ಸಂಜೆ ಟೀ ಜೊತೆ ಸವಿಯಲು ಉತ್ತಮವಾಗಿರುವ ಬಿಸಿ ಬಿಸಿ ಬೋಂಡಾ ರೆಸಿಪಿಗಳು

Spread the love

ಸಂಜೆ ಟೀ ಜೊತೆ ಸವಿಯಲು ಉತ್ತಮವಾಗಿರುವ ಬಿಸಿ ಬಿಸಿ ಬೋಂಡಾ ರೆಸಿಪಿಗಳು

ಇನ್ನೇನು ಮಳೆಗಾಲ ಆರಂಭವಾಗುವ ಸಮಯ, ಹೊರಗಡೆ ಮಳೆ ಬೀಳುವ ಸಮಯಕ್ಕೆ, ಸಂಜೆ ಬಿಸಿ ಚಹಾ ಅಥವಾ ಕಾಫಿಯೊಡನೆ ಬಿಸಿ ಬಿಸಿ ತಿಂಡಿಗಳು ಇದ್ದರೆ ಉತ್ತಮವಾಗಿರುತ್ತದೆ. ತಂಪಾದ ವಾತಾವರಣದಲ್ಲಿ ತಿನ್ನಲು ಸೂಕ್ತವಾಗಿರುವ ವಿವಿಧ ರೀತಿಯ ಬಿಸಿ ಬಿಸಿ ಬೋಂಡಾಗಳ ತಯಾರಿಕಾ ವಿಧಾನಗಳನ್ನು ಇಂದಿನ ಲೇಖನದಲ್ಲಿ ವಿಶ್ಲೇಷಿಸೋಣ.

ಉದ್ದಿನ ಬೋಂಡಾ

ಬೇಕಾಗುವ ಪದಾರ್ಥಗಳು

  • ಉದ್ದಿನಬೇಳೆ  1 ಕಪ್
  • ಹಸಿ ಮೆಣಸು 4
  • ಇಂಗು
  • ಕೊಬ್ಬರಿ ತುಂಡುಗಳು
  • ಕರಿಬೇವು
  • ಶುಂಠಿ 1 ಇಂಚು
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಉದ್ದಿನಬೇಳೆಯನ್ನು 2 ಗಂಟೆಗಳ ಕಾಲ ನೆನೆಸಿ ಇಡಬೇಕು. ನಂತರ ಉದ್ದಿನಬೇಳೆಯನ್ನು ಸ್ವಲ್ಪ ನೀರಿನೊಂದಿಗೆ ಗಟ್ಟಿಯಾಗಿ, ನಯವಾಗಿ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಂಡು ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸು, ಕೊಬ್ಬರಿ ತುಂಡುಗಳು, ಕರಿಬೇವಿನ ಸೊಪ್ಪು, ಶುಂಠಿ, ಚಿಟಿಕೆ ಹಿಂಗು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಕಲಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಬೇಕು. ಎಣ್ಣೆ ಚೆನ್ನಾಗಿ ಕಾದ ನಂತರ ಸ್ವಲ್ಪ ಸ್ವಲ್ಪ ಹಿಟ್ಟನ್ನು ಎಣ್ಣೆಯಲ್ಲಿ ಬಿಡಬೇಕು. ಬೋಂಡಾಗಳನ್ನು ಕೆಂಪಗಾಗುವತನಕ ಕರಿಯಬೇಕು. ಅನಂತರ ಒಂದು ಪ್ಲೇಟ್ ಗೆ ವರ್ಗಾಯಿಸಿಕೊಂಡರೆ ಬಿಸಿ ಬಿಸಿ ಉದ್ದಿನ ಬೋಂಡಾ ಸವಿಯಲು ಸಿದ್ದವಾಗುತ್ತದೆ. ಇದು ಕಾಯಿ ಚಟ್ನಿಯೊಡನೆ ಸೇವಿಸಲು ಉತ್ತವಾಗಿರುತ್ತದೆ. 

