ಸರ್ವಋತು ಸರ್ವಪ್ರಿಯ ಬಾಳೆಹಣ್ಣು – ಮಾಹಿತಿ ಮತ್ತು ಉಪಯೋಗಗಳು

Spread the love

ಸರ್ವಋತು ಸರ್ವಪ್ರಿಯ ಬಾಳೆಹಣ್ಣು - ಮಾಹಿತಿ ಮತ್ತು ಉಪಯೋಗಗಳು. AI Image

ಬಾಳೆಗಿಡದ ಹಸಿರೆಳೆಗಳ ಮಧ್ಯ ಕೊನೆ ಕೊನೆಯಾಗಿ ಹುಟ್ಟಿ ಬೆಳೆಯುವ ಈ ಬಾಳೆಹಣ್ಣು ತುಂಬಾ ಸಿಹಿ ಹಾಗು ಆರೋಗ್ಯಕರವೂ ಆಗಿದೆ. ಸರ್ವಕಾಲದಲ್ಲೂ ನಮ್ಮ ಮನೆಗಳಲ್ಲಿ ಜೊತೆ ಇರುವ ಹಣ್ಣು ಎಂದರೆ ಅದು ಬಾಳೆ ಹಣ್ಣು.

ಬಾಳೆಹಣ್ಣಿನ ಕೆಲವು ವೈಜ್ಞಾನಿಕ ಅಂಶಗಳನ್ನು ಈಗ ಕಲೆಹಾಕೋಣ

ವೈಜ್ಞಾನಿಕ ಹೆಸರು – ಮುಸ (musa)
ಆಂಗ್ಲ ಹೆಸರು – ಬನಾನಾ (banana)

ಬಾಳೆಹಣ್ಣುಗಳು ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್‌ಗಳನ್ನು ಹೊಂದಿದ್ದು,  ವಿಟಮಿನ್ ಸಿ, ವಿಟಮಿನ್ ಬಿ 6 ಮತ್ತು ಮ್ಯಾಂಗನೀಸ್‌ನಂತಹ ಇತರ ಅಗತ್ಯ ಪೋಷಕಾಂಶಗಳನ್ನು ಸಹ ಹೊಂದಿವೆ.

ಬಾಳೆಹಣ್ಣು ಹೊಂದಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ಉತ್ತಮವಾಗಿ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ಬಾಳೆಹಣ್ಣುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಮತ್ತು ಫೈಬರ್‌ಗಳ ಗಣಿಯಾಗಿದೆ, ಇದು ದೇಹದ ತೂಕ ನಿಯಂತ್ರಣಕ್ಕೆ ಉತ್ತಮವಾಗಿದೆ ಮತ್ತು  ಪೊಟ್ಯಾಸಿಯಮ್ ಮೂಳೆಗಳನ್ನು ಬಲಪಡಿಸಿ ಮತ್ತು ಆಸ್ಟಿಯೊಪೊರೋಸಿಸ್ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಹಾಗೆಯೇ ಸಂಧಿವಾತಕ್ಕೆ ಉತ್ತಮ ಅಮೃತವಾಗಿದೆ.

