ನೈಸರ್ಗಿಕ ವಿಧಾನಗಳಿಂದ ಕಣ್ಣಿನ ಡಾರ್ಕ್ ಸರ್ಕಲ್ ಕಡಿಮೆ ಮಾಡುವುದಕ್ಕೆ ಪರಿಹಾರಗಳು! (Home remedies for Dark Circle)

Spread the love

ನೈಸರ್ಗಿಕ ವಿಧಾನಗಳಿಂದ ಕಣ್ಣಿನ ಡಾರ್ಕ್ ಸರ್ಕಲ್ ಕಡಿಮೆ ಮಾಡುವುದಕ್ಕೆ ಪರಿಹಾರಗಳು! AI Image

ಕಣ್ಣಿನ ರಕ್ಷಣೆಗಾಗಿ ಏನೆಲ್ಲಾ ಮಾಡಿದರೂ ಕಣ್ಣ ಕೆಳಗಿನ ಕಪ್ಪು ಕಲೆ ಅಷ್ಟು ಸುಲಭವಾಗಿ ಮಾಯವಾಗಲಾರದು. ಈ ಕಪ್ಪು ಕಲೆಗಳಿಗೆ ಅನೇಕ ಕಾರಣಗಳಿದ್ದು, ಮೊದಲನೆಯದಾಗಿ ಅನುವಂಶಿಕವಾಗಿ ಬಂದಿರಬಹುದು ಇಲ್ಲವೇ ನಿದ್ರಾಹೀನತೆ ಮುಖ್ಯ ಕಾರಣವಾಗಿರಬಹುದು. ಇಲ್ಲವೇ ಮನುಷ್ಯನು ದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದರೆ, ರಕ್ತದಲ್ಲಿನ ಕಬ್ಬಿಣದ ಅಂಶ ಕಡಿಮೆಯಾದರೂ ಕೂಡ ಕಣ್ಣು ನೆರಳು ಕಾಣಿಸಿಕೊಳ್ಳುತ್ತದೆ. ವಿಟಮಿನ್ ಗಳ ಕೊರತೆಯೂ ಕೂಡ ಕಾರಣವಾಗಿರಬಹುದು. ಒಟ್ಟಿನಲ್ಲಿ ಈ ಸಮಸ್ಯೆಯ ಕೆಲ ಉಪಾಯಗಳನ್ನು ಈಗ ತಿಳಿಯೋಣ.