ಉದ್ದಿನಬೋಂಡಾ ಮಾಡುವ ಸಮಯದಲ್ಲಿ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮೊದಲನೆಯದಾಗಿ ಹಿಟ್ಟು ನೀರಾಗಿ ಇರಬಾರದು, ಆದಷ್ಟು ಗಟ್ಟಿಯಾಗಿ ಇರಬೇಕು. ಹಾಗೆಯೇ ಎಣ್ಣೆಯನ್ನು ಕಾದ ನಂತರ ಬೋಂಡಾಗಳನ್ನು ಕರಿಯಬೇಕು, ಇಲ್ಲವಾದರೆ ಬೋಂಡಾಗಳು ಎಣ್ಣೆಯನ್ನು ಕುಡಿಯುತ್ತವೆ ಅಂದರೆ ಜಾಸ್ತಿ ಎಣ್ಣೆಯು ಬೋಂಡಾಗಳು ಹೀರಿಕೊಳ್ಳುತ್ತದೆ. ಇನ್ನೂ ಮೀಡಿಯಂ ಉರಿಯಲ್ಲಿ ಬೇಯಿಸುವುದು ಉತ್ತಮ, ಕಾರಣ ಬೋಂಡಾಗಳು ಹೊರಗಿನಿಂದ ಬೆಂದರು ಕೂಡ ಒಳಗಡೆ ಹಿಟ್ಟು ಹಸಿಯಾಗಿ ಇರುತ್ತದೆ. ಈ ಎಲ್ಲಾ ಅಂಶಗಳನ್ನು ಮಾನದಲ್ಲಿ ಇಟ್ಟುಕೊಂಡು ಬೋಂಡಾಗಳನ್ನು ತಯಾರಿಸಬೇಕು.

ಬ್ರೆಡ್ ಬೋಂಡಾ - ವಿಧಾನ 1

ಬೇಕಾಗುವ ಪದಾರ್ಥಗಳು

  • ಬ್ರೆಡ್ ತುಂಡುಗಳು 4 ಕಪ್
  • ಈರುಳ್ಳಿ 1
  • ಹಸಿಮೆಣಸು 2
  • ಕೊತ್ತಂಬರಿ ಸೊಪ್ಪು
  • ಮೊಸರು 1 ಕಪ್
  • ಕಡ್ಲೆಹಿಟ್ಟು 1 ಕಪ್
  • ಇಂಗು ಸ್ವಲ್ಪ
  • ಮೆಣಸಿನ ಪುಡಿ 1 ಚಮಚ
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಕಡ್ಲೆಹಿಟ್ಟಿನ ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ಒಂದು ಪಾತ್ರೆಗೆ ಕಡ್ಲೆಹಿಟ್ಟು, ಸ್ವಲ್ಪ ಹಿಂಗು, ಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ನೀರಿನೊಂದಿಗೆ ಕಲಸಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಸ್ವಲ್ಪ ಗಟ್ಟಿಯಾಗಿ ತಯಾರಿಸಿಕೊಳ್ಳಬೇಕು. ಈಗ ಇನ್ನೊಂದು ಪಾತ್ರೆಯಲ್ಲಿ ಬ್ರೆಡ್ ತುಂಡುಗಳು, ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಗೂ ಉಂಡೆ ತಯಾರಿಸಲು ಬೇಕಾದಷ್ಟು ಮೊಸರನ್ನು ಸೇರಿಸಿ ಕಲಸಿಕೊಳ್ಳಬೇಕು. ನಂತರ ಸಣ್ಣ ಉಂಡೆಗಳಾಗಿ ಮಾಡಿಕೊಂಡು, ಕಡ್ಲೆಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ, ಚೆನ್ನಾಗಿ ಕಾದ ಎಣ್ಣೆಯಲ್ಲಿ ಕರಿಯಬೇಕು. ಕೆಂಪಾಗಿ ಕರೆದುಕೊಂಡು, ಪ್ಲೇಟ್ ಗೆ ಹಾಕಿದರೆ ಬ್ರೆಡ್ ಬೋಂಡಾ ಸವಿಯಲು ಸಿದ್ದವಾಗುತ್ತದೆ.

