ಬಸಳೆ ಸೊಪ್ಪಿನ(Malabar Spinach) ಆರೋಗ್ಯ ಪ್ರಯೋಜನಗಳು ಗೊತ್ತಾದ್ರೆ ದಿನಾ ತಿನ್ನುವಿರಿ!

Spread the love

ಬಸಳೆ ಸೊಪ್ಪಿನ(Malabar Spinach) ಆರೋಗ್ಯ ಪ್ರಯೋಜನಗಳು ಗೊತ್ತಾದ್ರೆ ದಿನಾ ತಿನ್ನುವಿರಿ!. AI Image

ಪ್ರತಿ ಮನೆಯ ಹಿತ್ತಲಲ್ಲಿ ರಾರಾಜಿಸುವ ಬಸಳೆ ಸೊಪ್ಪು, ಉತ್ತಮ ಪೌಷ್ಠಿಕಾಂಶಯುಕ್ತ ಆರೋಗ್ಯಕರ ಆಹಾರವಾಗಿದೆ. ಬೇಸಿಗೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸಲು ಈ ಸೊಪ್ಪು ಅತಿ ಉಪಯುಕ್ತವಾಗಿದೆ. ಮಾಂಸ, ಮೀನುಗಳಿಂದ ಸಿಗುವ ಸಿಗುವ ಅಷ್ಟೂ ಪ್ರೊಟೀನುಗಳು ಈ ಹಸಿರು ಬಸಳೆಯಿಂದ ಸಿಗುತ್ತದೆ. ಬಸಳೆ ದಂಟಿನ ನಾರು ಸಹ ತುಂಬಾ ಅರೋಗ್ಯಕರವಾಗಿದೆ.

ಬಸಳೆ ಸೊಪ್ಪಿನಲ್ಲಿ ವಿಟಮಿನ್ ಎ, ಬಿ, ಸಿ, ಕಬ್ಬಿಣ, ರಂಜಕ, ನಿಯೋಸಿನ, ಕ್ಯಾಲ್ಸಿಯಂ, ಶರ್ಕರ, ಪಿಷ್ಠ, ನಾರು, ತೇವದ ಗುಣ ಎಲ್ಲವೂ ಹೇರಳವಾಗಿದ್ದು, ದೇಹಕ್ಕೆ ಬೇಕಾದ ಉತ್ತಮ ಶಕ್ತಿಯನ್ನು ಒದಗಿಸುತ್ತದೆ.

ಬಸಳೆ ಸೊಪ್ಪಿನ ಉಪಯೋಗಗಳು

ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ

  • ಬಸಳೆ ಸೊಪ್ಪನ್ನು ಜಜ್ಜಿ ರಸ ತೆಗೆದು ದಿನಕ್ಕೆ ಎರಡು ಬಾರಿಯಂತೆ ಒಂದು ಚಮಚ ಸೇವಿಸಬೇಕು. ಇದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವು ಅಭಿವೃದ್ಧಿಯಾಗುತ್ತದೆ. ಈ ಅಭ್ಯಾಸವನ್ನು ಸತತವಾಗಿ 2 ತಿಂಗಳು ಮಾಡಿದರೆ ರಕ್ತದ ಆರೋಗ್ಯಕ್ಕೆ ತುಂಬಾ ಉತ್ತಮ.
  • ಬಸಳೆಯ ಸೇವನೆಯಿಂದ ಫೋಲಿಕ್ ಆಸಿಡ್ ನೇರವಾಗಿ ಹಾಗೂ ಹೇರಳವಾಗಿ ಸಿಗುತ್ತದೆ. ಇದು ರಕ್ತದ ಕೆಂಪು ಕಣಗಳ ಉತ್ಪಾದನೆಗೆ ಸಹಾಯಕವಾಗಿದ್ದು, ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ.
  • ಕೆಂಪು ರಕ್ತ ಕಣಗಳು ಕಡಿಮೆಯಾದರೆ ಬಸಳೆಯನ್ನು ನಿತ್ಯ ಆಹಾರದಲ್ಲಿ ಸ್ವೀಕರಿಸಬೇಕು.

