ನಿತ್ಯ ಬಾದಾಮಿ ಸೇವನೆಯ ಲಾಭಗಳು – ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು! (Almond Benefits)

Spread the love

ನಿತ್ಯ ಬಾದಾಮಿ ಸೇವನೆಯ ಲಾಭಗಳು – ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು!. AI Image

ಬಾದಾಮಿಯು ದೇಶ ವಿದೇಶಗಲ್ಲಿ ಹೆಚ್ಚಾಗಿ ಬೆಳೆಯುವ ಒಂದು ಬೆಳೆಯಾಗಿದೆ. ಮರದಲ್ಲಿ ಸೊಂಪಾಗಿ ಬೆಳೆಯುತ್ತದೆ. ಬಾದಾಮಿಯು ಮೂಲತಃ ಪಶ್ಚಿಮ ಏಷ್ಯಾದ್ದು, ಭಾರತದಲ್ಲಿ ಪಂಜಾಬ್, ಕಾಶ್ಮೀರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇಂದಿನ ಪ್ರಸ್ತುತ ದಿನಮಾನದಲ್ಲಿ ಅಮೇರಿಕಾ ದೇಶವು ತುಂಬಾ ಜಾಸ್ತಿ ಪ್ರಮಾಣದಲ್ಲಿ ಬಾದಾಮಿಯನ್ನು ಬೆಳೆಯುತ್ತಿದ್ದಾರೆ. ಬಾದಾಮಿ ಮರದ ಬೀಜ, ಎಣ್ಣೆ, ಕವಚ ಎಲ್ಲವೂ ಉಪಯುಕ್ತವಾಗಿದ್ದು, ಆರೋಗ್ಯಕರವಾಗಿದೆ. ಬಾದಾಮಿಯಲ್ಲಿ ಎರಡು ಬಗೆಗಳಿದ್ದು ಒಂದು ಸಿಹಿ ಬಾದಾಮಿ, ಇನ್ನೊಂದು ಕಹಿ ಬಾದಾಮಿ.

ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು – ಪ್ರುನಸ್ ಡುಲ್ಸಿಸ್  (Prunus dulcis)
ಆಂಗ್ಲ ಹೆಸರು – ಆಲ್ಮಂಡ್ ( Almond)

ಬಾದಾಮಿಯಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಇದ್ದು, ಪ್ರೊಟೀನ್, ಕಬ್ಬಿಣ, ಕೊಪ್ಪರ್, ಕ್ಯಾಲ್ಸಿಯಂ, ಫಾಸ್ಪರಸ್, ನಾರು ಹಾಗೂ ಬಯೋಟಿನ್ ಅಂಶಗಳನ್ನು ಒಳಗೊಂಡಿದೆ.

ಬಾದಾಮಿಯಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿಯಿದ್ದು, ನಿತ್ಯ ಸೇವೆನೆಯು ಅರೋಗ್ಯವರ್ಧಕವಾಗಿದೆ.

ಬಾದಾಮಿಯ ಉಪಯೋಗಗಳು

1. ಸಕ್ಕರೆ ಖಾಯಿಲೆಯ ಸಮಸ್ಯೆಗೆ ಬಾದಾಮಿ

ಮಧುಮೇಹಕ್ಕೆ ಬಾದಾಮಿಯು ಉಪಯುಕ್ತವಾಗಿದ್ದು, ದೇಹವನ್ನು ದೃಢವಾಗಿಸುವಲ್ಲಿ ಕೂಡ ಸಹಾಯಕವಾಗಿದೆ. ಪ್ರತಿದಿನ ರಾತ್ರಿ ಎರಡು ಬಾದಾಮಿ ಬೀಜವನ್ನು ಲಿಂಬು ರಸದಲ್ಲಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಲಿಂಬು ಖಾಲಿ ಬಾದಾಮಿ ಬೀಜವನ್ನು ಮಾತ್ರ ಜಗಿದು ತಿನ್ನಬೇಕು. ಇದನ್ನು ಸತತವಾಗಿ ಒಂದು ಒಂದು ತಿಂಗಳ ಕಾಲ ಮಾಡಿದರೆ ರಕ್ತದಲ್ಲಿನ ಸಕ್ಕರೆ ಅಂಶ ಹತೋಟಿಗೆ ಬರುತ್ತದೆ.