ಬ್ರೆಡ್ ಬೋಂಡಾ - ವಿಧಾನ 2

ಬೇಕಾಗುವ ಪದಾರ್ಥಗಳು

  • ಬ್ರೆಡ್ ಸ್ಲಾಯ್ಸ್ 8
  • ಬಟಾಟೆ 2
  • ಹಸಿಮೆಣಸು 2
  • ಅರಿಶಿಣ ಪುಡಿ ¼ ಚಮಚ
  • ಈರುಳ್ಳಿ 1
  • ಕೊತ್ತಂಬರಿ ಸೊಪ್ಪು
  • ಸಾಸಿವೆ ½ ಚಮಚ
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಬಟಾಟೆಯನ್ನು ಬೇಯಿಸಿಕೊಂಡು, ಹಿಚುಕಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಣ್ಣಗೆ ಹೆಚ್ಚಿದ ಹಸಿಮೆಣಸು ಹಾಗೂ ಈರುಳ್ಳಿಯನ್ನು ಹಾಕಿ ಬಾಡಿಸಿಕೊಳ್ಳಬೇಕು. ಸ್ವಲ್ಪ ಅರಿಶಿಣ ಪುಡಿಯನ್ನು ಸೇರಿಸಿ ಕೈ ಆಡಿಸಬೇಕು. ನಂತರ ಅದಕ್ಕೆ ಕಿವುಚಿದ ಬಟಾಟೆ, ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಬೆರೆಸಿಕೊಂಡು, ಓಲೆ ಅರಿಸಿಕೊಳ್ಳಬೇಕು. ಈ ಮಿಶ್ರಣ ತಣಿದ ನಂತರ ಉಂಡೆಗಳಾಗಿ ತಯಾರಿಸಿಕೊಳ್ಳಬೇಕು. ಇನ್ನೊಂದೆಡೆ ಬ್ರೆಡ್ ನ ಬದಿಯನ್ನು ಕತ್ತರಿಸಿಕೊಂಡು, ಬಿಳಿಯ ಭಾಗವನ್ನು ನೀರಿನಲ್ಲಿ ಅದ್ದಿ, ಹಿಂಡಿಕೊಳ್ಳಬೇಕು. ಮೊದಲೇ ತಯಾರಿಸಿದ ಉಂಡೆಗಳನ್ನು ಬ್ರೆಡ್ ನಲ್ಲಿ ಸುತ್ತಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಬೇಕು. ಅಲ್ಲಿಗೆ ಬ್ರೆಡ್ ಬೋಂಡಾ ಸವಿಯಲು ಸಿದ್ದವಾಗುತ್ತದೆ. ಇದು ತಿನ್ನಲು ಅತಿ ರುಚಿಕರವಾಗಿರುತ್ತದೆ.

ಬಟಾಟೆ ಬೋಂಡಾ

ಬೇಕಾಗುವ ಪದಾರ್ಥಗಳು

  • ಬಟಾಟೆ 3
  • ಈರುಳ್ಳಿ 1
  • ಶುಂಠಿ 1 ತುಂಡು
  • ಹಸಿಮೆಣಸು 2
  • ಕರಿಬೇವು
  • ಕೊತ್ತಂಬರಿ ಸೊಪ್ಪು
  • ಕಡ್ಲೆಹಿಟ್ಟು 1 ಕಪ್
  • ಮೆಣಸಿನ ಪುಡಿ 1 ಚಮಚ
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಬಟಾಟೆಯನ್ನು ಬೇಯಿಸಿಕೊಂಡು, ಕಿವುಚಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಬೇಯಿಸಿ, ಕಿವುಚಿಕೊಂಡ ಬಟಾಟೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪನ್ನು ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ ಕಲಸಿಕೊಳ್ಳಬೇಕು. ಇವುಗಳನ್ನು ಉಂಡೆಗಳಾಗಿ ಸಿದ್ಧಪಡಿಸಿ ಇಡಬೇಕು. ಈಗ ಕಡ್ಲೆಹಿಟ್ಟಿನ ಮಿಶ್ರಣವನ್ನು ತಯಾರಿಸಬೇಕು. ಒಂದು ಪಾತ್ರೆಗೆ ಕಡ್ಲೆಹಿಟ್ಟು, ಮೆಣಸಿನ ಪುಡಿ, ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು, ಸ್ವಲ್ಪ ನೀರಿನೊಂದಿಗೆ ಮಿಶ್ರಣವನ್ನು ಕಲಸಿಕೊಳ್ಳಬೇಕು. ಈಗ ತಯಾರಿಸಿದ ಉಂಡೆಗಳನ್ನು ಕಡ್ಲೆಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ, ಕಾದ ಎಣ್ಣೆಯಲ್ಲಿ ಕೆಂಪಾಗುವ ತನಕ ಕರಿಯಬೇಕು. ಅಲ್ಲಿಗೆ ರುಚಿಯಾದ ಬಿಸಿ ಬಿಸಿ ಬಟಾಟೆ ಬೋಂಡಾ ಸವಿಯಲು ಸಿದ್ಧವಾಗುತ್ತದೆ.