ಮರೆವು ಕಡಿಮೆಗೊಳಿಸಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು

  • ಬಸಳೆ ಸೊಪ್ಪನ್ನು ಜಜ್ಜಿ ರಸ ತೆಗೆದು, ಒಂದೆಲಗದ ಎಲೆಗಳನ್ನು ಸಹ ಜಜ್ಜಿ ರಸ ತೆಗೆದು, ಎರಡು ಸಮಪ್ರಮಾಣದಲ್ಲಿ ತೆಗೆದುಕೊಂಡು ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು. ಇದು ಮಕ್ಕಳಿಗೆ ನಿತ್ಯ ಕೊಡುವುದರಿಂದ ಬುದ್ಧಿ ಚುರುಕಾಗುತ್ತದೆ.

ಕಣ್ಣಿನ ಆರೋಗ್ಯಕ್ಕೆ

  • ಬಸಳೆಯು ಕಣ್ಣಿನ ಆರೋಗ್ಯಕ್ಕೆ ಅತಿ ಉತ್ತಮವಾಗಿದೆ. ಕಣ್ಣು ಉರಿ, ಇರುಳುಗಣ್ಣು, ಕಣ್ಣಿನಲ್ಲಿ ಉಂಟಾಗುವ ಉಷ್ಣ ಗುಳ್ಳೆಗಳು ಹಾಗೂ ಉತ್ತಮ ದೃಷ್ಟಿ ಎಲ್ಲದಕ್ಕೂ ಬಸಳೆ ನಿತ್ಯ ಸಂಜೀವಿನಿಯಾಗಿದೆ. ಇದಕ್ಕೆಲ್ಲ ಕಾರಣ ಬಸಳೆಯಲ್ಲಿನ  ವಿಟಮಿನ್ ಎ. ನಿತ್ಯ ಒಂದು ಚಮಚ ಬಸಳೆ ರಸ ಸ್ವೀಕರಿಸುವುದೋ ಇಲ್ಲವೇ ಆಹಾರದಲ್ಲಿ ಬಸಳೆಯನ್ನು ಉಪಯೋಗಿಸಿದರೆ ಸಾಕು, ನಾವು ಅನೇಕ ಕಣ್ಣಿನ ಸಮಸ್ಯೆಗಳಿಂದ ಪಾರಾಗಬಹುದು.

ಉತ್ತಮ ಜೀರ್ಣಕ್ರಿಯೆಗೆ

  • ಒಂದು ಚಮಚ ಬಸಳೆ ರಸ ಹೊಟ್ಟೆಗೆ ತೆಗೆದುಕೊಂಡರೆ ಸಾಕು ಜೀರ್ಣಕ್ರಿಯೆ ಉತ್ತಮವಾಗಿ ಸಾಗುತ್ತದೆ
  • ಸೊಪ್ಪನ್ನು ಹೆಸರು ಕಾಳು ಅಥವಾ ಬೇಳೆಯ ಜೊತೆಗೆ ಆಹಾರ ರೂಪದಲ್ಲಿ ತೆಗೆದುಕೊಂಡರೆ ಮಲಬದ್ಧತೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ಗಂಟಲಿನ ಸಮಸ್ಯೆಗಳಿಗೆ

  • ಗಂಟಲಿಗೆ ಸಮಸ್ಯೆಗಳಿಗೆ ಉದಾಹರಣೆಗೆ ಧ್ವನಿ ಬದಲಾದಗಾಗ, ಜಾಸ್ತಿ ಕೂಗಿ ಗಂಟಲು ಒಡೆದಾಗ, ಹಾಡುಗಾರರಿಗೆ ಗಂಟಲಿಗೆ ನೋವು ಬಂದಾಗ ಬಸಳೆಯ ಎರಡು ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಶೋಧಿಸಿಕೊಂಡು ಸ್ವಲ್ಪ ತಣಿದ ಮೇಲೆ ಗಂಟಲಿಗೆ ಹಾಕಿ ಮುಕ್ಕಳಿಸಬೇಕು. ಇದರಿಂದ ಎಲ್ಲಾ ಗಂಟಲಿನ ಸಮಸ್ಯೆಗಳು ತ್ವರಿತವಾಗಿ ಕಡಿಮೆಯಾಗುತ್ತದೆ.

