ಎಳೆ ವಯಸ್ಸಿನಲ್ಲಿ ಕೂದಲು ಬೆಳಗಾಗುತ್ತಿದೆಯೇ!!! ಜೊತೆಗೆ ಹೊಟ್ಟಿನ ಸಮಸ್ಯೆಗಳು ಇದೆಯೇ? ತಪ್ಪದೆ ಓದಿ ಮತ್ತು ಶೀಘ್ರ ಪರಿಹಾರವನ್ನು ಪಡೆದುಕೊಳ್ಳಿ

Spread the love

ಎಳೆ ವಯಸ್ಸಿನಲ್ಲಿ ಕೂದಲು ಬೆಳಗಾಗುತ್ತಿದೆಯೇ!!! ಜೊತೆಗೆ ಹೊಟ್ಟಿನ ಸಮಸ್ಯೆಗಳು ಇದೆಯೇ? ತಪ್ಪದೆ ಓದಿ ಮತ್ತು ಶೀಘ್ರ ಪರಿಹಾರವನ್ನು ಪಡೆದುಕೊಳ್ಳಿ
ಎಳೆ ವಯಸ್ಸಿನಲ್ಲಿ ಕೂದಲು ಬೆಳಗಾಗುತ್ತಿದೆಯೇ!!! ಜೊತೆಗೆ ಹೊಟ್ಟಿನ ಸಮಸ್ಯೆಗಳು ಇದೆಯೇ. AI Image

ಬೆಟ್ಟದ ನೆಲ್ಲಿಕಾಯಿ ಮೊರಬ್ಬ

ಪದಾರ್ಥಗಳು

  • ಬೆಟ್ಟದ ನೆಲ್ಲಿಕಾಯಿ 
  • ಸಕ್ಕರೆ 1ಕಪ್
  • ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ
ಬೆಟ್ಟದ ನೆಲ್ಲಿಕಾಯಿ ಚೆನ್ನಾಗಿ ತೊಳೆದು ತೆಗೆದಿಟ್ಟುಕೊಳ್ಳಬೇಕು. ನೆಲ್ಲಿಕಾಯಿ ಬೀಜವನ್ನು ಬೇರ್ಪಡಿಸಿ ಉಳಿದ ನೆಲ್ಲಿಕಾಯಿ ಚೂರುಗಳನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ಈಗ ಒಂದು ಕಪ್ ಬೆಟ್ಟದ ನೆಲ್ಲಿಕಾಯಿ ಮಿಶ್ರಣಕ್ಕೆ ಒಂದುಬ್ಲಾಪ್ ಸಕ್ಕರೆ aa ಅಳತೆಯಲ್ಲಿ ಸಕ್ಕರೆ ತೆಗೆದುಕೊಳ್ಳಬೇಕು. ಸಕ್ಕರೆಯನ್ನು ಪಾಕ ಮಾಡಿ ಅದಕ್ಕೆ ನೆಲ್ಲಿಕಾಯಿ ಮಿಶ್ರಣ ಮಾಡಿ ತಳ ಹಿಡಿಯದಂತೆ ತಿರುಗಿಸಬೇಕು.ನಂತರ ಏಲಕ್ಕಿ ಪುಡಿಯನ್ನು ಬೆರೆಸಿ ತಿರುಗಿಸಬೇಕು. ಚೆನ್ನಾಗಿ ಬೆಂದು ತಳ ಬಿಟ್ಟ ನಂತರ ಗ್ಯಾಸ್ ಆರಿಸಿ, ಆರಿದ ನಂತರ ಗಾಜಿನ ಪಾತ್ರೆಯಲ್ಲಿ ಶೇಕರಿಸಿಟ್ಟುಕೊಳ್ಳಬೇಕು. ದಿನ ನಿತ್ಯ ಒಂದು ಚಮಚ ಸ್ವೀಕರಿಸುತ್ತಾ ಬರಬೇಕು.