2. ಮಕ್ಕಳಿಗೆ ಪದೇ ಪದೇ ಬರುವ ಜ್ವರಕ್ಕೆ ಬಾದಾಮಿ

ಮಕ್ಕಳಿಗೆ ಬರುವ ಜ್ವರ, ಕೆಮ್ಮು, ಶೀತದ ವಿರುದ್ಧ ಹೋರಾಡಲು ಅಂದರೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಬಾದಾಮಿ ಅತಿ ಉಪಯುಕ್ತವಾಗಿದೆ. ಮಕ್ಕಳಿಗೆ ಬಾದಾಮಿಯನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಉಪ್ಪು ಖಾರ ಉದುರಿಸಿ ತಿನ್ನಲು ಕೊಟ್ಟರೆ ಆರೋಗ್ಯಕ್ಕೆ ಬಹಳ ಉತ್ತಮ. ಜೊತೆಗೆ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ.

3. ನಿಶ್ಯಕ್ತಿಗೆ ಉತ್ತಮ ಟಾನಿಕ್ ಬಾದಾಮಿ

ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ಇಲ್ಲವೇ ಆರೋಗ್ಯ ಸಮಸ್ಯೆಯಿಂದ ಹೊರ ಬಂದವರಿಗೆ ದೇಹವು ನಿಶ್ಯಕ್ತತೆಯಿಂದ ಕೂಡಿರುತ್ತದೆ. ಆ ಸಮಯದಲ್ಲಿ ಬಾದಾಮಿ ಬೀಜವನ್ನು ರುಬ್ಬಿಕೊಂಡು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಕೊಡುವುದರಿಂದ ನಿಶ್ಯಕ್ತಿ, ನಿತ್ರಾಣ ಎಲ್ಲವೂ ಕ್ರಮೇಣ ಕಡಿಮೆಯಾಗುತ್ತದೆ.

4. ನರಗಳ ಉತ್ತಮ ಆರೋಗ್ಯಕ್ಕೆ ಬಾದಾಮಿ

ನರಗಳ ದೌರ್ಬಲ್ಯ ಸಮಸ್ಯೆ ಇರುವವರು ನಿತ್ಯ ಬಾದಾಮಿಯನ್ನು ನೆನೆಸಿ ತಿನ್ನುವುದು ಅತಿ ಉತ್ತಮವಾಗಿದೆ. ನಿತ್ಯ ಯಾವುದೇ ರೂಪದಲ್ಲಿ ಆದರೂ ಸರಿಯೇ ಸೇವಿಸಬೇಕು. ಆಗ ನರಗಳ ಆರೋಗ್ಯ ಉತ್ತಮವಾಗಿರುತ್ತದೆ.

5. ಪುರುಷರ ವೀರ್ಯ ವೃದ್ಧಿಗೆ ಬಾದಾಮಿ

ಬಾದಾಮಿಯನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಂಡು ಹಾಲು ಮತ್ತು ಸಕ್ಕರೆ ಸೇರಿಸಿ ನಿತ್ಯವೂ ಕುಡಿಯಬೇಕು. ಇದರಿಂದ ವೀರ್ಯವೃದ್ಧಿ ಆಗುವುದು ಜೊತೆಗೆ ಬಲವು ಬರುವುದು.

