ಮೊಣಕಾಲು ನೋವಿಗೆ ಸರಳ ಶಾಶ್ವತ ಪರಿಹಾರ ಮನೆಯಲ್ಲೇ ಮಾಡಿ – ಪರಿಣಾಮಕಾರಿ ಸೇಬು ಪಾನೀಯ (Knee Pain home remedies)

Spread the love

ಮೊಣಕಾಲು ನೋವಿಗೆ ಸರಳ ಶಾಶ್ವತ ಪರಿಹಾರ ಮನೆಯಲ್ಲೇ ಮಾಡಿ - ಪರಿಣಾಮಕಾರಿ ಸೇಬು ಪಾನೀಯ. AI Generated Image

ಮೊಣಕಾಲು ನೋವು, ದಿನನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಮಾನ್ಯ ಸಮಸ್ಯೆಯಾಗಿದೆ. ವಯಸ್ಸು ಮತ್ತು ದೈಹಿಕ ಶ್ರಮದಿಂದ ಇದನ್ನು ಅನೇಕರು ಅನುಭವಿಸುತ್ತಾರೆ. ಇದರ ಶಾಶ್ವತ ಪರಿಹಾರಕ್ಕಾಗಿ ಮನೆಯಲ್ಲೇ 10 ನಿಮಿಷದಲ್ಲಿ ತಯಾರಿಸಬಹುದಾದ ಪರಿಣಾಮಕಾರಿ ಸೇಬು ಪಾನೀಯವು ನೈಸರ್ಗಿಕ ಪರಿಹಾರವಾಗಿದೆ. ಸೇಬಿನಲ್ಲಿ ಇರುವ ಪೋಷಕಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು, ಸ್ನಾಯುಗಳ ಬಲಿಷ್ಠತೆಗೆ ಹಾಗೂ ನೋವಿನ ನಿವಾರಣೆಗೆ ಸಹಾಯಕವಾಗುತ್ತವೆ. ನಿತ್ಯ ನಿಯಮಿತವಾಗಿ ಈ ಪಾನೀಯವನ್ನು ಸೇವಿಸುವುದರಿಂದ ಮೊಣಕಾಲು ನೋವಿಗೆ ಶಾಶ್ವತ ಪರಿಹಾರವನ್ನು ಪಡೆಯಬಹುದು.

ಸೇಬು ಹಣ್ಣಿನಲ್ಲಿ ವಿಟಮಿನ್ ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾದ್ದು, ಹೃದಯದ ಆರೋಗ್ಯವನ್ನು ಸುಧಾರಿಸುದಲ್ಲದೆ ಮಧುಮೇಹವನ್ನು ತಡೆಗಟ್ಟುತ್ತದೆ ಮತ್ತು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಹಾಗೆಯೇ ಸೇಬು ಹಣ್ಣುಗಳಲ್ಲಿ ನಾರಿನಂಶ ಅಧಿಕವಾಗಿದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೂಕ ಇಳಿಸಲು ಕೂಡ ಸೇಬು ಹಣ್ಣು ಉಪಯುಕ್ತವಾಗಿದೆ. ಸೇಬು ಹಣ್ಣುಗಳನ್ನು ತಾಜಾವಾಗಿ ತಿನ್ನಬಹುದು ಹಾಗೆಯೇ ಅವುಗಳನ್ನು ಜ್ಯೂಸ್, ಸಲಾಡ್,ಮತ್ತು ಇತರ ಭಕ್ಷ್ಯಗಳಲ್ಲಿ ಬಳಸಬಹುದು. 