  • ಆದಷ್ಟು ಜಾಸ್ತಿ ನೀರನ್ನು ಅಥವಾ ನೀರಿನ ಅಂಶ ಜಾಸ್ತಿ ಇರುವ ಆಹಾರ ಪದಾರ್ಥವನ್ನು ಸ್ವೀಕರಿಸುವುದರಿಂದ ಕಣ್ಣಿನ ಕರಿ ನೆರಳನ್ನು ಕಡಿಮೆ ಮಾಡಿಕೊಳ್ಳಬಹುದು.
  • ಕಣ್ಣಿನ ಮೇಲೆ ನಿತ್ಯ ಸೌತೆಕಾಯಿಯನ್ನೂ ಇಟ್ಟುಕೊಳ್ಳುವುದರಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು ಹಾಗೆಯೇ ಕಣ್ಣಿನ ಕಡು ನೆರಳನ್ನು ಅದು ಕಡಿಮೆ ಮಾಡಿಸುತ್ತದೆ. ಕಣ್ಣಿನ ಉರಿಯನ್ನು ಕೂಡ ನಿಯಂತ್ರಣಕ್ಕೆ ತರುತ್ತದೆ.
  • ಅರಿಶಿಣ ಪುಡಿಯನ್ನು ತೆಂಗಿನ ಎಣ್ಣೆ ಅಥವಾ ಅಲೋವೆರಾ ಜೆಲ್ ನಲ್ಲಿ ಬೆರೆಸಿ ಕಣ್ಣ ಸುತ್ತ ಹಚ್ಚುವುದರಿಂದ ಕಣ್ಣಿನ ಡಾರ್ಕ್ ಸರ್ಕಲ್ ಅನ್ನು ನಿಯಂತ್ರಿಸಬಹುದು.
  • ಬಟಾಟೆ ಮತ್ತು ಸೌತೆಕಾಯಿಯನ್ನು ಸಣ್ಣ ಹೋಳಾಗಿ ಕತ್ತರಿಸಿ ರುಬ್ಬಿಕೊಂಡು ಆ ಮಿಶ್ರಣವನ್ನು ಶೋಧಿಸಿ ಬಂದ ರಸಕ್ಕೆ ಕೆಂಪು ಅಕ್ಕಿಯ ಹಿಟ್ಟನ್ನು ಒಂದು ಅರ್ಧ ಚಮಚ ಸೇರಿಸಿ ಹಾಗೆಯೇ ಸ್ವಲ್ಪ ಜೇನುತುಪ್ಪ ಬೆರೆಸಿ, ಮಿಶ್ರಣವನ್ನು ಚೆನ್ನಾಗಿ ಕಲಸಿ ಕಣ್ಣಿನ ಸುತ್ತ ಹಚ್ಚಿ ಒಂದು 20 ನಿಮಿಷಗಳು ಚೆನ್ನಾಗಿ ಒಣಗಲು ಬಿಡಬೇಕು. ಈ ಕ್ರಮವನ್ನು ನಿತ್ಯ ಮಾಡಿದರೆ ಕಣ್ಣಿನ ಕಪ್ಪು ವರ್ತುಲಗಳು ಬೇಗ ಕಡಿಮೆ ಆಗುತ್ತದೆ. ಬಣ್ಣವು ಆದಷ್ಟು ಬೇಗ ತಿಳಿಯಾಗುತ್ತದೆ.
  • ಅಲೋವೆರಾ ಅಥವಾ ಲೋಳೆಸರದ ಲೋಳೆಯೊಂದಿಗೆ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಚೆನ್ನಾಗಿ ಬೆರೆಸಿ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತಲೂ ಚೆನ್ನಾಗಿ ಹಚ್ಚಿಕೊಂಡು ಮಲಗಬೇಕು. ಸ್ವಲ್ಪ ದಪ್ಪವಾಗಿ ಹಚ್ಚಿದರೆ ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಈ ಮಿಶ್ರಣವು ತ್ವರಿತಗತಿಯಲ್ಲಿ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ಪರಿಹರಿಸುವುದಲ್ಲದೆ, ಕಣ್ಣಿನ ಉರಿ ಹಾಗು ಉಷ್ಣ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
  • ಹರಳೆಣ್ಣೆಯನ್ನು ಉಪಯೋಗಿಸುವುದರಿಂದ ಕಣ್ಣಿಗೆ ಚೆನ್ನಾಗಿ ನಿದ್ರೆ ಕೂಡ ಬಂದು ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ.
  • ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಕಾಫಿ ಪುಡಿಯನ್ನು ಚೆನ್ನಾಗಿ ಕಲಸಿ ಕಣ್ಣಿನ ಕೆಳಗೆ ಹಚ್ಚಿ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿದರೆ ಕಣ್ಣಿನ ಕಪ್ಪು ವರ್ತುಲಗಳು ಕಡಿಮೆ ಆಗುತ್ತದೆ.
  • ಒಂದು ಚಮಚ ಆಲೂಗಡ್ಡೆಯ ರಸ ಹಾಗು ಒಂದು ಚಮಚ ಕಾಫಿ ಪುಡಿಯನ್ನು ಕಲಸಿ ಕಣ್ಣಿನ ಕೆಳಗೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಒಣಗಿಸಿ ನಂತರ ತೊಳೆಯಬೇಕು. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾಡುವುದರಿಂದ ಕಪ್ಪು ನೆರಳು ಸಮಸ್ಯೆ ಕಡಿಮೆಯಾಗುತ್ತದೆ.
  • ಉತ್ತಮ ನಿದ್ರೆ ಹಾಗು ಆರೋಗ್ಯಯುತ ಆಹಾರ ಸೇವನೆಯಿಂದ ಕಣ್ಣಿನ ಕಪ್ಪು ವರ್ತುಲಗಳು ತಾನಾಗಿಯೇ ಕಡಿಮೆಯಾಗುತ್ತದೆ.

ಕೆಲವರು ಅನೇಕ ಕೃತಕ ಹಾದಿಯಲಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಸಮಸ್ಯೆಗೆ ಪರಿಹಾರ ನೈಸರ್ಗಿಕವಾಗಿ ಕೈಲ್ಲೇ ಇರುವಾಗ ಕೃತಕ ಮಾರ್ಗದ ಅವಶ್ಯಕತೆ ಕಡಿಮೆ ಅಲ್ಲವೇ…?

ತಾಳ್ಮೆಯಿಂದ ಪರಿಹಾರದ ಹಾದಿಯನ್ನು ಆಲೋಚಿಸಿ ನಮ್ಮ ಕಾರ್ಯದಲ್ಲಿ ಕೈಗೊಂಡರೆ ಖಂಡಿತ ಪ್ರತಿಫಲ ದೊರೆಯುತ್ತದೆ. ಮೇಲಿನ ಪರಿಹಾರಗಳನ್ನು ಒಮ್ಮೆ ಮಾಡಿದರೆ ಪ್ರತಿಫಲ ಸಿಗುವುದಿಲ್ಲ, ನಿತ್ಯ ಮಾಡಿ ಫಲಿತಾಂಶವನ್ನು ಪಡೆಯಬೇಕು. ಜಾಸ್ತಿ ನೀರನ್ನು ಕುಡಿಯುವುದು ಅತಿ ಮುಖ್ಯವಾಗುತ್ತದೆ. ಹಾಗೆಯೇ ಸೂರ್ಯನ ಕಿರಣಗಳಿಗಲ್ಲಿ ಜಾಸ್ತಿ ಇರುವುದರಿಂದ ಕೂಡ ಕಣ್ಣಿನ ಕಪ್ಪು ನೆರಳು ಕಾಣಿಸಬಹುದು. ಹೀಗಾಗಿ ಮೇಲೆ ಹೇಳಿದ ಎಲ್ಲಾ ಪರಿಹಾರಗಳನ್ನು ಪ್ರಯತ್ನಿಸಿ, ಆದಷ್ಟು ಬೇಗ ಸಮಸ್ಯೆಗಳಿಂದ ಹೊರಬರಬೇಕು ಎಂಬುದೊಂದು ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.