
ಅಲೋವೆರಾ ಅಥವಾ ಲೋಳೆಸರವು ಒಂದು ವಿಭಿನ್ನ ರೀತಿಯ ಸಸ್ಯವಾಗಿದ್ದು, ಸಣ್ಣ ಬೇರು ಹಾಗೂ ಅದರಿಂದ ಹೊರ ಬರುವ ದಪ್ಪನೆಯ, ರಸಭರಿತ ಎಲೆಗಳು. ಆ ಎಲೆಗಳ ತುದಿಯಲ್ಲಿ ಸಣ್ಣ ಮುಳ್ಳಿನ ತರಹದ ಒಂದು ಭಾಗ, ಹಾಗೆಯೇ ಸುಡು ಬೇಸಿಗೆಯಲ್ಲಿ ಕೆಲವೊಮ್ಮೆ ಬಿಡುವ ಹಳದಿ ಅಥವಾ ಕೆಂಪು ಬಣ್ಣದ ಹೂವುಗಳು. ಇಷ್ಟು ಈ ಸಸ್ಯದ ಸುಂದರವಾದ ಚಿತ್ರಣ. ಇದು ಬರಿ ಸೌಂದರವರ್ಧಕವಾಗಿ ಮಾತ್ರವಲ್ಲ, ಹಲವು ಔಷಧಿಗಳಲ್ಲೂ ಬಳಸಲಾಗುತ್ತದೆ. ಇದು ದೇಹದ ಉಷ್ಣವನ್ನು ಕೂಡ ನಿಯಂತ್ರಣದಲ್ಲಿ ಇಡುವ ಗುಣಗಳನ್ನು ಹೊಂದಿದೆ. ಇಂತಹ ಲೋಳೆಸರದ ಬಗ್ಗೆ ವಿಸ್ತರವಾದ ಮಾಹಿತಿಯನ್ನು ಈ ಲೇಖನದಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸಲಾಗಿದೆ.
ವೈಜ್ಞಾನಿಕ ವಿಚಾರಗಳು
ವೈಜ್ಞಾನಿಕ ಹೆಸರು – ಅಲೋವೆರಾ ( Aloe vera )
ಅಲೋವೆರಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಹಾಗೂ ಖನಿಜಗಳು ತುಂಬಿದ್ದು, ಬಹಳ ಉಪಯುಕ್ತವಾಗಿದೆ. ಅನೇಕ ಜೀವ ಸತ್ವಗಳು, ಮೆಗ್ನಿಷಿಯಂ, ಕ್ರೋಮಿಯಂ, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಸಿಯಂ, ಕಬ್ಬಿಣ, ಕೊಪ್ಪರ್, ಫೋಲಿಕ್ ಆಸಿಡ್ ಹಾಗೂ ಮುಖ್ಯವಾಗಿ ವಿಟಮಿನ್ ಎ1, ಬಿ1, ಬಿ2, ಬಿ3, ಬಿ6, ಬಿ12, ಸಿ ಗಳು ಇವೆ.
ಅಲೋವೆರಾದ ಕೆಲವು ಮಹತ್ವಪೂರ್ಣ ಉಪಯೋಗಗಳು
1. ಸೌಂದರ್ಯವರ್ಧಕವಾಗಿ ಅಲೋವೆರಾದ ಬಳಕೆ ಮಹತ್ತರವಾಗಿದೆ.
- ತಾಜಾ ಅಲೋವೆರಾವನ್ನು ತೆಗೆದುಕೊಂಡು ಮಧ್ಯ ಸೀಳಿ ಆ ಎಲೆಗಳ ಒಳಗಿನ ಲೋಳೆಯನ್ನು ಮುಖದಲ್ಲಿರುವ ಕಪ್ಪು ಕಲೆಗಳ ಮೇಲೆ ಹಾಗೆಯೇ ಮೊಡವೆಗಳ ಮೇಲೆ ಹಚ್ಚುವುದರಿಂದ ಕಲೆ, ಮೊಡವೆಗಳು ನಿವಾರಣೆಯಾಗಿ ಮುಖವು ಹೊಸ ಕಾಂತಿಯನ್ನು ಪಡೆದುಕೊಳ್ಳುತ್ತದೆ.