ಸೇಬು ಹಣ್ಣಿನ ಪ್ರಯೋಜನಗಳು

  • ಮೆದುಳಿಗೆ ಬೇಕಾಗುವ ಫಾಸ್ಪರಸ್ ಅಂಶವು ಸೇಬಲ್ಲಿ ಹೇರಳವಾಗಿದೆ. ಹಾಗಾಗಿ ಜ್ಞಾಪಕ ಶಕ್ತಿ ಹೆಚ್ಚಿಸಲು ಹಾಗು ಮೆದುಳಿನ ಅನೇಕ ಸಮಸ್ಯೆಗಳಿಗೆ ಸೇಬು ಅತ್ಯಂತ ಪ್ರಯೋಜನಕಾರಿಯಾಗಿದೆ.
  • ಉರಿ ಮೂತ್ರ ಹಾಗು ಯುರಲ್ ಇನ್ಫೆಕ್ಷನ್ ಅಂತಹ ಸಮಸ್ಯೆಗಳಿಗೆ ಸೇಬು ಉತ್ತಮವಾಗಿದೆ.
  • ಕಾಲು ಸಂಧಿ ನೋವಿಗೆ ಸೇಬು ಅತ್ಯಂತ ಪ್ರಯೋಜನಕಾರಿ ಆಗಿದೆ. ಮೂಳೆ ಆರೋಗ್ಯಕ್ಕೆ ಸೇಬು ಉತ್ತಮವಾಗಿದೆ.
  • ಹೊಟ್ಟೆ ಹುಣ್ಣಿಗೆ, ಕಣ್ಣಿನ ಉತ್ತಮ ಆರೋಗ್ಯಕ್ಕೆ, ಸೌಂದರ್ಯವರ್ಧಕವಾಗಿಯೂ ಹಾಗು ಸ್ಮರಣ ಶಕ್ತಿಗೆ ಸೇಬು ಸರ್ವ ಸಿದ್ಧವಾಗಿದೆ.

ಸೇಬು ಹಣ್ಣು ಮಂಡಿ ನೋವಿಗೆ ಉತ್ತಮ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಅದರಲ್ಲಿ ಎರಡು ಮನೆಮದ್ದುಗಳ ಬಗ್ಗೆ ಈ ಕೆಳಗಿನ ಲೇಖನದಲ್ಲಿ ವಿಶ್ಲೇಷಿಸಿದ್ದೇವೆ. 

1. ಸೇಬು ಹಣ್ಣಿನ ಶರಬತ್

ಬೇಕಾಗುವ ಪದಾರ್ಥಗಳು:

  • 1 ಸೇಬು ಹಣ್ಣು
  • 1 ಲಿಂಬು ಹಣ್ಣು

ಮಾಡುವ ವಿಧಾನ:

ಒಂದು ಸೇಬು ಹಣ್ಣನ್ನು ಹಾಗು ಲಿಂಬು ಹಣ್ಣನ್ನು ಸಣ್ಣ ಸಣ್ಣ ತುಂಡಾಗಿ ಕತ್ತರಿಸಿಕೊಳ್ಳಬೇಕು. ನಂತರ ಎರಡು ಲೋಟ ನೀರನ್ನು ತೆಗೆದುಕೊಂಡು ಅದರಲ್ಲಿ ಕತ್ತರಿಸಿದ ಸೇಬು ಹಾಗು ಲಿಂಬುವನ್ನು ಹಾಕಿ, ಒಂದು ಲೋಟ ಆಗುವವರೆಗೂ ಕುದಿಸಬೇಕು. ನಂತರ ಶೋಧಿಸಿ ಬೆಳಿಗ್ಗೆ ಹಾಗು ಸಂಜೆ ನಿತ್ಯ ಕುಡಿಯುತ್ತಿದ್ದರೆ ಮಂಡಿನೋವು ಮಂಗಮಾಯವಾಗುವುದು ನಿಶ್ಚಿತ. ಮಂಡಿ ನೋವಿಗೆ ಇದು ಅತ್ಯಂತ ಪರಿಣಾಮಕಾರಿ ಪರಿಹಾರ.

