ ಬೆಚ್ಚನೆಯ ನೀರನ್ನು ಕುಡಿಯಬೇಕು. ಹೀಗೆ ಒಂದು ತಿಂಗಳ ಕಾಲ ಸೇವಿಸುವುದರಿಂದ ಯಾವುದೇ ರೀತಿಯ ಹೃದಯ ಸಮಸ್ಯೆಗಳು ಹತ್ತಿರಕ್ಕೆ ಬರುವುದಿಲ್ಲ.
- ಹೃದಯವೂ ದೌರ್ಬಲ್ಯವೆನಿಸಿದರೆ ಕೊತ್ತಂಬರಿ ಬೀಜ ಹಾಗೂ ಕಲ್ಲು ಸಕ್ಕರೆಯನ್ನು, ಎರಡನ್ನು ನುಣ್ಣನೆ ಪುಡಿಮಾಡಿಕೊಳ್ಳಬೇಕು. ಈ ಪುಡಿಯನ್ನು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಹೃದಯ ದೌರ್ಬಲ್ಯ ನಿವಾರಣೆಯಗುತ್ತದೆ. ಮುಂದೆ ಅಂತಹ ಸಮಸ್ಯೆಗಳು ಎಂದೂ ಕಾಣುವುದಿಲ್ಲ.
- ಗಜ್ಜರಿಯನ್ನು ಚೆನ್ನಾಗಿ ರುಬ್ಬಿಕೊಂಡು, ಶೋಧಿಸಿಕೊಳ್ಳಬೇಕು. ಶೋಧಿಸಿದ ಗಜ್ಜರಿ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಹೃದಯವು ಬಲವಾಗುವುದು ಹಾಗೆಯೇ ಯಾವುದೇ ರೀತಿಯ ಹೃದಯ ಸಮಸ್ಯೆಗಳು ಎದುರಾಗುವುದಿಲ್ಲ.
- ಎದೆ ನೋವು ಅಥವಾ ಎದೆಯಲ್ಲಿ ಉರಿ ಇಲ್ಲವೇ ಎದೆ ಹಿಡಿದುಕೊಂಡತೆ ಆದರೆ ಪ್ರಥಮವಾಗಿ ನಿಂಬೆ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು. ಇದು ತ್ವರಿತವಾಗಿ ಉಪಶಮನವನ್ನು ನೀಡುತ್ತದೆ.
- ಉತ್ತಮ ಹೃದಯದ ಆರೋಗ್ಯಕ್ಕೆ ಅರ್ಧ ಚಮಚ ಅರಿಶಿಣ ಪುಡಿ ಮತ್ತು ಅರ್ಧ ಚಮಚ ಬೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಬೇಕು. ಇದನ್ನು ಸೇವಿಸಿದ ನಂತರ ಒಂದು ಗಂಟೆ ನೀರನ್ನು ಸೇವಿಸಬಾರದು. ಇದನ್ನು ಪ್ರತಿದಿನ ಒಮ್ಮೆ ಸೇವಿಸಿದರೆ ಹೃದಯವೂ ಅರೋಗ್ಯತವಾಗಿರುತ್ತದೆ.
- ಕ್ಯಾರೆಟ್ ಅನ್ನು ತುರಿದು, ಜೇನುತುಪ್ಪದೊಡನೆ ಸೇವಿಸುವುದು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ನಿತ್ಯ ಹಸಿ ಕ್ಯಾರೆಟ್ ತಿನ್ನುವುದು ತುಂಬಾ ಒಳ್ಳೆಯದು. ಇದು ಅರೋಗ್ಯವರ್ಧಕವಾಗಿದ್ದು, ಕಣ್ಣಿನ ಆರೋಗ್ಯಕ್ಕೆ ತುಂಬಾ ಹಿತವಾಗಿದೆ.
- ಹೃದಯದ ಉತ್ತಮ ಆರೋಗ್ಯಕ್ಕೆ ಹಾಗೂ ಹೃದಯ ದೌರ್ಬಲ್ಯ ನಿವಾರಣೆಗೆ ಉತ್ತಮ ಮದ್ದು ಎಂದರೆ ಅರಿಶಿಣದ ಕೊಂಬನ್ನು ಸುಡಬೇಕು. ಬಂದ ಒಂದು ಬೂದಿಯನ್ನು ಹಸುವಿನ ತುಪ್ಪ ಹಾಗೂ ಕಾಯಿ ಹಾಲಿನೊಂದಿಗೆ ಚೆನ್ನಾಗಿ ಬೆರೆಸಬೇಕು. ಇದನ್ನು ಪ್ರತಿನಿತ್ಯ ಬೆಳಿಗ್ಗಿನ ಹೊತ್ತಿಗೆ ಸೇವಿಸಬೇಕು. ಇದು ತುಂಬಾ ಉತ್ತಮವಾದ ಮದ್ದಾಗಿದೆ.