- ಅಲೋವೆರಾದ ಲೋಳೆಯನ್ನು ಅಡುಗೆ ಮನೆಯಲ್ಲಿ ಕೈ ಸುಟ್ಟುಕೊಂಡಾಗ, ಅಥವಾ ಬಿಸಿಯಾದ ವಸ್ತುಗಳನ್ನು ಮುಟ್ಟಿ ಕೈ ಅಥವಾ ಚರ್ಮ ಸುಟ್ಟಾಗ ಅಲ್ಲಿ ಹಚ್ಚಬೇಕು. ಇದು ನೋವನ್ನು ತಣಿಸುವುದಲ್ಲದೆ, ಕಲೆಯನ್ನು ದೂರಗೊಳಿಸುತ್ತದೆ.
- ಬೇಸಿಗೆಯಲ್ಲಿ ಮುಖ್ಯವಾಗಿ ಕಾಡುವ ಸನ್ ಬರ್ನ್ (sun burn) ಸಮಸ್ಯೆಗೆ ಅಲೋವೆರಾ ಅತಿ ಉತ್ತಮ ಪರಿಹಾರವಾಗಿದೆ. ನಿತ್ಯ ಮನೆಯಿಂದ ಆಚೆ ಬಿಸಿಲಿಗೆ ಹೋಗುವ ಮುನ್ನ ಅಲೋವೆರಾದ ಲೋಳೆಯನ್ನು ಮುಖಕ್ಕೆ ಹಚ್ಚಿಕೊಂಡು ಹೋಗಬೇಕು, ಇಲ್ಲವೇ ಸನ್ ಬರ್ನ್ ಆದ ನಂತರ ಕೂಡ ಅಲೋವೆರಾ ಜೆಲ್ ಅಥವಾ ಲೋಳೆಯನ್ನು ಹಚ್ಚಬೇಕು. ಇದನ್ನು ನಿತ್ಯ ಹಚ್ಚಬೇಕು. ಒಂದೆರಡು ದಿನದಲ್ಲಿ ಪರಿಹಾರ ಸಿಗುವುದಿಲ್ಲ, ಪ್ರತಿನಿತ್ಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.
- ಕೆರೆತ, ನವೆ, ನೋವು, ಉರಿ ಹಾಗೂ ಕೀಟಗಳ ಕಡಿತಕ್ಕೆ ಕೂಡ ಅಲೋವೆರಾದ ಲೋಳೆಯನ್ನು ಹಚ್ಚಿದರೆ ಉರಿ ಕಡಿಮೆಯಾಗುತ್ತದೆ.
2. ಕೂದಲ ಉತ್ತಮ ಬೆಳವಣಿಗೆ ಹಾಗೂ ಸಂರಕ್ಷಣೆಯಲ್ಲಿ ಅಲೋವೆರಾದ ಪಾತ್ರ
ಅಲೋವೆರಾದ ಲೋಳೆಯಲ್ಲಿ ಮೆಂತ್ಯ ಕಾಳನ್ನು ನೆನೆಸಬೇಕು. ಒಂದು ರಾತ್ರಿ ನೆನೆದ ನಂತರ ಮರುದಿನ ಬೆಳಿಗ್ಗೆ ರುಬ್ಬಿಕೊಂಡು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಇದರಿಂದ ತಲೆ ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತದೆ.
