ಅರಿಶಿಣದ ಮಹತ್ವ: ಉತ್ತಮ ಆರೋಗ್ಯಕ್ಕೆ ಸೂಕ್ತ ಬಳಕೆ ಹಾಗು ಉಪಯೋಗಗಳು (Turmeric Health Benefits)

Spread the love

ಅರಿಶಿಣದ ಮಹತ್ವ: ಉತ್ತಮ ಆರೋಗ್ಯಕ್ಕೆ ಸೂಕ್ತ ಬಳಕೆ ಹಾಗು ಉಪಯೋಗಗಳು
ಅರಿಶಿಣದ ಮಹತ್ವ: ಉತ್ತಮ ಆರೋಗ್ಯಕ್ಕೆ ಸೂಕ್ತ ಬಳಕೆ ಹಾಗು ಉಪಯೋಗಗಳು. AI Generated Image

ಆಂಗ್ಲ ಪದ: ಟರ್ಮೆರಿಕ್ (Turmeric)
ವೈಜ್ಞಾನಿಕ ಹೆಸರು: ಕರ್ಕ್ಯೂಮ ಲಾಂಗ (Curcuma longa)

ಅರಿಶಿಣ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಜೀರ್ಣಕಾರಕ, ರಕ್ತ ಶುದ್ಧತೆ ಹಾಗೂ ಕಫ ನಿರ್ವಹಣೆಯಲ್ಲಿ ಅಧಿಕವಾಗಿ ಸಹಾಯಕವಾಗುತ್ತದೆ. ಅಡುಗೆಯಲ್ಲೂ ನಾವು ನಿತ್ಯ ಬಳಸುವ ಒಂದು ವಸ್ತುವಾಗಿದ್ದೂ, ಬಣ್ಣ, ರುಚಿ ಮತ್ತು ತನ್ನದೇ ಆದ ಸುವಾಸನೆಯಿಂದ ಅಗ್ರಗಣ್ಯವಾಗಿದೆ. ಅನೇಕ ನಂಜಿನ ಸಮಸ್ಯೆಗಳಿಗೆ ವಿಷಾಹರವಾಗಿ ಅಮೃತದಂತೆ ಕೆಲಸಮಾಡುತ್ತದೆ. ಅರಿಶಿಣ ಶುಭ ಕಾರ್ಯಗಳಲ್ಲೂ ಅಗ್ರವಾಗಿದ್ದು ಪೂಜಾ ಕಾರ್ಯಕ್ರಮಗಳಲ್ಲಿ ಕೂಡ ಮುಖ್ಯವಾಗಿ ಬಳಸುತ್ತಾರೆ.

ಒಂದು ಅರಿಶಿನ ಕೊಂಬನ್ನು ಕಟ್ಟಿದರೆ ಸೂತಕವೇ ದೂರವಾಗುತ್ತದೆ ಅನ್ನುವಷ್ಟು ಪವಿತ್ರವಾದದ್ದು ಅರಿಶಿನ.

ಅರಿಶಿಣ ಪ್ರಯೋಜನಗಳು:

ಚರ್ಮ, ತುರಿಕೆ ಹಾಗೂ ಕಜ್ಜಿ ಸಮಸ್ಯೆಗಳಿಗೆ

  1. ಅರಿಶಿಣ ಪುಡಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಮೈಗೆ ಹಚ್ಚಿ ಸ್ನಾನ ಮಾಡುವುದರಿಂದ, ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.
  2. ಅರಿಶಿಣ ಪುಡಿ ಹಾಗೂ ಕಾಳು ಮೆಣಸಿನ ಪುಡಿಯನ್ನು ಸಮಭಾಗವಾಗಿ ತೆಗೆದುಕೊಂಡು ಎಳ್ಳೆಣ್ಣೆಯಲ್ಲಿ ಕಲಸಿ ಹಚ್ಚಿಕೊಂಡರೆ ತುರಿಕೆ ಕಡಿಮೆಯಾಗುತ್ತದೆ.
  3. ಅರಿಶಿಣ ಕೊಂಬನ್ನು ಗೋಮೂತ್ರದಲ್ಲಿ ತೇಯ್ದು ಕಜ್ಜಿ ತುರಿಕೆ ಇರುವ ಕಡೆ ಹಚ್ಚಿದರೆ ಹುಳುಕಡ್ಡಿ ಸಮಸ್ಯೆ ಕಡಿಮೆಯಾಗುತ್ತದೆ.
  4. ಅರಿಶಿಣದ ಕೊಂಬು ಮತ್ತು ಅಳಲೇಕಾಯಿಯನ್ನು ಮಜ್ಜಿಗೆಯಲ್ಲಿ ತೇಯ್ದು ಹಚ್ಚಿಕೊಂಡರೆ ಇಸುಬು ಸಮಸ್ಯೆ ಕೂಡಾ ವಾಸಿಯಾಗುತ್ತದೆ.
  5. ಚರ್ಮ ಒಡೆಯುವಿಕೆಯ ಸಮಸ್ಯೆ ಇದ್ದರೆ ಅರಿಶಿನದ ಕೊಂಬನ್ನು ಹಾಲಿನ ಕೆನೆಯಲ್ಲಿ ತೇಯ್ದು ಹಚ್ಚಿಕೊಳ್ಳಬೇಕು.
  6. ಪ್ರತಿದಿನ ಮುಖದ ಮೊಡವೆಗಳನ್ನು ದೂರಪಡಿಸಲು ಅರಿಶಿಣ ಪುಡಿಯನ್ನು ಹಚ್ಚಿ ಮುಖವನ್ನು ಸ್ವಲ್ಪ ಸಮಯದ ನಂತರ ತೊಳೆಯುವ ಅಭ್ಯಾಸ  ಮಾಡಿಕೊಂಡರೆ ಮೊಡವೆ ಸಮಸ್ಯೆಗಳನ್ನು ದೂರ ಪಡಿಸಿಕೊಳ್ಳಬಹುದು.
  7. ಮುಖದ ಚರ್ಮದ ಕಾಂತಿಗೆ ಒಂದು ಒಳ್ಳೆಯ ಮದ್ದು ಎಂದರೆ ಹಸಿ ಅರಿಶಿಣವನ್ನು ಕಾಯಿಹಾಲು ಮತ್ತು ರಕ್ತಚಂದನ ದಲ್ಲಿ ತೇಯ್ದು ಮುಖದ ಚರ್ಮಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಶುದ್ಧಿ ಮಾಡಿಕೊಂಡರೆ ಮುಖದ ಕಾಂತಿ ಹೆಚ್ಚಾಗುತ್ತದೆ.

ನೆಗಡಿ, ಶೀತ ಹಾಗೂ ತಲೆನೋವು, ಗಂಟಲು ನೋವು

  1. ಶೀತದ ಸಮಯದಲ್ಲಿ ಬಿಸಿ ಹಾಲಿಗೆ ಅರಿಶಿಣ ಪುಡಿ ಹಾಗು ಶುಂಠಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ನೆಗಡಿ ಕೆಮ್ಮು,ಗಂಟಲು ನೋವು ಕಡಿಮೆಯಾಗುತ್ತದೆ.
  2. ಹಾಲಿನಲ್ಲಿ ಅರಿಶಿಣ ಕೊಂಬನ್ನು ತೇಯ್ದು ಆ ಗಂಧವನ್ನು ಬಿಸಿ ಮಾಡಿದ ನಂತರ ಗಂಟಲಿನ ಹೊರಭಾಗಕ್ಕೆ ಹಚ್ಚಿದರೆ ಗಂಟಲು ನೋವು ಕಡಿಮೆಯಾಗುತ್ತದೆ.
  3. ಅರಿಶಿನವನ್ನು ನೋವು ಇದ್ದ ಜಾಗದಲ್ಲಿ ನೀರಲ್ಲಿ ಕಲಸಿ ಹಚ್ಚುವುದರಿಂದ ನೋವಿನ ಪ್ರಮಾಣ ಕಡಿಮೆ ಮಾಡಿ, ಕೆಲವು ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಹೀಗಾಗಿ ನಾವು ಗಾಯವಾದಾಗ ರಕ್ತಸ್ರಾವವಾಗುತ್ತಿದ್ದಾರೆ  ಮೊದಲು ಅರಿಶಿನವನ್ನು ಹಚ್ಚುತ್ತೇವೆ. ಕಾರಣ ಅದು ರಕ್ತವನ್ನು ನಿಲ್ಲಿಸಿ ಪ್ರಥಮ ಚಿಕಿತ್ಸೆಗೆ ಮುನ್ನುಡಿಯಾಗುತ್ತದೆ.
  4. ಹಲ್ಲು ನೋವಿಗೂ ಸಹ ಅರಿಶಿಣ ಕೊಂಬನ್ನು ಸುಟ್ಟು, ಅದರ ಬೂದಿಗೆ ಉಪ್ಪು ಸೇರಿಸಿ ಹಲ್ಲು ಉಜ್ಜುವುದರಿಂದ ಹಲ್ಲು ಬೇನೆ ಕಡಿಮೆಯಾಗುತ್ತದೆ.