ಪ್ರಯೋಜನಗಳು

  • ನೆಲ್ಲಿಕಾಯಿಯ ಅನೇಕ ಉಪಯುಕ್ತ ಗುಣಗಳು ಸೇರಿ ಪ್ರಾಯದಲ್ಲೇ ಕೂದಲು ಹಣ್ಣಾಗುವ ಪ್ರಕ್ರಿಯೆ ತಡೆಯುತ್ತದೆ. ನಿತ್ಯ ಒಂದು ಚಮಚ ನೆಲ್ಲಿಕಾಯಿ ಮೂರಬ್ಬ ಸ್ವೀಕರಿಸಿದರೆ ಕೂದಲ ಆರೋಗ್ಯಕ್ಕೂ ಉತ್ತಮವಾಗಿದೆ. ರಕ್ತ ಶುದ್ಧಿ ಗುಣ ಇರುವುದರಿಂದ ಕೂದಲಿಗೂ, ಚರ್ಮದ ಆರೋಗ್ಯಕ್ಕೂ ಉತ್ತಮ.
  • ಪಿತ್ತ ಅಥವಾ ಅನೇಕ ಕಾರಣಗಳಿಂದ ತಲೆ ತಿರುಗುವಿಕೆ ಸಮಸ್ಯೆ ಇದ್ದರೆ ಅದಕ್ಕೂ ಇದು ಉತ್ತಮ ಪರಿಹಾರವಾಗಿದೆ.
  • ವಿಟಮಿನ್ ಗಳ ಇರುವಿಕೆ ಇಂದ ಕಣ್ಣಿನ ದೃಷ್ಟಿ ಹಾಗು ಆರೋಗ್ಯಕ್ಕೂ ಉತ್ತಮವಾಗಿದೆ.
  • ಅಸಹಜವಾಗಿ ಮೂತ್ರದಲ್ಲಿ ರಕ್ತ ಬರುತ್ತಿದ್ದಾರೆ ಈ ಮದ್ದು ಉತ್ತಮವಾಗಿದೆ.
  • “ಸಿ” ಜೀವಸತ್ವ ಹೇರಳವಾಗಿರುವುದರಿಂದ ಒಮ್ಮೆಲೇ ಬರುವ ನೆಗಡಿ, ಕೆಮ್ಮಿಗೆ ಪರಿಹಾರ ನೀಡುತ್ತದೆ.
  • ನೆಲ್ಲಿಕಾಯಿಯ ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿದ್ದು ಆರೋಗ್ಯ ವರ್ಧಕವು ಹೌದು.

ತಲೆಯ ಹೊಟ್ಟು ಕಡಿಮೆಯಾಗಲು ಇಲ್ಲಿದೆ ಕೆಲವು ಮನೆಮದ್ದುಗಳು

ತಲೆ ಕೂದಲಿನ ಹೊಟ್ಟು ಸಮಸ್ಯೆ ಈಗಿನ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿದೆ. ಕಲುಷಿತ ಗಾಳಿ, ನೀರು ಹಾಗೂ ಗಾಳಿಯಲ್ಲಿಯ ಧೂಳು ಇವೆಲ್ಲದರ ಕಾರಣದಿಂದ ಹೊಟ್ಟು ಉಂಟಾಗುತ್ತದೆ. ಇದರ ಪರಿಹಾರಕ್ಕೆ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ.