3. ಅಲೋವೆರಾ ಯಕೃತ್ತಿನ ಆರೋಗ್ಯಕ್ಕೆ ಪುಷ್ಠಿ ನೀಡುತ್ತದೆ
ಎರಡು ಚಮಚ ಲೋಳೆರಸದ ರಸಕ್ಕೆ ಅರ್ಧ ಚಮಚ ಅರಿಶಿಣ ಪುಡಿಯನ್ನು ಸೇರಿಸಿ ಸೇವಿಸಬೇಕು. ಇದನ್ನು ಎರಡು ಹೊತ್ತು, ಮೂರು ದಿನಗಳ ಕಾಲ ಸೇವಿಸಬೇಕು.
4. ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆಗಳಲ್ಲಿ ಅಲೋವೆರಾದ ಪಾತ್ರ.
ಅಜೀರ್ಣ ಸಮಸ್ಯೆ ಜಾಸ್ತಿ ಆಗಿದ್ದರೆ ಲೋಳೆಸರಕ್ಕೆ ಒಂದು ಚಮಚ ಒಣಶುಂಠಿ ಪುಡಿಯನ್ನು ಬೆರೆಸಿ ತಿನ್ನಬೇಕು. ಇದು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಹಾಗೆಯೇ ಇದು ಮಲಬದ್ಧತೆಯನ್ನು ಕೂಡ ಕಡಿಮೆ ಮಾಡುತ್ತದೆ.
5. ಕಣ್ಣಿನ ಆರೋಗ್ಯಕ್ಕೆ ಅಲೋವೆರಾ ಸಹಕಾರಿಯಾಗಿದೆ.
ಲೋಳೆಸರದ ಬೇರನ್ನು ನೀರಿನಲ್ಲಿ ಚೆನ್ನಾಗಿ ತೇಯ್ದು, ಅದಕ್ಕೆ ಚಿಟಿಕೆ ಅರಿಶಿಣ ಸೇರಿಸಿ, ಕಣ್ಣಿನ ರೆಪ್ಪೆಯ ಮೇಲೆ ಹಚ್ಚಬೇಕು. ಇದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಕೆಲವೊಮ್ಮೆ ಹಲವು ಕಾರಣಗಳಿಂದ, ಅಂದರೆ ಧೂಳು, ಬಿಸಿಲು, ಹುಳಗಳು ಬಿದ್ದು ಕಣ್ಣು ಕೆಂಪಾಗುತ್ತದೆ. ಇಂತಹ ಸಮಯದಲ್ಲಿ ತಂಪನೆಯ ತಣ್ಣೀರಿನಿಂದ ಕಣ್ಣನ್ನು ತೊಳೆದುಕೊಂಡು ಮೇಲೆ ತಿಳಿಸಿದ ಮಿಶ್ರಣವನ್ನು ಕಣ್ಣ ರೆಪ್ಪೆ ಮೇಲೆ ಹಚ್ಚಿಕೊಂಡು ಒಂದು ಅರ್ಧ ಗಂಟೆ ಹಾಗೆಯೇ ಬಿಡಬೇಕು. ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
6. ಗ್ಯಾಸ್ಟ್ರಿಕ್ ಮತ್ತು ಸಂಧಿವಾತದ ಸಮಸ್ಯೆ ನಿವಾರಣೆಗೆ ಲೋಳೆಸರದ ಕೊಡುಗೆಗಳು
ಗ್ಯಾಸ್ಟ್ರಿಕ್ ಸಂಬಂಧಿ ಸಮಸ್ಯೆಗಳು ಇದ್ದಾಗ ಒಂದು ಚಮಚ ಲೋಳೆಸರವನ್ನು ಹಾಗೆ ತಿನ್ನಬೇಕು. ಇದು ತ್ವರಿತ ಗತಿಯಲ್ಲಿ ಉಪಶಮನವನ್ನು ನೀಡುತ್ತದೆ. ವಾಯುವನ್ನು ಹಾಗೂ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಕಾಲು ಇದು ಉತ್ತಮವಾಗಿದೆ. ಗ್ಯಾಸ್ಟ್ರಿಕ್ ನಿಂದ ಬರುವ ನೋವಿಗೂ ಇದು ಉತ್ತಮವಾಗಿದೆ. ಹಾಗೆ ಅಲೋವೆರಾದ ತಿರುಳಿನೊಟ್ಟಿಗೆ ಸ್ವಲ್ಪ ಹಿಂಗನ್ನು ಮಿಶ್ರಣ ಮಾಡಿ ಹಚ್ಚಿದರೆ ಸಂಧಿವಾತದ ಸಮಸ್ಯೆಗೂ ಕ್ರಮೇಣವಾಗಿ ಪರಿಹಾರ ದೊರಕುತ್ತದೆ.
