ವೀಳ್ಯದೆಲೆ ಬಗ್ಗೆ ತಿಳಿದುಕೊಳ್ಳಬೇಕಾದ ಅದ್ಭುತ ವಿಷಯಗಳು – ಆರೋಗ್ಯ ಲಾಭಗಳು ಮತ್ತು ಉಪಯೋಗಗಳು (Betel Leaf Health Benefits)

Spread the love

ವೀಳ್ಯದೆಲೆ ಬಗ್ಗೆ ತಿಳಿದುಕೊಳ್ಳಬೇಕಾದ ಅದ್ಭುತ ವಿಷಯಗಳು. AI Image

ಅಡಿಕೆ ಮರಕ್ಕೋ, ತೆಂಗಿನ ಮರಕ್ಕೋ ಆಸರೆಯಾಗಿಕೊಂಡು ಸೊಂಪಾಗಿ ಬೆಳೆಯುವ ಬಳ್ಳಿ ನಮ್ಮ ವೀಳ್ಯದೆಲೆ. ನಾವು ಇದನ್ನು ನಮ್ಮ ಆಡು ಭಾಷೆಯಲ್ಲಿ ತಿನ್ನುವ ಎಲೆ ಎಂದು ಕರೆಯುತ್ತೇವೆ. ರೈತರು ಅಡಿಕೆ, ತೆಂಗು ಎಂಬ ಬೆಳೆಗಳ ಒಡನೆ ಈ ವೀಳ್ಯದೆಲೆಯನ್ನು ಬೆಳೆಸಿ ಉತ್ತಮ ಲಾಭವನ್ನು ಗಳಿಸುತ್ತಾರೆ. ಈ ತಿನ್ನುವ ಎಲೆಗಳಿಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು, ಅತ್ಯಂತ ಬೇಡಿಕೆಯದ್ದಾಗಿದೆ. ಇನ್ನೂ ನಮ್ಮ ತಾತ, ಅಜ್ಜಿಯರ ಕಾಲದಲ್ಲಿ ನಿತ್ಯ ಎಲೆ ಅಡಿಕೆ ಹಾಕುವ ರೂಢಿ ಇತ್ತು, ಅದು ಈಗಲೂ ಕೆಲವು ಕಡೆ ಚಾಲ್ತಿಯಲ್ಲಿದೆ.

ಕೆಲವು ಧಾರ್ಮಿಕ ವಿಚಾರಗಳು

ಹಿಂದೂ ಸಂಪ್ರದಾಯದ ಪ್ರಕಾರ ದೇವರಲ್ಲಿ ಏನೇ ಪ್ರಾರ್ಥನೆ ಮಾಡಿಕೊಂಡು ಹರಕೆ ಕಟ್ಟುವಾಗ ಎರಡು ಎಲೆ ಹಾಗೂ ಒಂದು ಅಡಿಕೆಯನ್ನು ದೇವರ ಮುಂದೆ ಇಡುತ್ತಾರೆ. ಅಂತೆಯೇ ದಾನ ಕೊಡುವಾಗಲು ಸಹ ವೀಳ್ಯದೆಲೆ ಅಡಿಕೆ ಇಟ್ಟು ಕೊಡುವುದು ವಾಡಿಕೆ. ಹಿಂದಿನ ಕಾಲದಲ್ಲಿ ಕೆಲವು ಒಪ್ಪಂದಗಳನ್ನು ಮಾಡುವಾಗ ಅಥವಾ ಮದುವೆ ಮಾತುಕತೆ ಮುಗಿಸಿ ಒಪ್ಪಂದ ಮಾಡಿಸುವಾಗ ಎಲ್ಲಾ ಕಡೆ ಅಡಿಕೆ ವೀಳ್ಯದೆಲೆಯನ್ನು ಪರಸ್ಪರ ಬದಲಾಯಿಸಿಕೊಳ್ಳುತ್ತಿದ್ದರು. ಇದರಲ್ಲೇ ವೀಳ್ಯದೆಲೆಯ ಮಹತ್ವ ಎಷ್ಟು ಎಂದು ತಿಳಿಯುತ್ತದೆ. 