ಬಾಳೆಹಣ್ಣಿನ ಕೆಲ ರುಚಿಯಾದ ತಿನಿಸುಗಳ ವಿಧಾನಗಳ ಬಗೆಗಿನ ಮಾಹಿತಿಗಳು

ಗರಿ ಗರಿ ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು

  • ಬಾಳೆಕಾಯಿ ( ನೇಂದ್ರ ಬಾಳೆ )
  • ಎಣ್ಣೆ
  • ಉಪ್ಪು
  • ಖಾರದ ಪುಡಿ
  • ಅರಿಶಿಣ

ಮಾಡುವ ವಿಧಾನ
ಎಲ್ಲರಿಗೂ ಪ್ರಿಯಕರವಾದ ಈ ಬಾಳೆ ಚಿಪ್ಸ್ ಮಾಡುವುದು ಕೂಡ ತುಂಬಾ ಸುಲಭ. ಚಿಪ್ಸ್ ಮಾಡಲೆಂದೇ ಅನೇಕ ಬಾಳೆ ತಳಿಗಳಿವೆ ಉದಾಹರಣೆಗೆ ನೇಂದ್ರ ಬಾಳೆ, ಬಾಳೆಕಾಯಿಯನ್ನು ಚೆನ್ನಾಗಿ ಶುದ್ಧಗೊಳಿಸಿ ಸಿಪ್ಪೆಯನ್ನು ತೆಗೆದುಕೊಂಡು ಸಪೂರವಾದ ಹಾಗೂ ಉದ್ದನೆಯ ಸ್ಲೈಸ್ ಗಳಾಗಿ ಕತ್ತರಿಸಿಕೊಂಡು, ಕಪ್ಪಾಗದಂತೆ ಇರಲು ನೀರಿಗೆ ಹಾಕಬೇಕು. ಮತ್ತೊಂದೆಡೆ ಒಂದು ಕಪ್ ಕಲ್ಲುಪ್ಪನ್ನು ಎರಡು ಲೋಟ ನೀರಿಗೆ ಹಾಕಿ ಕದಡಿ ಉಪ್ಪು ನೀರನ್ನು ತಯಾರಿಸಿಕೊಳ್ಳಬೇಕು. ನಂತರ ಬಾಳೆಕಾಯಿಯನ್ನು ನೀರಿನಿಂದ ತೆಗೆದು ಸಂಪೂರ್ಣ ನೀರಿನ ಅಂಶವನ್ನು ಕಡಿಮೆ ಮಾಡಿ ಕಾದ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು. ಒಮ್ಮೆ ಮಗುಚಿ ಒಂದು 3 ಚಮಚ ಉಪ್ಪು ನೀರನ್ನು ಎಣ್ಣೆಯಲ್ಲಿ ಕರಿಯುತ್ತಿರುವ ಬಾಳೆಕಾಯಿಗಗಳ ಮೇಲೆ ಹಾಕಬೇಕು. ಸ್ವಲ್ಪ ಬಣ್ಣ ಬದಲಾದ ನಂತರ ಎಣ್ಣೆಯನ್ನು ಸೋಸಿ, ಖಾರವನ್ನು ಅವಶ್ಯಕತೆಗೆ ತಕ್ಕಷ್ಟು ಬೆರೆಸಿ ಚೆನ್ನಾಗಿ ಕಲಸಿ ತಿಂದರೆ…ಎಂಥ ರುಚಿ!! ಬಾಳೆಯ ಚಿಪ್ಸ್ ಸವಿಯಲು ಸಿದ್ಧವಾಗುತ್ತದೆ.

ಬಾಳೆಹಣ್ಣಿನ ರಸಾಯನ

ಬೇಕಾಗುವ ಪದಾರ್ಥಗಳು

  • ಬಾಳೆ ಹಣ್ಣು 2
  • ಕಾಯಿ ತುರಿ 1/4  ಕಪ್
  • ಏಲಕ್ಕಿ 2
  • ಸಕ್ಕರೆ 4 ಚಮಚ
  • ಉಪ್ಪು

ಮಾಡುವ ವಿಧಾನ
ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸೊಳ್ಳಬೇಕು. ಕಾಲು ಕಪ್ಪು ಕಾಯಿ ತುರಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಗು 2 ಏಲಕ್ಕಿಯನ್ನು ಹಾಕಿ ರುಬ್ಬಿಕೊಂಡು ಕಾಯಿ ಹಾಲನ್ನು ತಯಾರಿಸಿಕೊಳ್ಳಬೇಕು. ಕಾಯಿ ಹಾಲನ್ನು ಚೆನ್ನಾಗಿ ಶೋಧಿಸಿಕೊಂಡು ಹಾಲನ್ನು ಮಾತ್ರ ಕತ್ತರಿಸಿದ  ಬಾಳೆಹಣ್ಣಿಗೆ ಬೆರೆಸಬೇಕು ಜೊತೆಗೆ 4 ಚಮಚ ಸಕ್ಕರೆ, ಚಿಟಿಕೆ ಉಪ್ಪು ಬೆರೆಸಿ ಕಲಸಿದರೆ ಬಾಳೆ ಹಣ್ಣಿನ ರಸಾಯನ ಸಿದ್ಧವಾಗುತ್ತದೆ. ಇದು ದೇಹದ ಆರೋಗ್ಯಕ್ಕೆ ತುಂಬಾ ಹಿತವಾದದ್ದು.