7. ಕಿವಿಯ ನೋವಿಗೆ ಅಲೋವೆರಾ ಮದ್ದು
ಅಲೋವೆರಾದ ರಸವನ್ನು ಅರ್ಧ ಚಮಚ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ, ನೋವಿರುವ ವಿರುದ್ಧ ಕಿವಿಗೆ ಎರಡು ಹನಿ ಹಾಕಬೇಕು. ಇದರಿಂದ ನೋವು ಕಡಿಮೆಯಾಗುತ್ತದೆ.
ಇನ್ನೂ ಹಲವು ಸಮಸ್ಯೆಗಳಿಗೂ ಲೋಳೆಸರ ಉಪಯುಕ್ತವಾಗಿದೆ. ಹೊಟ್ಟೆಯಲ್ಲಿ ಉಂಟಾಗುವ ಜಂತುವಿನ ಸಮಸ್ಯೆಗೂ ಇದು ಅತಿ ಉತ್ತಮವಾಗಿದೆ. ಲೋಳೆಸರದ ಸೇವನೆಯೂ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸಿ, ಕೊಲೆಸ್ಟ್ರೋಲ್ ಮಟ್ಟವನ್ನು ತಗ್ಗಿಸಿ, ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಕೊಬ್ಬಿನ ಅಂಶ ಕಡಿಮೆ ಮಾಡಿಸುವುದರಿಂದ ತೂಕ ಇಳಿಸಲು ಕೂಡ ಲೋಳೆಸರ ಉತ್ತಮವಾಗಿದೆ. ಹಾಗೆಯೇ ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ಇದು ಲೋಳೆಸರವನ್ನು ನಿತ್ಯ ಸೇವಿಸುವುದಿಂದ ಮಾನಸಿಕ ಒತ್ತಡ, ಖಿನ್ನತೆಯನ್ನು ಕಡಿಮೆಮಾಡಿಕೊಳ್ಳಬಹುದು. ಅಧಿಕವಾದ ವಿಟಮಿನ್ ಎ ಮತ್ತು ಸಿ ಇರುವುದರಿಂದ ಅಲೋವೆರಾದ ಸೇವನೆಯೂ ಅರೋಗ್ಯವರ್ಧಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಲೋಳೆಸರವನ್ನು ಅರೆದು ರಸವನ್ನು ಕುಡಿಯುವುದರಿಂದ ವಿಶಮ ಜ್ವರಕ್ಕೆ ಅತಿ ಉತ್ತಮವಾಗಿದೆ. ಜ್ವರದ ತಾಪವು ಬೇಗ ಕಡಿಮೆಯಾಗುತ್ತದೆ. ಕೆಲವರಿಗೆ ಅಲೋವೆರಾ ಅಲೆರ್ಜಿ ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಆದ್ದರಿಂದ ಬಳಸುವ ಮುಂಚೆ ಮುಂಜಾಗ್ರತೆ ವಹಿಸಬೇಕು. ಅಲೋವೆರಾದ ಉಪಯೋಗಗಳನ್ನು ಪಡೆದುಕೊಂಡು ಅರೋಗ್ಯವಂತರಾಗಿರಿ ಎಂಬುದು ನಮ್ಮ ಆಶಯ.
ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.
ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
