Spread the love

ಕಣ್ಣಿನ ಆರೋಗ್ಯ ಮತ್ತು ದೃಷ್ಟಿಗೆ ಅತ್ಯುತ್ತಮ ಪರಿಹಾರಗಳು. AI Image

ಇಡೀ ಜಗತ್ತನ್ನು ನಮ್ಮ ಮೆದುಳಿಗೆ ಪರಿಚಯಿಸುವ ನಮ್ಮ ಕಣ್ಣು ಅತಿ ಅಮೂಲ್ಯವಾಗಿದೆ. ನಿದ್ದೆಯಿಂದ ಎದ್ದ ಮೇಲೆ ಮಲಗುವ ತನಕ ಮಾಡುವ ಎಲ್ಲಾ ಕೆಲಸಗಳಲ್ಲೂ ನಮ್ಮ ಜೊತೆಗೂಡಿ ಕೆಲಸ ಮಾಡುವ ನಮ್ಮ ಕಣ್ಣುಗಳು ತುಂಬಾ ಶ್ರೇಷ್ಠವಾದದ್ದು. ಕಣ್ಣು ಇಲ್ಲದವರಿಗೆ ತಿಳಿದಿದೆ ಕಣ್ಣಿನ ಬೆಲೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ನಮ್ಮ ಕಣ್ಣಿನ ಸಂರಕ್ಷಣೆ ನಮ್ಮ ಕೈಯಲ್ಲೇ ಇದೆ. 

ದಿನನಿತ್ಯ ನಾವು ಮಾಡುವ ಅನೇಕ ಕೆಲಸಗಳು ಕಣ್ಣಿಗೆ ಮಾರಕವಾಗುತ್ತದೆ. ಉದಾಹರಣೆಗೆ ಬೆಳಿಗ್ಗಿನಿಂದ ಸಂಜೆಯವರೆಗೂ ಕಂಪ್ಯೂಟರ್ ಅಥವಾ ಮೊಬೈಲ್ಗಳನ್ನು ನೋಡುವುದು, ಅತಿಯಾದ ಧೂಳು, ಹೊಗೆಯ ವಾತಾವರಣದಲ್ಲಿರುವುದು, ಅತಿಯಾದ ಬಿಸಿಲಿನ ತಪಾಮಾನದಿಂದ, ಅನೇಕ ಕಳಪೆ ಗುಣಮಟ್ಟದ ಸೌಂದರ್ಯವರ್ಧಕಗಳ ಉಪಯೋಗದಿಂದ, ಇನ್ನೂ ಅನೇಕ ಕಾರಣಗಳಿಂದ ನಾವು ಕಣ್ಣಿನ ಸಮಸ್ಯೆಗಳನ್ನು ಅನುಭವಿಸಬೇಕಾಗಬಹುದು. ಇವೆಲ್ಲದರಿಂದ ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮನೆಮದ್ದಗಳ ಬಗ್ಗೆ ಈ ಲೇಖನದಲ್ಲಿ ನಾವು ವಿಶ್ಲೇಷಸೋಣ.