ಹಾಗೆಯೇ ವೀಳ್ಯದೆಲೆಯಲ್ಲಿ ತಾಯಿ ಲಕ್ಷ್ಮೀ ದೇವಿಯು ವಾಸವಾಗಿದ್ದಾಳೆ ಎಂಬ ನಂಬಿಕೆಯು ಇದೆ. ಅದಕ್ಕೆ ವೀಳ್ಯದೆಲೆ ಪೂಜನೀಯ ಸ್ಥಾನವನ್ನು ಹೊಂದಿದೆ. ದೇವಿಯ ಪೂಜೆಯ ಕಳಸಕ್ಕೆ ಸಹ ವೀಳ್ಯದೆಲೆಯೇ ಶ್ರೇಷ್ಠ. ಹಾಗೆ ಸುಹಾಸಿನಿಯರಿಗೆ ಅರಿಶಿಣ, ಕುಂಕುಮ ಹಚ್ಚಿ, ಮಡಿಲು ತುಂಬುವಾಗ ಕೂಡ ವೀಳ್ಯದೆಲೆ ಅಡಿಕೆ ಎರಡು ಇರಲೇ ಬೇಕು. ಇಷ್ಟೆಲ್ಲ ದೈವಿಕ ಅಂಶವುಳ್ಳ ವೀಳ್ಯದೆಲೆ ಮಹನೀಯವಾಗಿದೆ.

ಕೆಲವು ವೈಜ್ಞಾನಿಕ ವಿಚಾರಗಳು

ವೈಜ್ಞಾನಿಕ ಹೆಸರು – ಪೈಪರ್ ಬೆಟಲ್ ( Piper betle )
ಆಂಗ್ಲ ಹೆಸರು – ಬಿಟಲ್ ಲೀಫ್ (Betel Leaf)

ವೀಳ್ಯದೆಲೆಯಲ್ಲಿ ಯೂಜೆನಾಲ್, ಕ್ಯಾವಿಕೋಲ್, ಮತ್ತು ಇತರ ಫೀನಾಲಿಕ್ ಅಂಶಗಳು ಸೇರಿದಂತೆ ಇನ್ನೂ ಹಲವಾರು ಸಂಯುಕ್ತಗಳಿವೆ. ಈ ಸಂಯುಕ್ತಗಳು ಆಂಟಿಆಕ್ಸಿಡೆಂಟ್,ಆಂಟಿ ಇನ್ಫ್ಲುಮಿಟರಿ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿವೆ.

ವೀಳ್ಯದೆಲೆಯ ಔಷಧಿಯ ಗುಣಗಳು

1. ಶೀತಕ್ಕೆ ವೀಳ್ಯದೆಲೆ

ಶೀತದ ನಿವಾರಣೆಗಾಗಿ ಒಂದು ವೀಳ್ಯದೆಲೆ, 5 ತುಳಸಿ ದಳಗಳು, 2 ದೊಡ್ಡ ಪತ್ರೆ ಎಲೆಗಳು ಇವೆಲ್ಲವನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಜೇನುತುಪ್ಪಡೊಡನೆ ಸೇವಿಸಿದರೆ, ಶೀತವು ಬೇಗ ಕಡಿಮೆಯಾಗುತ್ತದೆ.