ಬಾಳೆಹಣ್ಣು ಐಸ್ ಕ್ರೀಮ್ (ಸಕ್ಕರೆ ಉಪಯೋಗಿಸದೆ)

ಬೇಕಾಗುವ ಪದಾರ್ಥಗಳು

  • ಬಾಳೆ ಹಣ್ಣು 2
  • ಹಾಲು 1/4 ಕಪ್
  • ಜೇನುತುಪ್ಪ 1 ಚಮಚ
  • ಗೋಡಂಬಿ 8
  • ಬಾದಾಮಿ, ಪಿಸ್ತಾ ಸಣ್ಣ ಚುರುಗಳು ಐಸ್ ಕ್ರೀಮ್ ಮೇಲೆ ಹಾಕಲು

ಮಾಡುವ ವಿಧಾನ
ಮೊದಲು ಬಾಳೆ ಹಣ್ಣನ್ನು ಹೆಚ್ಚಿ ಒಂದು 5 ಗಂಟೆಗಳ ಕಾಲ ಡೀಪ್ ಫ್ರೀಜರ್ನಲ್ಲಿ ಇಡಬೇಕು. ಅನಂತರ ಮಿಕ್ಸಿ ಜಾರಿಗೆ ಬಾಳೆ ಹಣ್ಣನ್ನು ಹಾಕಬೇಕು. ಜೊತೆಗೆ ಹಾಲು, ಗೋಡಂಬಿ, ಜೇನುತುಪ್ಪ ಎಲ್ಲಾ ಸೇರಿಸಿ ರುಬ್ಬಿಕೊಳ್ಳಬೇಕು. ಅನಂತರ ಒಂದು ಡಬ್ಬದಲ್ಲಿ ಹಾಕಿ ಮತ್ತೆ ಒಂದು 8 ಗಂಟೆಗಳ ಕಾಲ ಡೀಪ್ ಫ್ರೀಜರ್ ನಲ್ಲಿ ಇಟ್ಟು…ಅನಂತರ ಸ್ವಲ್ಪ ಬಾದಾಮಿ, ಪಿಸ್ತಾಗಳ ಚೂರಿಗಳಿಂದ ಅಲಂಕರಿಸಿ ಸವಿಯಬೇಕು. ಇದು ಸಣ್ಣ ಮಕ್ಕಳಿಗೂ ನೀಡಬಹುದು ಏಕೆಂದರೆ ಇದರಲ್ಲಿ ಸಕ್ಕರೆ ಹಾಗೂ ರಾಸಾಯನಿಕಗಳ ಬಳಕೆ ಎಲ್ಲೂ ಮಾಡಿಲ್ಲ.

ಬಾಳೆಕಾಯಿ ಫ್ರೈ

ಬೇಕಾಗುವ ಪದಾರ್ಥಗಳು

  • ರವೆ 1/2 ಕಪ್
  • ಖಾರದ ಪುಡಿ 1 ಚಮಚ
  • ಅರಿಶಿಣ ಪುಡಿ 1/4 ಚಮಚ
  • ಹಿಂಗು ಸ್ವಲ್ಪ
  • ಉಪ್ಪು
  • ಎಣ್ಣೆ

ಮಾಡುವ ವಿಧಾನ
ಬಾಳೆಕಾಯಿಯನ್ನು ಚೆನ್ನಾಗಿ ತೊಳೆದು ಫ್ರೈ ಮಾಡಲು ತೆಳುವಾದ ಉದ್ದನೆಯ ಹೋಳುಗಳಾಗಿ ಕತ್ತರಿಸಿಕೊಳ್ಳಬೇಕು. ಅದನ್ನು ಕತ್ತರಿಸಿದ ತಕ್ಷಣ ನೀರಲ್ಲಿ ಇಡಬೇಕು ಇಲ್ಲವಾದರೆ ಕಪ್ಪಾಗುತ್ತದೆ. ಒಂದು ತಟ್ಟೆಯಲ್ಲಿ ರವೆ, ಅರಿಶಿಣ, ಖಾರದಪುಡಿ, ಹಿಂಗು ( ಮೇಲೆ ತಿಳಿಸಿದ ಪ್ರಮಾಣದಷ್ಟು ) ಹಾಗೂ ಉಪ್ಪು ಹಾಕಿ ರವೆಯ ಮಿಶ್ರಣ ತಯಾರಿಸಿಕೊಳ್ಳಬೇಕು. ಹೆಂಚು ಕಾದ ಮೇಲೆ ಎಣ್ಣೆ ಹಾಕಿ ಒಂದೊಂದೆ ಬಾಳೆಕಾಯಿ ಹೊಳನ್ನು ರವೆಯ ಮಿಶ್ರಣದ ಮೇಲೆ ಹೊರಲಾಡಿಸಿ ಹೆಂಚಿನ ಮೇಲೆ ಹಾಕಬೇಕು. ಚೆನ್ನಾಗಿ ಗರಿ ಗರಿಯಾಗಿ ಬೆಂದ ಮೇಲೆ ಬಾಳೆಕಾಯಿ ಫ್ರೈ ಸವಿಯಲು ಸಿದ್ದವಾಗುತ್ತದೆ. ಇದು ಒಂದು ಸುಲಭ ವಿಧಾನವಾಗಿದ್ದು ಒಮ್ಮೆ ಪ್ರಯತ್ನಿಸಿ, ಹೊಸ ರುಚಿಯನ್ನು ಸವಿಯಿರಿ.