ಕಣ್ಣಿನ ಸಮಸ್ಯೆಗಳಿಗೆ ಉಪಯುಕ್ತವಾಗಿರುವ ಕೆಲವು ಉತ್ತಮ ಪರಿಹಾರಗಳು

1. ಕಣ್ಣಿನ ದೀರ್ಘ ಆರೋಗ್ಯ ಹಾಗೂ ಉತ್ತಮ ಆಯಸ್ಸಿಗೆ ಕೆಲವು ಉಪಯುಕ್ತ ಮನೆಮದ್ದುಗಳು

  • ಪಪ್ಪಾಯ ಹಣ್ಣಿನ ನಿರಂತರ ನಿಯಮಿತ ಸೇವನೆಯೂ ಕಣ್ಣಿನ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಇದು ಕಣ್ಣಿನ ದೃಷ್ಠಿ ಹಾಗೂ ನರಗಳಿಗೆ ಉತ್ತಮ ಚೈತನ್ಯವನ್ನು ನೀಡುತ್ತದೆ.
  • ಸೇಬು ಹಣ್ಣಿನ ಗೋಲನೆಯ ತುಂಡನ್ನು ಕಣ್ಣಿನ ಮೇಲೆ ಒಂದು ತಾಸು ಇಟ್ಟುಕೊಳ್ಳುವುದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಕಣ್ಣಿನ ಕಪ್ಪು ನೆರಳನ್ನು ಕೂಡ ಕಡಿಮೆ ಮಾಡಿಸುತ್ತದೆ.
  • ಉಪ್ಪಿನ ನೀರಿನಲ್ಲಿ ಮುಖ ಮುಳುಗಿಸಿ ರೆಪ್ಪೆ ಮಿಟುಕಿಸುತ್ತಿದ್ದರೆ, ಕಣ್ಣುಗಳ ಆರೋಗ್ಯ ಉತ್ತಮವಾಗಿರುತ್ತದೆ.
  • ಕರಿಬೇವಿನ ಸೊಪ್ಪನ್ನು ನುಣ್ಣಗೆ ಅರೆದು, ಹಿಂಡಿ ರಸವನ್ನು ತೆಗೆಯಬೇಕು. ಈ ಕರಿಬೇವಿನ ರಸವನ್ನು ಎರಡು ಹನಿ ಕಣ್ಣಿಗೆ ಹಾಕಿಕೊಳ್ಳುವುದರಿಂದ ಕಣ್ಣಿನ ದೃಷ್ಠಿ ಉತ್ತಮವಾಗಿರುತ್ತದೆ.
  • ಹಸಿ ಕ್ಯಾರೆಟ್ ಅಥವಾ ಹಸಿ ಕ್ಯಾರೆಟ್ ರಸವನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ಕಣ್ಣಿನ ಆರೋಗ್ಯ ಬಲು ಉತ್ತಮವಾಗಿರುತ್ತದೆ.
  • ನಂಜಬಟ್ಟಲ ಹೂವನ್ನು ಚೆನ್ನಾಗಿ ಅರೆದುಕೊಂಡು ರಸ ಹಿಂಡಿಕೊಳ್ಳಬೇಕು. ಈ ರಸವನ್ನು ಕಣ್ಣಿಗೆ ಎರಡು ಹನಿ ಹಾಕಿಕೊಳ್ಳುತ್ತಾ ಬಂದರೆ ಕಣ್ಣಿನ ಆರೋಗ್ಯ ದೀರ್ಘ ಕಾಲದ ವರೆಗೂ ಉತ್ತಮವಾಗಿರುತ್ತದೆ. ಅದೇ ರಸದಿಂದ ಕಾಡಿಗೆ ಮಾಡಿ ಕಣ್ಣಿಗೆ ಹಚ್ಚಿಕೊಳ್ಳುವುದು ಸಹ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.
  • ಸೌತೆಕಾಯಿಯನ್ನು ಗೋಲಾಕಾರವಾಗಿ ಕತ್ತರಿಸಿ ಕಣ್ಣ ಮೇಲೆ ಇಟ್ಟುಕೊಳ್ಳುವುದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.