2. ಕೆಮ್ಮು ಹಾಗೂ ಕಫಕ್ಕೆ ವೀಳ್ಯದೆಲೆ

  • ನಿರಂತರ ಕೆಮ್ಮಿನಿಂದ ಬಳಲುತಿದ್ದರೆ ಅರ್ಧ ವೀಳ್ಯದೆಲೆಯೊಳಗೆ ಕಲ್ಲುಪ್ಪನ್ನು ಹಾಕಿ ಚೆನ್ನಾಗಿ ಅಗೆದು ತಿನ್ನಬೇಕು. ಹೀಗೆ ದಿನಕ್ಕೆ ಎರಡು ಬಾರಿ ತಿಂದರೆ ಕೆಮ್ಮು ತ್ವರಿತವಾಗಿ ಮಾಯವಾಗುತ್ತದೆ.
  • ಒಂದು ವೀಳ್ಯದೆಲೆಯಲ್ಲಿ 4 ತುಳಸಿ ದಳಗಳು, ಒಂದು ಲವಂಗ ಹಾಗೂ ಸಣ್ಣ ಚೂರು ಪಚ್ಚ ಕರ್ಪೂರ ಇಟ್ಟುಕೊಂಡು ಜಗಿದು ತಿನ್ನಬೇಕು. ಇದರಿಂದ ಶ್ವಾಸಕೋಶವು ಶುದ್ಧವಾಗುತ್ತದೆ. ಹಾಗೆಯೇ ಕಫ ಕರಗಿ ಕೆಮ್ಮು ನಿವಾರಣೆಯಗುತ್ತದೆ. ಈ ವಿಧಾನವನ್ನು ದಿನಕ್ಕೆ ಎರಡು ಸಲ ಒಂದು ವಾರ ಮಾಡಬೇಕು.
  • ಕಫ ನಿವಾರಣೆಗೆ ವೀಳ್ಯದೆಲೆಯೊಳಗೆ 4 ಕಾಳುಮೆಣಸು ಹಾಗೂ ಕಲ್ಲುಪ್ಪನ್ನು ಸೇರಿಸಿ ಜಗಿದು ತಿನ್ನುವುದರಿಂದ ಕಫ ಕರಗುತ್ತದೆ.
  • ಉಬ್ಬಸ ಹಾಗೂ ಮಿತಿ ಮೀರಿದ ಕೆಮ್ಮಿಗೆ ಒಂದು ಚಮಚ ವೀಳ್ಯದೆಲೆ ರಸ, ಒಂದು ಚಮಚ ಬಿಳಿ ಈರುಳ್ಳಿ ರಸ ಹಾಗೂ ಚಿಟಿಕೆ ಹಿಂಗು ಇವು ಮೂರನ್ನು ಜೇನುತುಪ್ಪದೊಡನೆ ಸೇವಿಸಬೇಕು. ಇದು ದೊಡ್ಡ ಸದ್ದು ಮಾಡುವ ಮಿತಿ ಮೀರಿದ ಕೆಮ್ಮಿಗೆ ಹಾಗೂ ಉಬ್ಬಸಕ್ಕೆ ಉತ್ತಮವಾಗಿದೆ.

3. ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ವೀಳ್ಯದೆಲೆ

  • ವೀಳ್ಯದೆಲೆ ಒಳಗೆ 15 ಕಾಳು ಕೊತ್ತಂಬರಿ ಬೀಜವನ್ನು ಹಾಕಿ ಜಗಿದು ತಿನ್ನಬೇಕು. ಇದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.
  • ಸಣ್ಣ ಮಗುವಿಗೆ ವಾಯುವಿನ ಸಮಸ್ಯೆಯಿಂದ ಹೊಟ್ಟೆ ಉಬ್ಬರವಾಗಿದ್ದರೆ, ವೀಳ್ಯದೆಲೆಯ ಮೇಲೆ ಎಣ್ಣೆ ಸವರಿ ಹೊಟ್ಟೆಗೆ ಶಾಖ ಕೊಡಬೇಕು. ಹೀಗೆ ಮಾಡಿದರೆ ಹೊಟ್ಟೆಯಲ್ಲಿನ ವಾಯು ಹೊರಗಡೆ ಹೋಗಿ ಹೊಟ್ಟೆಗೆ ಆರಾಮ ಸಿಗುತ್ತದೆ.

4. ಕಣ್ಣಿನ ಅರೋಗ್ಯಕ್ಕೆ ವೀಳ್ಯದೆಲೆ

ಅತಿ ನಿದ್ರಾಹೀನತೆ, ನಿದ್ದೆ ಕಡಿಮೆಯಾದಾಗ ಅಥವಾ ಅತಿ ಉಷ್ಣದಿಂದ ಕಣ್ಣು ಕೆಂಪಾಗಾಗುತ್ತದೆ. ಆ ಸಮಯದಲ್ಲಿ ವೀಳ್ಯದೆಲೆಯನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಕಣ್ಣಿಗೆ ಎರಡು ಹನಿ ಹಾಕಬೇಕು. ಇದರಿಂದ ಕಣ್ಣು ಕೆಂಪಾಗುವುದು ಕಡಿಮೆ ಆಗುತ್ತದೆ.