6. ಆರೋಗ್ಯಯುತ ಶರೀರಕ್ಕಾಗಿ ಬಾದಾಮಿ

ನಮಗೆ ಯಾವುದೇ ಸಮಸ್ಯೆಗಳು ಕಂಡು ಬರದೇ ಇದ್ದರು, ನಮ್ಮಲ್ಲಿನ ಆರೋಗ್ಯವನ್ನು ಇನ್ನು ಉತ್ತಮಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಒಂದು ಅಭ್ಯಾಸವನ್ನು ನಾವು ನಿತ್ಯ ಮಾಡಲೇಬೇಕು. ಇದನ್ನು ಮಕ್ಕಳಿಂದ ವಯೋವೃದ್ಧರ ವರೆಗೆ ಎಲ್ಲರು ಪಾಲಿಸಬಹುದು. ಪ್ರತಿ ರಾತ್ರಿ ಬಾದಾಮಿಯನ್ನು ಸ್ವಲ್ಪ ಜಜ್ಜಿಕೊಂಡು ಜೇನುತುಪ್ಪದಲ್ಲಿ ನೆನೆಸಬೇಕು. ಬೆಳಿಗ್ಗೆ ಬಾದಾಮಿ ಜೇನುತುಪ್ಪದ ಮಿಶ್ರಣವನ್ನು ಚೆನ್ನಾಗಿ ಅಗೆದು ತಿನ್ನಬೇಕು. ಇದು ನಮ್ಮ ಬುದ್ದಿವರ್ಧನೆಗೂ ಅತಿ ಉತ್ತಮವಾಗಿದೆ.

7. ಮಕ್ಕಳ ಮೂಳೆಗಳ ಆರೋಗ್ಯಕ್ಕೆ ಬಾದಾಮಿ

ಬಾದಾಮಿಯನ್ನು ನಿತ್ಯ ಮಕ್ಕಳಿಗೆ ನೆನೆಸಿ ಕೊಡುವುದರಿಂದ ಮಕ್ಕಳ ಮೂಳೆಗಳು ಸಬಲವಾಗಿ ಬೆಳೆಯುತ್ತದೆ. ಏಕೆಂದರೆ ಹಸುವಿನ ಹಾಲಿಗಿಂತ ಅಧಿಕಾವಾದ ಕ್ಯಾಲ್ಸಿಯಂ ಅಂಶವು ಬಾದಾಮಿಯಲ್ಲಿದೆ. ಇದು ಮಕ್ಕಳ ಬೆಳವಣಿಗೆಗೆ ಅತ್ಯಂತ ಸಹಕಾರಿಯಾಗಿದೆ. ನಿತ್ಯ ಬಾದಾಮಿ ಹಾಲನ್ನು ಕೊಡುವುದು ಕೂಡ ಅತಿ ಉತ್ತಮವಾಗಿದೆ.

8. ಮಲಬದ್ಧತೆಗೆ ಬಾದಾಮಿ

  • ಬಾದಾಮಿ ಜೊತೆಗೆ ಒಣದ್ರಾಕ್ಷಿಯನ್ನು ಸೇವಿಸುತ್ತಾ ಬಂದರೆ ಮಲ ವಿಸರ್ಜನೆ ಸುಲಭವಾಗಿ ಆಗುತ್ತದೆ.
  • ಒಂದು ಚಮಚ ಬಾದಾಮಿ ಎಣ್ಣೆ ಸೇವನೆಯು ಕೂಡ ಮಲಬದ್ಧತೆಗೆ ಉತ್ತಮವಾಗಿದೆ.

9. ಕಿವಿ ನೋವು ಹಾಗೂ ಹಲ್ಲಿನ ಆರೋಗ್ಯಕ್ಕೆ ಬಾದಾಮಿ

  • ಕಿವಿ ನೋವಿದ್ದಾಗ ಬಾದಾಮಿ ಎಣ್ಣೆಯನ್ನು ಎರಡು ಹನಿ ಕಿವಿಗಳಿಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುತ್ತದೆ.
  • ಬಾದಾಮಿಯ ಮೇಲಿನ ಕವಚವನ್ನು ಸುಟ್ಟು ಪುಡಿಮಾಡಿಕೊಂಡು, ಆ ಬೂದಿಯ ಜೊತೆಗೆ ಅಡುಗೆ ಉಪ್ಪು ಸೇರಿಸಿ ಹಲ್ಲು ಉಜ್ಜಿದರೆ ಹಲ್ಲು ಹಾಗೂ ವಸಡಿನ ಆರೋಗ್ಯಕ್ಕೆ ಉತ್ತಮವಾಗಿದೆ.