2. ಕಣ್ಣಿನ ಉರಿ, ನವೆ ಹಾಗೂ ಕಣ್ಣು ಕೆಂಪಾಗುವಿಕೆಗೆ ಉಪಯುಕ್ತವಾದ ಮನೆ ಮದ್ದುಗಳು

  • ಗುಲಾಬಿ ಹೂವಿನ ದಳಗಳನ್ನು ಅರೆದು ರಸ ಹಿಂಡಿಕೊಂಡು, ಆ ರಸದಲ್ಲಿ ಹತ್ತಿಯನ್ನು ನೆನೆಸಿಕೊಂಡು ಕಣ್ಣಿನ ಮೇಲೆ ಇಟ್ಟುಕೊಂಡು ಸ್ವಲ್ಪ ಹೊತ್ತು ಮಲಗಬೇಕು. ಇದರಿಂದ ಕಣ್ಣು ಕೆಂಪಾಗುವಿಕೆ ಹಾಗೂ ಕಣ್ಣಿನ ನವೆ ಜೊತೆಗೂ ಕಣ್ಣಿನ ಕಪ್ಪು ವರ್ತೂಲಗಳು ಸಹ ಕಡಿಮೆಯಾಗುತ್ತದೆ.
  • ಗುಲಾಬಿ ನೀರಿನಲ್ಲಿ ಕಣ್ಣನ್ನು ತೊಳೆದುಕೊಂಡರೆ ಕಣ್ಣು ಕೆಂಪಾಗಿದ್ದು ಕಡಿಮೆಯಾಗಿ, ಕಣ್ಣು ತಂಪಿನ ಅನುಭವವನ್ನು ಹೊಂದುತ್ತದೆ.
  • ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ, ನಂತರ ಶೋಧಿಸಿಕೊಂಡು ಆ ನೀರಿನಲ್ಲಿ ಹತ್ತಿಯನ್ನು ನೆನೆಸಿ ಕಣ್ಣ ಮೇಲೆ ಇಡುತ್ತಾ ಇರಬೇಕು. ಹೀಗೆ ಇಡುವುದರಿಂದ ಕಣ್ಣಿನ ಉರಿ, ನವೆ ಹಾಗೂ ನೋವನ್ನು ಕಡಿಮೆಯಾಗಿಸುತ್ತದೆ.
  • ಸೀಬೆಹಣ್ಣಿನ ಹೂವು ಹಾಗೂ ದಾಳಿಂಬೆ ಹಣ್ಣಿನ ಚಿಗುರಲೆ ಇವೆರಡನ್ನು ಚೆನ್ನಾಗಿ ಅರೆದು ರಸ ಹಿಂಡಬೇಕು. ಆ ರಸವನ್ನು ಕಣ್ಣಿಗೆ ಎರಡು ಹನಿ ಹಾಕುವುದರಿಂದ ಕಣ್ಣಿನ ಉರಿ ಹಾಗೂ ಕಣ್ಣು ಕೆಂಪಾಗುವಿಕೆ ಕಡಿಮೆಯಾಗುತ್ತದೆ.
  • ಹೊನೆಗೊನೆ ಸೊಪ್ಪನ್ನು ಚೆನ್ನಾಗಿ ಅರೆದು, ಅದರ ರಸವನ್ನು ಹಿಂಡಿಕೊಳ್ಳಬೇಕು. ಈ ರಸವನ್ನು ಒಂದು ಲೋಟ ತೆಗೆದುಕೊಳ್ಳಬೇಕು, ಹಾಗೆಯೇ ಒಂದು ಲೋಟ ಎಳ್ಳೆಣ್ಣೆಯನ್ನು ತೆಗೆದುಕೊಳ್ಳಬೇಕು. ಎರಡನ್ನು ಮಿಶ್ರಣ ಮಾಡಿ ನೀರು ಇಂಗಿ, ಎಣ್ಣೆ ಉಳಿಯುವವರೆಗೂ ಕುದಿಸಬೇಕು. ಈ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜು ಮಾಡುವುದರಿಂದ ಕಣ್ಣು ಕೆಂಪಾಗುವಿಕೆ, ಕಣ್ಣಿನ ಉರಿ, ನವೆ ಎಲ್ಲವೂ ಕೂಡ ಕಡಿಮೆಯಾಗುತ್ತದೆ.
  • ಗೋವಿನ ಮೂತ್ರದಲ್ಲಿ ಲಕ್ಕಿ ಸೊಪ್ಪನ್ನು ಅರೆದುಕೊಳ್ಳಬೇಕು. ಆ ರಸವನ್ನು ಕಣ್ಣಿಗೆ ಎರಡು ಹನಿ ಹಾಕುವುದರಿಂದ ಕಣ್ಣಿನ ನವೆ ಕಡಿಮೆಯಾಗುತ್ತದೆ.
  • ಪ್ರತಿದಿನ ಆಹಾರದಲ್ಲಿ ಒಂದು ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಕಣ್ಣಿನ ಉರಿ, ನವೆ ಹಾಗೂ ಕಣ್ಣು ಚುಚ್ಚುವಿಕೆ ಕಡಿಮೆಯಾಗುತ್ತದೆ.