ಇನ್ನೂ ಬಾಳೆಹಣ್ಣು ದೇವರ ನೈವೇದ್ಯಕ್ಕೂ ಪ್ರಿಯವಾದದ್ದು, ಪಂಚಾಮೃತ, ಸಪಾದ ಭಕ್ಷ್ಯ, ಹಣ್ಣು ಕಾಯಿ ಎಲ್ಲದರಲ್ಲೂ ಬಾಳೆಹಣ್ಣು ಪ್ರಮುಖ. ನಿತ್ಯ ಒಂದು ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೂ ಉತ್ತಮವಾಗಿದೆ. ಬಾಳೆಹಣ್ಣಿನ ಅನೇಕ ವಿಷಯಗಳ ಕುರಿತು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದೇವೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi
Tags: balehannina chipsbalehannina rasayanabalehannubalehannu ice cream for kidsbalehannu kaadyabalyekayi chipsBananabanana benefits by gruha snehibanana health tipsbanana ice cream at homebanana icecreambanana icecream recipe by gruha snehibanana raw frybest banana snacks in kannadabest gruha sangathi for your home remediesbest healthy ice cream for kidsbest kannada blogbest kids icecreamCan we eat bananas on an empty stomach in the morning?Does eating bananas help in weight loss?gruha sangaatigruhasnehi best kannada home remediesgruhasnehi bloghealth benefits of balehannuHealth benefits of banana and milkhealthy banana rasayanahome made banana fryhome made banana icecream recipehome remedies in kannadaice cream recipe in kannadaIs banana good for digestion?manemaddu in kannadatasty banana chipstraditional healthy banana chips recipetypes of bananaWhat are the benefits of eating bananas daily?your best gruha sangatiಗೃಹಸ್ನೇಹಿನಿಮ್ಮ ಬೆಸ್ಟ್ ಗೃಹ ಸಂಗಾತಿಬಾಳೆಕಾಯಿ ಫ್ರೈಬಾಳೆಹಣ್ಣು ಉಪಯೋಗಗಳುಬಾಳೆಹಣ್ಣು ತಿನ್ನುವ ಲಾಭಗಳು ಯಾವುವು?ಬಾಳೆಹಣ್ಣು ಮತ್ತು ಹಾಲಿನ ಪ್ರಯೋಜನಗಳುಬಾಳೆಹಣ್ಣು ಹೊಟ್ಟೆಗಾಗಿ ಉಪಯುಕ್ತವೇ?ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಹುದೇ?ಸರ್ವಋತು ಸರ್ವಪ್ರಿಯ ಬಾಳೆಹಣ್ಣು

Recent Posts

ಕೆಮ್ಮು ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು

ಕೆಮ್ಮು, ಶೀತ ಮತ್ತು ಕಫಕ್ಕೆ ನೈಸರ್ಗಿಕ ಪರಿಹಾರಗಳು. AI Image ಪ್ರಸ್ತುತ ದಿನಮಾನದಲ್ಲಿ ಹಲವಾರು ಕಾರಣಗಳಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹಸಿ…

12 hours ago

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?

ತುಂಬೆ ಗಿಡದಲ್ಲಿ(Leucas aspera) ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?. AI Image ತುಂಬೆ ಗಿಡಗಳು ಗಾತ್ರದಲ್ಲಿ ಅತಿ ಚಿಕ್ಕದಾಗಿದ್ದು, ಪರಿಸರದಲ್ಲಿ…

2 days ago

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು

ರಕ್ತದ ಆರೋಗ್ಯ – ರಕ್ತಹೀನತೆ ನಿವಾರಣೆಗಾಗಿ ರಕ್ತವನ್ನು ವೃದ್ಧಿಸುವ ಬೆಸ್ಟ್ ರೆಸಿಪಿಗಳು. AI Image ನಮ್ಮ ದೇಹದ ಒಂದು ಮುಖ್ಯ…

3 days ago

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು

ಹಲಸಿನ ಕಾಯಿಯ ವಿವಿಧ ಬಗೆಯ ಬೆಸ್ಟ್ ರೆಸಿಪಿಗಳು. AI Image ಹಲಸು ಎಂದೊಡನೆ ಬಾಯಲ್ಲಿ ಒಮ್ಮೆ ನೀರೂರುವುದು ಖಂಡಿತ. ಹಲಸಿನ…

4 days ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

5 days ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

6 days ago

This website uses cookies.