10. ಕೂದಲಿನ ಆರೋಗ್ಯಕ್ಕೆ ಬಾದಾಮಿ

ಬಾದಾಮಿ ಎಣ್ಣೆಯನ್ನು ತಲೆಗೆ ಹಚ್ಚಿ ಚೆನ್ನಾಗಿ ಮಾಲೀಷು ಮಾಡಿಕೊಳ್ಳಬೇಕು. ಬೇರಿನಿಂದ ತುದಿಯವರೆಗೂ ಹಚ್ಚಬೇಕು. ಇದರಿಂದ ಕೂದಲು ಕಪ್ಪಾಗಿ, ಸೊಂಪಾಗಿ ಹಾಗೂ ಹೊಳಪನ್ನು ಕೂಡ ಪಡೆಯುತ್ತದೆ.

11. ಬಾದಾಮಿಯ ಸೌಂದರ್ಯವರ್ಧಕ ಗುಣಗಳು

  • ಬಾದಾಮಿಯನ್ನು ಉತ್ತಮ ಸೌಂದರ್ಯವರ್ಧಕವೆಂದು ಹೇಳಬಹುದು, ಕಾರಣ ಮುಖದ ಕಲೆಗಳಿಗೆ ಬಾದಾಮಿಯು ಉತ್ತಮ ನಿವಾರಣಾ ಮದ್ದಾಗಿದೆ. ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಕಲೆಗಳಿದ್ದರೆ ಬಾದಾಮಿಯನ್ನು ಹಸಿ ಹಾಲಿನಲ್ಲಿ ತೇಯ್ದು ಮುಖಕ್ಕೆ ಮತ್ತು ಕಲೆ ಇದ್ದಡೆ ಹಚ್ಚಿಕೊಳ್ಳಬೇಕು. ಅರ್ಧ ಗಂಟೆಯ ನಂತರ ಮುಖ ತೊಳೆಯಬೇಕು. ಮುಖದ ಕಲೆಗಳು ಕ್ರಮೇಣ ಕಡಿಮೆಯಾಗಿ, ಮುಖಕ್ಕೆ ಹೊಸ ಕಾಂತಿ ಬರುತ್ತದೆ.
  • ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವುದು ಸಾಮಾನ್ಯ. ಆದರೆ ಬಾದಾಮಿ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಾಲೀಷು ಮಾಡಿ ಸ್ನಾನ ಮಾಡಿಸುವುದರಿಂದ ಚರ್ಮವು ಕಾಂತಿಯುಕ್ತವಾಗಿ, ಮೃದುವಾಗಿರುತ್ತದೆ. ಹಾಗೆಯೇ ಯಾವುದೇ ಚರ್ಮದ ಸಮಸ್ಯೆಗಳು ಬರುವುದಿಲ್ಲ.