3. ಕಣ್ಣಿಗೆ ಪೊರೆ ಬರದಂತೆ ತಡೆಯುವ ಉಪಯುಕ್ತ ಮನೆಮದ್ದುಗಳು.

  • ಬಿಳಿ ಈರುಳ್ಳಿಯನ್ನು ಜಜ್ಜಿ ರಸ ಹಿಂಡಿಕೊಳ್ಳಬೇಕು. ಈ ರಸವನ್ನು ಜೇನುತುಪ್ಪಡೊಡನೆ ಬೆರೆಸಿ, ಕಣ್ಣಿಗೆ ಎರಡು ಹನಿ ಹಾಕಬೇಕು. ಇದರಿಂದ ಕಣ್ಣಿನ ಪೊರೆ ಸಮಸ್ಯೆಗಳು ಬರುವುದಿಲ್ಲ.
  • ಬಿಳಿ ಈರುಳ್ಳಿಯ ರಸವನ್ನು ಉಪಯೋಗಿಸಿ ಕಾಡಿಗೆಯನ್ನು ತಯಾರಿಸಬೇಕು. ಹತ್ತಿಯನ್ನು ಬಿಳಿ ಈರುಳ್ಳಿಯ ರಸದಲ್ಲಿ ಅದ್ದಿಕೊಂಡು ಕಾಡಿಗೆಯನ್ನು ತಯಾರಿಸಬೇಕು. ಈ ಕಾಡಿಗೆಯನ್ನು ನಿತ್ಯ ಕಣ್ಣಿಗೆ ಹಚ್ಚುವುದರಿಂದ ಕಣ್ಣಿಗೆ ಪೊರೆ ಬರುವುದಿಲ್ಲ.
  • ಬದನೆಕಾಯಿ ಗಿಡದ ಬೇರನ್ನು ತೇಯ್ದು, ಕಣ್ಣಿಗೆ ಕಾಡಿಗೆಯಂತೆ ಹಚ್ಚಿಕೊಳ್ಳುವುದರಿಂದ ಕೂಡ ಕಣ್ಣಿನ ಪೊರೆ ಸಮಸ್ಯೆಗಳು ಕಾಣಿಸುವುದಿಲ್ಲ.

4. ಕಣ್ಣಿಗೆ ಕಸ ಬಿದ್ದಾಗ, ಕಸ ಅಥವಾ ಕ್ರಿಮಿಯನ್ನು ಹೊರ ಹಾಕುವಿಕೆಗೆ ಉಪಯುಕ್ತವಾದ ಮನೆಮದ್ದುಗಳು

  • ಕಣ್ಣನ್ನು ಮೊದಲು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಕೂಡ ಕ್ರಿಮಿ, ಕಸಗಳು ಹೊರ ಬರುತ್ತವೆ.
  • ಕಣ್ಣಿಗೆ ಕಸ ಅಥವಾ ಕ್ರಿಮಿಗಳು ಬಿದ್ದಾಗ ಈರುಳ್ಳಿಯನ್ನು ಕತ್ತರಿಸಿ, ಅದರ ವಾಸನೆಯನ್ನು ತೆಗೆದುಕೊಳ್ಳಬೇಕು. ಆಗ ಕಣ್ಣೀರಿನ ಜೊತೆ ಕಸವು ಹೊರಬರುತ್ತದೆ.
  • ಒಂದು ಚಮಚ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ ಕಣ್ಣಿಗೆ ಎರಡು ಹನಿ ಬಿಡುವುದರಿಂದ ಕೂಡ ಕಣ್ಣಿನಲ್ಲಿನ ಕ್ರಿಮಿ, ಕಸಗಳು ಹೊರಬರುತ್ತವೆ.