ಹಿರೇಕಾಯಿ ಬೋಂಡಾ

ಬೇಕಾಗುವ ಪದಾರ್ಥಗಳು

  • ಹಿರೇಕಾಯಿ 1
  • ಕಡ್ಲೆಹಿಟ್ಟು  1 ಕಪ್
  • ಅಕ್ಕಿಹಿಟ್ಟು ¼ ಕಪ್
  • ಇಂಗು ಸ್ವಲ್ಪ
  • ಮೆಣಸಿನ ಪುಡಿ  2 ಚಮಚ
  • ಜೀರಿಗೆ ½ ಚಮಚ
  • ಎಣ್ಣೆ
  • ಉಪ್ಪು

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಪ್ರಮಾಣದಲ್ಲಿ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಮೆಣಸಿನ ಪುಡಿ, ಜೀರಿಗೆ, ಇಂಗು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಸ್ವಲ್ಪ ನೀರಿನೊಂದಿಗೆ ಕಡ್ಲೆಹಿಟ್ಟಿನ ಮಿಶ್ರಣವನ್ನು ತಯಾರಿಸಬೇಕು. ನಂತರ ಹಿರೇಕಾಯಿಯನ್ನು ಗೋಲಾಕಾರದಲ್ಲಿ ಕತ್ತರಿಸಿ, ಕಡ್ಲೆಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಕರಿಯಬೇಕು. ಅಲ್ಲಿಗೆ ಹಿರೇಕಾಯಿ ಬೋಂಡಾ ಅಥವಾ ಬಜೆ ಸವಿಯಲು ಸಿದ್ದವಾಗುತ್ತದೆ.

ಬದನೆಕಾಯಿ ಬೋಂಡಾ

ಬೇಕಾಗುವ ಪದಾರ್ಥಗಳು

  • ಚಿಕ್ಕ ಬದನೆಕಾಯಿ 5
  • ಸಾಂಬಾರು ಪುಡಿ 2 ಚಮಚ
  • ಒಣಕೊಬ್ಬರಿ ತುರಿ 2 ಚಮಚ
  • ಗರಂಮಸಾಲೆ ಪುಡಿ 1 ಚಮಚ
  • ಲಿಂಬೆರಸ 1 ಚಮಚ
  • ಕಡ್ಲೆಹಿಟ್ಟು 2 ಕಪ್
  • ಅಕ್ಕಿ ಹಿಟ್ಟು 1 ಕಪ್
  • ಎಣ್ಣೆ
  • ಉಪ್ಪು

ಮಾಡುವ ವಿಧಾನ
ಬದನೆಕಾಯಿಯ ಕೆಳ ಬದಿಯನ್ನು ಸೀಳಿಕೊಂಡು, ಸ್ವಲ್ಪ ಎಣ್ಣೆಯಲ್ಲಿ ಹುರಿಯಬೇಕು. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು, ಸ್ವಲ್ಪ ನೀರಿನೊಂದಿಗೆ ಗಟ್ಟಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಇನ್ನೊಂದು ಪಾತ್ರೆಗೆ ಸಾಂಬಾರು ಪುಡಿ, ಒಣಕೊಬ್ಬರಿ ತುರಿ, ಗರಂಮಸಾಲ ಪುಡಿ ಹಾಗೂ ನಿಂಬೆರಸ ಹಾಗೂ ಚಿಟಿಕೆ ಉಪ್ಪನ್ನು ಸೇರಿಸಿ, ಕಲಸಿಕೊಳ್ಳಬೇಕು. ಈ ಮಿಶ್ರಣವನ್ನು ತಯಾರಿಸಿದ ಬದನೆಕಾಯಿಯಲ್ಲಿ ತುಂಬಿ, ತಯಾರಿಸಿದ ಕಡ್ಲೆಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ, ಕಾದ ಎಣ್ಣೆಯಲ್ಲಿ ಕೆಂಪಾಗುವ ತನಕ ಕರಿಯಬೇಕು. ಅಲ್ಲಿಗೆ ರುಚಿಯಾದ ಬದನೆಕಾಯಿ ಬೋಂಡಾ ಸವಿಯಲು ಸಿದ್ಧವಾಗುತ್ತದೆ.