  • ನಿಂಬೆಹಣ್ಣಿನ ಸಿಪ್ಪೆಯನ್ನು ಕಸವೆಂದು ಪರಿಗಣಿಸದೆ ಅದರಿಂದ ಪಡೆವ ಉಪಯೋಗಗಳ ಬಗ್ಗೆ ತಿಳಿಯಬೇಕು. ನಿಂಬೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ನೆರಳಲ್ಲಿ ಒಣಗಿಸಿ ಪುಡಿ ಮಾಸಿಕೊಳ್ಳಬೇಕು. ಎಣ್ಣೆ ಹಾಕಿದ ತಲೆ ಕೂದಲ ಸ್ನಾನ ಮಾಡುವಾಗ ನೀರು ಹಾಕಿ ನಿಂಬೆ ಸಿಪ್ಪೆ ಪುಡಿ ಹಾಗೂ ಸೀಗೆಪುಡಿಯನ್ನು ಬೆರೆಸಿ ತಲೆ ತೊಳೆದುಕೊಳ್ಳಬೇಕು. ಇದು ಕೂದಲಿಗೆ ಕಾಂತಿಯನ್ನು ಸಹ ನೀಡುತ್ತದೆ.
  • ಬಿಲ್ವಪತ್ರೆ ಕಾಯಿಯ ತಿರುಳನ್ನು ಬೇಯಿಸಿಕೊಳ್ಳಬೇಕು. ಅದನ್ನು ಚೆನ್ನಾಗಿ ಕಿವುಚಿ, ತಿರುಳನ್ನು ಮಾತ್ರ ತಲೆಯ ಬುಡಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ತಲೆ ತೊಳೆಯಬೇಕು. ಇದು ಹೊಟ್ಟಿನ ಸಮಸ್ಯೆಗೆ ಉತ್ತಮವಾಗಿದೆ.
  • ದಂಟಿನ ಸೊಪ್ಪನ್ನು ಚೆನ್ನಾಗಿ ತೊಳೆದು ಅರೆಯಬೇಕು. ಅರೆದ ಮಿಶ್ರಣವನ್ನು ತಲೆಗೆ ಚೆನ್ನಾಗಿ ಹಚ್ಚಿ ಒಂದು ತಾಸಿನ ನಂತರ ಚೆನ್ನಾಗಿ ತೊಳೆಯಬೇಕು. ಇದು ಹೊಟ್ಟಿನ ಸಮಸ್ಯೆಗಳನ್ನು ಪರಿಹರಿಸುತ್ತದೆ.

ತಲೆ ಕೂದಲಿನ ಬೆಳವಣಿಗೆಗೆ ಉತ್ತಮವಾದ ಸಲಹೆಗಳು ಹಾಗೂ ಸುಲಭ ಮನೆಮದ್ದುಗಳು

ಇಂದಿನ ಜನತೆಯಲ್ಲಿ ಹೆಚ್ಚಾಗಿ ಕಾಣುವ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ದೊಡ್ಡ ಸಾವಲಾಗಿದೆ. ಕೂದಲನ್ನು ಬೆಚ್ಚಗಿನ ನೀರಲ್ಲಿ ತೊಳೆದು, ಸ್ವಲ್ಪ ಸಾಂಬ್ರಾಣಿ ಹೊಗೆಯಲ್ಲಿ ಒಣಗಿಸಿ, ಜಡೆ ಕಟ್ಟಿಕೊಂಡರೆ ಕೂದಲ ಉದುರುವಿಕೆ ಕಡಿಮೆಯಾಗುತ್ತದೆ. ತಲೆ ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚಿ ತಲೆ ಸ್ನಾನ ಮಾಡುವುದು ಅತಿ ಉತ್ತಮವಾಗಿದೆ.