ಇನ್ನೂ ಕೆಲವೊಮ್ಮೆ ಕಾಣಿಸಿಕೊಳ್ಳುವ ಸಮಸ್ಯೆಗಳಿಗೂ ಪರಿಹಾರಗಳಿವೆ. ಉದಾಹರಣೆ ಕಣ್ಣಿನಿಂದ ಕಾರಣವಿಲ್ಲದೆ ನೀರು ಸುರಿಯುತ್ತಿದ್ದರೆ, ಒಣಶುಂಠಿಯನ್ನು ಸುಡಬೇಕು. ಬಂದ ಬೂದಿಯನ್ನು ನೀರಿನಲ್ಲಿ ಕಲಸಿ ಕಣ್ಣಿನ ಮೇಲೆ ಮೆತ್ತಬೇಕು. ಇದು ಕಣ್ಣಿನಲ್ಲಿ  ನೀರು ಸುರಿಯುದನ್ನು ಕಡಿಮೆ ಮಾಡಿಸುತ್ತದೆ.

ನಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಅತಿ ಹೆಚ್ಚು ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಬಳಸುವುದು ಕಣ್ಣಿನ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಜಾಸ್ತಿ ನೀರನ್ನು ಕುಡಿಯಬೇಕು. ಯಾವುದೇ ರೀತಿಯ ಧೂಮಪಾನ ಹಾಗೂ ಮದ್ಯಪಾನದ ಅಭ್ಯಾಸಗಳನ್ನು ರೂಢಿಸಿಕೊಳ್ಳಬಾರದು. ಇದೆಲ್ಲ ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್, ಮೊಬೈಲ್ ಗಳ ಬಳಕೆಯ ನಡುವೆ ಕಣ್ಣಿಗೆ ಸ್ವಲ್ಪ ವ್ಯಾಯಾಮವನ್ನು ನೀಡುವುದು ಅಗತ್ಯವಾಗಿದೆ. ಕಣ್ಣನ್ನು ಪದೇ ಪದೇ ಮೀಟುಕಿಸುವುದು, ಕಣ್ಣನ್ನು ತಣ್ಣೀರಿನಿಂದ ತೊಳೆಯುವುದು, ಕಣ್ಣು ಮುಚ್ಚಿ ಧ್ಯಾನಿಸುವುದು, ಇವೆಲ್ಲವೂ ಕಣ್ಣಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡುತ್ತದೆ. ಒಳ್ಳೆಯ ನಿದ್ದೆ ಕೂಡ ಕಣ್ಣಿನ ಆರೋಗ್ಯಕ್ಕೆ ಬಲು ಅಗತ್ಯವಾಗಿದೆ. ಈಗೀಗ ಚಿಕ್ಕ ಮಕ್ಕಳಿಗೂ, ಮಧ್ಯ ವಯಸ್ಕರಿಗೂ ಕಣ್ಣಿಗೆ ಕನ್ನಡಕ ಹಾಕುವ ಪರಿಸ್ಥಿತಿ ಎದುರಾಗಿದೆ. ಆ ನಿಟ್ಟಿನಲ್ಲಿ ನಾವು ಉತ್ತಮ ಆಹಾರ ಹಾಗೂ ವ್ಯಾಯಾಮದಿಂದ ನಮ್ಮ ಕಣ್ಣಿನ ಅರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂಬುದು ಈ ಲೇಖನದ ಆಶಯವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Share
Published by
GruhaSnehi

Recent Posts

ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು

ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು. AI Image ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ…

9 hours ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

1 day ago

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು. AI Image ನಮ್ಮ ದೇಹದ ಒಂದು ಮುಖ್ಯ…

2 days ago

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು. AI Image ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ…

3 days ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

4 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

5 days ago

This website uses cookies.