ಅವಲಕ್ಕಿ ಬೋಂಡಾ

ಬೇಕಾಗುವ ಪದಾರ್ಥಗಳು

  • ಅವಲಕ್ಕಿ 2 ಕಪ್
  • ಸಬ್ಬಿಸಿಗೆ ಸೊಪ್ಪು ½ ಕಪ್
  • ಮೆಂತೆ ಸೊಪ್ಪು ½ ಕಪ್
  • ಬಟಾಟೆ 2
  • ಕಡ್ಲೆಹಿಟ್ಟು ½ ಕಪ್
  • ಮೆಣಸಿನ ಪುಡಿ ½ ಚಮಚ
  • ಹಸಿಮೆಣಸು 2
  • ಸೋಂಪು ಕಾಳು ½ ಚಮಚ
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಅವಲಕ್ಕಿಯನ್ನು ಹುರಿದುಕೊಂಡು, ಪುಡಿ ಮಾಡಿಕೊಳ್ಳಬೇಕು. ಒಂದು ಬಾಣಲೆಗೆ ಎಣ್ಣೆ ಬಿಸಿ ಮಾಡಿಕೊಂಡು, ಸೋಂಪು ಕಾಳು, ಹಸಿಮೆಣಸು, ಸಬ್ಬಸಿಗೆ ಸೊಪ್ಪು, ಬೇಯಿಸಿ ಹಿಚುಕಿದ ಬಟಾಟೆ ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ ಬಾಡಿಸಿಕೊಳ್ಳಬೇಕು. ತಣಿದ ನಂತರ ಸಣ್ಣ ಉಂಡೆಗಳಾಗಿ ಸಿದ್ಧಮಾಡಿಕೊಳ್ಳಬೇಕು. ಇನ್ನೊಂದು ಕಡೆಯಲ್ಲಿ ಕಡ್ಲೆಹಿಟ್ಟಿನ ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ಒಂದು ಪಾತ್ರೆಗೆ ಕಡ್ಲೆಹಿಟ್ಟು, ಮೆಣಸಿನ ಪುಡಿ, ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು, ಸ್ವಲ್ಪ ನೀರಿನೊಂದಿಗೆ ಕಲಸಿಕೊಳ್ಳಬೇಕು. ಈಗ ಮಾಡಿಟ್ಟ ಉಂಡೆಗಳನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ, ಅವಲಕ್ಕಿ ಪುಡಿಯಲ್ಲಿ ಹೊರಳಿಸಿಕೊಂಡು, ಎಣ್ಣೆಯಲ್ಲಿ ಕರಿಯಬೇಕು. ಅಲ್ಲಿಗೆ ಗರಿ ಗರಿಯಾದ ಅವಲಕ್ಕಿ ಬೋಂಡಾ ಸವಿಯಲು ಸಿದ್ದವಾಗುತ್ತದೆ.

ಸಿಹಿ ಜೋಳದ ಬೋಂಡಾ

ಬೇಕಾಗುವ ಪದಾರ್ಥಗಳು

  • ಸಿಹಿ ಜೋಳದ ಕಾಳು ½ ಕಪ್
  • ಕಡ್ಲೆಹಿಟ್ಟು ¾ ಕಪ್
  • ಮೆಣಸಿನ ಪುಡಿ 1 ಚಮಚ
  • ಓಂಕಾಳು ½ ಚಮಚ
  • ಎಣ್ಣೆ
  • ಉಪ್ಪು

ಮಾಡುವ ವಿಧಾನ
ಮೊದಲಿಗೆ ಸಿಹಿ ಜೋಳದ ಕಾಳನ್ನು ಶುಚಿಗೊಳಿಸಿ ಇಟ್ಟುಕೊಳ್ಳಬೇಕು, ನಂತರ ಒಂದು ಪಾತ್ರೆಗೆ ಕಡ್ಲೆಹಿಟ್ಟು, ಮೆಣಸಿನ ಪುಡಿ, ಓಂಕಾಳು, ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ದಪ್ಪ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಈ ಹಿಟ್ಟಿಗೆ ಶುಚಿಗೊಳಿಸಿಕೊಂಡ ಸಿಹಿ ಜೋಳವನ್ನು ಸೇರಿಸಿಕೊಂಡು, ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ಬಿಟ್ಟು, ಕೆಂಪಗೆ ಕರಿಯಬೇಕು. ಅಲ್ಲಿಗೆ ರುಚಿಯಾದ ಸಿಹಿ ಜೋಳದ ಬೋಂಡಾ ಸವಿಯಲು ಸಿದ್ದವಾಗುತ್ತದೆ.