ಇಲಿ, ನಾಯಿ, ಹಾಗು ಚೇಳು ಕಡಿತಕ್ಕೆ

  1. ಅರ್ಧ ಕಪ್ ಹಾಲು ಹಾಗು ಅರ್ಧ ಕಪ್ ನೀರು ಹಾಗೆ 10 ಗ್ರಾಂ ಶುದ್ಧ ಅರಿಶಿನ ಬೆರೆಸಿ ಚೆನ್ನಾಗಿ ಕುದಿಸಬೇಕು. ನೀರಿನ ಅಂಶ ಎಲ್ಲ ಕುದ್ದು ಇಂಗಿದ ಮೇಲೆ ಉಳಿದ ಹಾಲಿನ ಮಿಶ್ರಣವನ್ನು ಒಂದು ವಾರ ಕಾಲ ಕುಡಿಯುವುದರಿಂದ ಪ್ರಾಣಿಗಳ ವಿಷದ ಪರಿಣಾಮ ಅಥವಾ ನಂಜು ಕಡಿಮೆ ಆಗುತ್ತದೆ.
  1. ಅರಿಶಿನ ಕೊಂಬನ್ನು ಗೋಮೂತ್ರದಲ್ಲಿ ತೇಯ್ದು ಅದರ ಗಂಧವನ್ನು ಸೇವಿಸುವುದರಿಂದ ಪ್ರಾಣಿ ವಿಷದ ಪರಿಣಾಮ ಕಡಿಮೆಯಾಗುತ್ತದೆ.
  2.  ಪ್ರಾಣಿಗಳಿಂದ ಕಡಿತವಾದ ಸ್ಥಳದಲ್ಲಿ ಅಥವಾ ಗಾಯವಾದ ಸ್ಥಳದಲ್ಲಿ ಅರಿಶಿನ ಹಚ್ಚಿದರೆ ಸಾಕು ಅದು ಮುಂದೆ ಸೆಪ್ಟಿಕ್ ಆಗುವುದನ್ನು ತಡೆಯುತ್ತದೆ.

ಮಂಗಳಮಯ ಅರಿಶಿನ ಎಲ್ಲ ಶುಭ ಕಾರ್ಯಗಳಲ್ಲೂ ಮುಂಚೂಣಿಯಲ್ಲಿರುತ್ತದೆ. ಕುಂಕುಮವನ್ನು ಕೂಡ ಅರಿಶಿನ ದಿಂದಲೇ ತಯಾರಿಸುತ್ತಾರೆ. ಇಂತಹ ಪವಿತ್ರ ಅರಿಶಿನವನ್ನು ನಮ್ಮ ದಿನ ನಿತ್ಯದ ಸ್ನೇಹಿ ಎಂದರೆ ತಪ್ಪಾಗಲಾರದು.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

2 thoughts on “ಅರಿಶಿಣದ ಮಹತ್ವ: ಉತ್ತಮ ಆರೋಗ್ಯಕ್ಕೆ ಸೂಕ್ತ ಬಳಕೆ ಹಾಗು ಉಪಯೋಗಗಳು (Turmeric Health Benefits)”

  1. Pingback: ಹಾಗಲಕಾಯಿಯ(Bitter Gourd) ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಮನೆಮದ್ದುಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿದ

  2. Pingback: ಬೇಸಿಗೆಯ ತಂಪನ್ನು ತಣಿಸಲು ಉತ್ತಮವಾಗಿರುವ ರುಚಿ ರುಚಿಯಾದ ತಂಬುಳಿಗಳು - ಗೃಹಸ್ನೇಹಿ - ನಿಸರ್ಗದ ಮಡಿಲಲ್ಲಿ ಅರಳಿ

Leave a Comment

Your email address will not be published. Required fields are marked *

Scroll to Top