ಬಾಯಿಹುಣ್ಣು ಮತ್ತು ಹೊಟ್ಟೆ ಹುಣ್ಣು

  • ಈ ಹುಣ್ಣಿನ ಸಮಸ್ಯೆಗಳಿಗೆ ಬಸಳೆ ಅಮೃತವಾಗಿದೆ. ವಿಟಮಿನ್ ಎ, ಬಿ, ಸಿ ಇರುವಿಕೆಯು ಹೊಟ್ಟೆ ಹಾಗೂ ಬಾಯಿ ಹುಣ್ಣಿನ ಸಮಸ್ಯೆಗಳಿಗೆ ಬೇಗನೆ ಪರಿಹಾರಗಳನ್ನು ನೀಡುತ್ತದೆ. ಆಹಾರದಲ್ಲಿ ಬಸಳೆಯ ಬಳಕೆ ಜಾಸ್ತಿ ಮಾಡಬೇಕು. ಇಲ್ಲವೇ ಬಸಳೆ ಎಳೆಯ ರಸವನ್ನು ಜಜ್ಜಿ ಒಂದು ಚಮಚ ನಿತ್ಯ ಕುಡಿಯಬೇಕು.

ಕುರಗಳು ಹಾಗೂ ಗುಳ್ಳೆಗಳು

  • ಸಾಮಾನ್ಯವಾಗಿ ಈ ಕುರಗಳು ಹಾಗೂ ಗುಳ್ಳೆಗಳು ರಕ್ತದ ಅಶುದ್ಧತೆಯಿಂದ ಉಂಟಾಗುತ್ತದೆ. ಬಸಳೆ ಎಲೆಯನ್ನು ಸ್ವಲ್ಪ ಜಜ್ಜಿ ಕುರ ಹಾಗೂ ಗುಳ್ಳೆಗಳ ಮೇಲೆ ಹಚ್ಚಿ ಬಟ್ಟೆ ಪಟ್ಟಿ ಕಟ್ಟಬೇಕು. ಬಸಳೆಯ ತಂಪಿಗೆ ಉರಿಯು ಕಡಿಮೆಯಾಗಿ, ಗುಳ್ಳೆಗಳು ಬೇಗ ಒಡೆಯುತ್ತದೆ. ಆಹಾರದಲ್ಲೂ ಬಸಳೆ ಸೇವನೆ ಮಾಡಬೇಕು. ಅದು ರಕ್ತದ ಶುದ್ಧತೆಗೆ ಸಹಾಯಕಾರಿ ಹಾಗೂ ದೇಹವನ್ನು ತಂಪಾಗಿರಿಸುತ್ತದೆ.

ಸೂಚನೆ – ಉಬ್ಬಸ ಸಮಸ್ಯೆ ಇರುವವರು ಬಸಳೆಯನ್ನು ಹೆಚ್ಚಾಗಿ ಬಳಸಬಾರದು. ಕಾರಣ ದೇಹಕ್ಕೆ ಅತಿಯಾದ ತಂಪನ್ನು ನೀಡಿ ಉಬ್ಬಸ ಜಾಸ್ತಿ ಆಗುವ ಸಾಧ್ಯತೆಗಳಿವೆ. ಶೀತ, ಜ್ವರ ಮತ್ತು ಕೆಮ್ಮಿನ ಸಮಯದಲ್ಲೂ ಬಸಳೆ ಬಳಕೆ ಕಡಿಮೆ ಮಾಡಬೇಕು.