ಗೆಣಸಿನ ಬೋಂಡಾ

ಬೇಕಾಗುವ ಪದಾರ್ಥಗಳು

  • ಗೆಣಸು 1
  • ಕಡ್ಲೆಹಿಟ್ಟು 1 ಕಪ್
  • ಮೆಣಸಿನ ಪುಡಿ 1 ಚಮಚ
  • ಜೀರಿಗೆ ½ ಚಮಚ
  • ಅರಿಶಿಣ ಪುಡಿ ¼ ಚಮಚ
  • ಓಂಕಾಳು ¼ ಚಮಚ
  • ಹಿಂಗು ಸ್ವಲ್ಪ
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಕಡ್ಲೆಹಿಟ್ಟು, ಮೆಣಸಿನ ಪುಡಿ, ಜೀರಿಗೆ, ಅರಿಶಿಣ ಪುಡಿ, ಓಂಕಾಳು, ಹಿಂಗು ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ, ನೀರಿನೊಂದಿಗೆ ಹಿಟ್ಟನ್ನು ಕಲಸಿಕೊಳ್ಳಬೇಕು. ಗೆಣಸನ್ನು ಗೋಲಾಕಾರವಾಗಿ ಕತ್ತರಿಸಿಕೊಂಡು, ಕಡ್ಲೆಹಿಟ್ಟಿನಲ್ಲಿ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಕೆಂಪಾಗುವ ತನಕ ಕರೆಯಬೇಕು. ಅಲ್ಲಿಗೆ ಬಿಸಿ ಬಿಸಿ ಗೆಣಸಿನ ಬಜೆ ಅಥವಾ ಬೋಂಡಾ ಸಿದ್ದವಾಗುತ್ತದೆ.

ಬೋಂಡಾಗಳನ್ನು ತಯಾರಿಸುವಾಗ ಅನುಸರಿಸಬೇಕಾದ ಕೆಲವು ಟಿಪ್ಸ್ ಗಳು ಎಂದರೆ, ಎಲ್ಲಾ ರೀತಿಯ ಬೋಂಡಾಗಳನ್ನು ಕಾದ ಎಣ್ಣೆಯಲ್ಲೇ ಕರಿಯಬೇಕು, ಇನ್ನೂ ಹಿಟ್ಟನ್ನು ಸ್ವಲ್ಪ ಗಟ್ಟಿಯಾಗಿ ಕಳಸಿಕೊಳ್ಳುವುದು ಅತಿ ಉತ್ತಮವಾಗಿರುತ್ತದೆ. ಅಕ್ಕಿ ಹಿಟ್ಟನ್ನು ಬಳಸುವುದರಿಂದ ಬೋಂಡಾಗಳು ಗರಿ ಗರಿಯಾಗಿ, ರುಚಿಕರವಾಗಿರುತ್ತದೆ.

ಇಷ್ಟು ರುಚಿ ರುಚಿಯಾದ ತಿನಿಸು ಎಲ್ಲರ ನೆಚ್ಚಿನದ್ದು, ಅಲ್ಲವೇ?? ಎಣ್ಣೆಯಲ್ಲಿ ಕರೆದ ತಿಂಡಿಗಳು ಆರೋಗ್ಯಕ್ಕೆ ಅಷ್ಟು ಒಳೆಯದಲ್ಲ, ಆದರೆ ಹೊರಗಡೆ ತಿನ್ನುವ ಜಂಕ್ ಫುಡ್ ಗಳಿಗಿಂತ ಮನೆಯಲ್ಲಿ ಮಾಡಿದ ಈ ತಿಂಡಿಗಳು ಎಷ್ಟೋ ಉತ್ತಮವಾಗಿರುತ್ತದೆ. ಮನೆಯಲ್ಲೇ ಆರೋಗ್ಯಕರ ಆಹಾರಗಳನ್ನು ತಯಾರಿಸಿ, ಸೇವಿಸಿ, ಅರೋಗ್ಯವಂತರಾಗಿರಿ, ಎಂಬುದು ಈ ಲೇಖನದ ಮುಖ್ಯ ಉದ್ದೇಶ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.