  • ತಲೆ ಕೂದಲ ಉತ್ತಮ ಬೆಳವಣಿಗೆ ಹಾಗೂ ಬೆಳ್ಳಗಾಗುವುದನ್ನು ತಡೆಯಲು ಒಂದು ಉತ್ತಮ ಎಣ್ಣೆಯನ್ನು ತಯಾರಿಸಬೇಕು. ಮೊದಲಿಗೆ ಒಂದು ಲೋಟ ಕೊಬ್ಬರಿ ಎಣ್ಣೆಗೆ 10 ಕಾಳು ಮೆಣಸನ್ನು ಕುಟ್ಟಿ ಹಾಕಬೇಕು. ಜೊತೆಗೆ 12 ಕರಿಬೇವಿನ ಎಲೆಗಳು ಹಾಗೂ ಅರ್ಧ ಈರುಳ್ಳಿಯನ್ನು ಹೆಚ್ಚಿ ಎಣ್ಣೆಗೆ ಸ್ ಸೇರಿಸಬೇಕು. ಇದನ್ನು ಚೆನ್ನಾಗಿ ಕುದಿಸಿ, ಸೋಸಿಕೊಳ್ಳಬೇಕು. ಈ ಎಣ್ಣೆಯನ್ನು ನಿತ್ಯ ತಲೆಗೆ ಹಚ್ಚಿದರೆ ತಲೆ ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತದೆ.
  • ಬೂದುಗುಂಬಳಕಾಯಿ ಸಿಪ್ಪೆಯನ್ನು ರುಬ್ಬಿಕೊಂಡು ಹಚ್ಚುವುದು ಕೂಡ ಉತ್ತಮ ಕೂದಲ ಬೆಳವಣಿಗೆಗೆ ಸಹಾಯಕವಾಗುತ್ತದೆ.
  • ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ರುಬ್ಬಿಕೊಂಡು ತಲೆಗೆ ಹಚ್ಚಿಕೊಂಡು, ಒಣಗಿದ ನಂತರ ಸ್ನಾನ ಮಾಡಿದರೆ ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ.
  • ಎಲಚಿ ಎಲೆಗಳು ಹಾಗೂ ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ರುಬ್ಬಿಕೊಂಡು ತಲೆಗೆ ಹಚ್ಚಿ ಸ್ನಾನ ಮಾಡುವುದು ಕೂಡ ತಲೆ ಕೂದಲ ಬೆಳವಣಿಗೆಗೆ ಉತ್ತಮವಾಗಿದೆ.
  • ಮೆಂತ್ಯದ ಸೊಪ್ಪನ್ನು ಎಳೆನೀರಿನೊಂದಿಗೆ ಸೇರಿಸಿ ರುಬ್ಬಿಕೊಂಡು ತಲೆಗೆ ಹಚ್ಚಿ, ಅರ್ಧ ಗಂಟೆಯ ನಂತರ ಸ್ನಾನ ಮಾಡಬೇಕು. ಇದು ಕೂದಲ ಬೆಳವಣಿಗೆಗೆ ಉತ್ತಮವಾಗಿದೆ.

ನಿಮ್ಮ ಅನಿಸಿಕೆ, ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ! 😊 ಹಾಗೂ, ಹೆಚ್ಚು ಮಾಹಿತಿಪೂರ್ಣ ಲೇಖನಗಳಿಗಾಗಿ GruhaSnehi.com ಭೇಟಿ ನೀಡಿ.

ಡಿಸ್ಕ್ಲೈಮರ್: ಈ ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯು ಕೇವಲ ಸಾಮಾನ್ಯ ಉದ್ದೇಶಗಳಿಗಾಗಿ. ವೈದ್ಯಕೀಯ, ಹಣಕಾಸು, ಹೂಡಿಕೆ ಅಥವಾ ಕಾನೂನು ಸಲಹೆಗೆ ತಜ್ಞರನ್ನೇ ಸಂಪರ್ಕಿಸಿ. ಈ ಬ್ಲಾಗ್‌ನಲ್ಲಿ ಶೇರ್ ಮಾಡಲಾದ ಯಾವುದೇ ಆಹಾರ  ಅಥವಾ ಪಾಕವಿಧಾನಗಳನ್ನು ಬಳಸುವ ಮೊದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಥವಾ ಯಾವುದೇ ಅಲರ್ಜಿಯ ಕುರಿತು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ. ಈ ಪೋಸ್ಟ್‌ನಲ್ಲಿ ಬಳಸಲಾದ ಯಾವುದೇ ಚಿತ್ರಗಳು ಅಥವಾ ಲೋಗೋಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Spread the love

3 thoughts on “ಎಳೆ ವಯಸ್ಸಿನಲ್ಲಿ ಕೂದಲು ಬೆಳಗಾಗುತ್ತಿದೆಯೇ!!! ಜೊತೆಗೆ ಹೊಟ್ಟಿನ ಸಮಸ್ಯೆಗಳು ಇದೆಯೇ? ತಪ್ಪದೆ ಓದಿ ಮತ್ತು ಶೀಘ್ರ ಪರಿಹಾರವನ್ನು ಪಡೆದುಕೊಳ್ಳಿ”

  1. Pingback: ತಲೆ ಕೂದಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನೈಸರ್ಗಿಕ ಕಂಡೀಷನರ್ ನಂತೆ ಬಳಸುವ ಉತ್ತಮ ಕೇಶ ತೈಲ - ಗೃಹಸ್ನೇಹಿ - ನಿಸ

Leave a Comment

Your email address will not be published. Required fields are marked *

Scroll to Top