2. ಸೇಬು ಹಣ್ಣಿನ ಸೂಪ್

ಬೇಕಾಗುವ ಪದಾರ್ಥಗಳು:

  • 1 ಸೇಬು ಹಣ್ಣು
  • ಕರಿ ಮೆಣಸು ಪುಡಿ 1 ಸಣ್ಣ ಚಮಚ,
  • 8 ಗೋಡಂಬಿ,
  • 1 ಚಮಚ ಸಕ್ಕರೆ,
  • 1 ಚಮಚ ತುಪ್ಪ ಹಾಗು
  • ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಸೇಬು ಹಣ್ಣಿನ ಸಿಪ್ಪೆ ತೆಗೆದು ಸಣ್ಣ ತುಂಡಾಗಿ ಕತ್ತರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಒಂದು ಬಾಣಲೆಗೆ ತುಪ್ಪ ಹಾಕಿ ಗೋಡಂಬಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಅದೇ ಉಳಿದ ತುಪ್ಪದಲ್ಲಿ 1 ಸಣ್ಣ ಚಮಚ ಕಾಳುಮೆಣಸು ಪುಡಿ ಹಾಕಿ ರುಬ್ಬಿದ ಸೇಬು, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಕಿ ಸ್ವಲ್ಪ ನೀರನ್ನು ಹಾಕಿ ಸೂಪ್ ನ ಹದ ಬರುವ ವರೆಗೆ ಕುದಿಸಬೇಕು. ಹುರಿದ ಗೋಡಂಬಿ ಹಾಕಿದರೆ ಸೇಬು ಹಣ್ಣಿನ ಸೂಪ್ ಸವಿಯಲು ಸಿದ್ಧ.

ಒಂದು ಸೇಬನ್ನು ನಿತ್ಯ ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ.ಅಂತೆಯೇ ಸೇಬು ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

ಅನೇಕ ಉಪಯೋಗಗಳನ್ನು ನೀಡುವ ಈ ರುಚಿಕರ ಹಣ್ಣು ನಮ್ಮೆಲ್ಲರ ಪಾಲಿಗೆ ಅಮೃತವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

View Comments

Share
Published by
GruhaSnehi

Recent Posts

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು

ಜೇನುತುಪ್ಪ – ಆರೋಗ್ಯದ ಮೇಲಿನ ಲಾಭಗಳು ಹಾಗೂ ವಿವಿಧ ಉಪಯೋಗಗಳು. AI Image ಮನೆಮದ್ದುಗಳು ಹಾಗೂ ಕೆಲವು ಪ್ರಾಕೃತಿಕ ಔಷಧಿಗಳ…

1 month ago

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ

ಮೂಲಂಗಿ(Radish) ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ. AI Image ಬಿಳಿಯ ಮೈ, ಹಸಿರು ಜುಟ್ಟು ಎಂಬಂತೆ ಮೂಲಂಗಿಯು ಕಾಣುತ್ತದೆ. ಬಿಳಿಯ…

1 month ago

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins)

ಒಣ ದ್ರಾಕ್ಷಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಮನೆಮದ್ದುಗಳನ್ನು ತಿಳಿಯಿರಿ (Health benefits of raisins). AI Image ಎಲ್ಲರಿಗೂ ಹೆಚ್ಚಾಗಿ…

1 month ago

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು

ಅಶ್ವತ್ಥಮರ(ಅರಳಿ ಮರದ) ಅದ್ಭುತ ಆರೋಗ್ಯ ಪ್ರಯೋಜನಗಳು. AI Image ಆಂಗ್ಲ ಹೆಸರು - ಪೀಪಲ್ ಟ್ರೀವೈಜ್ಞಾನಿಕ ಹೆಸರು - ಪೈಕಸ್…

1 month ago

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು

ಮೂಲವ್ಯಾಧಿ: ಮನೆಮದ್ದುಗಳು ಮತ್ತು ಪರಿಹಾರಗಳು ಮೂಲವ್ಯಾಧಿ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಆಧುನಿಕ ಯುಗದ ಆಹಾರ ಪದ್ಧತಿ,…

1 month ago

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ

ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - AI…

1 month ago

This website uses cookies.