ಬಾದಾಮಿ ಎಂದರೆ ಬಾಯಲ್ಲಿ ನೀರು ಬರುವುದು ಖಂಡಿತ. ಬಾದಾಮಿಯ ರುಚಿಯ ಕಾರಣ ಅದು ಅನೇಕ ಖಾದ್ಯಗಳಲ್ಲಿ ಸಹ ಬಳಕೆಯಾಗುತ್ತದೆ. ಉದಾಹರಣೆಗೆ ಬಾದಾಮ್ ಪುರಿ, ಬಾದಾಮ್ ಹಲ್ವಾ, ಬಾದಾಮ್ ಬರ್ಫಿ, ಬಾದಾಮ್ ಮೈಸೂರು ಪಾಕ್, ಬಾದಾಮ್ ಮಿಲ್ಕ್ ಶೇಕ್, ಬಾದಾಮ್ ಕುಲ್ಫಿ ಇನ್ನೂ ಅನೇಕ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಬಾದಾಮಿ ಎಣ್ಣೆಯ ತಯಾರಿಕೆಯಲ್ಲಿ ಬಾದಾಮಿ ಅತಿ ಬೇಡಿಕೆಯದ್ದಾಗಿದ್ದು, ದುಬಾರಿ ಕೂಡ ಆಗಿದೆ. ಇನ್ನೂ ಎಣ್ಣೆ ತೆಗೆದ ನಂತರ ಬರುವ ಬಾದಾಮಿಯ ಚಟರವು ಕೂಡ ಪೌಷ್ಠಿಕವಾಗಿದೆ. ಅದನ್ನು ಅಕ್ಕಿ ಹಿಟ್ಟಿನೊಡನೆ ಅಥವಾ ಜೋಳದ ಹಿಟ್ಟಿನೊಡನೆ ಬೆರೆಸಿ ರೊಟ್ಟಿ ಮಾಡಬಹುದು. ಅರೋಗ್ಯಕ್ಕೂ ಅತಿ ಉತ್ತಮವಾಗಿದೆ. ನೀವೆಲ್ಲರೂ ಸಹ ಬಾದಾಮಿಯನ್ನು ನಿತ್ಯ ಸೇವಿಸಿ ಅರೋಗ್ಯವರ್ಧಕ ಹಾಗೂ ರೋಗ ನಿರೋಧಕ ಗುಣಗಳನ್ನು ನಿಮ್ಮಲ್ಲಿ ಅಭಿವೃದ್ಧಿಗೊಳಿಸಿಕೊಳ್ಳಿ. 

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Share
Published by
GruhaSnehi
Tags: Almond benefitsalmond-health-benefitsAlmonds for brain healthAlmonds for glowing skinAlmonds for weight lossbadami for brainbadami health benefitsbest dry fruitBest way to eat almondsCan eating almonds improve brain function and memory?gruha sangaatigruha snehi kannada bloggruha snehi tips to use badamigruhasnehi best kannada home remediesHow many almonds per dayHow to use almonds for glowing skin and strong hair?how-to-eat-almondsskincare with badamiSoaked almonds vs raw almondsಗೃಹಸ್ನೇಹಿಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ ಆರೋಗ್ಯದ ಗುಟ್ಟುಗೃಹಸ್ನೇಹಿ ಕನ್ನಡ ಬ್ಲಾಗ್ತೂಕ ಇಳಿಸಲು ಬಾದಾಮಿನಿತ್ಯ ಬಾದಾಮಿ ಸೇವನೆಯ ಲಾಭಗಳುನೀರಿನಲ್ಲಿ ನೆನೆಸಿದ ಬಾದಾಮಿಯ ಪ್ರಯೋಜನಗಳುಬಾದಾಮಿ ಆರೋಗ್ಯ ಲಾಭಗಳುಬಾದಾಮಿ ತಿನ್ನುವ ಸರಿಯಾದ ವಿಧಾನಬಾದಾಮಿ ತಿನ್ನುವುದರಿಂದ ಏನಾಗುತ್ತದೆಬಾದಾಮಿ ತಿನ್ನುವುದರಿಂದ ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆಯಾ?ಬಾದಾಮಿ ಪ್ರಯೋಜನಗಳುಬಾದಾಮಿ ಸೌಂದರ್ಯ ಪ್ರಯೋಜನಗಳುಬಾದಾಮಿಯ ಮಹತ್ವವನ್ನು ತಿಳಿಯಿರಿ ಗೃಹಸ್ನೇಹಿ ಬ್ಲಾಗ್ನಲ್ಲಿಬಾದಾಮಿಯನ್ನು ತೂಕ ಇಳಿಸಲು ಹೇಗೆ ಉಪಯೋಗಿಸಬಹುದು?ಬಾದಾಮಿಯನ್ನು ಯಾವ ಸಮಯದಲ್ಲಿ ತಿನ್ನುವುದು ಉತ್ತಮ?ಮಕ್ಕಳಿಗೆ ಬಾದಾಮಿ ಲಾಭಗಳುಸೌಂದರ್ಯಕ್ಕಾಗಿ ಬಾದಾಮಿಯ ಪ್ರಯೋಜನಗಳು

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.