5. ಗರ್ಭಾಶಯದ ಆರೋಗ್ಯಕ್ಕೆ ವೀಳ್ಯದೆಲೆ

ವೀಳ್ಯದೆಲೆಯ ಜೊತೆ ಸೋಂಪು ಕಾಳನ್ನು ಸೇರಿಸಿ ಜಗಿದು ತಿನ್ನುವುದರಿಂದ ಗರ್ಭಾಶಯದ ತೊಂದರೆಗಳು ನಿವಾರಣೆಯಗುತ್ತದೆ. ಬಾಣಂತಿಯರು ನಿತ್ಯ ಇದನ್ನು ಸೇವಿಸುವುದು ಅತಿ ಉತ್ತಮವಾಗಿದೆ. ತಾಯಂದಿರು ವೀಳ್ಯದೆಲೆ ತಿನ್ನುವುದರಿಂದ ಮಕ್ಕಳು ಹಾಲು ಹೊರ ಹಾಕುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

6. ಹಲ್ಲು ಹಾಗೂ ವಸಡಿನ ಆರೋಗ್ಯಕ್ಕೆ ವೀಳ್ಯದೆಲೆ

ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಒಂದು 5 ವೀಳ್ಯದೆಲೆಯನ್ನು ಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿಕೊಳ್ಳಬೇಕು. ಶೋಧಿಸಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಹಾಗೂ ವಸಡಿನ ನೋವು ಕಡಿಮೆಯಾಗುತ್ತದೆ.

7. ಕೂದಲು ಉದರುವಿಕೆ ಹಾಗೂ ಹೊಟ್ಟಿನ ಸಮಸ್ಯೆಗಳಿಗೆ ವೀಳ್ಯದೆಲೆ

ವೀಳ್ಯದೆಲೆಯನ್ನು ಚೆನ್ನಾಗಿ ರುಬ್ಬಿಕೊಂಡು ತಲೆ ಕೂದಲಿಗೆ ಬುಡದಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ ಒಣಗಿದ ನಂತರ ಸ್ನಾನ ಮಾಡಿ ತೊಳೆದುಕೊಳ್ಳಬೇಕು. ಇದು ಹೊಟ್ಟು ನಿವಾರಣೆ ಹಾಗೂ ಕೂದಲು ಊದರುವಿಕೆಗೆ ಉತ್ತಮವಾಗಿದೆ.

8. ರಸ್ಟ್ ಹಿಡಿದ ಕಬ್ಬಿಣ ತಗುಲಿ ಆದ ಗಾಯಗಳಿಗೆ ವೀಳ್ಯದೆಲೆ

ಕಬ್ಬಿಣ ಅಥವಾ ಯಾವುದೇ ಆಯುಧ ತಗುಲಿ, ಇಲ್ಲವೇ ಬಿದ್ದು ಆದ ಗಾಯಕ್ಕೂ ವೀಳ್ಯದೆಲೆಯನ್ನು ನಿಂಬೆ ರಸದಲ್ಲಿ ಅರಿದು ಗಾಯಕ್ಕೆ ಹಚ್ಚಬೇಕು. ಇದು ಗಾಯದ ನಂಜು ಏರಲು ಅವಕಾಶ ಮಾಡಿ ಕೊಡುವುದಿಲ್ಲ.

9. ತಲೆ ನೋವಿಗೆ ವೀಳ್ಯದೆಲೆ

ವೀಳ್ಯದೆಲೆಯನ್ನು ಸ್ವಲ್ಪ ಬಿಸಿ ಮಾಡಿ ಹಣೆಗೆ ಶಾಖವನ್ನು ಕೊಡುವುದರಿಂದ ತಲೆ ನೋವು ನಿವಾರಣೆಯಗುತ್ತದೆ.

10. ಕೊಲೆಸ್ಟ್ರೋಲ್ ಸಮಸ್ಯೆಗೆ ವೀಳ್ಯದೆಲೆ

ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ 1 ಎಸಳು ಬೆಳ್ಳುಳ್ಳಿ, 2  ಕಾಳುಮೆಣಸು ಹಾಗೂ ವೀಳ್ಯದೆಲೆ ಮೂರನ್ನು ಚೆನ್ನಾಗಿ ಜಜ್ಜಿಕೊಂಡು ಒಟ್ಟಿಗೆ ತಿನ್ನಬೇಕು. ಇದು ಅಧಿಕ ಕೊಲೆಸ್ಟ್ರೋಲ್ ನ್ನು ನಿಯಂತ್ರಿಸಲು ಬಹಳ ಉತ್ತಮವಾಗಿದೆ.