ಬಸಳೆಯ ವಿವಿಧ ರುಚಿಕರ ಖಾದ್ಯಗಳು

ಬಸಳೆ ಎಲೆ ತಂಬುಳಿ

ಬೇಕಾಗುವ ಪದಾರ್ಥಗಳು

  • ಬಸಳೆ ಎಲೆಗಳು 6
  • ಜೀರಿಗೆ 1 ಚಮಚ
  • ಕರಿಮೆಣಸು 5 ಕಾಳು
  • ತುಪ್ಪ 1 ಚಮಚ
  • ಕಾಯಿ ತುರಿ 1 ಕಪ್
  • ಹಸಿಮೆಣಸು 1
  • ಮೊಸರು 1 ಕಪ್
  • ಉಪ್ಪು
  • ಸಾಸಿವೆ
  • ಒಣ ಮೆಣಸು 1
  • ಕರಿಬೇವು

ಮಾಡುವ ವಿಧಾನ
ಒಂದು ಬಾಣಲೆಗೆ ಒಂದು ಚಮಚ ತುಪ್ಪ, 5 ಕಾಳು ಕರಿಮೆಣಸು, 1 ಚಮಚ ಜೀರಿಗೆ ಹಾಕಿ ಹುರಿಯಬೇಕು. ಅನಂತರ ಬಸಳೆ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ಒಂದ್ ಕಪ್ ಕಾಯಿ ತುರಿ, ಹಸಿ ಮೆಣಸು ಹಾಗೂ ಹುರಿದ ಪದಾರ್ಥಗಳನ್ನು ಸೇರಿಸಬೇಕು. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಅದಕ್ಕೆ ಮೊಸರನ್ನು ಸೇರಿಸಿ ಕಲಸಬೇಕು. ನಂತರ ಸಾಸಿವೆ, ಕರಿಬೇವು ಹಾಗೂ ಒಣಮೆಣಸಿನ ಒಗ್ಗರಣೆಯನ್ನು ಹಾಕಿದರೆ ಬಸಳೆ ಸೊಪ್ಪಿನ ತಂಬುಳಿ ಸಿದ್ದವಾಗುತ್ತದೆ. ಇದು ಆರೋಗ್ಯಕ್ಕೆ ಅತಿ ತಂಪು, ಹಾಗೂ ಅತಿ ಉತ್ತಮವಾಗಿದೆ.

ಇಷ್ಟೆಲ್ಲ ಉಪಯೋಗಗಳಿರುವ ಬಸಳೆ ಮನೆಮದ್ದಿಗೆ ಮಾತ್ರವಲ್ಲದೆ ನಿತ್ಯದ ಅಡುಗೆಯಲ್ಲೂ ಅಗ್ರಗಣ್ಯವಾಗಿದೆ. ಬಸಳೆ ಇಂದ ಮಾಡುವ ಬಸಳೆ ಸಾರು, ಬಸಳೆ ಬಜ್ಜಿ, ಬಸಳೆ ತಂಬುಳಿ, ಬಸಳೆ ಸೂಪ್ ಹಾಗೂ ಬಸಳೆ ಪಲ್ಯ. ಇಷ್ಟೆಲ್ಲ ರುಚಿಕರ ಖಾದ್ಯಗಳನ್ನು ನಾವು ಬಸಳೆಯಿಂದ ತಯಾರಿಸಬಹುದು. ಬಸಳೆಯ ಪರಿಚಯ ಎಲ್ಲರಿಗೂ ಇರಲಿಕ್ಕಿಲ್ಲ, ಪರಿಚಯ ಇದ್ದವರು ವಾರಕ್ಕೆ ಒಮ್ಮೆ ಬಸಳೆಯನ್ನು ತಿಂದೇ ತಿನ್ನುತ್ತಾರೆ. ಇಂತಹ ಪ್ರಯೋಜನಕಾರಿ ಬಸಳೆಯ ಲೇಖನವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇವೆ. ಲೇಖನವನ್ನು ಓದಿ ಅರಿತು ಬಸಳೆಯ ಪ್ರಯೋಜನಗಳನ್ನು ಪಡೆಯಬೇಕು ಎಂಬುದೊಂದು ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.