- ಪ್ರತಿದಿನ ಹಸಿ ಈರುಳ್ಳಿಯನ್ನು ಆಹಾರದಲ್ಲಿ ಸೇವಿಸುತ್ತಿದರೆ ಹೃದಯದ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
- ಹಣ್ಣುಗಳಾದ ದ್ರಾಕ್ಷಿ ಹಾಗೂ ಕಿತ್ತಳೆ, ಜಾಸ್ತಿ ನೀರಿನ ಅಂಶವುಳ್ಳ ಹಣ್ಣನ್ನು ತಿನ್ನಿವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ದ್ರಾಕ್ಷಿ ಹಾಗೂ ಕಿತ್ತಳೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರೋಲ್ ಅನ್ನು ನಿಯಂತ್ರಿಸುತ್ತದೆ.
- ಪರಂಗಿ ಹಣ್ಣು ಅಥವಾ ಪಪ್ಪಾಯ ಹಣ್ಣನ್ನು ಸಣ್ಣದಾಗಿ ಕತ್ತರಿಸಿ ಜೇನುತುಪ್ಪದಲ್ಲಿ ಬೆರೆಸಿ ಒಂದು 5 ಹೋಳುಗಳನ್ನು ನಿತ್ಯ ತಿನ್ನುವುದು ಹೃದಯದ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ.
- ಗೋಧಿ ಹುಲ್ಲನ್ನು ಚೆನ್ನಾಗಿ ತೊಳೆದು, ಅರೆದು ರಸವನ್ನು ಸೋಸಿಕೊಳ್ಳಬೇಕು. ಈ ರಸವನ್ನು ಸೇವಿಸುವುದು ಕೂಡ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ.
- ಗೋಧಿಯನ್ನು ನೆನೆಸಿ ನಂತರ ಮೊಳಕೆ ಬರುವಂತೆ ಮಾಡಬೇಕು. ಮೊಳಕೆ ಬಂದ ಗೋಧಿಯನ್ನು ರುಬ್ಬಿ, ಶೋಧಿಸಿಕೊಂಡು ಬಂದ ರಸಕ್ಕೆ ಕಲ್ಲುಸಕ್ಕರೆ ಬೆರೆಸಿ ಕುಡಿಯುವುದು ಕೂಡ ಹೃದಯದ ಆರೋಗ್ಯಕ್ಕೆ ಬಹು ಉತ್ತಮವಾಗಿದೆ.
- ಸೋರೆಕಾಯಿಯನ್ನು ಆಹಾರದಲ್ಲಿ ಜಾಸ್ತಿಯಾಗಿ ಬಳಸುವುದು ಉತ್ತಮವಾಗಿದೆ. ಹಾಗೆಯೇ ಸೋರೆಕಾಯಿಯನ್ನು ಸಣ್ಣ ಹೋಳಾಗಿ ಕತ್ತರಿಸಿಕೊಂಡು ರುಬ್ಬಿಕೊಳ್ಳಬೇಕು. ನಂತರ ಶೋಧಿಸಿಕೊಂಡು ರಸವನ್ನು ಸೇವಿಸುವುದು ಕೂಡ ಹೃದಯದ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
- ರಕ್ತದ ಒತ್ತಡ, ರಕ್ತ ನಾಳಗಳ ಆರೋಗ್ಯಕ್ಕೆ ಹಾಗೂ ಹೃದಯದ ಉತ್ತಮ ಕಾರ್ಯ ನಿರ್ವಹಣೆಗೆ ಪ್ರತಿದಿನ ಆಹಾರದಲ್ಲಿ ಬೆಳ್ಳುಳ್ಳಿ ಸೇವಿಸುವುದು ಅತಿ ಮುಖ್ಯ ಹಾಗೂ ಉತ್ತಮವಾಗಿದೆ. ಹಾಗೆಯೇ ಬೆಳ್ಳುಳ್ಳಿಯ ಎರಡು ಎಸಳನ್ನು ಬೆಳಿಗ್ಗೆ ಸೇವಿಸುವುದು ಅರೋಗ್ಯವರ್ಧಕವು ಆಗಿದೆ.
- ದೇಹಕ್ಕೆ ಅತಿಯಾಗಿ ಕೊಲೆಸ್ಟ್ರೋಲ್ ತಂದುಕೊಡುವ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಇದು ಹೃದಯದ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ.
ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಕೆಲವು ಮನೆಮದ್ದುಗಳು
ದೇಹದಲ್ಲಿ ಸುಲಭ ರಕ್ತ ಸಂಚಾರಕ್ಕೆ ತಡೆ ಮಾಡುವ ಅಂಶವೇ ಕೊಬ್ಬು. ಈ ಕೊಲೆಸ್ಟ್ರೋಲ್ ನಲ್ಲಿ ಎರಡು ವಿಧಗಳಿದ್ದು, ಒಂದು ಕೆಟ್ಟ ಕೊಲೆಸ್ಟ್ರೋಲ್ ( LDL ) ಹಾಗೂ ಇನ್ನೊಂದು ಒಳ್ಳೆಯ ಕೊಲೆಸ್ಟ್ರೋಲ್ (HDL). ಈ ಕೆಟ್ಟ ಕೊಲೆಸ್ಟ್ರೋಲ್ ಗಳು ರಕ್ತನಾಳಗಳಲ್ಲಿ ಸಂಗ್ರಹಗೊಂಡು ರಕ್ತದ ಚಲನೆಗೆ, ದೇಹಕ್ಕೆ ಆಮ್ಲಜನಕ ಪೊರೈಸುವ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಇದು ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಇದು ಹೃದಯಾಘಾತ ಹಾಗೂ ಪಾರ್ಶ್ವವಾಯುನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಈ ಎಲ್ಲಾ ಕಾರಣಕ್ಕೆ ನಾವು ಕೊಲೆಸ್ಟ್ರೋಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗುವ ಕೆಲವು ಮನೆಮದ್ದುಗಳು ಇಲ್ಲಿವೆ.
- ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಬಾಳೆ ದಿಂಡು ಉತ್ತಮ ಪರಿಹಾರವನ್ನು ನೀಡುತ್ತದೆ. ಪ್ರತಿದಿನ ಬಾಳೆ ದಿಂಡಿನ ರಸವನ್ನು ಸ್ವೀಕರಿಸುವುದು ಕೊಲೆಸ್ಟ್ರೋಲ್ ನಿಯಂತ್ರಿಸಲು ಅತಿ ಉತ್ತಮವಾಗಿದೆ.
- ಕೊಬ್ಬನ್ನು ಕರಗಿಸಲು ಪ್ರತಿನಿತ್ಯ ಬೆಳಿಗ್ಗೆ ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ರಸ ಹಿಂಡಿಕೊಳ್ಳಬೇಕು. ಬೆಳ್ಳುಳ್ಳಿ ರಸಕ್ಕೆ ಸಮಪ್ರಮಾಣದ ಲಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಕೊಬ್ಬು ಕರಗುತ್ತದೆ.
- ಬ್ರೋಕೊಲಿ ಸೇವನೆಯು ಕೂಡ ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರೋಲ್ ಅಂಶವನ್ನು ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಬ್ರೋಕೊಲಿ ಸಲಾಡ್ ಅನ್ನು ನಿತ್ಯ ಸೇವಿಸುವುದು ಅರೋಗ್ಯಕ್ಕೂ ಸಹ ಉತ್ತಮವಾಗಿದೆ.
- ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ನಿಂಬೆಹುಲ್ಲು ಕೂಡ ಪರಿಹಾರವನ್ನು ನೀಡುತ್ತದೆ. ನಿಂಬೆಹುಲ್ಲನ್ನು ಶುಚಿಗೊಳಿಸಿ, ನೀರಿನಲ್ಲಿ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿಸಿದ ನಂತರ ಶೋಧಿಸಿಕೊಂಡು, ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಇದು ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಅತಿ ಉತ್ತಮವಾಗಿದೆ.
- ದಾಲ್ಚಿನ್ನಿಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಈ ದಾಲ್ಚಿನ್ನಿ ಪುಡಿಯನ್ನು ಅರ್ಧ ಚಮಚ ತೆಗೆದುಕೊಂಡು, ಅರ್ಧ ಚಮಚ ಜೇನುತುಪ್ಪದೊಡನೆ ಬೆರೆಸಿ ಸೇವಿಸಬೇಕು. ಇದು ಕೂಡ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ರಾಮಬಾಣದಂತಹ ಮದ್ದಾಗಿದೆ.
- ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಕಪ್ಪು ಜೀರಿಗೆಯೂ ಕೂಡ ಅತಿ ಉತ್ತಮವಾಗಿದೆ. ಕಪ್ಪು ಜೀರಿಗೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಪ್ರತಿದಿನ ಒಂದು ಚಮಚ ಕಪ್ಪು ಜೀರಿಗೆ ಪುಡಿಯನ್ನು ತಿಂದು, ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಬೇಕು. ಇದು ಗ್ಯಾಸ್ಟ್ರಿಕ್ ಹಾಗೂ ಕೊಲೆಸ್ಟ್ರೋಲ್ ಎರಡು ಸಮಸ್ಯೆಗಳಿಗೂ ಉತ್ತಮವಾಗಿದೆ.
- ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ತರಲು ಮುಸುಕಿನ ಜೋಳದ ಬಿಳಿ ಎಳೆಯನ್ನು ನೀರಿನಲ್ಲಿ ಕುದಿಸಿ, ಕಷಾಯ ತಯಾರಿಸಿ, ಸೋಸಿಕೊಂಡು ಕುಡಿಯಬೇಕು. ಇದು ಕೂಡ ತ್ವರಿತ ಪರಿಣಾಮವನ್ನು ಬೀರುತ್ತದೆ.
- ಬಾರ್ಲಿಯ ಗಂಜಿ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉತ್ತಮ ಆಹಾರವಾಗಿದ್ದು, ರಾಗಿ ಗಂಜಿ ಕೂಡ ಉತ್ತಮವಾಗಿದೆ. ಬಾರ್ಲಿಯ ನಾರಿನ ಅಂಶವು ದೇಹದ ಅರೋಗ್ಯವನ್ನು ಕೂಡ ವೃದ್ಧಿಸುತ್ತದೆ.
- ಆಹಾರದಲ್ಲಿ ಸೋರೆಕಾಯಿಯನ್ನು ಬಳಸುವುದು ಅತಿ ಉತ್ತಮವಾಗಿದೆ. ಪ್ರತಿದಿನ ಸೋರೆಕಾಯಿ ರಸವನ್ನು ಸೇವಿಸುವುದರಿಂದ ಕೊಲೆಸ್ಟ್ರೋಲ್ ಸಂಪೂರ್ಣ ಹತೋಟಿಗೆ ಬರುತ್ತದೆ.
- ಮೆಣಸಿನಕಾಯಿ ಗಿಡದ ಎಲೆಗಳು ಕೂಡ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉತ್ತಮವಾಗಿದೆ. ಮೆಣಸಿನಕಾಯಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅರ್ಧದಷ್ಟು ನೀರು ಇಂಗುವವರೆಗೂ ಕುದಿಸಿ, ಸೋಸಿಕೊಂಡು ಕುಡಿಯಬೇಕು. ಇದು ಕೂಡ ಉತ್ತಮ ಮನೆಮದ್ದು ಆಗಿದೆ.
- ಆಹಾರದಲ್ಲಿ ಕಪ್ಪು ಉಪ್ಪಿನ ಬಳಕೆ ಮಾಡುವುದು ಉತ್ತಮವಾಗಿದೆ.
- ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ವೀಳ್ಯದೆಲೆ ಹಾಗೂ ಕರಿಮೆಣಸನ್ನು ಜಜ್ಜಿಕೊಂಡು ತಿನ್ನುವುದು ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಅತಿ ಉತ್ತಮವಾಗಿದೆ.
- ಕಡಿಮೆ ಕೊಬ್ಬು ಹೊಂದಿರುವ ಆಹಾರವನ್ನು ಸ್ವೀಕರಿಸುವುದು ಅಗತ್ಯವಾಗಿದೆ. ಆಹಾರದಲ್ಲಿನ ಸಮತೋಲನ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಅತಿ ಅವಶ್ಯಕ.
ನಮ್ಮ ದಿನನಿತ್ಯದ ಚಟುವಟಿಕೆಗಳು ಕೂಡ ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣದ ಮೇಲೆ ಪರಿಣಾಮವನ್ನು ಬೀರುತ್ತದೆ. ನಿತ್ಯ ಬೆಳಿಗ್ಗೆ ಯೋಗಾಸನ, ನಡೆಯುವುದು, ಓಡುವುದು, ಇನ್ನೂ ಇತ್ಯಾದಿ ಚಟುವಟಿಕೆಗಳನ್ನು ಅಭ್ಯಾಸದಲ್ಲಿ ಇಟ್ಟುಕೊಳ್ಳುವುದು ಕೂಡ ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿದೆ. ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡು ಅರೋಗ್ಯವಂತರಾಗಿರಿ ಎಂಬುದು ಈ ಲೇಖನದ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.