ಇನ್ನೂ ವೀಳ್ಯದೆಲೆಯು ಅನೇಕ ಕಡೆಯಲ್ಲಿ ಉಪಯುಕ್ತವಾಗಿದೆ. ವೀಳ್ಯದೆಲೆಯನ್ನು ತಿಂದರೆ ದಂತಕ್ಷಯದ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ. ಹಿಂದಿನ ಕಾಲದಲ್ಲಿ ಊಟ ಮಾಡಿದ ನಂತರ ಎಲೆ, ಅಡಿಕೆ, ಸುಣ್ಣ ಬೆರೆಸಿ ಕವಳ ಹಾಕುವ ರೂಢಿ ಇತ್ತು. ಇದು ಅಧಿಕ ಲಾಲಾರಸವನ್ನು ಉತ್ಪತ್ತಿ ಮಾಡಿ ಮಾಡಿದ ಊಟದ ಜೀರ್ಣಕ್ರಿಯೆಗೆ ಪೂರಕವಾಗಿರುತ್ತಿತ್ತು. ಇನ್ನೊಂದು ಏನೆಂದರೆ ಎಲೆ ಅಡಿಕೆ ಜೊತೆ ತಂಬಾಕು ಸೇವಿಸುತ್ತಾರೆ. ತಂಬಾಕು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಅದನ್ನು ಬಳಸುವುದು ನಿಶಿದ್ಧವಾಗಿದೆ. ಇನ್ನೂ ಎಲೆ ಅಡಿಕೆ ಬೆರೆಸಿ ಹಾಕುವುದರಿಂದ ಚಳಿಗಾಲದಲ್ಲಿ ದೇಹದ ಉಷ್ಣವನ್ನು ಏರಿಸಬಹುದು, ಹಾಗೆಯೇ ಬಾಣಂತಿಯರಿಗೆ ಇದು ಅತಿ ಉತ್ತಮವಾಗಿದೆ. ಎಲೆ ಅಡಿಕೆಯನ್ನು ಅಗೆದು, ಕಚ್ಚಿ ತಿನ್ನುವುದರಿಂದ ಹಲ್ಲು ಕೂಡ ಗಟ್ಟಿಯಾಗುತ್ತದೆ. ಇಂದಿನ ದಿನಗಳಲ್ಲಿ ವೀಳ್ಯದೆಲೆ ಶುಭ ಸಮಾರಂಭಗಳ ಅಲಂಕಾರಕ್ಕೂ ಬಳಕೆಯಾಗುತ್ತದೆ.

ವೀಳ್ಯದೆಲೆಯಲ್ಲಿ ರೋಗನಿರೋಧಕ ಶಕ್ತಿಯಿದ್ದು, ಅರೋಗ್ಯವರ್ಧಕವಾಗಿದೆ. ಅನೇಕ ಚರ್ಮದ ರೋಗಗಳಿಗೂ ಸಹಕಾರಿಯಾಗಿದ್ದು, ದಿನ ನಿತ್ಯದ ಕೆಲಸಗಳಲ್ಲಿ, ಪೂಜೆ-ಪುನಸ್ಕಾರಗಳಲ್ಲಿ, ಹಬ್ಬದ ದಿನಗಳಲ್ಲಿ ಜಾಸ್ತಿಯಾಗಿ ಬಳಸುತ್ತೇವೆ. ಇಂತಹ ವೀಳ್ಯದೆಲೆಯ ಬಗೆಗಿನ ಈ ಲೇಖನವನ್ನು ಓದಿ ಅದರ ಉಪಯೋಗಗಳನ್ನು ಪಡೆದುಕೊಳ್ಳಿರಿ ಎಂಬುದೊಂದು ಆಶಯ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love
GruhaSnehi

Share
Published by
GruhaSnehi
Tags: best gruha sangathi for your home remediesbest kannada blogbest Uses of Betel Leafbetel leaf benefits by gruha snehiBetel Leaf for Skin & HairBetel Leaf Scientific Namegruha sangaatigruha snehi kananda bloghome remedies in kannadaHow betel leaf helps in treating cough and cold?How to use betel leaf(vilyad ele) for digestion and immunity?paan leafsecrets benefits of Betel Leaf (vilyad ele)tinnuva ele benefitsTraditional Ayurvedic uses of betel leafTraditional Ayurvedic uses of betel leaf (vilyad ale)traditional uses of vilyad eleviledele gidaviledele health benefitsvilyad ele adhbuta vishayavilyad ele by gruha snehivilyadelevilyadele by gruha snehiWhat are the health benefits of betel leaf?your best gruha sangatiಆರೋಗ್ಯ ಪರಿಹಾರದಲ್ಲಿ ವೀಳ್ಯದೆಲೆಯ ಪಾತ್ರಗೃಹಸ್ನೇಹಿನಿಮ್ಮ ಬೆಸ್ಟ್ ಗೃಹ ಸಂಗಾತಿವೀಳ್ಯದೆಲೆ ಉಪಯೋಗಗಳುವೀಳ್ಯದೆಲೆಯ ಆರೋಗ್ಯ ಲಾಭಗಳು ಮತ್ತು ಆಯುರ್ವೇದ ಉಪಯೋಗಗಳುವೀಳ್ಯದೆಲೆಯ ತೊಡೆತ ಮತ್ತು ಚರ್ಮದ ಸೌಂದರ್ಯಕ್ಕೆ ಪ್ರಯೋಜನಗಳುವೀಳ್ಯದೆಲೆಯ ಸೌಂದರ್ಯ ಪ್ರಯೋಜನಗಳುವೀಳ್ಯದೆಲೆಯನ್ನು ತಿನುವುದರಿಂದ ಆರೋಗ್ಯಕ್ಕೆ ಏನು ಲಾಭ?ವೀಳ್ಯದೆಲೆಯನ್ನು ತಿನ್ನುವುದು ಆರೋಗ್ಯಕರವೇ?

Recent Posts

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! (Natural hair care)

ಕೂದಲಿನ ರಕ್ಷಣೆಯಲ್ಲಿ ಅಗ್ರಹಣ್ಯವಾಗಿರುವ ಪ್ರಮುಖ ಐದು ಸಾಮಗ್ರಿಗಳು ಇಲ್ಲಿವೆ! ಕೂದಲಿನ ಆರೋಗ್ಯ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಇಂದಿನ…

18 hours ago

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು (Fruit Salad for health)

ಹಣ್ಣುಗಳ ಸಲಾಡ್ ಸೇವನೆಯಿಂದ ಆರೋಗ್ಯದ ಅತ್ಯುತ್ತಮ ಲಾಭಗಳು. AI Image ಹಣ್ಣುಗಳ ಉಪಯೋಗಗಳನ್ನು ನಾವು ಅನೇಕ ಕಡೆಯಲ್ಲಿ, ಅನೇಕ ರೀತಿಯಲ್ಲಿ…

2 days ago

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು

ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು. AI Image ಕೆಲವರು ತರಕಾರಿ ಅಂಗಡಿಯಲ್ಲಿ ಒಂದು ತರಕಾರಿಯನ್ನು ಕಂಡೊಡನೆ…

3 days ago

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು

ವಿವಿಧ ಆರೋಗ್ಯಕರ ಮತ್ತು ರುಚಿಕರ ಹಲ್ವಾಗಳ ತಯಾರಿಕಾ ವಿಧಾನಗಳು. AI Image ತರಕಾರಿ ಹಾಗೂ ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಬಹುದು.…

4 days ago

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು

ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರೋಲ್ ನಿಯಂತ್ರಣಕ್ಕೆ ಉಪಯುಕ್ತವಾಗಿರುವ ಆರೋಗ್ಯಕರ ಮನೆಮದ್ದುಗಳು. AI Image ನಮ್ಮ ಹೃದಯ ನಮ್ಮ ಉಸಿರು. ಒಂದೊಂದು…

5 days ago

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು

ಆರೋಗ್ಯಕರ ತರಕಾರಿಗಳ ಸಲಾಡ್ ಮತ್ತು ಕೋಸಂಬರಿ ರೆಸಿಪಿಗಳು. AI Image ಹಸಿ ತರಕಾರಿಗಳು, ಕಾಳು ಬೇಳೆಗಳು ಅರೋಗ್ಯಕ್ಕೆ ತುಂಬಾ ಹಿತಕರವಾಗಿದೆ.…

6 days ago

This website uses cookies.